ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಸೋತಿದೆ ಎಂದಿರುವ ಕರ್ನಾಟಕ ಕಾಂಗ್ರೆಸ್ ನಾಯಕರು ಸೋಂಕಿತ ಸರ್ಕಾರ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ. ವಿಡಿಯೋಗಳನ್ನು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ರಾಜ್ಯ ಸರ್ಕಾರವನ್ನು ಟೀಕಿಸುತ್ತಾ, ಸರ್ಕಾರಕ್ಕೆ ಕೊರೊನಾ ನಿರ್ವಹಣೆಯ ಸಲಹೆಗಳನ್ನು ನೀಡುತ್ತಿದ್ದಾರೆ.
ರಾಜ್ಯದಲ್ಲಿ ಕೊರೊನಾ ಪ್ರಕಣಗಳು ಹೆಚ್ಚಾಗುತ್ತಿದ್ದರೂ, ನಿರ್ವಹಣೆ ಮಾಡುವಲ್ಲಿ ರಾಜ್ಯ ಸರ್ಕಾರ ಸೋತಿದೆ ಎಂದು ಕಿಡಿಕಾರಿರುವ ರಾಜ್ಯ ಕಾಂಗ್ರೆಸ್ ನಾಯಕರು #ಸೋಂಕಿತ ಸರ್ಕಾರ ಎಂಬ ಹ್ಯಾಶ್‌ಟ್ಯಾಗ್ ಬಳಸಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರವನ್ನು ಟೀಕಿಸುವ ಜೊತೆಗೆ ಹಲವು ಸಲಹೆಗಳನ್ನು ನೀಡಿದ್ದಾರೆ.
’ಬೆಡ್, ಆಕ್ಸಿಜನ್, ರೆಮ್‌ಡಿಸಿವಿರ್, ಅಂತ್ಯಕ್ರಿಯೆ ಹೀಗೆ ಹಲವು ಬಿಕ್ಕಟ್ಟುಗಳನ್ನು ನಿರ್ವಹಿಸಲು ಮಂತ್ರಿಗಳನ್ನು ನೇಮಿಸಿ ಅವರಿಗೆ ಜವಾಬ್ದಾರಿಯನ್ನು ನೀಡಿ. ಇಡೀ ರಾಜ್ಯವನ್ನು 6 ವಿಭಾಗವನ್ನಾಗಿಸಿ ಪ್ರತ್ಯೇಕ ಸಮಿತಿಗಳನ್ನು ರಚಿಸಿ, ಮಂತ್ರಿಗಳಿಗೆ ಉಸ್ತುವಾರಿ ನೀಡಿ’ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಸರ್ಕಾರದ ಪ್ರಚಾರದ ಹುಚ್ಚು ನಾಚಿಕೆಗೇಡಿನದ್ದು: ಕುಮಾರಸ್ವಾಮಿ ಆಕ್ರೋಶ
'@BSYBJP ಅವರೇ,
ಕರೋನಾ ನಿರ್ವಹಣೆಯಲ್ಲಿ ನಿಮ್ಮ #ಸೋಂಕಿತಸರ್ಕಾರ ಸಂಪೂರ್ಣ ಸೋತಿದೆ.ಬೆಡ್, ಆಕ್ಸಿಜನ್, ರೆಮಿಡಿಸಿವಿರ್, ಅಂತ್ಯಕ್ರಿಯೆ, ಹೀಗೆ ಹಲವು ಬಿಕ್ಕಟ್ಟುಗಳನ್ನ ನಿರ್ವಹಿಸಲು ಮಂತ್ರಿಗಳನ್ನು ನೇಮಿಸಿ ಜವಾಬ್ದಾರಿಯನ್ನು ನೀಡಿ.
ಇಡೀ ರಾಜ್ಯವನ್ನು 6 ವಿಬಾಗವನ್ನಾಗಿಸಿ ಪ್ರತ್ಯೇಕ ಸಮಿತಿಗಳನ್ನು ರಚಿಸಿ, ಮಂತ್ರಿಗಳಿಗೆ ಉಸ್ತುವಾರಿ ನೀಡಿ
— Karnataka Congress (@INCKarnataka) April 22, 2021
“ಕೊರೊನಾ ನಿಗ್ರಹಿಸುವಿಕೆಯ ಭಾಗವಾದ ಟ್ರೀಟಿಂಗ್‌ನಲ್ಲಿ ಅಧೋಗತಿಗೆ ಇಳಿದಿದ್ದು ನಿತ್ಯ ಕಾಣುತ್ತಿದೆ
ಟ್ರಾಕಿಂಗ್‌ನಲ್ಲಿಯೂ ಸರ್ಕಾರ ವಿಫಲವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ, ಮಂತ್ರಿಗಳು, ಶಾಸಕರಿಗೆ ಸೋಂಕು ತಗುಲಿತ್ತು, ಅವರ ಸಂಪರ್ಕಕ್ಕೆ ಬಂದವರು ಯಾವುದೇ ಕಟ್ಟುನಿಟ್ಟಿನ ಐಸೋಲೇಶನ್ ನಿಯಮ ಪಾಲಿಸಲಿಲ್ಲ. ಇದೇ ಸೋಂಕಿತ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿ” ಎಂದಿದ್ದಾರೆ.
“ಫೇಕ್ ನ್ಯೂಸ್ ಫ್ಯಾಕ್ಟರಿ ಎಂದೇ ಕುಖ್ಯಾತಿ ಪಡೆದಿರುವ ಬಿಜೆಪಿ ಕರ್ನಾಟಕ ಐಟಿ ಸೆಲ್ ಉತ್ತರಿಸಲಿದೆಯೇ? ಗುಜರಾತ್, ಯುಪಿಯ ಬಿಜೆಪಿ ಸರ್ಕಾರಗಳಿಗೆ ಅಲ್ಲಿನ ಹೈಕೋರ್ಟ್‌ಗಳು ಮುಖಕ್ಕೆ ಉಗಿದಿವೆ. ಆಕ್ಸಿಜನ್ ಪೂರೈಸದ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಛಿಮಾರಿ ಹಾಕಿದೆ. ಇದೆಲ್ಲವೂ ನಿಮ್ಮ ಆಯೋಗ್ಯತನದ ಪ್ರತೀಕವಲ್ಲವೇ?” ಎಂದು ಚಾಟಿ ಬೀಸಿದ್ದಾರೆ.
ಇದನ್ನೂ ಓದಿ: ಅಗತ್ಯ ಸೇವೆ ಬಿಟ್ಟು ಎಲ್ಲಾ ಬಂದ್: ಹೊಸ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ
ಒಂದು ವರ್ಷ ಸಮಯವಿದ್ದರೂ ರಾಜ್ಯ @BJP4Karnataka ಸರ್ಕಾರ ಕೋವಿಡ್ 2ನೇ ಅಲೆ ಎದುರಿಸಲು ಯಾವುದೇ ಸಿದ್ಧತೆ ಮಾಡಿಕೊಳ್ಳಲಿಲ್ಲ.
ಕೇಂದ್ರ – ರಾಜ್ಯ ಬಿಜೆಪಿ ಸರ್ಕಾರಗಳ ನಿರ್ಲಕ್ಷ್ಯ ಜನಸಾಮಾನ್ಯರನ್ನು ಬಲಿಪಡೆಯುತ್ತಿದೆ.
ಜನರ ಜೀವ ಉಳಿಸಲು ಈ ಸರ್ಕಾರಗಳು ಇದ್ದ ಯಾವ ಅವಕಾಶಗಳನ್ನೂ ಉಪಯೋಗಿಸಿಕೊಳ್ಳಲಿಲ್ಲ. #ಸೋಂಕಿತಸರ್ಕಾರ
– @DKShivakumar pic.twitter.com/bNeDGaceCa— Karnataka Congress (@INCKarnataka) April 22, 2021
“ಒಂದು ವರ್ಷ ಸಮಯವಿದ್ದರೂ ರಾಜ್ಯದ ಬಿಜೆಪಿ ಸರ್ಕಾರ ಕೋವಿಡ್ 2ನೇ ಅಲೆ ಎದುರಿಸಲು ಯಾವುದೇ ಸಿದ್ಧತೆ ಮಾಡಿಕೊಳ್ಳಲಿಲ್ಲ. ಕೇಂದ್ರ – ರಾಜ್ಯ ಬಿಜೆಪಿ ಸರ್ಕಾರಗಳ ನಿರ್ಲಕ್ಷ್ಯ ಜನಸಾಮಾನ್ಯರನ್ನು ಬಲಿಪಡೆಯುತ್ತಿದೆ. ಜನರ ಜೀವ ಉಳಿಸಲು ಈ ಸರ್ಕಾರಗಳು ಇದ್ದ ಯಾವ ಅವಕಾಶಗಳನ್ನೂ ಉಪಯೋಗಿಸಿಕೊಳ್ಳಲಿಲ್ಲ” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
“ರಾಜ್ಯ ಸರ್ಕಾರದಿಂದ ರೋಗಿಗಳಿಗೆ ಔಷಧಿ, ಹಾಸಿಗೆ, ಐಸಿಯು, ಆಕ್ಸಿಜನ್, ವೆಂಟಿಲೇಟರ್ ಕೊಡಲು ಆಗಲಿಲ್ಲ. ಕನಿಷ್ಟ ಪಕ್ಷ ಮೃತರಿಗೆ ಗೌರವಯುತ ಅಂತ್ಯ ಸಂಸ್ಕಾರಕ್ಕೂ ಅವಕಾಶ ನೀಡಲಿಲ್ಲ. ಕಳೆದೊಂದು ವರ್ಷದಿಂದ ಜನರ ಯಾವ ಸಂಕಷ್ಟಗಳಿಗೂ ಈ ಸೋಂಕಿತ ಸರ್ಕಾರ ಸ್ಪಂದಿಸಲಿಲ್ಲ” ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಓಟುಗಳ ನಡುವೆ ನುಸುಳಿದ ಎರಡನೇ ಅಲೆಯ ದುರಂತಕ್ಕೆ ಮೋದಿ ಆಡಳಿತವೇ ಕಾರಣ!
ಸರ್ಕಾರದ ವಿರುದ್ಧ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕನಕಪುರ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರೋಗಿಗಳಿಗೆ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಕೊರೋನಾ ಸೋಂಕಿತರೊಂದಿಗೆ ಮಾತನಾಡಿ, ಅಗತ್ಯ ಔಷಧೋಪಚಾರಗಳ ಕೊರತೆ ಆಗದಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೊರೊನಾ ಸಾವುಗಳೆಲ್ಲವೂ “ಬಿಜೆಪಿ ಪ್ರಾಯೋಜಿತ ಮಾರಣಹೋಮ” ಎಂದು ಕಾಂಗ್ರೆಸ್ ಆರೋಪಿಸಿದೆ. ಕೊರೊನಾ ಬಂದು ಒಂದು ವರ್ಷವಾದರೂ ಸೂಕ್ತ ವೈದ್ಯಕೀಯ ವ್ಯವಸ್ಥೆಗಳನ್ನು ರೂಪಿಸದೆ, ಆಂತರಿಕ ಕಚ್ಚಾಟ, ಖಾತೆ ಕಿತ್ತಾಟ, ಸಿಡಿ ಚೆಲ್ಲಾಟ, ವರ್ಗಾವಣೆ ದಂಧೆ, ಭ್ರಷ್ಟಾಚಾರದಲ್ಲಿ ಮುಳುಗಿದ ಸೋಂಕಿತ ಸರ್ಕಾರದ ನಿರ್ಲಕ್ಷ್ಯ, ಬೇಜವಾಬ್ದಾರಿತನ, ಭ್ರಷ್ಟಾಚಾರಗಳೇ ಇಂದಿನ ಭೀಕರ ಸ್ಥಿತಿಗೆ ಕಾರಣ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಏರ್‌ಪೋರ್ಟ್-ಸಿಲ್ಕ್‌ಬೋರ್ಡ್ ಮೆಟ್ರೋ ಕಾಮಗಾರಿ ವಿಳಂಬಕ್ಕೆ ಮೋದಿಯವರೆ ಹೊಣೆಯೇ?: ಜಾಹೀರಾತಿಗೆ ಕೋಟಿ ರೂ ಖರ್ಚು ಏಕೆ?


