ದೆಹಲಿಯಲ್ಲಿರುವ ಪಕ್ಷನಿಷ್ಠನನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದರು ಆದರೆ, ಆಗ ದವಳಗಿರಿಯೇ ಈಗ ಬಿಜೆಪಿ ಹೈಕಮಾಂಡ್ ಆಗಿದೆ ಎಂದು ಕರ್ನಾಟಕ ಕಾಂಗ್ರೆಸ್ ವ್ಯಂಗ್ಯವಾಡಿದೆ.
“ದೆಹಲಿಯಲ್ಲಿರುವ ಪಕ್ಷನಿಷ್ಠನನ್ನು ಸಿಎಂ ಮಾಡಿಬಿಡುತ್ತೇವೆ ಎಂದು ನಳಿನ್ ಕುಮಾರ್ ಕಟೀಲ್ ಕೊಚ್ಚಿಕೊಳ್ಳುತ್ತಿದ್ದರು, ಆದರೆ ಸಿಎಂ ಆಗಿದ್ದು ಬಿಎಸ್‌ವೈ ನಿಷ್ಠ ಬಸವರಾಜ್ ಬೊಮ್ಮಾಯಿ. ದವಳಗಿರಿಯೇ ಈಗ ಬಿಜೆಪಿ ಹೈಕಮಾಂಡ್!” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
“ಈ ಹೊತ್ತಿನಲ್ಲಿ ಬಿಜೆಪಿ ವರ್ಸಸ್ ಬಿಜೆಪಿ ಕಿತ್ತಾಟ ಮತ್ತೊಂದು ಮಗ್ಗುಲಿಗೆ ಹೊರಳಿ ಸ್ಥಿರ ಸರ್ಕಾರ, ಸುಸ್ಥಿರ ಆಡಳಿತ ಎನ್ನುವುದು ರಾಜ್ಯಕ್ಕೆ ಮರೀಚಿಕೆಯಾಗಿದೆ” ಎಂದು ಆರೋಪಿಸಿದೆ.
ಇದನ್ನೂ ಓದಿ: ಕುಟುಂಬ ರಾಜಕಾರಣ ಪೋಷಿಸುತ್ತ ಇತರರ ಕಡೆ ಕಲ್ಲು ಎಸೆಯುವ ಬಿಜೆಪಿ : ಕಾಂಗ್ರೆಸ್
ದೆಹಲಿಯಲ್ಲಿರುವ ಪಕ್ಷನಿಷ್ಠನನ್ನು ಸಿಎಂ ಮಾಡಿಬಿಡುತ್ತೇವೆ @nalinkateel ಕೊಚ್ಚಿಕೊಳ್ಳುತ್ತಿದ್ದರು, ಆದರೆ ಸಿಎಂ ಆಗಿದ್ದು ಬಿಎಸ್‌ವೈ ನಿಷ್ಠ @BSBommai.
ದವಳಗಿರಿಯೇ ಈಗ ಬಿಜೆಪಿ ಹೈಕಮಾಂಡ್!
ಈ ಹೊತ್ತಿನಲ್ಲಿ #BJPvsBJP ಕಿತ್ತಾಟ ಮತ್ತೊಂದು ಮಗ್ಗುಲಿಗೆ ಹೊರಳಿ ಸ್ಥಿರ ಸರ್ಕಾರ, ಸುಸ್ಥಿರ ಆಡಳಿತ ಎನ್ನುವುದು ರಾಜ್ಯಕ್ಕೆ ಮರೀಚಿಕೆಯಾಗಿದೆ.
— Karnataka Congress (@INCKarnataka) July 30, 2021
“ಕಳೆದ 2 ವರ್ಷದಲ್ಲಿ ಸಿಡಿ ಸರ್ಕಾರ ಒಂದೇ ಒಂದು ದಿನವೂ ರಾಜ್ಯದ ಸಮಸ್ಯೆಗಳತ್ತ ಗಮನ ಹರಿಸಲಿಲ್ಲ. ಅಧಿಕಾರಕ್ಕೆ ಏರಿದ ದಿನದಿಂದಲೂ ಸಂಪುಟ ಕಸರತ್ತು, ಆಂತರಿಕ ಕಿತ್ತಾಟ, ನಾಯಕತ್ವ ಬಡಿದಾಟ, ಸಿಡಿ ರಂಪಾಟದಲ್ಲಿಯೇ ಕಾಲ ಕಳೆಯಿತು, ಮುಂದೆಯೂ ಅದೇ ಮುಂದುವರೆಯಲಿದೆ. ನಿಮ್ಮ ಒಂದೇ ಒಂದು ಜನಪರ ಯೋಜನೆಯ ಹೆಸರು ಹೇಳಲು ಸಾಧ್ಯವೇ ಬಿಜೆಪಿ ಕರ್ನಾಟಕ” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
“ಎರಡು ವರ್ಷದ ಬಿಜೆಪಿ ಆಡಳಿತದಲ್ಲಿ ರಾಜ್ಯದ ಅಭಿವೃದ್ಧಿ ಸ್ಥಗಿತಗೊಂಡಿದೆ, ಪ್ರಗತಿಗೆ ಹಿನ್ನೆಡೆಯಾಗಿದೆ. ಒಂದೇ ಒಂದು ಜನಪರ ಯೋಜನೆಗಲಿಲ್ಲ, ನೋಂದವರಿಗೆ ಸ್ಪಂದನೆ ಇಲ್ಲ. ಅಧಿಕಾರದುದ್ದಕ್ಕೂ ಸಿಡಿ ಮಾಡುವುದೇ ಇವರ ಯೋಜನೆ, ಉದ್ಯೋಗ ಕೇಳಿ ಬಂದ ಯುವತಿಯರನ್ನು ದುರ್ಬಳಕೆ ಮಾಡಿಕೊಳ್ಳುವುದೇ ಇವರ ಸಾಧನೆ!” ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಎರೆಡು ವರ್ಷದ @BJP4Karnataka
ಆಡಳಿತದಲ್ಲಿ ರಾಜ್ಯದ ಅಭಿವೃದ್ಧಿ ಸ್ಥಗಿತಗೊಂಡಿದೆ, ಪ್ರಗತಿಗೆ ಹಿನ್ನೆಡೆಯಾಗಿದೆ.ಒಂದೇ ಒಂದು ಜನಪರ ಯೋಜನೆಗಲಿಲ್ಲ, ನೋಂದವರಿಗೆ ಸ್ಪಂದನೆ ಇಲ್ಲ.
ಅಧಿಕಾರದುದ್ದಕ್ಕೂ ಸಿಡಿ ಮಾಡುವುದೇ ಇವರ ಯೋಜನೆ, ಉದ್ಯೋಗ ಕೇಳಿ ಬಂದ ಯುವತಿಯರನ್ನು ದುರ್ಬಳಕೆ ಮಾಡಿಕೊಳ್ಳುವುದೇ ಇವರ ಸಾಧನೆ!#BlueJanathaParty
— Karnataka Congress (@INCKarnataka) July 30, 2021
ಇದನ್ನೂ ಓದಿ: ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಐಟಿ ಸಂಸದೀಯ ಸಮಿತಿ ಮುಂದೆ ಪೆಗಾಸಸ್ ಪ್ರಕರಣ


