ಈ ವರ್ಷ ತೆರೆಕಂಡ ಬಲಪಂಥೀಯ ಪ್ರತಿಪಾದಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವು ಪ್ರೊಪಗಂಡಾ ಪ್ರೇರಿತ, ಅಶ್ಲೀಲ ಸಿನಿಮಾವಾಗಿದೆ ಎಂದು ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ತೀರ್ಪುಗಾರರ ಮುಖ್ಯಸ್ಥ, ಇಸ್ರೇಲ್ ಚಿತ್ರ ನಿರ್ದೇಶಕ ನಾದವ್ ಲ್ಯಾಪಿಡ್ ಅಭಿಪ್ರಾಯಪಟ್ಟಿದ್ದಾರೆ.
ಗೋವಾದಲ್ಲಿ ನಡೆದ 53ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು “ಈ ಚಿತ್ರೋತ್ಸವದ ಪ್ರಶಸ್ತಿ ಪಟ್ಟಿಗೆ 15ನೇ ಚಿತ್ರವಾಗಿ ಕಾಶ್ಮೀರ್ ಫೈಲ್ಸ್ ಬಂದಿದ್ದನ್ನು ನೋಡಿ ನಮಗೆ ಆಘಾತವಾಗಿದೆ. ಇದರಿಂದ ನಾವು ವಿಚಲಿತಗೊಂಡಿದ್ದೇವೆ. ಆ ಚಿತ್ರವು ಪ್ರೊಪಗಂಡ ಪ್ರೇರಿತ, ಅಶ್ಲೀಲ ಚಿತ್ರವಾಗಿದೆ. ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾ ವಿಭಾಗಕ್ಕೆ ಅದು ಸೂಕ್ತವಲ್ಲ ಎಂದು ಅನಿಸಿತು ಎಂದು ಬಹಿರಂಗವಾಗಿ ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತೇನೆ” ಎಂದಿದ್ದಾರೆ.
BJP government will not miss single opportunity to embarrass India.#IFFIGoa2022 #IFFI53Goa
Chairman of jury (Nadal Lapid): pic.twitter.com/KdMmNvhQco
— Sagar (@sagarchirps) November 28, 2022
ಆಡಳಿತರೂಢ ಬಿಜೆಪಿ ಪಕ್ಷದಿಂದ ಭಾರೀ ಪ್ರಶಂಶೆಗೊಳಗಾಗಿದ್ದ, ಹಲವಾರು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ತೆರಿಕೆ ಮುಕ್ತ ಪ್ರದರ್ಶನ ಕಂಡಿದ್ದ ಈ ಸಿನಿಮಾವನ್ನು ಆಸ್ಕರ್‌ಗೆ ನಾಮೀನೇಟ್ ಮಾಡಬೇಕೆಂಬ ಮಾತುಗಳು ಸಹ ಕೇಳಿಬಂದಿದ್ದವು. ಆದರೆ IFFI ತೀರ್ಪುಗಾರರ ಮುಖ್ಯಸ್ಥರೆ ಇದೊಂದು ಕೆಟ್ಟ ಸಿನಿಮಾ ಎಂದು ಹೇಳಿಕೆ ನೀಡುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ನಾದವ್ ಲ್ಯಾಪಿಡ್‌ರವರ ಹೇಳಿಕೆ ಹೊರಬೀಳುತ್ತಿದ್ದಂತೆ ದೇಶಾದ್ಯಂತ ಪರ ವಿರೋಧದ ಚರ್ಚೆಗಳು ಆರಂಭವಾಗಿವೆ. ಬಹಳಷ್ಟು ಜನರು ನಾದವ್‌ರವರ ಹೇಳಿಕೆಯನ್ನು ಸ್ವಾಗತಿಸಿದರೆ ಹಲವರು ಅದು ಪೂರ್ವಗ್ರಹದ ಹೇಳಿಕೆ ಎಂದು ಟೀಕಿಸಿದ್ದಾರೆ. ಚಿತ್ರದಲ್ಲಿ ನಟಿಸಿದ್ದ ಅನಪಮ್ ಖೇರ್ ನಾದವ್‌ರವರದು ಪೂರ್ವನಿಯೋಜಿತ ಹೇಳಿಕೆಯಾಗಿದೆ ಎಂದು ಆರೋಪಿಸಿದ್ದಾರೆ.
ಹೇಳಿಕೆಯ ತೀವ್ರ ವಿವಾದ ಹುಟ್ಟುಹಾಕಿದ ನಂತರ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ತೀರ್ಪುಗಾರರ ಮಂಡಳಿಯು ನಾದವ್‌ರವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. ಅದು ಸಂಪೂರ್ಣವಾಗಿ ಅವರ ವೈಯಕ್ತಿಕ ಹೇಳಿಕೆಯಾಗಿದೆ, ಅದಕ್ಕೂ ಮಂಡಳಿಗೂ ಸಂಬಂಧವಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.
“ತೀರ್ಪುಗಾರರಾಗಿ ಚಿತ್ರದ ತಾಂತ್ರಿಕ, ಸೌಂದರ್ಯದ ಗುಣಮಟ್ಟ ಮತ್ತು ಸಾಮಾಜಿಕ-ಸಾಂಸ್ಕೃತಿಕ ಪ್ರಸ್ತುತತೆಯನ್ನು ನಿರ್ಣಯಿಸಲು ನಮಗೆ ನಿಯೋಜಿಸಲಾಗಿದೆ. ನಾವು ಯಾವುದೇ ಚಿತ್ರದ ರಾಜಕೀಯದ ಕುರಿತು ಮಾತನಾಡುವುದಿಲ್ಲ. ಆ ಕುರಿತು ಮಾತನಾಡಿದರೆ ಅದು ವೈಯಕ್ತಿಕ ಅಭಿಪ್ರಾಯವಾಗಿರುತ್ತದೆ” ಎಂದು ಜ್ಯೂರಿ ಮಂಡಳಿಯ ಸದಸ್ಯ ಸುದಿಪ್ತೊ ಸೇನ್ ಟ್ವೀಟ್ ಮಾಡಿದ್ದಾರೆ.
#IFFI #IFFI2022 @nfdcindia @ianuragthakur pic.twitter.com/GBhtw0tH6C
— Sudipto SEN (@sudiptoSENtlm) November 28, 2022
ಇದನ್ನೂ ಓದಿ; ಹುಸಿ ಕಾಳಜಿಯ, ಪಕ್ಷಪಾತ ಧೋರಣೆಯ, ದ್ವೇಷದ ಅಜೆಂಡಾವುಳ್ಳ ’ದ ಕಾಶ್ಮೀರ್ ಫೈಲ್ಸ್’


