Homeಮುಖಪುಟಕಾಶ್ಮಿರದ ವಸ್ತುಸ್ಥಿತಿ: ಭಾರತದ ಮಾಧ್ಯಮದ ವರದಿಗೆ ವಿರುದ್ಧವಾಗಿ ಅಂತರಾಷ್ಟ್ರೀಯ ಮಾಧ್ಯಮದ ವರದಿಗಳು

ಕಾಶ್ಮಿರದ ವಸ್ತುಸ್ಥಿತಿ: ಭಾರತದ ಮಾಧ್ಯಮದ ವರದಿಗೆ ವಿರುದ್ಧವಾಗಿ ಅಂತರಾಷ್ಟ್ರೀಯ ಮಾಧ್ಯಮದ ವರದಿಗಳು

- Advertisement -
- Advertisement -

ಗೃಹ ಸಚಿವ ಅಮಿತ್ ಶಾ 370ನೇ ವಿಧಿಯ ರದ್ದು ಮಾಡಿ ಎಂಟ್ಹತ್ತು ದಿನಗಳು ಕಳೆದಿವೆ. ‘ಇದೊಂದು ಐತಿಹಾಸಿಕ ನಿರ್ಧಾರ’ ಎಂದು ದೇಶಾದ್ಯಂತ ಸಂಭ್ರಮವಿದೆ ಎಂದು ನಮ್ಮ ಮುಖ್ಯವಾಹಿನಿ ಮಾಧ್ಯಮಗಳು ವರದಿ ಮಾಡಿದವಷ್ಟೇ. ಆದರೆ ಕಾಶ್ಮೀರದ ನಿವಾಸಿಗಳು ಮತ್ತು ಹೊರಗಡೆ ಇರುವ ಕಾಶ್ಮೀರಿಗಳ ಧ್ವನಿ, ಅಭಿಪ್ರಾಯಗಳ ಸುದ್ದಿ ಕಾಣಲೇ ಇಲ್ಲ, ಕೇಳಿಸಲೇ ಇಲ್ಲ. ಕಾಶ್ಮೀರದಲ್ಲಿನ ಸಂಪರ್ಕ ವ್ಯವಸ್ಥೆಯನ್ನೇ ಬರಖಾಸ್ತು ಮಾಡಲಾಗಿತ್ತು. ಮೊಬೈಲ್, ಲ್ಯಾಂಡ್‍ಲೈನ್, ಇಂಟರ್‍ನೆಟ್ ಸಂಪರ್ಕಗಳನ್ನೆಲ್ಲ ಕಡಿತಗೊಳಿಸಲಾಗಿತ್ತು. ಮೊದಲೇ ವಿಶ್ವದ ಅತಿದೊಡ್ಡ ಮಿಲಿಟರಿ ಪ್ರದೇಶವೆಂದು ಗುರುತಿಸಲ್ಪಟ್ಟ ಕಾಶ್ಮೀರದೊಳಕ್ಕೆ, 370 ವಿಧಿ ರದ್ದು ಘೋಷಿಸುವ ಪೂರ್ವದಲ್ಲಿ ಮತ್ತೆ 46 ಸಾವಿರ ಸೈನಿಕರನ್ನು ನುಗ್ಗಿಸಿ ಪಹರೆಗೆ ಬಿಡಲಾಯಿತು.

ಇವತ್ತಿಗೆ (ಮಂಗಳವಾರ) ಅಲ್ಲಿ ಸ್ಥಳಿಯ ಸುದ್ದಿ ಪತ್ರಿಕೆಗಳು ಬಿಡುಗಡೆ ಆಗದೇ 10 ದಿನ ಕಳೆದವು. ಕೊನೆಯ ಬಾರಿ ಅಲ್ಲಿ ಸ್ಥಳೀಯ ಪತ್ರಿಕೆ ಪ್ರಕಟವಾಗಿದ್ದು ಆಗಸ್ಟ್ 4ರಂದು. ಸರ್ಕಾರ ನೀಡಿದ ಪ್ರಕಟಣೆಗಳಷ್ಟೇ ಕಾಶ್ಮೀರದಲ್ಲಿ ಎಲ್ಲ ಸರಿಯಾಗಿದೆ ಎಂಬ ವಿವರ ನೀಡುತ್ತಿದ್ದವು. ಆ ಪ್ರದೇಶದಲ್ಲಿರುವ ಭಾರತೀಯ ಪತ್ರಕರ್ತರಿಗೂ ಫೋಟೋ ತೆಗೆಯಲೂ ಅವಕಾಶ ನೀಡಿರಲಿಲ್ಲ. ಆದರೆ ಪರಿಸ್ಥಿತಿಯ ಚರ್ಚೆ ಕಡಿಮೆ ಆಗತೊಡಗಿದಂತೆ ಹಲವು ಮಾಧ್ಯಮ ಧ್ವನಿಗಳು ಸತ್ಯ ಹೇಳತೊಡಗಿದವು. ಆಗ ಗೊತ್ತಾಗಿದ್ದು ಕೇಂದ್ರ ಸರ್ಕಾರ ಮಾತ್ತು ಭಾರತದ ಮುಖ್ಯವಾಹಿನಿಗಳು ಹೇಳಿದಂತೆ ಪರಿಸ್ಥಿತಿ ನಾರ್ಮಲ್ ಆಗಿರಲೇ ಇಲ್ಲ! ಸತ್ಯ ಏನಾಗಿತ್ತೆಂದರೆ, ಜನರಲ್ಲಿ ಆಕ್ರೋಶ ತುಂಬಿತ್ತು, ಆಹಾರ ಮತ್ತು ಔಷಧಿಗಳ ಕೊರತೆಯಾಗಿತ್ತು, ತುರ್ತು ಚಿಕಿತ್ಸೆಯ ನೆರವೂ ಸಿಗದೇ ಜನ ಪ್ರಾಣಾಪಾಯ ಎದುರಿಸಿದರು, ಕೆಲವು ಕಿಲೋಮೀಟರ್ ಪ್ರಯಾಣಿಸಲೂ ಸಾರಿಗೆ ವ್ಯವಸ್ಥೆ ಇಲ್ಲದೇ ಜನ ಗಂಟೆಗಟ್ಟಲೇ ಕಾದಿದ್ದರು….ಆದರೆ, ಸರ್ಕಾರಿ ವಾಹನಗಳು ಸಂಚರಿಸುತ್ತಿದ್ದ ಕೆಲವೇ ಕೆಲವು ರಸ್ತೆಗಳನ್ನು ತೋರಿಸಿದ ಮುಖ್ಯ ವಾಹಿನಿ ಮಾಧ್ಯಮಗಳು ಕಾಶ್ಮೀರದಲ್ಲಿ ಎಲ್ಲವೂ ಸಹಜವಾಗಿದೆ ಎಂಬಂತೆ ತೋರಿಸುವ ಮೂಲಕ ಆತ್ಮವಂಚನೆ ಮಾಡಿಕೊಂಡು , ವೃತ್ತಿದ್ರೋಹವನ್ನೂ ಎಸಗಿದ್ದವು.

370ನೇ ವಿಧಿ ರದ್ದಾದ ಎರಡು ದಿನಗಳ ನಂತರ ರಕ್ಷಣಾ ಸಲಹೆಗಾರ ಅಜಿತ್ ದೋವಲಲ್ ಕಾಶ್ಮೀರಕ್ಕೆ ಹೋಗಿ ಕೆಲವು ಜನರ ಜೊತೆ ಬಿರ್ಯಾನಿ ತಿನ್ನುವ ಫೋಟೋ ಮತ್ತು ವಿಡಿಯೋಗಳನ್ನು ತೋರಿಸಿದ ಮಾಧ್ಯಮಗಳು, ‘ನೋಡಿ ಕಾಶ್ಮೀರದಲ್ಲಿ ಎಲ್ಲವೂ ಶಾಂತವಾಗಿದೆ. 370ನೇ ವಿಧಿ ರದ್ಧತಿಯ ನಂತರವೂ ಜನತೆ ಯಾವ ಪ್ರತಿರೋಧ ಮಾಡದೇ ಸಮ್ಮತಿಸಿದ್ದಾರೆ’ ಎಂಬ ಚಿತ್ರಣ ಕೊಡಲು ನಮ್ಮ ಮಾಧ್ಯಮಗಳು ಯತ್ನಿಸಿದವು.

ಕಾಶ್ಮೀರದ ಈ ‘ಸಹಜ’ ಪರಿಸ್ಥಿತಿಯನ್ನು ಮತ್ತು ‘ಸಂತೋಷ’ವಾಗಿರುವ ಕಾಶ್ಮೀರಿಗಳನ್ನು ಖುದ್ದಾಗಿ ನೋಡಿ ಅನುಭವಿಸಉ ಹೊರಟ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಯನ್ನು ಶ್ರೀನಗರದ ವಿಮಾನ ನಿಲ್ದಾಣದಲ್ಲೇ ತಡೆದು ದಹಲಿಗೆ ವಾಪಸ್ ಕಳಿಸಲಾಯಿತು. ಮರುದಿನ ಸಿಪಿಎಂನ ಸೀತಾರಾಂ ಯೆಚೂರಿ ಮತ್ತು ಡಿ. ರಾಜಾ ಇಂಥದ್ದೇ ಪ್ರಯತ್ನ ಮಾಡಿದಾಗ ಅವರನ್ನು ಶ್ರೀನಗರ ಪ್ರವೇಶಿಸದಂತೆ ತಡೆದು ದೆಹಲಿಗೆ ವಾಪಸ್ ಕಳಿಸಲಾಯಿತು.

ಪ್ರತಿದಿನವೂ ದೆಹಲಿಯಿಂದ ಬಿಡುಗಡೆಗೊಳ್ಳುತ್ತಿದ್ದ ಜನರಿರುವ ಮಾರ್ಕೆಟ್‍ಗಳು, ಜನ ತುಂಬಿರುವ ರಸ್ತೆಗಳು, ಹಬ್ಬಕ್ಕೂ ಮೊದಲೇ ತೆರೆದ ಮಸೀದಿಗಳ ಚಿತ್ರ ಮತ್ತು ವಿಡಿಯೋಗಳನ್ನೇ ಸತ್ಯ ಎಂಬಂತೆ ಚಾನೆಲ್‍ಗಳು ಪ್ರಸಾರ ಮಾಡಿದವು. ಕೆಲವು ಮಾಧ್ಯಮಗಳಂತೂ ಅಲ್ಲಿ 144ನೇ ಸೆಕ್ಷನ್ ಅನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಸುಳ್ಳು ವರದಿ ಮಾಡಿಬಿಟ್ಟವೂ ಕೂಡ.

ಕಾಶ್ಮೀರದಲ್ಲಿ ‘ಎಲ್ಲವೂ ಸರಿಯಿದೆ’; ಆದರೆ ನಿಜವಾಗಿಯೂ ಅಲ್ಲ….

ಆಗಸ್ಟ್ 8ರಂದು ದಿ ವೈರ್ ಸುದ್ದಿ ಪೋರ್ಟಲ್‍ನ ಸಂಪಾದಕ ಸಿದ್ದಾರ್ಥ ವರದರಾಜನ್ ಕಾಶ್ಮೀರದ ಕೆಲವು ಫೂಟೇಜ್‍ಗಳನ್ನು ಬಿಡುಗಡೆ ಮಾಡುವ ಮೂಲಕ ಸತ್ಯದ ದರ್ಶನ ಮಾಡಿಸಿದರು. ಪೆಲೆಟ್ ಗುಂಡುಗಳಿಂದ ಕಣ್ಣುಗಳಿಗೆ ಗಾಯ ಮಾಡಿಕೊಂಡು ಆಸ್ಪತ್ರೆಯಲ್ಲಿದ್ದ ಹಲವರೊಂದಿಗೆ ಸಿದ್ದಾರ್ಥರು ಮಾತಾಡಿದ್ದರು. ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟಿಸಿದ್ದಕ್ಕೆ ಈ ಗತಿ ಎಂದು ಕೆಲವರು ಹೇಳಿದರೆ, ಸುಮ್ಮನೇ ಇದ್ದ ನಮ್ಮ ಮೇಲೂ ಮಿಲಿಟರಿಯವರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಹೇಳಿದ್ದರು. ಮರುದಿನ ಆಗಸ್ಟ್ 8ರಂದು ಎನ್‍ಡಿಟಿವಿ ಪ್ರಸಾರ ಮಾಡಿದ ಪ್ರತ್ಯಕ್ಷ ವರದಿಯ ಪ್ರಕಾರ, ಕಾರ್ಗಿಲ್ ಪ್ರದೇಶದಲ್ಲಿ 370 ವಿಧಿ ರದ್ದತಿ ವಿರೋಧಿಸಿ ಹಲವು ಪ್ರತಿಭಟನೆಗಳು ನಡೆದಿದ್ದವು ಮತ್ತು ಬಹುಪಾಲು ಪ್ರದೇಶದಲ್ಲಿ ಕಫ್ರ್ಯೂ ಇನ್ನೂ ಜಾರಿಯಲ್ಲಿತ್ತು.

 

 

 

 

 

ಮೊನ್ನೆ ಶುಕ್ರವಾರದ ಪ್ರಾರ್ಥನೆಯ ನಂತರ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಶ್ರೀನಗರದ ರಸ್ತೆಗಳಲ್ಲಿ ಕಾಶ್ಮೀರದ ಧ್ವಜಗಳನ್ನು ಹಿಡಿದು, ಸ್ವಾತಂತ್ರ್ಯದ ಘೋಷಣೆಗಳನ್ನು ಕೂಗುತ್ತ ಶಾಂತಿಯುತ ಪ್ರತಿಭಟನೆಯಲ್ಲಿ ಸಾಗುವಾಗ ಭಾರತೀಯ ಸೇನೆ ಅವರತ್ತ ಗುಂಡು ಹಾರಿಸಿತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

 

ಶುಕ್ರವಾರದ ಪ್ರಾರ್ಥನೆಯ ನಂತರ ಶ್ರೀನಗರ ಸೇರಿ ಹಲವು ಕಡೆ ವಿಧಿ ರದ್ದತಿ ವಿರೋಧಿಸಿ ಬೃಹತ್ ಪ್ತಿಭಟನೆಗಳು ಜರುಗಿದ ಫೂಟೇಜ್‍ಗಳನ್ನು ಮರುದಿನ ಬಿಬಿಸಿ ಪ್ರಸಾರ ಮಾಡಿತು. ಶುಕ್ರವಾರದ ಪ್ರಾರ್ಥನೆಯ ನಂತರ ಬೃಹತ್ ಪ್ರತಿಭಟನೆಗಳು ನಡೆದಿದ್ದನ್ನು, ಪ್ರತಿಭಟನಾಕಾರರನ್ನು ಚದುರಿಸಲು ಟಿಯರ್ ಗ್ಯಾಸ್ ಸಿಡಿಸಿದ್ದನ್ನು ಮತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದನ್ನು ಫೋಟೊ ಮತ್ತು ವಿಡಿಯೋಗಳ ಮೂಲಕ ಅಲ್ ಜಝೀರಾ, ವಾಶಿಂಗ್ಟನ್ ಪೋಸ್ಟ್, ರ್ಯೂಟರ್ಸ್ ಸುದ್ದಿಸಂಸ್ಥೆಗಳು ಮಾಡಿದವು. ಬಿಬಿಸಿ, ಅಲ್ ಜಝೀರಾ, ರ್ಯೂಟರ್ಸ್‍ಗಳ ಸುದ್ದಿಗಳನ್ನು ಅಲ್ಲಗಳೆದ ಕೇಂದ್ರ ಸರ್ಕಾರ ನಂತರದಲ್ಲಿ, ಕೆಲವು ಕಲ್ಲು ತೂರುವ ಘಟನೆಗಳು ಸಂಭವಿಸಿವೆ , ಆದರೆ ಅವರ ಮೇಲೆ ಬಲ ಪ್ರಯೋಗಿಸಿಲ್ಲ ಎಂದು ಹೇಳಿಕೆ ಬಿಡುಗಡೆ ಮಾಡಿದೆ. ಕಾಶ್ಮೀರ ಕಣಿವೆಯ ಮೂಲೆಮೂಲೆಯಲ್ಲೂ ಅಪಾರ ಸಂಖ್ಯೆಯಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ, ಪುಟ್ಟ ಹಳ್ಳಿಗಳ ಪ್ರತಿ ಮನೆಯ ಮುಂದೆಯೂ ಒಬ್ಬೊಬ್ಬ ಸೈನಿಕನನ್ನು ಪಹರೆಗೆ ನಿಲ್ಲಿಸಲಾಗಿದೆ ಎಂದು ವರದಿ ಮಾಡಿರುವ ನ್ಯೂಯಾರ್ಕ್ ಟೈಮ್ಸ್, ಬಹಳಷ್ಟು ಕಡೆ ಕಲ್ಲು ತೂರಾಟದ ಮೂಲಕ ಆಕ್ರೋಶ ವ್ಯಕ್ತವಾಗುತ್ತಲೇ ಇದೆ ಮತ್ತು ಕಾಶ್ಮೀರದ ಜನರಲ್ಲಿ ಈಗ ದೊಡ್ಡ ಅಸಹನೆ ತುಂಬಿದೆ ಎಂಬುದನ್ನು ಹಲವು ಸೈನಿಕರೇ ಒಪ್ಪಿಕೊಂಡಿರುವುದನ್ನು ನಿರೂಪಿಸಿದೆ.

ಆದರೆ, ಇದೇ ಹೊತ್ತಲ್ಲಿ ಭಾರತೀಯ ಮಾಧ್ಯಮಗಳು ವಿಷಯಾಂತರ ಮಾಡಿ, ಪಾಕಿಸ್ತಾನದ ಕೋಪಿತ ನಡವಳಿಕೆಯ ಕುರಿತು ಸುದ್ದಿ ಮಾಡುತ್ತ, ಭಾರತ ತಕ್ಷಣದ ಸಂಭಾವ್ಯ ಯುದ್ಧಕ್ಕೆ ಸಿದ್ಧವಾಗಿರಬೇಕು ಎಂದು ಸುದ್ದಿ ಮಾಡುತ್ತಿದ್ದವು. ‘ಸೇನೆ ಎಂತಹ ಪರಿಸ್ಥಿತಿಯನ್ನೂ ಎದುರಿಸಲು ಸನ್ನದ್ಧವಾಗಿದೆ ಎಂದು ಮೇಜರ್ ಜನರಲ್ ಬಿಪಿನ್ ರಾವತ್ ಹೇಳುವ ವಿಡಿಯೋವನ್ನು ರಿಪಬ್ಲಿಕ್ ಟಿವಿ ಪ್ರಸಾರ ಮಾಡಿತು. ಜೀ ನ್ಯೂಸ್, ಆಜ್‍ತಕ್ ಮತ್ತು ರಿಪಬ್ಲಿಕ್ ಟಿವಿಗಳು ಸೈನಿಕರನ್ನು ಮಾತಾಡಿಸಿ, ‘ನೋಡಿ ಜೋಶ್ ಹೇಗಿದೆ’ ಎಂದೆಲ್ಲ ಅಪ್ರಬುದ್ಧ ವರದಿಗಳನ್ನು ಮಾಡುತ್ತಿವೆ. ಇದೊಂದು ಭಾರತೀಯ ಮೀಡಿಯಾದ ಸಹಜ ಹುಚ್ಚಾಟದ ಪ್ರದರ್ಶನದಂತಿದೆ: ಸರ್ಕಾರದ ವಕ್ತಾರರಂತೆ ಕೆಲಸ ಮಾಡಲು ಸುಳ್ಳನ್ನು ಹರಡುವುದು, ಅದು ಬಯಲಾದಾಗ ವಿಷಯಾಂತರ ಮಾಡಿ ಜನರ ಗಮನವನ್ನು ಬೇರೆಡೆ ಸೆಳೆಯುವುದು….

ಮೊದಲೇ ಸಮಸ್ಯಾತ್ಮಕವಾಗಿದ್ದ ಪ್ರದೇಶದಲ್ಲಿ ಭಾರತ ಸರ್ಕಾರವು ಈಗ ಬೆಂಕಿಯನ್ನು ಹಾಕಿದೆ. ಕಾಲವಷ್ಟೇ ಉತ್ತರ ಹೇಳಲಿದೆ: ಇದು ಐತಿಹಾಸಿಕ ಜಯವೋ ಅಥವಾ ಐತಿಹಾಸಿಕ ಪ್ರಮಾದವೋ ಎಂಬುದನ್ನು. ಆದರೆ ಸದ್ಯದ ಪ್ರತಿಭಟನೆ, ಪ್ರತಿರೋಧಗಳನ್ನು ನೋಡಿದರೆ, ಕಾಶ್ಮೀರ ನನ್ನ ಪ್ರದೇಶ, ಆದರೆ ಅಲ್ಲಿನ ಜನ ನಮ್ಮವರಲ್ಲ ಎಂಬ ಭಾವ ಪ್ರದರ್ಶಿಸುತ್ತಿರುವ ದೇಶವು ಕಾಶ್ಮೀರದಲ್ಲಿ ಮುಳ್ಳಿನ ಹಾದಿಯನ್ನು ಸವೆಸಬೇಕಾಗಲಿದೆ. ಈಗ ಮಾತುಕತೆ ಮತ್ತು ಸಹನೆಯ ಅಗತ್ಯತೆಯ ಕಾಲ, ‘ಜೋಶ್’ನ ಕಾಲವಲ್ಲ. ಏಕೆಂದರೆ, ಜೋಶ್‍ನಲ್ಲಿ ಜೀವಗಳು ಮತ್ತು ಹಕ್ಕುಗಳು ಮರಣಕ್ಕೀಡಾಗುತ್ತವೆ…..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎರಡು ವರ್ಷದಲ್ಲಿ 532 ನಕ್ಸಲರ ಹತ್ಯೆ; 2004 ಜನರ ಬಂಧನ: ಛತ್ತೀಸ್‌ಗಢ ಉಪ ಮುಖ್ಯಮಂತ್ರಿ

2024 ರ ಜನವರಿಯಿಂದ ರಾಜ್ಯದಲ್ಲಿ 532 ನಕ್ಸಲರು ಸಾವನ್ನಪ್ಪಿದ್ದಾರೆ, 2004 ಜನರನ್ನು ಬಂಧಿಸಲಾಗಿದ್ದು, 2,700 ಜನರು ಶರಣಾಗಿದ್ದಾರೆ ಎಂದು ಛತ್ತೀಸ್‌ಗಢ ಉಪಮುಖ್ಯಮಂತ್ರಿ ವಿಜಯ್ ಶರ್ಮಾ ಶುಕ್ರವಾರ ಹೇಳಿದ್ದಾರೆ. 2026ರ ಮಾರ್ಚ್ 31 ರೊಳಗೆ...

ಅತ್ಯಾಚಾರ ಸಂತ್ರಸ್ತೆಯನ್ನು ವಿವಾಹವಾಗುವುದಾಗಿ ಒಪ್ಪಿದ ಪೋಕ್ಸೋ ಪ್ರಕರಣದ ಆರೋಪಿಗೆ ಜಾಮೀನು

ಅಸ್ಸಾಂ (ಬೊಂಗಾನ್): ಎರಡು ವರ್ಷಗಳ ಹಿಂದೆ ಅಪ್ರಾಪ್ತ ವಯಸ್ಕಳೊಂದಿಗೆ ಸ್ನೇಹ ಬೆಳೆಸಿದ ನಂತರ ಅವಳೊಂದಿಗೆ ಸಹವಾಸ ಮಾಡಿದ ಆರೋಪದ ಮೇಲೆ ಬಂಧಿಸಲ್ಪಟ್ಟ 24 ವರ್ಷದ ಯುವಕನಿಗೆ ಇಲ್ಲಿನ ಬೊಂಗಾನ್ ಉಪ-ವಿಭಾಗೀಯ ನ್ಯಾಯಾಲಯವು ಜಾಮೀನು...

ಕೇರಳ: ಪಾದಚಾರಿ ಮಾರ್ಗದಲ್ಲಿ ಸ್ಕೂಟರ್ ಸವಾರನನ್ನು ತಡೆದ ವೃದ್ಧೆಗೆ ಸಾರಿಗೆ ಅಧಿಕಾರಿಗಳಿಂದ ಸನ್ಮಾನ

ಕಳೆದ ಶುಕ್ರವಾರ ಕೋಝಿಕ್ಕೋಡ್‌ನಲ್ಲಿ ಸ್ಕೂಟರ್ ಸವಾರನೊಬ್ಬ ಪಾದಚಾರಿ ಮಾರ್ಗದಲ್ಲಿ ಬೈಕ್ ಚಾಲನೆ ಮಾಡುವುದುನ್ನು ತಡೆದ ವೃದ್ಧ ಮಹಿಳೆಯನ್ನು ಕೇರಳದ ಮೋಟಾರು ವಾಹನ ಇಲಾಖೆ (ಎಂವಿಡಿ) ಅಧಿಕಾರಿಗಳು ಸನ್ಮಾನಿಸಿದರು. ಮುಖ್ಯ ರಸ್ತೆಯಲ್ಲಿನ ದಟ್ಟಣೆಯನ್ನು ತಪ್ಪಿಸಲು ಎರಂಜಿಪಾಲಂನ...

ಫೆಬ್ರವರಿ 14, ಪ್ರೇಮಿಗಳ ದಿನದಂದು ನಂದಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧ: ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಪ್ರವೇಶ ನಿಷೇಧಿಸಿದ ಜಿಲ್ಲಾಡಳಿತ 

ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಫೆಬ್ರವರಿ 14 ರಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ನಂದಿ ಬೆಟ್ಟಕ್ಕೆ ಪ್ರವಾಸಿಗರು ಪ್ರವೇಶಿಸುವುದನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಈ...

ಮೊಹಮ್ಮದ್ ದೀಪಕ್ ಜಿಮ್‌ನಲ್ಲಿ ಸದಸ್ಯತ್ವ ಪಡೆದ 15 ಜನ ಹಿರಿಯ ಸುಪ್ರೀಂ ಕೋರ್ಟ್ ವಕೀಲರು

ಉತ್ತರಾಖಂಡದ ಕೋಟ್ದ್ವಾರದ ದೀಪಕ್ ಅವರ ಜಿಮ್‌ ಈ ಹಿಂದೆ 150 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿತ್ತು, ಜನನಿಬಿಡ ಕೇಂದ್ರವಾಗಿದ್ದ ದೀಪಕ್ ಕುಮಾರ್ ಅವರ 'ಹಲ್ಕ್' ಜಿಮ್‌ಗೆ, ಮುಸ್ಲಿಂ ವ್ಯಾಪಾರಿ ಪರವಾಗಿ ನಿಂತ ಬಳಿಕ...

ಮೀರತ್‌ನಲ್ಲಿ ‘ಲವ್ ಜಿಹಾದ್’ ಕಾನೂನಿನಡಿಯಲ್ಲಿ ಮುಸ್ಲಿಂ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು; ಹಿಂದುತ್ವದ ಹೇಳಿಕೆಗಳನ್ನು ತಿರಸ್ಕರಿಸಿದ ಬೌದ್ಧ ವಧು

ಉತ್ತರ ಪ್ರದೇಶದ ಮುಸ್ಲಿಂ ವ್ಯಕ್ತಿಯೊಬ್ಬನ ವಿರುದ್ಧ ವಧುವಿನ ಚಿಕ್ಕಪ್ಪ ಆತನ ನಿಶ್ಚಿತಾರ್ಥದ ದಿನ ಅಂತರಧರ್ಮೀಯ ವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪೊಲೀಸ್ ದೂರು ದಾಖಲಿಸಿದ್ದು, ಶುಕ್ರವಾರ ನಡೆಯಬೇಕಿದ್ದ ವಿವಾಹದ ಸುತ್ತ ಉದ್ವಿಗ್ನತೆ ಹೆಚ್ಚಾಗಿದೆ. ಈ ಪ್ರಕರಣವು...

ತಮಿಳುನಾಡು: ವಿಧಾನಸಭಾ ಚುನಾವಣೆಗೂ ಮುನ್ನ 1.31 ಕೋಟಿ ಮಹಿಳೆಯರ ಖಾತೆಗೆ 5000ರೂ ಜಮಾ ಮಾಡಿದ ಸ್ಟಾಲಿನ್ ಸರ್ಕಾರ

ಚೆನ್ನೈ: ವಿಧಾನಸಭಾ ಚುನಾವಣೆಗೆ ಮುನ್ನ ಮಹತ್ವದ ಹೆಜ್ಜೆಯಾಗಿ, ತಮಿಳುನಾಡಿನ ಡಿಎಂಕೆ ಸರ್ಕಾರ ಶುಕ್ರವಾರ ಮಹಿಳೆಯರಿಗೆ ಮಾಸಿಕ ರೂ.1,000 ಸಹಾಯ ಯೋಜನೆಯ 1.31 ಕೋಟಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ರೂ.5,000 ಜಮಾ ಮಾಡಿದೆ. ಏಪ್ರಿಲ್-ಮೇ ವಿಧಾನಸಭಾ...

17 ವರ್ಷಗಳ ಗಡಿಪಾರಿನ ಬಳಿಕ ತಾರಿಕ್ ರೆಹಮಾನ್ ರಾಜಕೀಯ ಪುನರಾಗಮನ; ಬಾಂಗ್ಲಾದೇಶ ಚುನಾವಣೆಯಲ್ಲಿ ಬಿಎನ್‌ಪಿಗೆ ಬಹುಮತ

17 ವರ್ಷಗಳ ಗಡಿಪಾರಾದ ನಂತರ ತಾರಿಕ್ ರೆಹಮಾನ್ ರಾಜಕೀಯವಾಗಿ ಪುನರಾಗಮನ ಮಾಡಿದ್ದಾರೆ. 2026 ರ ಬಾಂಗ್ಲಾದೇಶ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷವನ್ನು ಭರ್ಜರಿ ಗೆಲುವಿನತ್ತ ಕೊಂಡೊಯ್ದಿದ್ದಾರೆ. ಬಿಎನ್‌ಪಿ ಅಧ್ಯಕ್ಷರಾಗಿರುವ ತಾರಿಕ್ ಎರಡು ಕ್ಷೇತ್ರಗಳಿಂದ...

ಸುಡಾನ್: ನೈಲ್ ನದಿಯಲ್ಲಿ ದೋಣಿ ಮುಳುಗಿ ಕನಿಷ್ಠ 21 ಸಾವು, ಹಲವರು ನಾಪತ್ತೆ!

ಉತ್ತರ ಸುಡಾನ್‌ನ ನೈಲ್ ರಾಜ್ಯದ ನೈಲ್ ನದಿಯಲ್ಲಿ ಪ್ರಯಾಣಿಕರ ದೋಣಿ ಮುಳುಗಿದ ನಂತರ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಕಾಣೆಯಾಗಿದ್ದಾರೆ ಎಂದು ಯುದ್ಧ ಪೀಡಿತ ದೇಶದ ನಾಗರಿಕ ರಕ್ಷಣಾ...

ಹೊಸಕೋಟೆ ಭೀಕರ ಅಪಘಾತದಲ್ಲಿ 7 ಮಂದಿ ಸಾವು: ಮೃತರಲ್ಲಿ 6 ಮಂದಿ 17-18 ವರ್ಷದ ವಿದ್ಯಾರ್ಥಿಗಳು!

ಬೆಂಗಳೂರು: ಫೆಬ್ರವರಿ 13, ಶುಕ್ರವಾರ ಬೆಳಗಿನ ಜಾವ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಹೊರವಲಯದಲ್ಲಿ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಪೊಲೀಸರ ಪ್ರಕಾರ,...