Homeಮುಖಪುಟದೇಶದ ಕಡಿಮೆ ಬಡತನದ ರಾಜ್ಯಗಳಾಗಿ ಹೊರಹೊಮ್ಮಿದ ಕೇರಳ, ತಮಿಳುನಾಡು: ನೀತಿ ಆಯೋಗ

ದೇಶದ ಕಡಿಮೆ ಬಡತನದ ರಾಜ್ಯಗಳಾಗಿ ಹೊರಹೊಮ್ಮಿದ ಕೇರಳ, ತಮಿಳುನಾಡು: ನೀತಿ ಆಯೋಗ

ಬಿಹಾರ, ಜಾರ್ಖಂಡ್‌ ಮತ್ತು ಉತ್ತರ ಪ್ರದೇಶ ರಾಜ್ಯಗಳು ಅತ್ಯಂತ ಹೆಚ್ಚು ಬಡತನ ಹೊಂದಿರುವ ರಾಜ್ಯಗಳಾಗಿದೆ ಎಂದು ಆಯೋಗ ಹೇಳಿದೆ

- Advertisement -
- Advertisement -

ನೀತಿ ಆಯೋಗದ ಮೊದಲ ‘ಬಹುಆಯಾಮದ ಬಡತನ ಸೂಚ್ಯಂಕ’ (MPI) ವರದಿಯ ಪ್ರಕಾರ ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ರಾಜ್ಯಗಳು ಭಾರತದ ಅತ್ಯಂತ ಬಡ ರಾಜ್ಯಗಳಾಗಿ ಹೊರಹೊಮ್ಮಿವೆ. ಸೂಚ್ಯಂಕದ ಪ್ರಕಾರ, ಬಿಹಾರದ 51.91% ಜನಸಂಖ್ಯೆಯು ಬಡವರಾಗಿದ್ದು ಮೊದಲ ಸ್ಥಾನದಲ್ಲಿದೆ. ಜಾರ್ಖಂಡ್‌ನಲ್ಲಿ 42.16%, ಉತ್ತರ ಪ್ರದೇಶ 37.79% ಮಧ್ಯಪ್ರದೇಶ 36.65% ಸೂಚ್ಯಂಕದ ನಾಲ್ಕನೇ ಸ್ಥಾನದಲ್ಲಿದ್ದರೆ, ಮೇಘಾಲಯ 32.67% ದೊಂದಿಗೆ ಐದನೇ ಸ್ಥಾನದಲ್ಲಿದೆ.

ಕೇರಳದಲ್ಲಿ 0.71%, ಗೋವಾ 3.76%, ಸಿಕ್ಕಿಂ 3.82%, ತಮಿಳುನಾಡು 4.89% ಮತ್ತು ಪಂಜಾಬ್ 5.59% ಭಾರತದಾದ್ಯಂತ ಕಡಿಮೆ ಬಡತನವನ್ನು ದಾಖಲಿಸಿದ್ದು, ಸೂಚ್ಯಂಕದ ಕೆಳಭಾಗದಲ್ಲಿವೆ. ಕರ್ನಾಟಕದಲ್ಲಿ 13.16% ಜನರು ಬಹು ಆಯಾಮದ ಬಡತನವನ್ನು ಹೊಂದಿದ್ದಾರೆ.

ಇದನ್ನೂ ಓದಿ: ಇನ್ನೆಂದೂ ಆಗಿರದಷ್ಟು ಬಡತನ ಕಳೆದ 8 ವರ್ಷಗಳಲ್ಲಿ ಭಾರತದಲ್ಲಿ ಹೆಚ್ಚಳ: ಅಧ್ಯಯನ

ಕೇಂದ್ರಾಡಳಿತ ಪ್ರದೇಶಗಳ ಪೈಕಿ ದಾದ್ರಾ ಮತ್ತು ನಗರ ಹವೇಲಿ 27.36%, ಜಮ್ಮು ಕಾಶ್ಮೀರ ಮತ್ತು ಲಡಾಖ್ 12.58%, ದಮನ್-ದಿಯು 6.82% ಮತ್ತು ಚಂಡೀಗಢ 5.97% ಬಡ ಕೇಂದ್ರಾಡಳಿತವಾಗಿ ಹೊರಹೊಮ್ಮಿವೆ. ಪುದುಚೇರಿಯು ಅದರ ಜನಸಂಖ್ಯೆಯು 1.72% ರಷ್ಟು ಬಡವರನ್ನು ಹೊಂದಿದೆ. ಲಕ್ಷದ್ವೀಪ 1.82%, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 4.30% ಮತ್ತು ದೆಹಲಿ 4.79% ದಷ್ಟು ಬಡತನವನ್ನು ಹೊಂದಿದೆ.

ಜಾರ್ಖಂಡ್, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಛತ್ತೀಸ್‌ಗಢ ನಂತರದ ಸ್ಥಾನದಲ್ಲಿ ಬಿಹಾರವು ಅತಿ ಹೆಚ್ಚು ಅಪೌಷ್ಟಿಕತೆಯನ್ನು ಹೊಂದಿದೆ. ಕರ್ನಾಟಕ 13 ನೇ ಸ್ಥಾನದಲ್ಲಿದ್ದು, 33.56% ಜನರು ಅಪೌಷ್ಟಿಕತೆಯನ್ನು ಹೊಂದಿದೆ.

ಇದನ್ನೂ ಓದಿ: ಬಡತನದಿಂದ ನೊಂದು ದಲಿತ ಸಹೋದರರು ಸಾವಿಗೆ ಶರಣು

ಆರೋಗ್ಯ ವಂಚಿತ ತಾಯಂದಿರು, ಶಾಲಾ ಶಿಕ್ಷಣ ವಂಚಿತರ ಶೇಕಡವಾರು ಪ್ರಮಾಣದಲ್ಲಿಯೂ ಬಿಜಾರ ಕಳೆಮಟ್ಟದಲ್ಲಿದೆ. ಶಾಲಾ ಹಾಜರಾತಿ, ಅಡುಗೆ ಇಂಧನ ಮತ್ತು ವಿದ್ಯುತ್ ವಂಚಿತ ಜನಸಂಖ್ಯೆಯ ಶೇಕಡಾವಾರು ಪ್ರಮಾಣದಲ್ಲಿ ಕೂಡಾ ಬಿಹಾರ ಕೆಳಮಟ್ಟದಲ್ಲಿದೆ.

ಉತ್ತರ ಪ್ರದೇಶವು ಮಕ್ಕಳ ಮತ್ತು ಹದಿಹರೆಯದವರ ಮರಣದ ವಿಭಾಗದಲ್ಲಿ ಅತ್ಯಂತ ಕೆಳ ಮಟ್ಟದಲ್ಲಿದೆ. ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳು ಇದರ ನಂತರದ ಸ್ಥಾನದಲ್ಲಿದೆ. ನೈರ್ಮಲ್ಯದಿಂದ ವಂಚಿತವಾಗಿರುವ ಜನಸಂಖ್ಯೆಯ ಶೇಕಡಾವಾರು ಪ್ರಮಾಣದಲ್ಲಿ ಜಾರ್ಖಂಡ್ ಅತ್ಯಂತ ಕಳಪೆ ಸಾಧನೆ ಮಾಡಿದ್ದು, ನಂತರದ ಸ್ಥಾನದಲ್ಲಿ ಬಿಹಾರ ಮತ್ತು ಒಡಿಶಾ ಇದೆ.

ವರದಿಯ ಪ್ರಕಾರ, ಭಾರತದ ರಾಷ್ಟ್ರೀಯ MPI ಅಳತೆಯು, ‘ಆಕ್ಸ್‌ಫರ್ಡ್ ಬಡತನ ಮತ್ತು ಮಾನವ ಅಭಿವೃದ್ಧಿ ಉಪಕ್ರಮ’ (OPHI) ಮತ್ತು ‘ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ’ (UNDP) ಅಭಿವೃದ್ಧಿಪಡಿಸಿದ ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ಮತ್ತು ದೃಢವಾದ ವಿಧಾನವನ್ನು ಬಳಸುತ್ತದೆ.

ಬಹುಮುಖ್ಯವಾಗಿ, ‘ಬಹುಆಯಾಮದ ಬಡತನದ ಅಳತೆ’ಯು ಕುಟುಂಬಗಳು ಎದುರಿಸುತ್ತಿರುವ ಬಹು ಮತ್ತು ಏಕಕಾಲಿಕ ಅಭಾವಗಳನ್ನು ಕಂಡುಹಿಡಿಯುತ್ತದೆ ಎಂದು ವರದಿ ಹೇಳಿದೆ.

ಇದನ್ನೂ ಓದಿ: ಬಡತನ ಮತ್ತು ಆರ್ಥಿಕ ಸಂಕಷ್ಟ: ಒಂದು ವರ್ಷದೊಳಗೆ ರಾಜ್ಯದಲ್ಲಿ 850 ಆತ್ಮಹತ್ಯೆ ಪ್ರಕರಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ತೆಲಂಗಾಣದಲ್ಲಿ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸುತ್ತೇವೆ: ಅಮಿತ್‌ ಶಾ

0
ಲೋಕಸಭೆ ಚುನಾವಣೆ ಹಿನ್ನೆಲೆ ಮುಸ್ಲಿಮರನ್ನೇ ಟಾರ್ಗೆಟ್‌ ಮಾಡಿಕೊಂಡು ದ್ವೇಷದ ಹೇಳಿಕೆ ನೀಡುತ್ತಾ ಬಿಜೆಪಿ ನಾಯಕರು ಹಿಂದೂ ಸಮುದಾಯದ ಜನರ ಓಲೈಕೆ ರಾಜಕೀಯ ಮಾಡುತ್ತಿರುವುದು ವ್ಯಾಪಕವಾಗಿದೆ. ಇದರ ಮುಂದುವರಿದ ಭಾಗವಾಗಿ ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು...