ಸ್ವಂತ ಇಂಟರ್ನೆಟ್ ಸೇವೆ ಹೊಂದಿದ ಮೊದಲ ರಾಜ್ಯವಾಗಿ ಕೇರಳ ಹೊರಹೊಮ್ಮಿದೆ. ಇಂಟರ್ನೆಟ್ ಹಕ್ಕನ್ನು ಮೂಲಭೂತ ಹಕ್ಕು ಎಂದು ಘೋಷಿಸಿದ ಮೊದಲ ರಾಜ್ಯವೂ ಕೇರಳ ಆಗಿದೆ. ರಾಜ್ಯದ 20 ಲಕ್ಷ ಕುಟುಂಬಗಳಿಗೆ ಉಚಿತ ಅಂತರ್ಜಾಲ ಸಂಪರ್ಕ ನೀಡಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಘೋಷಿಸಿದ್ದಾರೆ.
ಕೇರಳ ಫೈಬರ್ ಆಪ್ಟಿಕ್ ನೆಟ್‌ವರ್ಕ್ (ಕೆಎಫ್‌ಒಎನ್) ಯೋಜನೆಯನ್ನು ಉದ್ಘಾಟಿಸಿದ ಅವರು, “KFON ಅನ್ನು ರಾಜ್ಯದ ಜನರಿಗೆ ಅರ್ಪಿಸುತ್ತಿರುವುದು ಹೆಮ್ಮೆಯ ಕ್ಷಣವಾಗಿದೆ. ಇದು 20 ಲಕ್ಷ ಕುಟುಂಬಳಿಗೆ ಉಚಿತ ಇಂಟರ್ನೆಟ್ ಸೇವೆ ನೀಡುವ ಮೂಲಕ ಡಿಜಿಟಲ್ ಅಸಮಾನತೆಯನ್ನು ಕೊನೆಗಾಣಿಸಲಿದೆ ಮತ್ತು ಎಲ್ಲರಿಗೂ ಅಂತರ್ಜಾಲ ಸೇವೆ ಒದಗಿಸಲಿದೆ” ಎಂದು ತಿಳಿಸಿದ್ದಾರೆ.
Finally, #Kerala has realized the dream of becoming the first state with its own internet service! It was a proud moment to dedicate #KFON to the people. It offers free internet connections to 20 lakh families, thus ending the digital divide by ensuring internet access for all. pic.twitter.com/aKXiZQaaEG
— Pinarayi Vijayan (@pinarayivijayan) June 5, 2023
KFON ಕೇರಳದಲ್ಲಿ ಸಾರ್ವಜನಿಕ ಅಂತರ್ಜಾಲವನ್ನು ಆರಂಭಿಸಿದೆ. ಪ್ರಾರಂಭದ ದಿನವಾದ ಜೂನ್ 5 ರಂದು 17,412 ಸರ್ಕಾರಿ ಕಚೇರಿಗಳು ಮತ್ತು 2,105 ಬಿಪಿಎಲ್ ಮನೆಗಳಿಗೆ ಸಂಪರ್ಕವನ್ನು ಒದಗಿಸಲಾಗಿದೆ ಮತ್ತು 9,000 ಮನೆಗಳಿಗೆ ಸಂಪರ್ಕ ಕಲ್ಪಿಸಲು ಕೇಬಲ್ ನೆಟ್‌ವರ್ಕ್ ಅನ್ನು ಹಾಕಲಾಯಿತು ಎಂದು ವರದಿ ಹೇಳಿದೆ.
ಪಿಣರಾಯಿ ವಿಜಯನ್ ನೇತೃತ್ವದ LDF ಸರ್ಕಾರದ ಮೊದಲ ಅವಧಿಯಲ್ಲಿ ಕಲ್ಪಿಸಲಾದ ಪ್ರಮುಖ ಯೋಜನೆಗಳಲ್ಲಿ ಒಂದಾದ KFON ಎಲ್ಲಾ ಮನೆಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಸೇವೆಯನ್ನು ಖಾತ್ರಿಪಡಿಸುವ ಮೂಲಕ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಮೊದಲ ಹಂತದಲ್ಲಿ ರಾಜ್ಯದ 30,000 ಸರ್ಕಾರಿ ಕಚೇರಿಗಳು ಮತ್ತು 14,000 BPL ಕುಟುಂಬಗಳಿಗೆ ಉಚಿತವಾಗಿ ಸಂಪರ್ಕ ಕಲ್ಪಿಸುವ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ.
ಇದನ್ನೂ ಓದಿ; ಟಿಪ್ಪುವನ್ನು ಮುಕ್ತವಾಗಿ ಹೊಗಳಿದ್ದ ಬಿಜೆಪಿ ಸಂಸ್ಥಾಪಕ ಸದಸ್ಯ ಮಲ್ಕಾನಿ: ಪಿ.ಸಾಯಿನಾಥ್ ಉಲ್ಲೇಖ


