Homeಮುಖಪುಟಕೇರಳ ಚುನಾವಣೆ: ಕೋತಿಗಳ ಕಾಟ ತಡೆಯುವವರಿಗೆ ನಮ್ಮ ಮತ ಎಂದ ಸ್ಥಳೀಯರು!

ಕೇರಳ ಚುನಾವಣೆ: ಕೋತಿಗಳ ಕಾಟ ತಡೆಯುವವರಿಗೆ ನಮ್ಮ ಮತ ಎಂದ ಸ್ಥಳೀಯರು!

ತಮ್ಮನ್ನು ಕೋತಿಗಳ ಕಾಟದಿಂದ ಮುಕ್ತಿಗೊಳಿಸುವ ಅಭ್ಯರ್ಥಿಗೆ ಮತ ನೀಡುತ್ತೇವೆ ಎಂದು ಕೇರಳದ ಕಲ್ಪೆಟ್ಟಾ ಮತ್ತು ವೈಯನಾಡ್‌ ಸ್ಥಳಿಯರು ನಿರ್ಧರಿಸಿದ್ದಾರೆ

- Advertisement -
- Advertisement -

ಕೇರಳದ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಗಾಗಿ ಅಲ್ಲಿನ ಜನರು ವಿಚಿತ್ರವಾದ ತೀರ್ಮಾನವೊಂದನ್ನು ತೆಗೆದುಕೊಂಡಿದ್ದು, “ತಮ್ಮ ಊರಿನಲ್ಲಿರುವ ಗಂಭೀರ ಸಮಸ್ಯೆಯಾದ ಕೋತಿಗಳ ಕಾಟ ತಡೆಯುವವರಿಗೆ ನಮ್ಮ ಮತವನ್ನು ನಿಡುತ್ತೇವೆ” ಎಂದು ಹೇಳಿಕೊಂಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಎಎನ್‌ಐ, “ತಮ್ಮನ್ನು ಕೋತಿಗಳ ಕಾಟದಿಂದ ಮುಕ್ತಿಗೊಳಿಸುವ ಅಭ್ಯರ್ಥಿಗೆ ಮತ ನೀಡುತ್ತೇವೆ ಎಂದು ಕೇರಳದ ಕಲ್ಪೆಟ್ಟಾ ಮತ್ತು ವೈಯನಾಡ್‌ ಸ್ಥಳಿಯರು ನಿರ್ಧರಿಸಿದ್ದಾರೆ. ಒಬ್ಬ ಸ್ಥಳೀಯರ ಪ್ರಕಾರ, ಯಾವ ಅಭ್ಯರ್ಥಿಯು ಕೋತಿಗಳ ತೊಂದರೆಯನ್ನು ನಿವಾರಿಸುವುದಾಗಿ ಯಾವ ಅಭ್ಯರ್ಥಿ ಹೇಳುತ್ತಾರೋ ಅವರಿಗೆ ನನ್ನ ಮತ ನೀಡುವುದಾಗಿ ನಿರ್ಧರಿಸಿದ್ದೇನೆ. ಕೋತಿಗಳು ನಮ್ಮ ಮನೆಗೆ ನುಗ್ಗಿ ಆಹಾರ ಪದಾರ್ಥಗಳನ್ನು ಹಾಳು ಮಾಡುತ್ತಿದೆ” ಎಂದು ವರದಿ ಮಾಡಿದೆ.

ಇದನ್ನೂ ಓದಿ: ನೆರೆ ಪರಿಹಾರ ಕೊಡದಿದ್ದರೆ ರಾಜ್ಯದಾದ್ಯಂತ ತೀವ್ರ ಹೋರಾಟ – ಕರವೇ ಟಿ.ಎ.ನಾರಾಯಣಗೌಡರು

ಇದನ್ನೂ ಓದಿ: ಉತ್ತಮ ಬೆಳೆಯಾದರೂ ಖರೀದಿ ಕೇಂದ್ರ ತೆರೆಯದ ಸರ್ಕಾರದ ವಿರುದ್ಧ ರೈತರ ಆಕ್ರೋಶ

ಪ್ರತಿಯೊಂದು ಕ್ಷೇತ್ರದ ಜನತೆಗೂ ತಮ್ಮದೇ ಆದ ಸಮಸ್ಯೆಗಳಿರುತ್ತದೆ. ಅವುಗಳನ್ನು ನಿವಾರಿಸುವವರಿಗೆ ತಮ್ಮ ಮತಗಳನ್ನು ನೀಡುತ್ತೇವೆ ಎಂದು ಹೇಳುವುದು ಪ್ರಜ್ಞಾವಂತ ನಾಗರೀಕ ಪ್ರಜೆಯ ಹಕ್ಕು. ಆದರೆ ಇಲ್ಲಿ ಕೋತಿಗಳ ಕಾಟ ನಿವಾರಿಸುವವರಿಗೆ ತಮ್ಮ ಮತಗಳನ್ನು ನೀಡುತ್ತೇವೆ ಎನ್ನುತ್ತಿದ್ದಾರೆ.

ಇದರಿಂದಲೇ ತಿಳಿಯುತ್ತದೆ, ಅಲ್ಲಿನ ಸಮಸ್ಯೆ ಎಷ್ಟು ಗಂಭಿರವಾದದ್ದು ಎಂದು. ಹಾಗಾಗಿ ಇಲ್ಲಿನ ಜನರು ತೆಗೆದುಕೊಂಡಿರುವ ತೀರ್ಮಾನ ಮತ್ತು ಇವರು ಇಟ್ಟಿರುವ ಬೇಡಿಕೆ, ನೋಡುವುದಕ್ಕೆ ಹಾಸ್ಯಾಸ್ಪದವಾಗಿ ಕಂಡರೂ, ವಾಸ್ತವದಲ್ಲಿ ಅವರಿಗಾಗಿರಬಹುದಾದ ತೊಂದರೆ ತೀರಾ ಗಂಭೀರವಾದದ್ದು.


ಇದನ್ನೂ ಓದಿ: ಬಿಹಾರ: ಸಿಎಂ ನಿತೀಶ್‌ ಅನ್ನು ನಿಯಂತ್ರಿಸುವ ರಿಮೋಟ್ ಬೇರೆಯವರ ಬಳಿಯಿದೆ- ತಾರಿಖ್ ಅನ್ವರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...