Homeರಾಜಕೀಯಕಣ್ಣೀರಧಾರೆ... ಇದೇಕೆ ಇದೇಕೆ ...! ಕುಮಾರಸ್ವಾಮಿ ಜಾಸ್ತಿ ಅತ್ತಿದ್ದು ಯಾವ ಸರ್ಕಾರದಲ್ಲಿ ನಿಮಗೆ ಗೊತ್ತೆ?

ಕಣ್ಣೀರಧಾರೆ… ಇದೇಕೆ ಇದೇಕೆ …! ಕುಮಾರಸ್ವಾಮಿ ಜಾಸ್ತಿ ಅತ್ತಿದ್ದು ಯಾವ ಸರ್ಕಾರದಲ್ಲಿ ನಿಮಗೆ ಗೊತ್ತೆ?

- Advertisement -
- Advertisement -

‘ಕುಮಾರಸ್ವಾಮಿ, ಕಾಂಗ್ರೆಸ್ ಜತೆಗೆ ಸರ್ಕಾರ ನಡೆಸುತ್ತಿದ್ದಾಗ ಸುರಿಸಿದಷ್ಟು ಕಣ್ಣೀರನ್ನು ಬಿಜೆಪಿ ಜತೆಗಿನ ಸರ್ಕಾರ ನಡೆಸುತ್ತಿದ್ದಾಗ ಸುರಿಸಿಲ್ಲ’ ಹೀಗೆಂದು ಜೆಡಿಎಸ್ ರಾಷ್ಟ್ರೀಯ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದ್ದಾರೆ. ಜೆಡಿಎಸ್ ರಾಷ್ಟ್ರೀಯ ವರಿಷ್ಠರೇ ? ಕರ್ನಾಟಕ ಬಿಟ್ಟು ಬೇರೆ ಕಡೆ ಜೆಡಿಎಸ್ ಇದ್ದಂಗೆ ಕಾಣ್ತೀಲ್ಲ ಅಂತ ನೀವು ಪ್ರಶ್ನೆ ಹಾಕ್ಬೇಡಿ ? ಆಮೇಲೆ ಅವ್ರು ಕುಮಾರಸ್ವಾಮಿ ಜತೆ ಕುತ್ಕೊಂಡು ಅಳೋದಿಕ್ಕೆ ಶುರು ಮಾಡಿದ್ರೆ ಕಷ್ಟ. ಆಲ್ ರೈಟ್ ಮುಂದಕ್ಕೋಗೋಣ…

ದೇವೇಗೌಡರ ಮಾತಿನ ಅರ್ಥ ಏನು ? ಬಿಜೆಪಿ ಜತೆಗೆ ಸರ್ಕಾರ ನಡೆಸುವಾಗಲೂ ಕಣ್ಣೀರು ಹಾಕ್ತಾ ಇದ್ರು, ಆದರೆ ಕಾಂಗ್ರೆಸ್ ಜತೆಗೆ ಸರ್ಕಾರ ನಡೆಸುವಾಗ ಹಾಕಿದಷ್ಟು ಕಣ್ಣೀರು ಹಾಕಿಲ್ಲ ಅಂತಲ್ವ. ಮಳೆ ಇಷ್ಟು ಸೆಂಟಿಮೀಟರ್ ಬಿತ್ತು, ಇಷ್ಟು ಇಂಚು ಮಳೆ ಆಯ್ತು ಅಂತ ಹೇಳೋದಿಕ್ಕೆ ಅಳತೆಗೋಲು ಇದೆ. ಆದ್ರೆ ಯಾವಾಗ ಎಷ್ಟು ಕಣ್ಣೀರು ಬಿತ್ತು ಅಂತ ಅಳೆಯೋಕೆ ಮಾತ್ರ ಇಲ್ಲ. ಈ ಸೈಂಟಿಸ್ಟುಗಳಿಗೂ ಬುದ್ದಿ ಇಲ್ಲ ಕಣ್ರಿ, ಎಂಥೆಂತದೋ ಯಂತ್ರ ಕಂಡು ಹಿಡಿತಾರೆ, ಚಂದ್ರಯಾನಕ್ಕೂ ಕಳಿಸ್ತಾರೆ. ಈ ಕಣ್ಣೀರು ಎಷ್ಟು ಬಿತ್ತು ಅಂತ ಅಳೆಯೋಕೆ ಸಣ್ಣದೊಂದು ಥರ್ಮಾಮೀಟರ್ ಥರದ್ದು ಕಂಡು ಹಿಡಿದಿಲ್ವಲ್ರಿ… ಆಲ್ ರೈಟ್ ಮುಂದಕ್ಕೋಗೋಣ… ಮುಂದೆ ಕಂಡು ಹಿಡಿದ್ರೂ ಹಿಡಿಬಹುದು.

ಈಗ ಕುಮಾರಸ್ವಾಮಿ‌ ಕಣ್ಣೀರು ವಿಷಯಕ್ಕೆ ಬರೋಣ. ಮುಖ್ಯಮಂತ್ರಿ ಆಗಿರುವಾಗ ಅವ್ರು ಏಕೆ ಅಳ್ಬೇಕು, ಅದೂ ಅನಾಯಾಸವಾಗಿ ಮುಖ್ಯಮಂತ್ರಿ ಪಟ್ಟ ದಕ್ಕಿರುವಾಗಲೂ ? ನನಗಂತೂ ಅರ್ಥವಾಗ್ಲಿಲ್ಲ. ನಿಮಗೇನಾದ್ರೂ ಅರ್ಥವಾದ್ರೆ ಕಾಮೆಂಟಿನಲ್ಲಿ ಹೇಳಿ. ಈ ಐಎಎಸ್, ಐಪಿಎಸ್ ಪಾಸು ಮಾಡೋರು ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬುಡ್ಕಂಡು ಓದ್ತಾರೆ.‌ಕಣ್ಣಿಗೆ ಮಾತ್ರ ಎಣ್ಣೆ ಬಿಟ್ಕೊಳೋದಾ ? ಬೇರೆಲ್ಲೂ ಅಂದ್ರೆ ಬಾಯಿಗೆ ಬಿಟ್ಕಳೋದಿಲ್ವ ಅಂತ ಕೇಳ್ಬೇಡಿ. ಹಾಗೆ ಬಿಡ್ಕಂಡ್ರೆ ಐಎಎಸ್ ಪಾಸ್ ಮಾಡೋಕ್ಕಾಗೋಲ್ಲ. ಹಾಗೆ ಕಷ್ಟಪಟ್ಟು ಅಧಿಕಾರಿಗಳಾದವ್ರೆ ಬೇಸರವಾದ್ರೆ ನಗ್ತಾನಗ್ತಾನೆ ರಾಜಿನಾಮೆ ಬೀಸಾಕ್ಬಿಟ್ಟು ಮನೆಗೋಯ್ತಾರೆ. ಆಲ್ ರೈಟ್ ಮುಂದಕ್ಕೋಗೋಣ.

ಒಂದ್ ಇಂಟರೆಸ್ಟಿಂಗ್ ಅಂದ್ರೆ ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗಲೂ, ಇಲ್ದೆ ಇದ್ದಾಗಲೂ ಅಳ್ತಾ ಇರ್ತಾರೆ. ಅಧಿಕಾರಕ್ಕೆ ಬರೋ ಮುಂಚೆ ‘ ನಾನು ಹಾರ್ಟ್ ಪೇಶಂಟು’ ಅಂತ ಅಳ್ತಾರೆ.‌ಕೇಳಿದ ಜನವೂ ‘ಹೇ ಅತ್ಲಾಗೆ ಬಿಡೊ, ನಾವೇನ್ ನಮ್ ಮನೆ ಆಸ್ತೀನಾ ಬರ್ಕೊಟ್ಟವಾ, ಒಂದ್ ಓಟ್ ತಾನೇ ಅಂತ ಹಾಕಿಬಿಡ್ತಾರೆ’ ಗೆದ್ದಮೇಲೂ ಅಳ್ತಾರೆ. ‘ನಾನ್ ನಂಬಿದ ಜನ ನನಗೆ ಕೈಬುಡಲಿಲ್ಲ’ ಅಂತ.

ಇತ್ತಿತ್ಲಾಗೆ ಯಾವ ಪಾರ್ಟಿಗೂ ಸ್ಪಷ್ಟ ಸ್ಪಷ್ಟ‌ಬಹುಮತ ಇಲ್ಲ. ವಸಿ ಅಂದ್ರೆ ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಂಡು ಅಧಿಕಾರಕ್ಕೆ ಬರೋಕೆ ದೇವೇಗೌಡ್ರು ತಾವನೇ ಬರ್ಬೇಕು. ಆಯ್ತು ಬಂದ್ರು, ಕುಮಾರಸ್ವಾಮಿ ಮುಖ್ಯಮಂತ್ರಿ ಆದ್ರು… ಆದ್ರೆ ಮಾತ್ ಮಾತಿಗೂ ಟವೆಲ್ ಹಿಡ್ಕಂಡು ಅಳೋದ್ಯಾಕೆ? ಗೊಳೋ ಅಂತ ಅಳ್ತಾರೆ. ಇದು ಅವರ ತಂದೆ ದೇವೇಗೌಡ್ರರಿಂದಲೇ ಬಂದಿರೋ ರಕ್ತಗತ ಬಳುವಳಿ. ಏಕಂದ್ರೆ ದೇವೇಗೌಡ್ರು ಮುಸಮುಸ ಅಂತ ಮೂಗ್ ತಿಕ್ಕಂಡು ಅಳ್ತಾನೆ‌ ಇರ್ತಾರೆ.

ನೀವು ಮೂಗ್ ತಿಕ್ಕಂಡ್ರೆ ಅಳು ಬರುತ್ತಾ ಅಂತ ಪ್ರಯತ್ನಿಸೋಕೆ ಹೋಗ್ಬೇಡಿ… ಬರೋದು‌ ಕಣ್ಣೀರಲ್ಲ ಸಿಂಬಳ. ಅಂದಹಾಗೆ ಕಣ್ಣೀರು ಸುರಿಸೋದು ರಕ್ತಗತವಾಗಿ ಬರ್ತುದಾ ಅಂತ ಕೇಳ್ಬೇಡಿ. ಈ ಡಾಕ್ಟರುಗಳು ಬೇರೆ ರಕ್ತದಲ್ಲಿ ಬರೋದು ಕಾಯಿಲೆ ಹೊರತು ಕಲೆ ಅಲ್ಲ ಅಂತಾರೆ. ಅವ್ರ ಮಾತು ನಂಬ್ಬೇಡಿ. ಅವ್ರಿಗೆ ರಾಜಕೀಯ ಅಂದ್ರೇನು, ಕಲೆ ಅಂದ್ರೇನು ಅಂತ ಗೊತ್ತಿಲ್ಲ. ಆಲ್ ರೈಟ್ ಮುಂದಕ್ಕೋಗೋಣ.

ಈಗ ಪಾಯಿಂಟಿಗೆ ಬರೋಣ. ಕಣ್ಣೀರು ಹಾಕ್ತಾ ರಾಜ್ಯಭಾರ ಮಾಡೋದೇನಪ್ಪಾ, ಆಗ್ಲಿಲ್ಲ ಅಂದ್ರೆ ರಾಜ್ಯಪಾಲರತ್ರ ಹೋಗಿ ರಾಜಿನಾಮೆ ಒಗಾಯಿಸಿ ಅಂದ್ರೆ ಕೊಟ್ಬುಟ್ಟು ಬರೋದಪ್ಪಾ… ಅಂಗೂ ಮಾಡೋದಿಲ್ಲ. ಜನ ಏನಾದ್ರೂ ‘ಕುಮಾರಣ್ಣ ನೀನು‌ ಮುಖ್ಯಮಂತ್ರಿಯಾಗಿ ಮುಂದುವರಿಲಿಲ್ಲ ಅಂದ್ರೆ ನಮ್ಗೆ ಸಂಕಟ ಆಯ್ತುದೆ’ ಅಂತ ಕಣ್ಣೀರಾಕ್ತಾರಾ… ? ಒಂದುವೇಳೆ ಕರ್ನಾಟಕದ ಆರೂವರೆ ಕೋಟಿ ಜನ ಕಣ್ಣೀರು ಹಾಕಿದ್ರೆ ಇಲ್ಲಿ ಮಳೆ ಬಾರದೇ ಇದ್ದಾಗ ಪರ್ಜನ್ಯ ಜಪ ಮಾಡೋ ಬದ್ಲು ಒಂದಷ್ಟು ದಿನ ಕುಮಾರಸ್ವಾಮಿನಾ ಸಿಎಂ ಕುರ್ಚಿ ಮೇಲೆ ಕೂರಿಸ್ಬುಟ್ಟು ನಂತ್ರ ಇಳಿಸ್ಬುಟ್ರೆ ಜನವೆಲ್ಲಾ ಕಣ್ಣೀರಾಕಿ ಹಾಕಿ ನೀರು ಪ್ರವಾಹದೋಪಾದಿ ಹರೀತಾ ಇರೋದು. ಆದ್ರೆ ಹಾಗೇನೂ ಆಗಿಲ್ವೆ. ಜನ ಏನು ಪಟ್ಟು ಹಿಡಿದಿಲ್ವೆ. ಆದ್ರೂ ಅಳ್ತಾ ಅಳ್ತಾ ಅಧಿಕಾರ ನಡೆಸೋದ್ಯಾಕೆ. ವಯೋವೃದ್ಧರಾದ ತಮ್ಮ ತಂದೆಯವ್ರ ಕಣ್ಣಲೂ ನೀರು ತರಿಸೋದ್ಯಾಕೆ…ಒಂದ್ ವೇಳೆ ಇವರಿಬ್ರು ಸುರಿಸಿದ ಕಣ್ಣೀರನ್ನೆಲ್ಲ ಸಂಗ್ರಹಿಸಿ ಯಾವ್ದಾದ್ರೂ ಒಂದು ಸಸಿ ಬುಡಕ್ಕೆ ಹಾಕಿದ್ರೆ ಅದು ಹೆಮ್ಮರವಾಗಿ ಬೆಳ್ದು ಹಣ್ಣು ಬಿಡೋ ಬದ್ಲು ಕಣ್ಣೀರು ಸುರಿಸ್ತಾ ಇತ್ತೇನೋ… ಅದಕ್ಕೆ ಕಣ್ಣೀರು ಮರ ಅಂತ ಹೆಸ್ರಾಗಿ ದೇಶವಿದೇಶದ ಜನವೆಲ್ಲಾ ನೋಡೋಕೆ ಬರೋರೇನು…

ಆಲ್ ರೈಟ್… ಮುಂದಕ್ಕೋಣ, ಸಮ್ಮಿಶ್ರ ಸರ್ಕಾರ ಬಿದ್ದು ಹೋದ ಮೇಲೂ ಮಗನ ಕಣ್ಣೀರು ನೋಡಕಾಯ್ತಿಲ್ಲ, ಅಂತ ದೇವೇಗೌಡ್ರು ಅಳ್ತಾ ಅವ್ರೆ, ಮಹಾಜನಗಳೇ ಅವ್ರು ಕಣ್ಣೀರು ನಿಲ್ಸಿ ನಗುಮೊಗ ಮಾಡ್ಕಂಡು ನಿಂತ್ಕಳ್ಳೊ ಐಡಿಯಾ ಇದ್ರೆ ಕೊಡಿ ಅಂತ ಹೇಳ್ತಾ ಸದ್ಯಕ್ಕೆ ಈ ಕಣ್ಣೀರಧಾರೆ ಕಥೆಯನ್ನ ನಿಲ್ಸೋಣ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. Ayyo Ayyo Sumane Natak
    Estu Kaniru surisidru JDS GOVT Madoke Agola Next Election nali Own Agi Govt madidre Nanu HDK MANEGE 1 year Jeeta madoke ready..

    Nataka Nataka Hige ಕಣ್ಣೀರಧಾರೆ Kinta Maneli Irodu Like Alwa MANINA MAKLU HOLADA KELESA MADLI. ELA NEXT ELECTION NALI 122 MORE SEAT BANDU GOVT MADI NIMA MANELI NANU JEET MADTINI

  2. ಕಣ್ಣೀರಧಾರೆ‌ ಇದೇಕೆ…ಇದೇಕೆ..ಲೇಖನ ವಿಡಂಬನಾತ್ಮಕವಾಗಿ ಚೆನ್ನಾಗಿದೆ. ದೇವರು ದೆವ್ವಾಂಥ ಕಂಡ ಕಂಡ ದೇವಸ್ಥಾನ ಹುತ್ತ ಕಲ್ಲು ಅಲೆಯೋ ಅಪ್ಪ ಮಕ್ಕಳಿಗೆ ಅವರ ದೇವರು ಅಧಿಕಾರದಲ್ಲೇ ಉಳಿಸೊ ಬದಲಿಗೆ ಕಣ್ಣೀರ ವರ ಯಾಕೆ ದಯ ಪಾಲಿಸಿದನೋ ತಿಳಿಯಲು ಮತ್ತೊಂದು ಹೋಮಹವನ ಮಾಡಿದರೆ ತಿಳಿಯಬಹುದು..ಅಥವಾ ಬರೀ ಗಿಮಿಕ್ಕಾ..

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...