Homeಎಕಾನಮಿಆರ್ಥಿಕ ಕುಸಿತವನ್ನು ಮೋದಿ ಸರ್ಕಾರ ಒಪ್ಪಿಕೊಳ್ಳದಿರುವುದರಿಂದ ಗಂಭೀರ ಸಮಸ್ಯೆಯತ್ತ ನಡೆಯುತ್ತಿದ್ದೇವೆ; ಯೋಗೇಂದ್ರ ಯಾದವ್

ಆರ್ಥಿಕ ಕುಸಿತವನ್ನು ಮೋದಿ ಸರ್ಕಾರ ಒಪ್ಪಿಕೊಳ್ಳದಿರುವುದರಿಂದ ಗಂಭೀರ ಸಮಸ್ಯೆಯತ್ತ ನಡೆಯುತ್ತಿದ್ದೇವೆ; ಯೋಗೇಂದ್ರ ಯಾದವ್

- Advertisement -
- Advertisement -

ನಮ್ಮ ದೇಶ ಆರ್ಥಿಕ ಹಿಂಜರಿತದತ್ತ ಸಾಗುತ್ತಿದೆಯೇ? ಇನ್ನು ಈ ಪ್ರಶ್ನೆಯನ್ನು ಕೇಳದೇ ಇರಲು ಆಗುವುದಿಲ್ಲ. ಒಂದು ಕಡೆ ಇಡೀ ದೇಶವೇ ಜಮ್ಮು ಮತ್ತು ಕಾಶ್ಮೀರದ ಪ್ರಶ್ನೆಯಲ್ಲಿ ಸಿಲುಕಿಕೊಂಡಿದ್ದರೆ ಅದೇ ಸಮಯದಲ್ಲಿ ದೇಶದ ಅರ್ಥವ್ಯವಸ್ಥೆಯು ನಿಧಾನವಾಗಿ ಕುಸಿಯುತ್ತಿದೆ. ಮೊದಲು ಸಮಸ್ಯೆಯಾಗಿ ಕಂಡುಬಂದಿದ್ದು, ಈಗ ಸಂಕಟದ ರೂಪ ಪಡೆದುಕೊಳ್ಳುತ್ತಿದೆ.

ಇತ್ತೀಚಿಗೆ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು ಆರ್ಥಿಕ ಹಿಂಜರಿತದ ಲಕ್ಷಣಗಳು ಚಿಂತಾಜನಕವಾಗಿವೆ, ಇದಕ್ಕೆ ತುರ್ತಾಗಿ ಏನಾದರೂ ಮಾಡಬೇಕಾದ ಅಗತ್ಯವಿದೆ ಎಂದು ಎಚ್ಚರಿಸಿದರು. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಇದೇ ರಘುರಾಮ್ ರಾಜನ್ ಅವರು ವಿಶ್ವದಲ್ಲಿ 2008ರ ಆರ್ಥಿಕ ಹಿಂಜರಿತದ ಸಮಯದಲ್ಲಿ ಮುಂದೆ ಹೀಗಾಗುವುದಿದೆ ಎನ್ನುವ ಭವಿಷ್ಯವಾಣಿ ನುಡಿದಿದ್ದ ಅರ್ಥಶಾಸ್ತ್ರಜ್ಞರಾಗಿದ್ದಾರೆ. ಹಾಗಾಗಿ ಅವರ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಲೇಬೇಕಿದೆ.

ಕಳೆದ ಕೆಲವು ದಿನಗಳಲ್ಲಿ ಅರ್ಥವ್ಯವಸ್ಥೆಯ ಭಿನ್ನಭಿನ್ನ ಕ್ಷೇತ್ರಗಳಿಂದ ಕೆಟ್ಟ ಸುದ್ದಿಗಳು ಬರುತ್ತಿವೆ. ಆಟೋ ಉದ್ಯಮದಲ್ಲಿ ಹಿಂಜರಿತ ಮತ್ತು ಕೆಲಸಗಾರರನ್ನು ಕೆಲಸದಿಂದ ತೆಗೆದುಹಾಕುವ ವಿಷಯ ಈಗ ಸಾಮಾನ್ಯ ವಿಷಯವಾಗಿಬಿಟ್ಟಿದೆ. ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ರಾಹುಲ್ ಬಜಾಜ್‍ರಂತಹ ಉದ್ಯಮಿಯೇ ಅರ್ಥವ್ಯವಸ್ಥೆಯಲ್ಲಿ ಬೇಡಿಕೆ ಇಲ್ಲ ಹಾಗೂ ಹೂಡಿಕೆಯೂ ಇಲ್ಲದಿರುವಾಗ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಕೇಳಬೇಕಾಯಿತು. ರೈತರ ಸಂಘಟನೆಗಳು ಹಾಗೂ ಡೇರಿ ಉತ್ಪಾದಕರೂ ಸಹ ಅನೇಕ ದಿನಗಳಿಂದ ತಮ್ಮ ಸಂಕಷ್ಟವನ್ನು ತೋಡಿಕೊಳ್ಳುತ್ತಿದ್ದಾರೆ. ಈಗ ಬಟ್ಟೆ ತಯಾರಕರು ಆ ಕ್ಷೇತ್ರದಲ್ಲಿ ಪರಿಸ್ಥಿತಿ ದಿನೇದಿನೆ ಕೆಡುತ್ತಿದೆ ಎಂದು ನಿರ್ದಿಷ್ಟವಾಗಿ ಜಾಹೀರಾತನ್ನೇ ಪ್ರಕಟಿಸಿದ್ದಾರೆ. ಪ್ರಾಪರ್ಟಿಯ ವ್ಯಾಪಾರ ಹಲವು ವರ್ಷಗಳಿಂದ ನಿಧಾನವಾಗಿದೆ. ನೋಟುರದ್ದತಿಯ ಸಮಯದಿಂದಲೇ ಚಿಲ್ಲರೆ ವ್ಯಾಪಾರಿಗಳು ತಮ್ಮ ವ್ಯಾಪಾರ ಹದಗಟ್ಟಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಆದಾಗ್ಯೂ ಜನರ ಹೇಳಿಕೆಯ ಮೇಲೆ ಭರವಸೆ ಮಾಡುವುದರ ಬದಲಿಗೆ ನಿಜವಾದ ಅಂಕಿಅಂಶಗಳ ಆಧಾರದ ಮೇಲೆಯೇ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳಬೇಕಿದೆ. ಇತ್ತೀಚಿಗೆ ಹಿಂಜರಿತವನ್ನು ಪುಷ್ಟೀಕರಿಸುವಂತಹ ಅನೇಕ ಅಂಕಿಅಂಶಗಳು ಬಂದಿವೆ. ಪ್ರತಿ ಮೂರು ತಿಂಗಳಿಗೊಮ್ಮೆ ಸರಕಾರ ಅರ್ಥವ್ಯವಸ್ಥೆಯ ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತದೆ. ಕಳೆದ 9 ತಿಂಗಳಿಂದ ಈ ಅಂಕಿಅಂಶಗಳ ಪ್ರಕಾರ ನಮ್ಮ ದೇಶದ ಅರ್ಥಿಕ ವೃದ್ಧಿಯ ದರ ಕಡಿಮೆಯಾಗುತ್ತಿದೆ. 9% ರಿಂದ 10% ದರದಲ್ಲಿ ವೃದ್ಧಿಯಾಗುತ್ತಿದ್ದ ನಮ್ಮ ಅರ್ಥವ್ಯವಸ್ಥೆ ಈಗ 5.8% ರ ದರಕ್ಕೆ ಕುಸಿದಿದೆ. ಕಳೆದ 20 ವರ್ಷಗಳಲ್ಲಿ ಸತತ ಮೂರು ತ್ರೈಮಾಸಿಕಗಳಲ್ಲೂ (quarterly) ಅಭಿವೃದ್ಧಿ ದರದಲ್ಲಿ ಕುಸಿತ ಕಂಡಿದ್ದು ಕೇವಲ ಮೂರು ಬಾರಿ. ನಿಸ್ಸಂಶಯವಾಗಿಯೂ ಆರ್ಥಿಕ ವೃದ್ಧಿಯ ವಾರ್ಷಿಕ ದರದಲ್ಲಿ ಇಳಿತ ಕಂಡುಬಂದಿದೆಯೇ ಹೊರತು ವೃದ್ಧಿ ನಿಂತಿಲ್ಲ, ಅಥವಾ ಅರ್ಥವ್ಯವಸ್ಥೆಯ ಸಂಕುಚಿತ ಇನ್ನೂ ಶುರು ಆಗಿಲ್ಲ. ಆದರೆ ಭಾರತೀಯ ಅರ್ಥವ್ಯವಸ್ಥೆಗೆ ವೃದ್ಧಿಯ ದರ ಹೆಚ್ಚುತ್ತ ಇರುವುದು ಅತ್ಯಂತ ಅವಶ್ಯಕವಾಗಿದೆ ಹಾಗಾಗಿ ಈ ಸುದ್ದಿಗಳು ಚಿಂತಾಜನಕವಾಗಿವೆ.

ಒಂದು ವೇಳೆ ಕಳೆದ ವರ್ಷ 2018ರಲ್ಲಿ ಜನೆವರಿಯಿಂದ ಮಾರ್ಚ್‍ತನಕದ ತ್ರೈಮಾಸಿಕ ಹಾಗೂ ಈ ವರ್ಷದ ಇವೇ ಮೂರು ತಿಂಗಳ ಹೋಲಿಕೆ ಮಾಡಿದರೆ ಸ್ಪಷ್ಟವಾಗುವುದೇನೆಂದರೆ ಸುಮಾರಾಗಿ ಎಲ್ಲಾ ಮಹತ್ವಪೂರ್ಣ ಕ್ಷೇತ್ರಗಳ ಅರ್ಥವ್ಯವಸ್ಥೆಯಲ್ಲಿ ಕುಸಿತ ಕಂಡುಬಂದಿದೆ. ಕಾರುಗಳು ಮಾರಾಟದಲ್ಲಿ ಕಳೆದ ಬಾರಿ 18% ವೃದ್ಧಿ ಆಗಿತ್ತು, ಈ ಬಾರಿ 23% ಕುಸಿತ ದಾಖಲೆಯಾಗಿದೆ. ಸ್ಕೂಟರ್ ಮತ್ತು ಇತರ ದ್ವೀಚಕ್ರ ವಾಹನಗಳಲ್ಲಿ ಕಳೆದ ಬಾರಿ 16% ಹೆಚ್ಚಳವಿತ್ತು ಆದರೆ ಈ ಬಾರಿ 12% ಕುಸಿತ ಕಾಣಿಸಿಕೊಂಡಿದೆ. ದೈನಂದಿಕ ಬಳಕೆಯ ಉಪಭೋಗದ ವಸ್ತುಗಳ ಮಾರಾಟದಲ್ಲಿ ಕಳೆದ ಬಾರಿಯ 12% ಹೆಚ್ಚಳದ ಹೋಲಿಕೆಯಲ್ಲಿ ಈ ಬಾರಿ ಕೇವಲ 5% ಹೆಚ್ಚಳವಾಗಿದೆ.

ಹೂಡಿಕೆಯಲ್ಲೂ ಇದೇ ಪ್ರವೃತ್ತಿಯನ್ನು ಕಾಣಬಹುದಾಗಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ಹೊಸ ಹೂಡಿಕೆಯ ಪ್ರೊಜೆಕ್ಟ್ ಗಳ ಮೊತ್ತದಲ್ಲಿ 13% ಹೆಚ್ಚಳವಾಗಿತ್ತು, ಆದರೆ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ 80% ಕಡಿಮೆ ಆಗಿದೆ. ಆರ್ಥಿಕ ಹಿಂಜರಿತವನ್ನು ಎದರುರಿಸುವುದರಲ್ಲಿ ಸರಕಾರಿ ವೆಚ್ಚದ ಮಹತ್ವಪೂರ್ಣ ಪಾತ್ರ ಇರುತ್ತದೆ. ಆದರೆ ಅದರಲ್ಲೂ ಕುಸಿತವೇ ಕಂಡುಬಂದಿದೆ. ಕಳೆದ ವರ್ಷದ ಮೊದಲ ತ್ರೈಮಾಸಿಕದಲ್ಲಿ ಸರಕಾರದ ಟ್ಯಾಕ್ಸ್ ಆದಾಯ 22% ಹೆಚ್ಚಾಗಿತ್ತು ಆದರೆ ಈ ವರ್ಷ ಕೇವಲ 1.5% ಹೆಚ್ಚಳ ಕಂಡಿದೆ. ರಫ್ತು ಮತ್ತು ಆಮದಿನ ಅಂತರ ಕಳೆದ ಬಾರಿ 15% ಹೆಚ್ಚಾಗಿತ್ತು ಆದರೆ ಈ ಬಾರಿ 1% ಕಡಿಮೆ ಆಗಿದೆ. ಈ ಎಲ್ಲ ಅಂಕಿಅಂಶಗಳು ಹೇಳುವುದೇನೆಂದರೆ ಆರ್ಥಿಕ ಹಿಂಜರಿತದ ಸತ್ಯವನ್ನು ಅಲ್ಲಗೆಳೆಯಲಾಗುವುದಿಲ್ಲ. ಒಂದು ವೇಳೆ ಇದೇ ಪ್ರವೃತ್ತಿ ಇನ್ನೆರಡು ತ್ರೈಮಾಸಿಕಳವರೆಗೆ ಮುಂದುವರೆದರೆ ಕಳೆದ ಮೂರು ದಶಕಗಳ ಅತ್ಯಂತ ಗಂಭೀರ ಸ್ಥಿತಿ ಎದುರಿಸಬೇಕಾಗುವುದು.

ಆರ್ಥಿಕ ಹಿಂಜರಿತವನ್ನು ನಿಭಾಯಿಸಲು ಸಾಧ್ಯವಿದೆ ಆದರೆ ಹಾಗೆ ಮಾಡಲು ಎಲ್ಲಕ್ಕಿಂತ ಮುಂಚೆ ಈ ವಾಸ್ತವವನ್ನು ಒಪ್ಪಿಕೊಳ್ಳಬೇಕಾಗುತ್ತದೆ. ದುರದೃಷ್ಟವಷಾತ್, ಸರಕಾರವು ಇಲ್ಲಿಯತನಕ ಈ ಸತ್ಯವನ್ನು ನೋಡಲು ನಿರಾಕರಿಸುತ್ತಿದೆ. ಜ್ವರದ ಚಿಕಿತ್ಸೆ ಮಾಡುವ ಬದಲಿಗೆ ಥರ್ಮಾಮೀಟರ್ ಅನ್ನು ಒಡೆದುಹಾಕುವಲ್ಲಿ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಭಾರತದ ಅಂಕಿಅಂಶಗಳ ವಿಭಾಗ ಸಾಧನೆ ಎಷ್ಟಿದೆಯೆಂದರೆ, ವಿಶ್ವಾದ್ಯಂತ ಅದರ ಅಂಕಿಅಂಶಗಳನ್ನು ವಿಶ್ವಾಸಾರ್ಹ ಎಂದು ಪರಿಗಣಿಸಲಾಗುತ್ತದೆ. ಸ್ವತಃ ಮೋದಿ ಸರಕಾರದ ಮುಖ್ಯ ಆರ್ಥಿಕ ಸಲಹಾಕಾರರಾಗಿದ್ದ ಅರವಿಂದ್ ಸುಬ್ರಹ್ಮಣ್ಯಮ್ ಅವರು ಹೇಳುವುದೇನೆಂದರೆ ಭಾರತದ ಜಿಡಿಪಿ ಕನಿಷ್ಠಪಕ್ಷ ಶೇಕಡಾ ಎರಡರಿಂದ ಎರಡೂವರೆವಷ್ಟು ಹೆಚ್ಚಿಸಿ ತೋರಿಸಲಾಗುತ್ತಿದೆ ಎಂದು.

ಇಂತಹದರಲ್ಲಿ ಇನ್ನಷ್ಟು ಚಿಂತೆಯ ವಿಷಯವೇನೆಂದರೆ, ನಿಧಾನವಾಗಿ ಎಲ್ಲಾ ಒಳ್ಳೆಯ ಅರ್ಥಶಾಸ್ತ್ರಜ್ಞರು ಈ ಸರಕಾರವನ್ನು ಬಿಟ್ಟುಹೋಗುತ್ತಿದ್ದಾರೆ. ಕಳೆದ ಕಾರ್ಯಾವಧಿಯಲ್ಲಿ ರಿಸರ್ವ್ ಬ್ಯಾಂಕಿನ ಗವರ್ನರ್ ರಘುರಾಮ್ ರಾಜನ್ ಬಿಟ್ಟುಹೋದರು. ನಂತರ ಉರ್ಜಿತ್ ಪಟೇಲ್ ನಡುರಸ್ತೆಯಲ್ಲೇ ಬಿಟ್ಟುಹೋದರು. ಅರವಿಂದ ಸುಬ್ರಹ್ಮಣ್ಯಮ್ ಅವರೂ ಕೂಡ ತಮ್ಮ ಕಾರ್ಯಾವಧಿ ಪೂರ್ಣಗೊಳಿಸುವ ಮುನ್ನವೇ ಸರಕಾರವನ್ನು ಬಿಟ್ಟುಹೋದರು. ಹಾಗೂ ಈಗ ಆರ್ಥಿಕ ಸಲಹಾಕಾರ ಸಮಿತಿಯ ಅಧ್ಯಕ್ಷ ವಿವೇಕ್ ದೇಬರಾಯ್ ಕೂಡ ದೂರ ಹೋಗುತ್ತಿದ್ದಾರೆ. ನಿಸ್ಸಂಶಯವಾಗಿಯೂ ಪ್ರಧಾನಿ ನರೇಂದ್ರ ಮೋದಿ ರಾಜಕಾರಣದ ನಿಪುಣ ಆಟಗಾರರಾಗಿದ್ದಾರೆ ಹಾಗೂ ತಮಗೆ ಬೇಕಾದ ಫಲಿತಾಂಶಗಳನ್ನು ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಅರ್ಥವ್ಯವಸ್ಥೆ ಒಂದು ಬೇರೆಯದೇ ವಿಷಯವಾಗಿದೆ. ನೋಟುರದ್ದತಿಯ ಪ್ರಕರಣವು ವಿವೇಚನೆಯುಳ್ಳ ಅರ್ಥಶಾಸ್ತ್ರಜ್ಞರ ಅಭಿಪ್ರಾಯವನ್ನು ಪಡೆಯದೇ ಕೆಲಸ ಮಾಡುವುದರಿಂದ ಎಂತಹ ದುಃಸ್ಥಿತಿಯನ್ನು ಎದುರಿಸಬೇಕಾಯಿತು ಎನ್ನುವುದನ್ನು ತೋರಿಸಿಕೊಟ್ಟಿತು. ಒಬ್ಬ ನಾಯಕದ ಅಜ್ಞಾನ ಮತ್ತು ಅಹಂಕಾರದ ಬೆಲೆಯನ್ನು ಸಂಪೂರ್ಣ ದೇಶ ಭರಿಸಬೇಕಾಗುತ್ತದೆ.

ರೋಗಿಯ ದೇಹ ಜ್ವರದಿಂದ ತಪಿಸುತ್ತಿದೆ. ಕೆಲಸ ಮಾಡಬೇಕಿರುವವರು ಬೇರೆಡೆ ಮುಖ ತಿರುಗಿಸಿ ಕುಳಿತಿದ್ದಾರೆ. ಥರ್ಮಾಮೀಟರ್ ಅನ್ನು ಒಡೆದುಹಾಕಲಾಗಿದೆ. ಹಾಗೂ ಈಗ ಡಾಕ್ಟರ್ ಗಳನ್ನೂ ಒದ್ದೋಡಿಸಲಾಗಿದೆ. ಇದರ ಪರಣಾಮ ಏನಾಗುವುದು ಎನ್ನುವುದನ್ನು ನೀವೇ ಯೋಚಿಸಿನೋಡಿ.

ಅನುವಾದ: ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇಂದೆತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...

ನೇತ್ರಾವತಿ ತೀರದಲ್ಲಿ ‘ಅಂತರಗಂಗೆ’ಯಂತೆ ಹರಿಯುತ್ತಿರುವ ಪ್ರತಿರೋಧ: ವೇದವಲ್ಲಿಯಿಂದ ಸೌಜನ್ಯಳವರೆಗೆ ಪ್ರತಿಧ್ವನಿಸುತ್ತಿರುವ ಪ್ರಶ್ನೆ-‘ಕೊಂದವರು ಯಾರು?’

ಪ್ರಪಂಚದಾದ್ಯಂತ ಪಿತೃಪ್ರಧಾನ ವ್ಯವಸ್ಥೆ ಮತ್ತು ಪ್ರಭುತ್ವಗಳು ಹಲವು ರೀತಿಗಳಲ್ಲಿ ಮಹಿಳೆಯರನ್ನು ದಮನಿಸುವ ವಿಧಾನಗಳನ್ನು ಕಂಡುಕೊಂಡು ಕರಗತ ಮಾಡಿಕೊಂಡಿವೆ. ಅದರಲ್ಲಿ ಅತ್ಯಂತ ಪರಿಣಾಮಕಾರಿಯಾದುದು, ದೇವರು, ಭಕ್ತಿ ಮತ್ತು ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ದಮನಕ್ಕೊಳಪಡಿಸುವ ತಂತ್ರ....

ರೂ. 170 ಕೋಟಿ ದಂಡ ಪಾವತಿಸಲು ಮುಂದಾದ ಅದಾನಿ : ಏನಿದು ಪ್ರಕರಣ?

ಅಮೆರಿಕದ ನ್ಯಾಯಾಲಯದಲ್ಲಿ ದಾಖಲಾಗಿದ್ದ ವಂಚನೆ ಮತ್ತು ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಟ್ಟು 18 ಮಿಲಿಯನ್ ಡಾಲರ್ (ಸುಮಾರು 170 ಕೋಟಿ ರೂಪಾಯಿ) ದಂಡ ಪಾವತಿಸಲು ಒಪ್ಪಿಕೊಳ್ಳುವ ಮೂಲಕ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣದಲ್ಲಿ ಹಿಂದೂಗಳ ಪರ ತೀರ್ಪು…ಮಸೀದಿಯಲ್ಲ ದೇವಸ್ಥಾನವೆಂದ ಕೋರ್ಟ್ : ಏನಿದು ವಿವಾದ?

ಸುಮಾರು 100 ವರ್ಷಗಳ ಹಳೆಯ ವಿವಾದವಾದ ಭೋಜಶಾಲಾ-ಕಮಲ್ ಮೌಲಾ ಮಸೀದಿ ಪ್ರಕರಣದಲ್ಲಿ ಶುಕ್ರವಾರ (ಮೇ 15) ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ್ದು, ಭೋಜಶಾಲಾದಲ್ಲಿರುವ ಐತಿಹಾಸಿಕ ಸ್ಥಳವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು...

“ಮಹಿಳಾ ಮೀಸಲಾತಿ ಮುಖವಾಡದಲ್ಲಿ ಡಿಲಿಮಿಟೇಷನ್ ಕುತಂತ್ರ ವಿಫಲ” ಬಿಜೆಪಿಗೆ ದಕ್ಷಿಣ ಭಾರತದ ಎಚ್ಚರಿಕೆ

ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2026ರ ಏಪ್ರಿಲ್ 16ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆದು, ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸುವ ನೆಪವನ್ನು ಮುಂದುಮಾಡಿ ಮೂರು ಮಸೂದೆಗಳನ್ನು ಮಂಡಿಸಿತು. ಇವುಗಳಲ್ಲಿ ಪ್ರಮುಖವಾದ ಸಂವಿಧಾನ (131ನೇ...

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...