ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರ ಬೆಂಗಾವಲು, ಅವರ ಮಗ, ಚಿಕ್ಕಪ್ಪ ಮತ್ತು ಇತರ ಗೂಂಡಾಗಳು ವಾಹನ ಹರಿಸಿದ್ದಾರೆ. ಇದರಿಂದ ಕನಿಷ್ಠ ಮೂವರು ರೈತರು ಸಾವನ್ನಪ್ಪಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಪ್ರಕಟಣೆ ಹೊರಡಿಸಿದೆ.
ದುರಂತಯಲ್ಲಿ ಸುಮಾರು ಹತ್ತು ಮಂದಿ ಗಾಯಗೊಂಡಿದ್ದಾರೆ. ಎಸ್‌ಕೆಎಂ ಮುಖಂಡ ತೇಜಿಂದರ್ ಸಿಂಗ್ ವಿರ್ಕ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದೆ.
ಸರ್ಕಾರದ ಈ ಕೊಲೆಗಡುಕ ದಾಳಿಗಳನ್ನು ಸಂಯುಕ್ತ ಕಿಸಾನ್ ಮೋರ್ಚಾ ತೀವ್ರವಾಗಿ ಖಂಡಿಸುತ್ತದೆ ಎಂದಿರುವ ರೈತ ಸಂಘಟನೆ, ಘಟನೆಗೆ ಕಾರಣರಾದ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವರ ಮೇಲೆ ಪ್ರಕರಣ ದಾಖಲಿಸಬೇಕು ಮತ್ತು ಅವರನ್ನು ಪದವಿಯಿಂದ ತಕ್ಷಣವೇ ವಜಾಗೊಳಿಸಬೇಕು ಎಂದು ಆಗ್ರಹಿಸಿದೆ.
ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕ್ರೂರ ಮತ್ತು ಅಮಾನವೀಯ ದಾಳಿ ನಡೆಸಿರುವ ಬಿಜೆಪಿಯ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ತೆನಿ, ಅವರ ಮಗ ಆಶಿಶ್ ಮಿಶ್ರಾ, ಅವರ ಚಿಕ್ಕಪ್ಪ ಮತ್ತು ಇತರ ಗೂಂಡಾಗಳ ವಿರುದ್ಧ ಎಸ್‌ಕೆಎಂ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ: ರೈತ ನಾಯಕರಿಗೆ ಬಹಿರಂಗ ಬೆದರಿಕೆ: ಹೆಲಿಪ್ಯಾಡ್ ಆಕ್ರಮಿಸಿಕೊಂಡ ರೈತರಿಂದ ಸರ್ಕಾರಕ್ಕೆ ಸವಾಲ್
Warning – Viewers would find the visuals being shared distressing.
Video related to the incident. https://t.co/nI3anpqPY9 pic.twitter.com/69dy3PBr1s
— Kisan Ekta Morcha (@Kisanektamorcha) October 3, 2021
ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ತೆನಿ ಅವರ ಪುತ್ರ ಆಶಿಶ್ ಮಿಶ್ರಾ, ಒಬ್ಬ ರೈತರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
SKM leader Dr Darshan Pal's statement on Lakhimpur Khiri incident. https://t.co/nI3anpqPY9 pic.twitter.com/yeoUK5xsm3
— Kisan Ekta Morcha (@Kisanektamorcha) October 3, 2021
ಲಖಿಂಪುರ್ ಖೇರಿ ಘಟನೆ ಬಳಿಕ ಆಕ್ರೋಶಗೊಂಡ ರೈತರು ಬಿಜೆಪಿ ನಾಯಕರ ವಾಹನಗಳನ್ನು ಜಖಂಗೊಳಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರವು ತಕ್ಷಣವೇ ಅಜಯ್ ಮಿಶ್ರಾ ತೇನಿಯ ಕಡೆಯಿಂದ ಭಾಗಿಯಾಗಿರುವ ಎಲ್ಲರ ವಿರುದ್ಧ ಕೊಲೆ ಆರೋಪದ ಪ್ರಕರಣಗಳನ್ನು ದಾಖಲಿಸಬೇಕು ಎಂದು ಒತ್ತಾಯಿಸಿದೆ.
ರೈತರನ್ನು ಗಲಭೆಗೆ ಪ್ರಚೋದಿಸದಂತೆ ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿರುವ ರೈತ ಮುಖಂಡರು, ತುರ್ತು ಸಭೆ ನಡೆಸಿ, ಹಲವಾರು SKM ನಾಯಕರು ವಿವಿಧ ಸ್ಥಳಗಳಿಂದ ಘಟನಾ ಸ್ಥಳ ಲಖಿಂಪುರ್ ಖೇರಿಗೆ ತೆರಳಿದ್ದಾರೆ.
ಇತ್ತ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸ್ವಯಂಸೇವಕರನ್ನು ಲಾಠಿ ಎತ್ತಲು ಮತ್ತು ರೈತರ ಮೇಲೆ ಹಲ್ಲೆ ಮಾಡಲು ಧೈರ್ಯದಿಂದ ಪ್ರೋತ್ಸಾಹಿಸಿರುವ ಹಿಂಸಾತ್ಮಕ ಉದ್ದೇಶಕ್ಕೆ ಎಸ್‌ಕೆಎಂ ಖಂಡನೆ ವ್ಯಕ್ತಪಡಿಸಿದೆ. ಸಿಎಂ ಮನೋಹರ್ ಲಾಲ್ ಖಟ್ಟರ್ ತಕ್ಷಣ ಕ್ಷಮೆ ಕೇಳಬೇಕು ಮತ್ತು ಅವರ ಸಾಂವಿಧಾನಿಕ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ.
ये हैं हमारे नेता @mlkhattar
अपने गुंडों को क्लास दे रहे हैं "उठा लो डंडे। ज़मानत की परवाह मत करो। वो देख लेंगे। 46 महीने जेल में रह के जो सीखोगे अपने आप बड़े नेता बनोगे। इतिहास में नाम होगा।"ऐसे होती है @BJP4India में #Lakhimpur जैसे हत्याकांड की ट्रेनिंग। #FarmersProtest pic.twitter.com/z46YmYteKs
— Tractor2ਟਵਿੱਟਰ (@Tractor2twitr) October 3, 2021
ಸಂಯುಕ್ತ ಕಿಸಾನ್ ಮೋರ್ಚಾದ ನಾಯಕರಿಗೆ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಅಜಯ್ ಮಿಶ್ರಾ ತೆನಿ ಬಹಿರಂಗ ಬೆದರಿಕೆ ಹಾಕಿದ್ದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರು, ಉತ್ತರ ಪ್ರದೇಶದ ಲಖಿಂಪುರ್ ಖೇರಿಯ ಹೆಲಿಪ್ಯಾಡ್ ಅನ್ನು ಆಕ್ರಮಿಸಿಕೊಂಡಿದ್ದರು.
ಇದನ್ನೂ ಓದಿ: ಲಖಿಂಪುರ್ ಖೇರಿಯಲ್ಲಿ ಬೆಂಗಾವಲು ವಾಹನ ಹರಿಸಿ ರೈತರ ಹತ್ಯೆ- ಭುಗಿಲೆದ್ದ ಹಿಂಸಾಚಾರ


