ಲಡಾಖ್‌ ಬಿಕ್ಕಟ್ಟಿನ ಸಂಬಂಧ ಮುಂದಿನ ವಾರ 13ನೇ ಸುತ್ತಿನ ಮಾತುಕತೆಯನ್ನು ಭಾರತ ನಿರೀಕ್ಷಿಸಿದ್ದು, ಈ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥರು ಹೇಳಿಕೆ ನೀಡಿದ್ದರು. “ಕಳೆದ ಆರು ತಿಂಗಳಿಂದಲೂ ಪರಿಸ್ಥಿತಿ ಯಥಾಸ್ಥಿತಿಯಲ್ಲಿದೆ” ಎಂದು ಅವರು ಕಳವಳ ವ್ಯಕ್ತಪಡಿಸಿದ್ದರು.

ಗಣನೀಯ ಸಂಖ್ಯೆಯಲ್ಲಿ ಚೀನಾ ಸೈನ್ಯವು ಪೂರ್ವ ಲಡಾಖ್‌ ಮತ್ತು ಉತ್ತರದ  ಫ್ರಂಟ್‌ನಾದ್ಯಂತ ಹಬ್ಬಿದೆ. ಖಂಡಿತವಾಗಿಯೂ ಮುಂದಿನ ಪ್ರದೇಶಗಳಲ್ಲಿ ಅವರ ನಿಯೋಜನೆಯಲ್ಲಿ ಹೆಚ್ಚಳ ಕಂಡುಬಂದಿದೆ. ಇದು ನಮಗೆ ಕಾಳಜಿಯ ವಿಷಯವಾಗಿದೆ ಎಂದು ಅವರು ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದ್ದರು.

“ನಾವು ಅವರ ಎಲ್ಲ ಬೆಳವಣಿಗೆಗಳನ್ನು ನಿಯಂತ್ರಿಸುತ್ತಿದ್ದೇವೆ. ಈ ಸಮಯದಲ್ಲಿ ನಾವು ಯಾವುದೇ ಘಟನೆಯನ್ನು ಎದುರಿಸಲು ಸಜ್ಜಾಗಿದ್ದೇವೆ” ಎಂದು ಅವರು ತಿಳಿಸಿದ್ದಾರೆ. ಯಾವುದೇ ಪ್ರದೇಶದಲ್ಲಿ ಆಕ್ರಮಣಶೀಲತೆಯನ್ನು ತೋರಿಸಬಹುದು ಎಂದಿದ್ದರು.

“ಎಲ್ಲಾ ಘರ್ಷಣೆಯ ಅಂಶಗಳು ಪರಿಹರಿಸಲ್ಪಡುತ್ತವೆ. ನಮ್ಮ ಭಿನ್ನಾಭಿಪ್ರಾಯಗಳನ್ನು ನಾವು ಸಂವಾದದ ಮೂಲಕ ಪರಿಹರಿಸಿಕೊಳ್ಳಬಹುದು ಎಂದು ನಂಬಿದ್ದೇನೆ. ನಮ್ಮ ಉದ್ದೇಶಿತ ಗುರಿಯನ್ನು ಮುಟ್ಟುತ್ತೇವೆಂದು ಭಾವಿಸುತ್ತೇನೆ. ಅಕ್ಟೋಬರ್ ಎರಡನೇ ವಾರದಲ್ಲಿ 13ನೇ ಸುತ್ತಿನ ಮಾತುಕತೆ ನಡೆಯಲಿದೆ” ಎಂದು ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಸಂಸದ ರಾಹುಲ್‌ ಗಾಂಧಿಯವರು ನರೇಂದ್ರ ಮೋದಿ ನೇತೃತ್ವದ ಮೋದಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿರಿ: ರಾಹುಲ್‌ ಗಾಂಧಿ ವಿರುದ್ದ ಅವಹೇಳನಕಾರಿ ಪದ ಬಳಕೆ: ಆಕ್ರೋಶಕ್ಕೆ ಮಣಿದು ಕ್ಷಮೆ ಕೇಳಿದ ‘ಟೈಮ್ಸ್‌ ನೌ’ ಪತ್ರಕರ್ತೆ