Homeಕರ್ನಾಟಕವಿಧಾನ ಪರಿಷತ್ ಖಂಡಿತಾ ಉಳಿಸಿಕೊಳ್ಳಬೇಕಿದೆ; ಉತ್ತಮ ಪ್ರತಿನಿಧಿತ್ವಕ್ಕಾಗಿ ಸುಧಾರಣೆಗಳ ಜೊತೆಗೆ..

ವಿಧಾನ ಪರಿಷತ್ ಖಂಡಿತಾ ಉಳಿಸಿಕೊಳ್ಳಬೇಕಿದೆ; ಉತ್ತಮ ಪ್ರತಿನಿಧಿತ್ವಕ್ಕಾಗಿ ಸುಧಾರಣೆಗಳ ಜೊತೆಗೆ..

- Advertisement -
- Advertisement -

ವಿಧಾನ ಪರಿಷತ್ ಚುನಾವಣೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ಅದರ ಭಾನಗಡಿಗಳ ಬಗ್ಗೆ ಆಕ್ರೋಶ, ಅದರ ಪ್ರಸ್ತುತ್ತೆಯ ಬಗ್ಗೆ ಚರ್ಚೆ ನಡೆಯುವುದು ಸಹಜವೇ. ಕಳೆದ ವಾರದ ಪತ್ರಿಕೆಯಲ್ಲಿ ಹೃಷಿಕೇಶ ಬಹದ್ದೂರ ದೇಸಾಯಿಯವರು “ಮೇಲ್ಮನೆ ಯಾರಿಗೆ ಬೇಕಾಗಿದೆ?” ಎಂದು ಕೇಳಿದ್ದರು. ಅದರಲ್ಲಿ ಪರಿಷತ್ತು ಹೇಗೆ ತನ್ನ ಉದ್ದೇಶ, ಮೌಲ್ಯಗಳಿಂದ ದೂರ ಸರಿಯುತ್ತಾ ಅಪ್ರಸ್ತುತವಾಗುತ್ತಿದೆ, ಕುಟುಂಬ ರಾಜಕಾರಣ, ಸೋತವರ ರೀಹ್ಯಾಬಿಲಿಟೇಷನ್ ಸೆಂಟರ್ ಮತ್ತು ಮುಖ್ಯವಾಗಿ ಮೇಲ್ಮನೆಯಲ್ಲಿ ಮೀಸಲಾತಿ ಇಲ್ಲದಿರುವುದರಿಂದ ಹೇಗೆ ಪ್ರಬಲ ಜಾತಿಗಳ ಅಡುಂಬೋಲವಾಗಿದೆ ಎಂದು ಸೋದಾಹರಣವಾಗಿ ವಿವರಿಸಿದ್ದರು. ಆದರೆ ನನಗೆ ಆ ಲೇಖನದ ಬಗ್ಗೆ ಎರಡು ಆಕ್ಷೇಪಗಳಿವೆ, ಹಾಗಾಗಿ ಇಲ್ಲಿ ಪತ್ರಿಕೆಯಲ್ಲೇ ಪ್ರತಿಕ್ರಿಯುಸುತ್ತಿದ್ದೇನೆ.

“ಮೇಲ್ಮನೆ ಯಾರಿಗೆ ಬೇಕಾಗಿದೆ?” ಎಂಬ ಪ್ರಶ್ನೆಯಲ್ಲಿ ಸದ್ಯದ ಪರಿಸ್ಥಿತಿಯ, ಅದು ತಲುಪಿರುವ ಅಧೋಗತಿಯ ಬಗ್ಗೆ ವಿಷಾದ ಇದೆ. ಇದು ನಮ್ಮ ನ್ಯಾಯಾಲಯಗಳು ಆಗಾಗ ’ಇಷ್ಟನ್ನೂ ಮಾಡಲಾಗದಿದ್ದರೆ ಏಕಿರಬೇಕು, ನಗರಪಾಲಿಕೆಯನ್ನು ಮುಚ್ಚಿಹಾಕಿಬಿಡೋಣವೆ’ ಎಂದು ರೆಟರಿಕ್ ಆಗಿ ಕೇಳುತ್ತಲ್ಲವೆ, ಹಾಗೆ ಎಂದು ನಾನು ಭಾವಿಸುತ್ತೇನೆ. ಆದರೆ ನ್ಯಾಯಾಲಯವಾದರೂ ಸರಿ, ನಾವಾದರೂ ಸರಿ, ಹೀಗೆ ಸಂಸ್ಥೆಗಳಲ್ಲಿನ ಸಮಸ್ಯೆಗಳಿಗೆ ಯಾವ ಮಟ್ಟದಲ್ಲಾದರೂ ಅದನ್ನು ಮುಚ್ಚುವ, ಬಹಿಷ್ಕರಿಸುವ ಮಾತಾಡುವುದು ಸಮಂಜಸವಲ್ಲವೆಂಬುದು ನನ್ನ ಭಾವನೆ. ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ, ಅಧ್ಯಕ್ಷ ಸ್ಥಾನಕ್ಕೆ ಸಂಘ ಪರಿವಾರ ಮತ್ತು ಬಿಜೆಪಿ ಬೆಂಬಲಿತ ಮಹೇಶ ಜೋಷಿ ಗೆದ್ದಾಗಲೂ ಇಂಥದ್ದೇ ಮಾತುಗಳು ಕೇಳಿಬಂದಿದ್ದವು. ಅದೂ ಯುಕ್ತವಲ್ಲ ಎಂದೇ ನನ್ನ ವಾದ. ರದ್ದು ಮಾಡುವುದೇ ಉತ್ತರವಾದರೆ ವಿಧಾನಸಭೆ, ಲೋಕಸಭೆಗಳೇನು ಕಮ್ಮಿ ಕೆಟ್ಟಿವೆಯೇ?

ಹೃಷಿಕೇಶರು ನೆರೆಯ ಆಂಧ್ರಪ್ರದೇಶದ ಉದಾಹರಣೆ ಕೊಟ್ಟಿದ್ದಾರೆ. ರಾಜ್ಯಕ್ಕೆ ಮೂರು ರಾಜಧಾನಿಗಳನ್ನು ಮಾಡುವ ಯುವ ಮುಖ್ಯಮಂತ್ರಿಯ ಹೊಸ ವಿಚಾರಕ್ಕೆ ವಿರೋಧಪಕ್ಷಗಳ ಬಾಹುಳ್ಯ ಇರುವ ಪರಿಷತ್ತು ಅಡ್ಡಿ ಆಗಿದೆ, ಹಾಗಾಗಿ ಪರಿಷತ್ತನ್ನು ಬರಖಾಸ್ತು ಮಾಡುವ ಕೂಗೆದ್ದಿದೆ ಎಂದು ಹೇಳಿದ್ದಾರೆ. 175ರಲ್ಲಿ 150 ಸ್ಥಾನಗಳನ್ನು ಗೆದ್ದು ಪ್ರಚಂಡ ಬಹುಮತದೊಂದಿಗೆ ಆಡಳಿತ ನಡೆಸುತ್ತಿರುವ ಜಗನ್‌ಮೋಹನ ರೆಡ್ಡಿಯದು, ಮೋದಿಯನ್ನೂ ಮೀರಿದ ದುರಾಡಳಿತ, ಆರ್ಥಿಕ ಅಶಿಸ್ತು, ತುಘಲಕ್ ದರ್ಬಾರ್ ಮತ್ತು ದರ್ಪದ ಸರ್ವಾಧಿಕಾರ ಎಂಬುದು ನನ್ನ ಅಭಿಪ್ರಾಯ, ಇರಲಿ. ಮೂರು ರಾಜಧಾನಿಯದು ಕಾನೂನಾತ್ಮಕವಾಗಿಯೂ ಸಮಂಜಸವಾಗಿಲ್ಲ ಅಷ್ಟೇ ಅಲ್ಲ, ಅಲ್ಲಿ ಅಮರಾವತಿಯೇ ರಾಜಧಾನಿ ಆಗಿರಬೇಕೆಂದು ನಡೆಯುತ್ತಿರುವ “ನ್ಯಾಯಾಲಯಂ ನುಂಚಿ ದೇವಾಲಯಂ” ಪಾದಯಾತ್ರೆಗೆ ಲಭಿಸಿರುವ ಅಪಾರ ಜನಾದರಣೆಯನ್ನು, ಬೆಂಬಲವನ್ನೂ ನೋಡಿದರೆ ಜನಕ್ಕೂ ಮೂರು ರಾಜಧಾನಿಗಳು ಬೇಕಿಲ್ಲ ಎಂಬುದು ವಿದಿತ. ಇವತ್ತು ಇಷ್ಟು ದೊಡ್ಡ ಬಹುಮತ ಪಡೆದಿರುವ ಸರ್ಕಾರವೊಂದು ’ಗೂಳಿ’ಯಂತೆ ಮುನ್ನುಗ್ಗುವುದರಿಂದ, ಅದರ ಸರ್ವಾಧಿಕಾರಿ ಧೋರಣೆಗೆ ಇರುವ ಒಂದೇ ಅಂಕುಶ ಅಲ್ಲಿನ ಪರಿಷತ್ತು. ಇದುವರೆಗೂ ಹಲವು ರಾಜ್ಯಗಳಲ್ಲಿ ಪರಿಷತ್ತನ್ನು ರದ್ದು ಮಾಡಲಾಗಿದೆ. ಬಹುತೇಕ ಇದು ಆಳುವ ಪಕ್ಷಕ್ಕೆ ಪರಿಷತ್ತಿನಲ್ಲಿ ಬಹುಮತ ಇಲ್ಲದೇ ಇದ್ದಾಗಲೇ ಆಗಿದೆ. ಅದೇ ಅದರ ಪ್ರಸ್ತುತತೆ.

ಇನ್ನು ಸದ್ಯ ಇರುವಂತೆ ಪರಿಷತ್ತು ದಿನೇದಿನೇ ಅಪ್ರಸ್ತುತವಾಗುತ್ತಾ ಹೋಗುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ ಇದಕ್ಕೆ ಹೃಷಿಕೇಶರ ಮಾತಿಗೆ ನನ್ನ ಸಂಪೂರ್ಣ ಸಹಮತವಿದೆ. ಆದರೆ ನಾವು ಇವತ್ತು ಅದರ ಸಂರಚನೆಯನ್ನು ಪ್ರಸ್ತುತಗೊಳಿಸಬೇಕಿದೆ. ಇವತ್ತು ಶಿಕ್ಷಕರ ಮತ್ತು ಪದವೀಧರರ ಕ್ಷೇತ್ರಕ್ಕೆ ಅರ್ಥವೇ ಉಳಿದಿಲ್ಲ. ಪದವೀಧರರು ವಿರಳವಾಗಿದ್ದ ಕಾಲಕ್ಕೆ ಅದು ಬೇಕಾಗಿತ್ತು, ಇವತ್ತಿಗಲ್ಲ. ಪದವೀಧರರೆಲ್ಲರೂ ಮೇಧಾವಿಗಳು, ವಿವೇಕಯುಕ್ತರು ಎಂಬಂತಿದೆ. ಇನ್ನು ಶಿಕ್ಷಕರಿಗೆ ಮಾತ್ರ ಏಕೆ ನಾಲ್ಕು ಸ್ಥಾನಗಳು? ಅವರು ಮಾತ್ರವೇ ಪ್ರಜ್ಞಾವಂತರೆಂದೋ? ಇವತ್ತು ಅನೇಕ ಇತರೆ ದನಿ ಇಲ್ಲದ, ಪ್ರಾತಿನಿಧ್ಯ ಇಲ್ಲದ ಗುಂಪುಗಳಿಗೆ ಪರಿಷತ್ತಿನಲ್ಲಿ ತಾವು ಮಾಡಿಕೊಡಬೇಕಿದೆ.

ಅಂತಹ ಗುಂಪುಗಳ ಪ್ರಾತಿನಿಧ್ಯಕ್ಕೆ ಕೆಲವು ಸಲಹೆಗಳು: ಈ ವಲಯಗಳಿಂದ ಆಯ್ಕೆ ಆಗುವ ಸದಸ್ಯರು ಕಡ್ಡಾಯವಾಗಿ ಅದೇ ವಲಯದಲ್ಲಿ ತೊಡಗಿಸಿಕೊಂಡಿರುವವರಾಗಿರಬೇಕು. ಆ ರೀತಿಯ ನಿಯಮಗಳನ್ನು ಪ್ರತಿ ವಲಯಕ್ಕೂ ತರಬೇಕು.

1. ರಾಜ್ಯದ ಮಹಿಳೆಯರು: ಅವರ 5-6 ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು, ಲೈಂಗಿಕ ಅಲ್ಪಸಂಖ್ಯಾತರಿಗೆ ಒಂದು ಸ್ಥಾನ.
2. ರಾಜ್ಯದ ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತರಿಗೆ ಒಂದು ಸ್ಥಾನ, ಪೌರಕಾರ್ಮಿಕರಿಗೆ ಒಂದು ಸ್ಥಾನ.
3. ರಾಜ್ಯದ ರೈತರು ಅವರ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು.
4. ರಾಜ್ಯದ ಕಾರ್ಮಿಕರಿಗೆ ಕನಿಷ್ಠ ಎರಡು ಸ್ಥಾನ
5. ಶಿಕ್ಷಕರ ಪ್ರಾತಿನಿಧ್ಯವನ್ನು ಗರಿಷ್ಠ ಎರಡಕ್ಕೆ ಮಿತಿಗೊಳಿಸುವುದು. ಇನ್ನುಳಿದ ಎರಡು ಪ್ರತಿನಿಧಿಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು.
6. ರಾಜ್ಯದ ವೈದ್ಯರು ಒಂದು ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ.
7. ರಾಜ್ಯದ ಸಹಕಾರಿ ವಲಯದಿಂದ ಕೆಲವು ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕಿದೆ.

ಇನ್ನು ಪರಿಷತ್ತಿನಲ್ಲಿ ರಾಜ್ಯದ ಸ್ವಾಯತ್ತ ಸಂಸ್ಥೆಗಳ ನೇತೃತ್ವ ವಹಿಸಿದವರೆಲ್ಲರನ್ನೂ ex-officio ಸದಸ್ಯರನ್ನಾಗಿ ಮಾಡಬೇಕು. ಈ ಹುದ್ದೆಗಳ politicisation ತಡೆಯಲು ಅಗತ್ಯವಿದ್ದರೆ ಇವರಿಗೆ ಮತದಾನದ ಹಕ್ಕು ನೀಡದಿರುವುದು ಅಗತ್ಯವಾಗಬಹುದು. ಆದರೆ ಇವರೆಲ್ಲರೂ ಪರಿಷತ್ತಿನಲ್ಲಿ ಇದ್ದರೆ, ಈ ಸಂಸ್ಥೆಗಳ ವರದಿಗಳನ್ನು ಕಡ್ಡಾಯವಾಗಿ ಮಂಡಿಸುವಂತಾದರೆ, ಅಲ್ಲಿನ ಚರ್ಚೆಗೊಂದು ವಿಸ್ತಾರವೂ, ಸರ್ಕಾರಕ್ಕೊಂದು ಅಂಕುಶವೂ ಇರುತ್ತದೆ.

ಇವರೆಲ್ಲರೂ ex-officio ಸದಸ್ಯರಾಗಬೇಕು:

1. ಕರ್ನಾಟಕ ಯೋಜನಾ ಆಯೋಗದ ಉಪಾಧ್ಯಕ್ಷರು
2. ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು
3. ಕರ್ನಾಟಕದ ಆಡಿಟರ್ ಜನರಲ್
4. ಕರ್ನಾಟಕ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು
5. ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರು
6. ಕರ್ನಾಟಕ ಲೋಕಾಯುಕ್ತರು
7. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು
8. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು
9. ಈ ನಾಡಿನ ಎಲ್ಲ ಸರ್ಕಾರೀ ವಿಶ್ವವಿದ್ಯಾಲಯಗಳ ಉಪಕುಲಪತಿಗಳು.
10. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು
11. ಕರ್ನಾಟಕ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು
12. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು

ಇನ್ನು ಪರಿಷತ್ತಿನಲ್ಲಿ ಈ ಕೂಡಲೇ ಮೀಸಲಾತಿ ತರಬೇಕಿದೆ. ದಿ ಹಿಂದೂ ಪತ್ರಿಕೆಯು ಈಗ 25 ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನಿಲ್ಲಿಸಿರುವ ಉಮೇದುವಾರರ ಜಾತಿಗಣತಿ ನಡೆಸಿ ಎಲ್ಲ ಉಮೇದುವಾರರ ಪೈಕಿ ಶೇ.60ಕ್ಕಿಂತಲೂ ಹೆಚ್ಚು ಜನ ಒಕ್ಕಲಿಗ, ಲಿಂಗಾಯತ ಜಾತಿಗಳಿಗೆ ಸೇರಿದವರು ಎಂದು ತೋರಿಸಿದ್ದಾರೆ. ಮೀಸಲಾತಿ ಇಲ್ಲದಿದ್ದರೆ ಎಲ್ಲೆಡೆಯೂ ಇದೇ ವಾಸ್ತವ. ಇನ್ನು ಹಿರಿಯರ, ಪ್ರಾಜ್ಞರ ಮನೆಗೆ ಮೀಸಲಾತಿ ಇಲ್ಲದಿರುವುದು ಕೆಟ್ಟ ಮೆರಿಟ್ ವಾದವನ್ನು ಸರ್ಕಾರವೇ ಮಾಡಿದಂತೆ. ಈ ಕೂಡಲೇ ಪರಿಶಿಷ್ಟ ಜಾತಿ, ವರ್ಗಗಳಿಗೆ ಸಾಂವಿಧಾನಿಕ ಹಕ್ಕಾದ ಮೀಸಲಾತಿಯನ್ನು ನೀಡಬೇಕು.

ಹೀಗೆ ಇನ್ನೂ ಬೆಳೆಸಿ ಪರಿಷತ್ತನ್ನು ನಿಜಕ್ಕೂ ಮತ್ತೆ ಪ್ರಜಾಪ್ರತಿನಿಧಿ ಸಭೆ ಮಾಡಬೇಕಿದೆ. ಈ ರೀತಿಯಾಗಿ ಪ್ರತಿನಿಧಿತ್ವವನ್ನು ಸರಿಪಡಿಸಿ ವಿಧಾನ ಪರಿಷತ್ತನ್ನು ಉಳಿಸಿಕೊಳ್ಳುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ.


ಇದನ್ನೂ ಓದಿ: ಮೇಲ್ಮನೆ ವಿಧಾನ ಪರಿಷತ್ ಯಾರಿಗೆ ಬೇಕಾಗಿದೆ?

ಇದನ್ನೂ ಓದಿ: ನಾಯಕತ್ವ ವ್ಯಕ್ತಿಯೊಬ್ಬರ ‘ದೈವಿಕ ಹಕ್ಕಲ್ಲ’: ರಾಹುಲ್ ಗಾಂಧಿ ವಿರುದ್ದ ಪ್ರಶಾಂತ್‌ ಕಿಶೋರ್‌ ವಾಗ್ದಾಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಂಗ್ಲಾದಲ್ಲಿ ಹಿಂದೂ ಯುವಕನ ಗುಂಪುಹತ್ಯೆ ನಾಚಿಕೆಗೇಡು ಕೃತ್ಯ; ಇಸ್ಲಾಂ ವಿರುದ್ಧ: ಜಮಿಯತ್ ಮುಖ್ಯಸ್ಥ ಮಹಮೂದ್ ಮದನಿ

ಬಾಂಗ್ಲಾದೇಶದ ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಹಿಂದೂ ಯುವಕ ದೀಪು ಚಂದ್ರ ದಾಸ್ ಅವರ ಮೇಲೆ ನಡೆದ ಗುಂಪು ಹಲ್ಲೆಯನ್ನು ಜಮಿಯತ್ ಉಲಮಾ-ಇ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ ಭಾನುವಾರ ತೀವ್ರವಾಗಿ ಖಂಡಿಸಿದ್ದಾರೆ. ಇಂತಹ ಕೃತ್ಯಗಳು...

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ-ರಾಹುಲ್‌ಗೆ ದೆಹಲಿ ಹೈಕೋರ್ಟಿನಿಂದ ನೋಟಿಸ್

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿನ ನಡೆದಿದೆ ಎನ್ನಲಾದ ಹಣ ವರ್ಗಾವಣೆ ದೂರನ್ನು ಪರಿಗಣಿಸಲು ನಿರಾಕರಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ ಕ್ರಿಮಿನಲ್ ಪರಿಷ್ಕರಣಾ ಅರ್ಜಿಯ ಕುರಿತು, ಕಾಂಗ್ರೆಸ್ ಸಂಸದೀಯ...

ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲ್ ಆಕ್ರಮಣ : ಪ್ಯಾಲೆಸ್ತೀನಿಯರ ವಸತಿ ಕಟ್ಟಡಗಳು ಧ್ವಂಸ

ಇಸ್ರೇಲಿ ಪಡೆಗಳು ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಪಟ್ಟಣಗಳಿಗೆ ನುಗ್ಗಿ ಪ್ಯಾಲೆಸ್ತೀನಿಯರ ವಸತಿ ಕಟ್ಟಡಗಳನ್ನು ಕೆಡವಿ ಹಾಕಿದೆ ಎಂದು ಸುದ್ದಿ ಸಂಸ್ಥೆ ಅಲ್‌-ಜಝೀರಾ ವರದಿ ಮಾಡಿದೆ. ಇದು ಗಾಝಾ ಕದನ ವಿರಾಮದ ಮೂಲಕ ಇಸ್ರೇಲ್ ಪ್ಯಾಲೆಸ್ತೀನಿಯರ...

ಶಿಕ್ಷಣ ಸಂಸ್ಥೆಗಳು ‘ಕೋಮುವಾದದ ಪ್ರಯೋಗಶಾಲೆʼಗಳಾಗಲು ಅವಕಾಶ ನೀಡುವುದಿಲ್ಲ: ಕೇರಳ ಸರ್ಕಾರ

ಶಾಲೆಗಳಲ್ಲಿ ಕ್ರಿಸ್‌ಮಸ್‌ ಆಚರಣೆಗೆ ಹಿಂದುತ್ವ ಗುಂಪುಗಳು ಅಡ್ಡಿಪಡಿಸುತ್ತಿವೆ ಎಂಬ ಆರೋಪದ ಕುರಿತು ಕೇರಳದ ಶಿಕ್ಷಣ ಸಚಿವ ಶಿವನ್ ಕುಟ್ಟಿ ಭಾನುವಾರ (ಡಿ.22) ಪ್ರತಿಕ್ರಿಯಿಸಿದ್ದು, ಶಿಕ್ಷಣ ಸಂಸ್ಥೆಗಳು ಕೋಮುವಾದದ ಪ್ರಯೋಗ ಶಾಲೆಗಳಾಗಲು ಅವಕಾಶ ನೀಡುವುದಿಲ್ಲ...

ರಷ್ಯಾ ಪರವಾಗಿ ಹೋರಾಡಿದ ಆರೋಪ; ಉಕ್ರೇನ್‌ನಲ್ಲಿ ಗುಜರಾತ್ ವಿದ್ಯಾರ್ಥಿ ಬಂಧನ

ರಷ್ಯಾ ಪರವಾಗಿ ಹೋರಾಡಿದ ಆರೋಪದ ಮೇಲೆ ಪ್ರಸ್ತುತ ಉಕ್ರೇನಿಯನ್ ಬಂಧನದಲ್ಲಿರುವ ಗುಜರಾತ್‌ನ ಮೊರ್ಬಿ ಜಿಲ್ಲೆಯ 23 ವರ್ಷದ ವ್ಯಕ್ತಿಯೊಬ್ಬರು ತಮ್ಮ ಬಿಡುಗಡೆ ಮಾಡಿ, ಸಹಾಯ ಮಾಡುವಂತೆ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ...

ತಮಿಳುನಾಡು| ದಲಿತ ಮಹಿಳೆ ಅಡುಗೆ ಮಾಡುವುದಕ್ಕೆ ಪೋಷಕರ ವಿರೋಧ; ಕೆಲಸದಿಂದ ತೆಗೆದ ಶಾಲೆ

ತಮಿಳುನಾಡಿನ ಕರೂರ್ ಜಿಲ್ಲೆಯ ತೋಗಮಲೈ ಬಳಿಯ ಪಂಚಾಯತ್ ಯೂನಿಯನ್ ಮಧ್ಯಮ ಶಾಲೆಯಲ್ಲಿ, ಮುಖ್ಯಮಂತ್ರಿಗಳ ಉಪಾಹಾರ ಯೋಜನೆ (ಸಿಎಮ್‌ಬಿಎಸ್) ಅಡಿಯಲ್ಲಿ ಕೆಲಸ ಮಾಡುತ್ತಿದ್ದ ದಲಿತ ಸಮುದಾಯದ ಮಹಿಳೆಯನ್ನು ಕೆಲಸದಿಂದ ತೆಗೆದುಹಾಕಲಾಗಿದ ಎಂದು 'ನ್ಯೂ ಇಂಡಿಯನ್...

ಬಾಂಗ್ಲಾ ಉದ್ವಿಗ್ನತೆ: ಮತ್ತೊಬ್ಬ ಯುವ ನಾಯಕ ಮುಹಮ್ಮದ್ ಮೊತಾಲೆಬ್ ಸಿಕ್ದಾರ್ ಮೇಲೆ ಗುಂಡಿನ ದಾಳಿ 

ದೇಶದಲ್ಲಿ ವ್ಯಾಪಕ ಅಶಾಂತಿಗೆ ಕಾರಣವಾದ ಬಾಂಗ್ಲಾದೇಶದ ಪ್ರಮುಖ ಯುವ ನಾಯಕ ಷರೀಫ್ ಉಸ್ಮಾನ್ ಬಿನ್ ಹಾದಿ ಅವರ ಮರಣದ ಕೆಲವು ದಿನಗಳ ನಂತರ, ಸೋಮವಾರ ಮತ್ತೊಬ್ಬ ನಾಯಕನ ಮೇಲೆ ಗುಂಡು ಹಾರಿಸಲಾಯಿತು. ಗಾಯಗೊಂಡ...

ಕೇರಳ |ವಲಸೆ ಕಾರ್ಮಿಕನ ಗುಂಪು ಹತ್ಯೆಯಲ್ಲಿ ಆರ್‌ಎಸ್‌ಎಸ್‌ ಕಾರ್ಯಕರ್ತರು ಭಾಗಿ : ಸಿಪಿಐ(ಎಂ) ನಾಯಕರಿಂದ ಆರೋಪ

ಕೇರಳದಲ್ಲಿ ಪಾಲಕ್ಕಾಡ್‌ನಲ್ಲಿ ನಡೆದ ಛತ್ತೀಸ್‌ಗಢದ ವಲಸೆ ಕಾರ್ಮಿಕನ ಗುಂಪು ಹತ್ಯೆಯಲ್ಲಿ ಆರ್‌ಎಸ್‌ಎಸ್‌ ಕಾರ್ಯರ್ತರು ಭಾಗಿಯಾಗಿದ್ದಾರೆ ಎಂದು ಆಡಳಿತರೂಢ ಸಿಪಿಐ(ಎಂ) ನಾಯಕರು ಆರೋಪಿಸಿದ್ದಾರೆ. ಸ್ಥಳೀಯ ಸ್ವ-ಆಡಳಿತ ಸಚಿವ ಎಂ.ಬಿ ರಾಜೇಶ್ ಆರಂಭದಲ್ಲಿ ಈ ಆರೋಪ ಮಾಡಿದ್ದು,...

‘ಹಿಂದೂಸ್ತಾನಿ ಅವಾಮ್ ಮೋರ್ಚಾಕ್ಕೆ ರಾಜ್ಯಸಭಾ ಸೀಟು ನೀಡಿ’: ದಲಿತ ನಾಯಕ ಜಿತನ್ ರಾಮ್ ಮಾಂಝಿ ಬೇಡಿಕೆ

ಬಿಹಾರ: ಕೇಂದ್ರ ಸಚಿವ ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಉಸ್ತುವಾರಿ ಜಿತನ್ ರಾಮ್ ಮಾಂಝಿ ಅವರು 2024ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಹಾರದಲ್ಲಿ NDA ಮೈತ್ರಿಕೂಟದ ಭಾಗವಾಗಿ ನೀಡಿದ ಭರವಸೆಗಳನ್ನು ನೆನಪಿಸಿಕೊಂಡು...

ಚುನಾವಣಾ ಟ್ರಸ್ಟ್‌ಗಳ ಮೂಲಕ ದೇಣಿಗೆ : ಶೇ.82ರಷ್ಟು ಪಾಲು ಪಡೆದ ಬಿಜೆಪಿ

ಸುಪ್ರೀಂ ಕೋರ್ಟ್ ವಿವಾದಾತ್ಮಕ ಚುನಾವಣಾ ಬಾಂಡ್‌ಗಳನ್ನು ರದ್ದುಗೊಳಿಸಿದ ನಂತರ 2024-25ರಲ್ಲಿ ಚುನಾವಣಾ ಟ್ರಸ್ಟ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆಗಳು ಮೂರು ಪಟ್ಟು ಹೆಚ್ಚಾಗಿದ್ದು, 3,811 ಕೋಟಿ ರೂ.ಗಳಿಗೆ ತಲುಪಿದೆ ಎಂದು ದಿ...