Homeಕರ್ನಾಟಕ‘ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಯಾಗಲಿ’: ಸಚಿವರ ಹೇಳಿಕೆ ಸ್ವಾಗತಿಸಿದ ರೈತರು ಏನಂತಾರೆ?

‘ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಯಾಗಲಿ’: ಸಚಿವರ ಹೇಳಿಕೆ ಸ್ವಾಗತಿಸಿದ ರೈತರು ಏನಂತಾರೆ?

ಗೋ ಹತ್ಯೆ ನಿಷೇಧ ಕಾಯ್ದೆಯಲ್ಲಿ ತಿದ್ದುಪಡಿಗಳನ್ನು ತರಬೇಕಾದ ಅಗತ್ಯತೆಗಳ ಬಗ್ಗೆ ರೈತರು ತಮ್ಮ ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ

- Advertisement -
- Advertisement -

“ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ತರುವ ಬಗ್ಗೆ ಚರ್ಚೆ ನಡೆಸಲಾಗುವುದು” ಎಂದು ರಾಜ್ಯ ಪಶುಸಂಗೋಪನೆ ಮತ್ತು ರೇಷ್ಮೆ ಖಾತೆ ಸಚಿವ ಕೆ. ವೆಂಕಟೇಶ್ ಅವರು ಹೇಳಿರುವುದನ್ನು ರೈತರು ಸ್ವಾಗತಿಸಿದ್ದಾರೆ.

“ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಕೇವಲ ಕೋಮು ಕೇಂದ್ರಿತವಾಗಿ ನೋಡಲಾಗುತ್ತಿತ್ತು. ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗುತ್ತಿತ್ತು. ಆದರೆ ಇದರಿಂದ ಇಡೀ ರೈತಾಪಿ ಸಮುದಾಯ ತೊಂದರೆಗೆ ಸಿಲುಕಿರುವುದು ಚರ್ಚೆಯಾಗಿರಲಿಲ್ಲ. ಈ ನಿಟ್ಟಿನಲ್ಲಿ ಸಚಿವರು ಇಟ್ಟಿರುವ ಹೆಜ್ಜೆ ಸ್ವಾಗತಾರ್ಹ” ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಸಚಿವ ಕೆ.ವೆಂಕಟೇಶ್, “ಈಗ ಜಾರಿಯಲ್ಲಿರುವ ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಕೋಣ ಮತ್ತು ಎಮ್ಮೆಗಳ ವಧೆಗೆ ಅವಕಾಶವಿದೆ. ಆದರೆ ಹಸುವನ್ನು ಕಡಿಯಲು ಅವಕಾಶ ಇಲ್ಲ. ಹಸುವನ್ನು ಯಾಕೆ ಕಡಿಯಬಾರದು? ಈ ಕಾಯ್ದೆಯಿಂದಾಗಿ ರೈತರಿಗೆ ಬಹಳ ತೊಂದರೆ ಆಗುತ್ತಿದೆ. ಸ್ವತಃ ನಾನು ಹಸುವನ್ನು ಸಾಕಿದ್ದೇನೆ. ಒಂದು ಹಸು ಸತ್ತುಹೋದಾಗ ಅದನ್ನು ಮಣ್ಣು ಮಾಡಲು ಕಷ್ಟಪಡಬೇಕಾಯಿತು. ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಸೂಕ್ತ ಕ್ರಮ ಜರುಗಿಸುತ್ತೇವೆ” ಎಂದು ತಿಳಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಸಂಸದ ಪ್ರತಾಪ್ ಸಿಂಹ, “ಗೋಹತ್ಯೆ ನಿಷೇಧ ಹಿಂಪಡೆಯುವ ಮುನ್ನ ಕಾಂಗ್ರೆಸ್ಸಿನವರು ಗೋಹತ್ಯೆಯ ಬಗ್ಗೆ ಗಾಂಧೀಜಿಯವರ ನಿಲುವು ಏನಿತ್ತು ಎಂಬುದನ್ನು ತಿಳಿಯಲಿ” ಎಂದಿದ್ದಾರೆ.

ರಾಜಕೀಯ ಹಗ್ಗಜಗ್ಗಾಟ ಏನೇ ಇರಲಿ, ರಾಜ್ಯದ ರೈತಾಪಿ ಸಮುದಾಯ ಸಚಿವರ ಹೇಳಿಕೆಯನ್ನು ಮುಕ್ತವಾಗಿ ನೋಡುತ್ತಿದೆ.

ಇದನ್ನೂ ಓದಿರಿ: ಮಂಡ್ಯ: ಲಾರಿಗೆ ಕಾರು ಡಿಕ್ಕಿ ಹೊಡೆದು ನಾಲ್ವರು ನಿಧನ; ವಾರದಲ್ಲಿ 3ನೇ ಪ್ರಕರಣ

ರೈತರ ಮನದಾಳದ ಮಾತುಗಳು

ಮಂಡ್ಯ ಜಿಲ್ಲೆಯ ರೈತ ನಗರಕೆರೆ ಜಗದೀಶ್ ಅವರು ‘ನಾನುಗೌರಿ.ಕಾಂ’ಗೆ ಪ್ರತಿಕ್ರಿಯಿಸಿ ತಮ್ಮ ಅನುಭವಗಳನ್ನು ಹಂಚಿಕೊಂಡರು. “ಇತಿಹಾಸ ಪ್ರಸಿದ್ಧ ಮುಡುಕುತೊರೆ ಜಾತ್ರೆಯಲ್ಲಿ ಮಾರಾಟ ಮಾಡಲೆಂದು ಮಳವಳ್ಳಿ ರೈತನೊಬ್ಬ ಹಸುಗಳನ್ನು ಸಾಗಣೆ ಮಾಡುವಾಗ ಇಲ್ಲಿನ ಪೊಲೀಸರು ತಡೆದರು. ಗೋರಕ್ಷಣೆಯ ಹೆಸರಿನಲ್ಲಿ ದಾಂಧಲೆ ಎಬ್ಬಿಸುವವರೇನೂ ಅಲ್ಲಿರಲಿಲ್ಲ. ಸರ್ಕಾರದ ಭಾಗವಾಗಿರುವ ಪೊಲೀಸರೇ ತೊಂದರೆ ಕೊಟ್ಟರು. ಜಾತ್ರೆಯಲ್ಲಿ ಮಾರಲೆಂದು ತೆಗೆದುಕೊಂಡು ಹೋಗುತ್ತಿದ್ದೇವೆ ಎಂದರೂ ಕೇಳಲಿಲ್ಲ. ಮೈಸೂರಿನಲ್ಲಿರುವ ಗೋಶಾಲೆಯೊಂದಕ್ಕೆ ಹಸುಗಳನ್ನು ಎಳೆದುಕೊಂಡು ಹೋದರು. ಅದರ ಪಾಲನೆಗಾಗಿ ಪ್ರತಿ ದಿನ ಮುನ್ನೂರು ರೂಪಾಯಿ ಕಟ್ಟುವಂತೆ ರೈತನನ್ನು ಒತ್ತಾಯಿಸಲಾಯಿತು. ಕಾಯ್ದೆಯಡಿ ಪ್ರಕರಣ ಕೂಡ ದಾಖಲಾಗಿತ್ತು. ದಿನವೂ ಹಣ ಕಟ್ಟಲಾಗದೆ ಮನನೊಂದ ರೈತ, ಈ ಹಸುಗಳು ನನ್ನವಲ್ಲ ಎಂದು ಬರೆದುಕೊಟ್ಟು ತಪ್ಪಿಸಿಕೊಂಡ. ಸಾಗಣೆಗಾಗಿ ತರಲಾಗಿದ್ದ ವಾಹನದ ಮಾಲೀಕ ಜಾಮೀನು ಪಡೆಯಲೆಂದೇ 50,000 ರೂಪಾಯಿ ಖರ್ಚು ಮಾಡಿದ. ಈಗಲೂ ಕೋರ್ಟು ಕಚೇರಿ ಅಲೆಯುತ್ತಿದ್ದಾನೆ” ಎಂದು ವಿಷಾದಿಸಿದರು.

“ದನದ ಮಾಂಸ ಮಾರುವ ಮುಸ್ಲಿಮರಿಗೆ ತೊಂದರೆಯಾಗುತ್ತಿದೆ ಎಂಬುದಷ್ಟೇ ಮೇಲುನೋಟಕ್ಕೆ ಚರ್ಚೆಯಾಗುತ್ತಿದೆ. ಆದರೆ ರೈತರಿಗೆ ಆಗುತ್ತಿರುವ ನಷ್ಟ ಮಾತ್ರ ಯಾರ ಗಮನಕ್ಕೂ ಬರುತ್ತಿಲ್ಲ. ನಮ್ಮ ಮನೆಯಲ್ಲಿನ ಒಂದು ಹಸುವಿನ ಕಾಲು ಮುರಿಯಿತು. ಅದನ್ನು ಮಾರಾಟ ಮಾಡಬೇಕಾದಾಗ ಸಾಕಷ್ಟು ತೊಂದರೆಯಾಯಿತು. ಕಾನೂನಿನಲ್ಲಿ ಬದಲಾವಣೆ ತಂದರೆ ರೈತರಿಗೆ ಅನುಕೂಲವಾಗುತ್ತದೆ” ಎಂದರು.

“ಹಸುವಿನಿಂದ ಉಪಯೋಗವಿಲ್ಲದಿದ್ದಾಗ ಅವುಗಳನ್ನು ಸಾಕುವ ಕಷ್ಟವೇನೆಂದು ರೈತರಿಗೆ ಮಾತ್ರ ಗೊತ್ತು. ಮೊದಲೆಲ್ಲ ಇಪ್ಪತ್ತು ಮೂವತ್ತು ಹಸುಗಳನ್ನು ಸಾಕಿಕೊಳ್ಳುತ್ತಿದ್ದವರು ಈಗ ತಮ್ಮ ಮನೆಗಷ್ಟೇ ಅವಶ್ಯಕತೆ ಇರುವಷ್ಟು ಹಸುಗಳನ್ನು ಕಟ್ಟಿಕೊಂಡಿದ್ದಾರೆ. ಹಸುವೊಂದು ಮೂರು ತಿಂಗಳು ಹಾಲು ನೀಡುವುದನ್ನು ನಿಲ್ಲಿಸಿದರೂ ಭಾರವೆನಿಸುತ್ತದೆ. ಮೂರು ತಿಂಗಳ ಕಾಲ ಪೋಷಣೆಯಲ್ಲಿ ಯಾವುದೇ ಕೊರತೆ ಮಾಡುವಂತಿಲ್ಲ. ಹಿಂಡಿ, ಬೂಸಾವನ್ನು ಹಾಕಲೇಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹಾಲು ಕಡಿಮೆಯಾಗುತ್ತದೆ. ಹೀಗಿರುವಾಗ ಗಂಡು ಕರುಗಳನ್ನು, ಕಾಲು ಮುರಿದುಕೊಂಡ ಹಸುಗಳನ್ನು ಇಟ್ಟುಕೊಂಡು ಏನು ಮಾಡೋಣ?” ಎಂದು ಪ್ರಶ್ನಿಸಿದರು.

“ಮೊದಲೆಲ್ಲ ಗೊಡ್ಡು ಹಸುಗಳನ್ನೂ ಇಟ್ಟುಕೊಳ್ಳಲಾಗುತ್ತಿತ್ತು. ಏಕೆಂದರೆ ಗೋಮಾಳಗಳು ಇದ್ದವು. ಹೇಗೋ ಮೇವು ಸಿಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಗೋಮಾಳಗಳು ಇಲ್ಲವಾಗಿವೆ. ಕಾನೂನಿನಲ್ಲಿ ತಿದ್ದುಪಡಿ ತಂದರೆ ಮೊದಲು ಅನುಕೂಲವಾಗುವುದು ರೈತರಿಗೆ” ಎಂದು ಸ್ಪಷ್ಟಪಡಿಸಿದರು.

ಮದ್ದೂರು ಪಟ್ಟಣದ ರೈತರಾದ ದಿವಾಕರ್‌ ತಮ್ಮ ಕಷ್ಟಗಳನ್ನು ‘ನಾನುಗೌರಿ.ಕಾಂ’ ಜೊತೆಯಲ್ಲಿ ಹಂಚಿಕೊಂಡರು. “ಪ್ರಯೋಜನವಿಲ್ಲದ ಹಸುವನ್ನು ಇಂದಿನ ಪರಿಸ್ಥಿತಿಯಲ್ಲಿ ಪೋಷಿಸುವುದು ಕಷ್ಟ. ಮನುಷ್ಯರನ್ನು ಸಾಕುವುದು ಸುಲಭ. ಗೋವುಗಳ ವಿಚಾರದಲ್ಲಿ ಈ ಮಾತನ್ನು ಹೇಳಲಾಗದು. ಹಸುಗಳನ್ನು ಗೋಶಾಲೆಗೆ ಹೊಡೆದು ಹಿಂಸೆ ಕೊಟ್ಟು ಸಾಯಿಸಲಾಗುತ್ತಿದೆ. ಮೇವು, ನೀರಿಲ್ಲದೆ ಅವುಗಳು ಸೊರಗುತ್ತವೆ. ಇದನ್ನೆಲ್ಲ ಕಣ್ಣಿಂದಲೇ ನೋಡಿದ್ದೇವೆ. ಹಾಗೆ ಸಾಯಿಸುವುದಕ್ಕಿಂತ ನೇರವಾಗಿ ಮಾಂಸ ಮಾರಾಟಗಾರರಿಗೆ ಮಾರುವುದು ಉತ್ತಮ. ನಾಲ್ಕಾರು ಜನರಾದರೂ ತಿನ್ನುತ್ತಾರೆ” ಎಂದು ಆಶಿಸಿದರು.

“ಗೋವಿನ ಮಾಂಸ ಸಿಗದಿದ್ದಾಗ ಮಟನ್ ಬೆಲೆ ಹೆಚ್ಚಾಯಿತು. ಹಸು ಸಾಕುವುದಕ್ಕಿಂತ ಕುರಿ, ಮೇಕೆ ಸಾಕುವುದು ಸೂಕ್ತ ಎಂಬ ನಿರ್ಧಾರಕ್ಕೆ ರೈತ ಬಂದನು. 2003-04ರಲ್ಲಿ ಒಂದು ಕಂತೆ ಮೇವಿಗೆ ಮೂರರಿಂದ ನಾಲ್ಕು ರೂಪಾಯಿ ಇತ್ತು. ಕೆಲವು ರೈತರು ತಮ್ಮ ಗದ್ದೆಗಳಲ್ಲಿಯೇ ಉಚಿವಾಗಿ ಮೇವು ಕೊಟ್ಟುಬಿಡುತ್ತಿದ್ದರು. ಇಂದು ಒಂದು ಕಂತೆ ಮೇವಿಗೆ 50 ರೂಪಾಯಿ ಆಗಿದೆ. ಒಂದು ಹಸುವಿಗೆ ದಿನಕ್ಕೆ ಒಂದು ಹೊರೆ ಹಸಿ ಹುಲ್ಲು, ಎರಡು ಹೊರೆ ಒಣ ಹುಲ್ಲು ಹಾಕಬೇಕು. ಒಂದು ಟೈಮ್‌ಗೆ ಎರಡೂವರೆ ಕೆ.ಜಿ. ಹಿಂಡಿಯನ್ನು ನೀಡಬೇಕು. ಒಂದು ಕೆ.ಜಿ. ಹಿಂಡಿಯ ಬೆಲೆ ಕನಿಷ್ಠ 35 ರೂಪಾಯಿ ಇದೆ. ಹೀಗಿರುವಾಗ ಹೇಗೆ ಹಸುಗಳನ್ನು ಸಾಕುವುದು?” ಎಂದು ಕೇಳಿದರು.

ಇದನ್ನೂ ಓದಿರಿ: ನಮ್ಮ ಸಚಿವರಿವರು: ಸಭ್ಯ ರಾಜಕಾರಣಕ್ಕೆ ಮತ್ತೊಂದು ಹೆಸರೇ ‘ಕೆ.ವೆಂಕಟೇಶ್‌’

“2013ರಿಂದಲೂ ಹಾಲಿನ ಬೆಲೆಯಲ್ಲಿ ಚೇತರಿಕೆ ಕಂಡಿಲ್ಲ. ಬೇಸಿಗೆ ವೇಳೆ ಪ್ರತಿ ಲೀಟರ್‌ ಹಾಲಿನ ಬೆಲೆ ಹೆಚ್ಚೆಂದರೆ 27 ರೂಪಾಯಿ ಆಗುತ್ತದೆ. ಮಳೆಗಾಲ ಬಂತೆಂದರೆ ಹಾಲಿನ ಬೆಲೆ 23- 24 ರೂ.ವರೆಗೂ ಕುಸಿಯುತ್ತದೆ. ಹಾಲಿನ ಗುಣಮಟ್ಟ ಸರಿ ಇಲ್ಲ ಎಂಬ ತಕರಾರು ತೆಗೆಯುತ್ತಾರೆ. ಇದೆಲ್ಲ ನೋಡಿದರೆ ಹಸುಗಳನ್ನು ಯಾಕೆ ಸಾಕಬೇಕು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಒಂದು ಕಾಲದಲ್ಲಿ ಹತ್ತು ಹಸುಗಳನ್ನು ಸಾಕಿಕೊಂಡಿದ್ದ ನಾನು ಈಗ ಮನೆಯ ಅಗತ್ಯಕ್ಕೆ ಸಾಕೆಂದು ಒಂದು ಹಸು ಕಟ್ಟಿಕೊಂಡಿದ್ದೇನಷ್ಟೇ” ಎಂದು ತಮ್ಮ ಸಂಕಷ್ಟಗಳನ್ನು ವಿವರಿಸಿದರು.

ಮತ್ತೊಬ್ಬ ರೈತರಾದ ಕರೋಟಿ ತಮ್ಮಣ್ಣ ಮಾತನಾಡಿ, “ಹಸುಗಳನ್ನು ಸಾಕಲೆಂದು ಗೋ ಶಾಲೆಗಳನ್ನು ಸರ್ಕಾರ ಮಾಡಿದೆ. ಈ ಶಾಲೆಗಳು ಗೋವುಗಳಿಗೆ ನರಕವಾಗಿವೆ. ಇವುಗಳಿಗೆ ಸುರಿಯುವ ಹಣವನ್ನು ರೈತರಿಗೆ, ಹೈನುಗಾರಿಕೆ ಮಾಡುವವರಿಗೆ ಸಹಾಯಧನವಾಗಿ ನೀಡಿದರೆ ಗೋವಿನ ರಕ್ಷಣೆಯಾಗುತ್ತದೆ” ಎಂದರು.

ಮುಂದುವರಿದು, “ಹಸುಗಳನ್ನು ಸಾಕುವ ರೈತರು ಅವುಗಳಿಗೆ ವಯಸ್ಸಾದಾಗ ಮಾರಾಟ ಮಾಡಿ ಹಣವನ್ನು ದುಂದು ವೆಚ್ಚ ಮಾಡುತ್ತಿರಲಿಲ್ಲ. ಮತ್ತೊಂದು ಹಸುವನ್ನು ತಂದು ಸಾಕುತ್ತಿದ್ದನು. ಗೋಹತ್ಯೆ ನಿಷೇಧ ಕಾಯ್ದೆ ಬಂದ ಮೇಲೆ ಮಾರಾಟ ಕುಸಿಯಿತು. ಕದ್ದು ಮಾರಾಟ ಮಾಡುವಂತಾಯಿತು. ಹೈನುಗಾರಿಕೆ ಮಾಡುವವನಿಗೆ ಬಹುದೊಡ್ಡ ನಷ್ಟವಾಯಿತು. ಕಾನೂನು ತಿದ್ದುಪಡಿಯಾದರೆ ಸಾಕುವವನಿಗೂ ಮತ್ತು ಮಾರುವವನಿಗೂ ಇಬ್ಬರಿಗೂ ಅನುಕೂಲವಾಗುತ್ತದೆ” ಎಂದು ತಿಳಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...