Homeಕರ್ನಾಟಕಲಿಂಗಾಯತರು ಅರ್ಥ ಮಾಡಿಕೊಳ್ಳಲೇಬೇಕಾದ ಪಾಠವಿದು!

ಲಿಂಗಾಯತರು ಅರ್ಥ ಮಾಡಿಕೊಳ್ಳಲೇಬೇಕಾದ ಪಾಠವಿದು!

ಇವತ್ತಿನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಭೂಪಟದಲ್ಲಿ ಲಿಂಗಾಯತರು ಮೇಲ್ಜಾತಿಯ ಬೆಚ್ಚಪ್ಪುಗೆಯಲ್ಲಿ ಇದ್ದಾರಾದರು, ಆರೆಸೆಸ್ ನಂಬುವ ಚಾತುರ್ವರ್ಣದ ವ್ಯವಸ್ಥೆಯಲ್ಲಿ ಅವರು ಯಾವತ್ತಿಗೂ ‘ಶೂದ್ರ ವಿಂಗಡಣೆಗೇ ಸೀಮಿತವಾಗುವಂತವರು.

- Advertisement -
- Advertisement -

ಮೊನ್ನೆ ಸಿಎಂ ಯಡಿಯೂರಪ್ಪನವರು ದಿಲ್ಲಿಗೆ ಹೋಗಿಬಂದರು. ಹಾಗೆ ಹೋಗಲು ಅವರ ಬಳಿ ಎರಡು ಕಾರಣಗಳಿದ್ದವು. ಒಂದು, ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಕೇಂದ್ರದಿಂದ ಒಂದಷ್ಟು ಪರಿಹಾರ ಮಂಜೂರು ಮಾಡಿಸಿಕೊಳ್ಳೋದು. ಎರಡನೆಯದು, ಸಚಿವ ಸಂಪುಟ ರಚನೆಗೆ ಹೈಕಮಾಂಡಿನಿಂದ ಅನುಮತಿ ಪಡೆದು ಬರೋದು. ಮೊದಲನೇ ಕೆಲಸದಲ್ಲಿ ಅವರು ಸಂಪೂರ್ಣ ಸೋತುಹೋದರೂ ಎರಡನೇ ಕೆಲಸದಲ್ಲಿ ಭಾಗಶಃ ಗೆದ್ದು ಬಂದಿದ್ದಾರೆ. ಈಗವರ ಅರೆಸಂಪುಟವೂ ಸಿದ್ದವಾಗಿದೆ. ಆದರೆ ನೆರೆ ಮತ್ತು ಸಂಪುಟ ರಚನೆ ಅಬ್ಬರದಲ್ಲಿ ಅವರ ದಿಲ್ಲಿ ಭೇಟಿಯ ಒಂದು ಸಂಗತಿ ಹೆಚ್ಚು ಮಹತ್ವ ಪಡೆಯದೇ ಹೋಯ್ತು. ಅದು ಯಡಿಯೂರಪ್ಪನವರು ದಿಲ್ಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯನ್ನು ಭೇಟಿಯಾದದ್ದು. ಆ ಹುದ್ದೆಯಲ್ಲಿರೋದು ಬೇರಾರೂ ಅಲ್ಲ,ಕರ್ನಾಟಕದಿಂದಲೇ ಹೋದ ಬಿ.ಎಲ್.ಸಂತೋಷ್! ಇನ್ನೂ ನಿಖರವಾಗಿ ಹೇಳಬೇಕೆಂದರೆ, ಯಡಿಯೂರಪ್ಪನವರಿಗೆ ಬಿಜೆಪಿಯೊಳಗೆ ಮಗ್ಗುಲ ಮುಳ್ಳಾಗಿ ಹೆಜ್ಜೆಹೆಜ್ಜೆಗು ಕಾಡುತ್ತಾ ಬಂದ ವ್ಯಕ್ತಿ. ಈ ಬ್ರಹ್ಮಚಾರಿ ಬ್ರಾಹ್ಮಣ ಮಹಾಶಯರ ಹಿಕಮತ್ತಿನಿಂದಲೇ ಹಿಂದೆ ತಾನು ಬಿಜೆಪಿ ತೊರೆದು ಕೆಜೆಪಿ ಕಟ್ಟಬೇಕಾಯ್ತು;ವಾಪಾಸ್ ಬಿಜೆಪಿಗೆ ಬಂದಮೇಲೂ ತನ್ನ ವಿರುದ್ಧ ಬ್ರಿಗೇಡು ಪಿತೂರಿಗಳು ನಡೆದದ್ದೂ ಸಂತೋಷ್ ಶಿಷ್ಯರ ಹಿಕಮತ್ತಿನಿಂದಲೇ ಎಂಬುದನ್ನು ಸ್ವತಃ ಯಡಿಯೂರಪ್ಪನವರೇ ಹಲವು ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದುಂಟು.

ಈಗ ಅಂಥಾ ಸಂತೋಷ್‌ರವರ ಮುಂದೆಯೇ ಯಡಿಯೂರಪ್ಪನವರು ಮಂತ್ರಿಮಂಡಲ ರಚನೆಗಾಗಿ ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಬಂದೆರಗಿದೆ. ಆ ವ್ಯಕ್ತಿಯ ಬಳಿಹೋಗಿ ಚರ್ಚಿಸಿದ ನಂತರವಷ್ಟೇ ಯಡಿಯೂರಪ್ಪನವರ ಸಂಪುಟ ಹಿಗ್ಗಲು ಅನುಮತಿ ಸಿಕ್ಕಿರೋದು. ಇದು ಪಕ್ಷದೊಳಗೆ ನಡೆದ ಅಕಸ್ಮಾತ್ ಹಾವುಏಣಿಯ ಆಟವಲ್ಲ, ವ್ಯವಸ್ಥಿತವಾಗಿ ಹೆಣೆದ ಹುನ್ನಾರ. ಯಾಕೆಂದರೆ ಈ ಸಂತೋಷ್‌ರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ಮೇಲ್ದರ್ಜೆಗೇರಿಸಿದ್ದೇ ತೀರಾ ಇತ್ತೀಚೆಗೆ. ಸ್ಪಷ್ಟವಾಗಿ ಹೇಳಬೇಕೆಂದರೆ, ಲೇಟೆಸ್ಟ್ ಆಪರೇಷನ್ ಕಮಲದ ವಹಿವಾಟುಗಳು ಶುರುವಾಗಿ ಇನ್ನೇನು ಯಡಿಯೂರಪ್ಪನವರು ಸಿಎಂ ಆಗಿಯೇ ಬಿಡುತ್ತಾರೆ ಎಂಬ ಎಲ್ಲಾ ಸಾಧ್ಯತೆಗಳು ನಿಶ್ಚಯವಾದ ನಂತರವೇ!

ಬಿಜೆಪಿಯನ್ನು ನಿಂತ್ರಿಸುತ್ತಿರುವುದು ಆರೆಸೆಸ್ ಎಂಬುದಾಗಲಿ, ಈ ಆರೆಸೆಸ್ ಯಾವ ಸಮುದಾಯದ ಕ್ಷೇಮಾಭಿವೃದ್ಧಿ ‘ಸಂಘ’ ಎಂಬುದಾಗಲಿ ಈಗ ರಹಸ್ಯವಾಗೇನೂ ಉಳಿದಿಲ್ಲ. ರಾಜಕೀಯ ಅನುಕೂಲಕ್ಕಾಗಿ ಆಯಾ ಪ್ರಾಂತ್ಯಗಳ ಮೇಲ್ವರ್ಗಗಳ ಪ್ರತಿನಿಧಿಯಂತೆ ಬಿಜೆಪಿ ವರ್ತಿಸಿದರೂ, ಅದರ ಸೈದ್ಧಾಂತಿಕ ಬೆನ್ನೆಲುಬಾದ ಆರೆಸೆಸ್‌ನ ಅಜಮಾಸು ಈ ನೂರು ವರ್ಷಗಳ ಅವಧಿಯಲ್ಲಿ ಅದಕ್ಕೆ ಮುಖ್ಯಸ್ಥನಾಗಲು ಸಾಧ್ಯವಾದದ್ದು ಕೇವಲ ಒಬ್ಬ ಬ್ರಾಹ್ಮಣೇತರ ವ್ಯಕ್ತಿಗಷ್ಟೇ ಎಂಬುದನ್ನೂ ನಾವು ಮರೆಯಬಾರದು.

ಇವತ್ತಿನ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಭೂಪಟದಲ್ಲಿ ಲಿಂಗಾಯತರು ಮೇಲ್ಜಾತಿಯ ಬೆಚ್ಚಪ್ಪುಗೆಯಲ್ಲಿ ಇದ್ದಾರಾದರು, ಆರೆಸೆಸ್ ನಂಬುವ ಚಾತುರ್ವರ್ಣದ ವ್ಯವಸ್ಥೆಯಲ್ಲಿ ಅವರು ಯಾವತ್ತಿಗೂ ‘ಶೂದ್ರ ವಿಂಗಡಣೆಗೇ ಸೀಮಿತವಾಗುವಂತವರು. ಬ್ರಾಹ್ಮಣರೂ ಅಲ್ಲದ, ವೈಶ್ಯರೂ ಆಗದ, ಯುದ್ಧ ಮಾಡುವ ಕ್ಷತ್ರಿಯರೂ ಅನಿಸಿಕೊಳ್ಳದ, ಕೃಷಿಯಂತಹ ‘ಶ್ರಮ’ದಾಯಕ ಕಸುಬುಗಳನ್ನು ನಂಬಿಬದುಕುವ ಲಿಂಗಾಯತರು ಈ ನಾಲ್ಕು ಅಂತಸ್ತಿನ ಮಹಡಿಯಲ್ಲಿ ತಳಮಹಡಿಗೆ ತಳ್ಳಲ್ಪಡದೆ ಇನ್ನೆಲ್ಲಿಗೆ ಸೇರಿಯಾರು? ಶೂದ್ರರನ್ನು ಈ ಚಾತುರ್ವರ್ಣ ವ್ಯವಸ್ಥೆಹೇಗೆಲ್ಲ ಬಳಸಿಕೊಳ್ಳುತ್ತಾ ಬಂದಿದೆ ಎಂಬುದನ್ನು ವಿವರಿಸುವ ಅಗತ್ಯವಿಲ್ಲ.

ತನ್ನೊಂದು ಸಂಪುಟ ರಚಿಸಿಕೊಳ್ಳುವ ಸ್ವಾತಂತ್ರ್ಯವೂ ಇಲ್ಲದೆ, ತನ್ನದೇ ಪಕ್ಷ ಕೇಂದ್ರ ಸರ್ಕಾರವಾಗಿದ್ದಾಗ್ಯೂ ಭೀಕರ ಪ್ರವಾಹಕ್ಕೆ ಪರಿಹಾರವನ್ನು ಮಂಜೂರು ಮಾಡಿಸಿಕೊಳ್ಳಲಿಕ್ಕೂ ಆಗದೆ ಜನರ ದೃಷ್ಟಿಯಲ್ಲಿ ‘ನಾಲಾಯಕ್ ಸಿಎಂ ಮೂದಲಿಕೆಗೆ ತುತ್ತಾಗಿರುವ ಯಡಿಯೂರಪ್ಪನವರದು ಇಂಥಾ ಚಾರಿತ್ರಿಕ ಹಿನ್ನೆಲೆಯ ಸಾಂದರ್ಭಿಕ ನಿದರ್ಶನವಷ್ಟೆ.

ಯಡಿಯೂರಪ್ಪನವರನ್ನು ಮುಂದಿಟ್ಟುಕೊಂಡು ಇಲ್ಲಿದ್ದ ಮೈತ್ರಿ ಸರ್ಕಾರವನ್ನು ಬೀಳಿಸುವುದು ಬಿಜೆಪಿಯ ಸೈದ್ಧಾಂತಿಕ ಮಿದುಳುಗಳ ಯೋಜನೆಯಾಗಿತ್ತೇ ವಿನಾಃ ಅವರನ್ನು ಸಿಎಂ ಮಾಡುವುದಾಗಿರಲಿಲ್ಲ. ಮಧ್ಯಂತರ ಚುನಾವಣೆಗೆ ಹೋಗಿ, ಯಡಿಯೂರಪ್ಪನವರ ಹಂಗಿಲ್ಲದೆ ನಡೆಯಲಿದ್ದ ಆ ಚುನಾವಣೆಯಲ್ಲಿ ಸ್ಪಷ್ಟ ಬಹುಮತದ ಜನಾದೇಶ ‘ಖರೀದಿ’ಸಿಕೊಂಡು ಒಬ್ಬ ಸಂಘನಿಷ್ಠ ವ್ಯಕ್ತಿಯನ್ನು (ಅದು ಬಿ.ಎಲ್.ಸಂತೋಷ್ ಎಂಬ ಮಾತಿದೆ) ಸಿಎಂ ಮಾಡುವ ಆಲೋಚನೆ ಅವರಿಗಿತ್ತು. ಆದರೆ ಯಡಿಯೂರಪ್ಪನವರ ಬ್ಲ್ಯಾಕ್‌ಮೇಲ್ ತಂತ್ರ ಮತ್ತು ಸ್ಪೀಕರ್-ಸುಪ್ರೀಂ ಕೋರ್ಟ್‌ನಂತಹ ಸಾಂವಿಧಾನಿಕ ಬಿಕ್ಕಟ್ಟುಗಳಿಂದಾಗಿ ಪರಿವಾರ ತನ್ನ ಯೋಜನೆಯಲ್ಲಿ ತುಸು ಬದಲಾವಣೆ ಮಾಡಿಕೊಳ್ಳಬೇಕಾಯ್ತು. ಆದರೆ ಅದಕ್ಕು ಮುನ್ನ ರಾಜ್ಯ ರಾಜಕಾರಣದಲ್ಲಿದ್ದ ಸಂತೋಷ್‌ರಿಗೆ ಪದೋನ್ನತಿ ಕೊಟ್ಟು ರಾಷ್ಟ್ರ ರಾಜಕಾರಣದ ಮೇಲ್ದರ್ಜೆಗೇರಿಸುವುದನ್ನು ಮರೆಯಲಿಲ್ಲ. ಆ ಮೂಲಕ ಯಡಿಯೂರಪ್ಪ ಸಿಎಂ ಆದರೂ ಸಂತೋಷ್‌ರ ಎದುರು ಕೈಕಟ್ಟಿ ನಿಲ್ಲುವಂತಹ ಅನಿವಾರ್ಯತೆಗೆ ರಾಜಕಾರಣವನ್ನು ಅಣಿಗೊಳಿಸಲಾಯ್ತು. ಇದರ ಭಾಗವಾಗಿಯೇ ಸಂಪುಟ ರಚನೆಗೆ ಸತಾಯಿಸಿದ್ದು, ಕಡೆಗೆ ಯಡಿಯೂರಪ್ಪ ಸಂತೋಷ್‌ರ ಮುಂದೆ ಅವಲತ್ತು ಕಂಡ ನಂತರವೇ ಗ್ರೀನ್‌ಸಿಗ್ನಲ್ ಸಿಕ್ಕಿದ್ದು.

ಇದನ್ನು ಕೇವಲ ರಾಜಕೀಯ ಸನ್ನಿವೇಶವಾಗಿಯಷ್ಟೆ ನೋಡದೆ, ಶೂದ್ರರನ್ನು ಪಳಗಿಸುವ ಮತ್ತು ಕಟ್ಟಕಡೆಗೆ ಅವರು ತಮ್ಮ ಮುಂದೆ ತಲೆಬಾಗಿ ನಿಲ್ಲುವಂತೆ ಮಾಡುವ ಚಾರಿತ್ರಿಕ ಹುನ್ನಾರದ ಭಾಗವಾಗಿಯೂ ನೋಡಬೇಕಿದೆ. ಭರತ ಖಂಡದ ಇತಿಹಾಸ ಸಾಗಿಬಂದಿರುವುದೇ ಇಂಥಾ ಹುನ್ನಾರಗಳ ಅಡ್ಡಹಾದಿಯಲ್ಲಿ.‘ಇವ ನಮ್ಮವ’ ಎಂಬ ಕಾರಣಕ್ಕೆ ಯಡಿಯೂರಪ್ಪನವರ ಬೆನ್ನಿಗೆ ನಿಲ್ಲಲು ಹೋಗಿ ಚಾತುರ್ವರ್ಣ ಪ್ರತಿಪಾದಕ ಬಿಜೆಪಿಯ ಸಾರಾಸಗಟು ಮತದಾರರು ಎನಿಸಿಕೊಂಡಿರುವ ಲಿಂಗಾಯತರು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅದಕ್ಕು ಮುನ್ನ ತನ್ನ ರಾಜಕೀಯ ಹಿತಾಸಕ್ತಿಗಾಗಿ ತನ್ನನ್ನು ನಂಬಿಹೊರಟಿರುವ ಲಿಂಗಾಯತ ಸಮುದಾಯಕ್ಕೆ ತಾನೆಂಥ ಚಾರಿತ್ರಿಕ ದ್ರೋಹ ಎಸಗುತ್ತಿದ್ದೇನೆ ಎಂಬುದನ್ನು ಯಡಿಯೂರಪ್ಪನವರೂ ಅರ್ಥ ಮಾಡಿಕೊಳ್ಳಬೇಕಾಗಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಲಿಂಗಾಯತ ಎಂಬುದು ಜಾತಿ ಅಲ್ಲವೇ ಅಲ್ಲ….ಲಿಂಗಾಯತರಲ್ಲಿ ಬ್ರಾಹ್ಮಣ ,ಕ್ಷತ್ರಿಯ, ವೈಶ್ಯ,ಶೂದ್ರ ಮೂಲದ ಒಳಪಂಗಡದವರಿದ್ದಾರೆ…..

  2. For heaven sake donot go with wrong information on caste Veerashaiva Lingayaths are more intelligent. Brave. Couraged people than so called subgroup shudra ksthriya all other brahmin groups . There is no major recognizable contribution to human society from bramins than Lingayaths. Santhosh may be now acting but he is now where recognised in Karnataka.

LEAVE A REPLY

Please enter your comment!
Please enter your name here

- Advertisment -

ಲಂಚ ಪಡೆಯುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕ; ಲೋಕಾಯುಕ್ತ ಪೊಲೀಸರಿಂದ ಚಂದ್ರು ಲಮಾಣಿ ಬಂಧನ

ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರು ಬಿಜೆಪಿ ಶಾಸಕ ಚಂದ್ರು ಲಮಾಣಿ ಅವರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಗುತ್ತಿಗೆದಾರ ವಿಜಯ್ ಪೂಜಾರ್ ಅವರ ದೂರಿನ ಮೇರೆಗೆ ಗದಗ ಲೋಕಾಯುಕ್ತ ಪೊಲೀಸರು ನಡೆಸಿದ...

ಎಐ ಶೃಂಗಸಭೆಯಲ್ಲಿ ಪ್ರತಿಭಟನೆ : ನಾಲ್ವರು ಯುವ ಕಾಂಗ್ರೆಸ್‌ ಕಾರ್ಯಕರ್ತರು 5 ದಿನ ಪೊಲೀಸ್ ಕಸ್ಟಡಿಗೆ

ನವದೆಹಲಿಯ ಭಾರತ ಮಂಟಪದಲ್ಲಿ ಆಯೋಜಿಸಿದ್ದ ಎಐ ಶೃಂಗಸಭೆಯಲ್ಲಿ ಶರ್ಟ್ ಬಿಚ್ಚಿ ಪ್ರತಿಭಟಿಸಿದ್ದ ನಾಲ್ವರು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ದೆಹಲಿ ನ್ಯಾಯಾಲಯ ಶನಿವಾರ (ಫೆ.21) 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದೆಹಲಿ ಪೊಲೀಸರು...

ಮೈಮೇಲೆ ದೇವರು ಬಂದಂತೆ ನಟಿಸಿ ದಲಿತ ನವದಂಪತಿ ದೇವಸ್ಥಾನ ಪ್ರವೇಶ ನಿರಾಕರಣೆ: ವ್ಯಕ್ತಿ ಬಂಧನ

ಮೈಮೇಲೆ ದೇವರು ಬಂದಂತೆ ನಾಟಕವಾಡಿದ ವ್ಯಕ್ತಿಯೊಬ್ಬ, ದೇವಸ್ಥಾನಕ್ಕೆ ಬಂದಿದ್ದ ದಲಿತ ನವದಂಪತಿಯನ್ನು ಹೊರಗೆ ಕಳುಹಿಸುವ ಮೂಲಕ ಅಸ್ಪೃಶ್ಯತೆ ಆಚರಣೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಗೋಣಿ ತುಮಕೂರಿನಲ್ಲಿ (ಫೆ.20) ನಡೆದಿದೆ. ಗೃಹ...

ಜಾತಿವಾದಿ ಹೇಳಿಕೆ: ಜೆಎನ್‌ಯು ಉಪಕುಲಪತಿ ರಾಜೀನಾಮೆಗೆ ವಿದ್ಯಾರ್ಥಿ ಸಂಘ ಆಗ್ರಹ

ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು 'ದ ಸಂಡೇ ಗಾರ್ಡಿಯನ್' ಯೂಟ್ಯೂಬ್‌ ಚಾನೆಲ್‌ನ ಪಾಡ್‌ಕಾಸ್ಟ್‌ನಲ್ಲಿ 'ಜಾತಿ ಮತ್ತು ವಿಕ್ಟಿಮ್ ಕಾರ್ಡ್' ಕುರಿತು ನೀಡಿದ ಹೇಳಿಕೆ...

10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ : ದಂಪತಿಗೆ ಮರಣದಂಡನೆ

ಸುಮಾರು 10 ವರ್ಷಗಳಲ್ಲಿ 33 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ದಂಪತಿಗೆ ಮರಣದಂಡನೆ ವಿಧಿಸಿ ಉತ್ತರ ಪ್ರದೇಶದ ಬಂಡಾ ವಿಶೇಷ ಪೋಕ್ಸೋ ನ್ಯಾಯಾಲಯ ಶುಕ್ರವಾರ (ಫೆ.20) ಆದೇಶಿಸಿದೆ. ಉತ್ತರ ಪ್ರದೇಶದ...

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...