ಒಟಿಟಿ ವೇದಿಕೆ ಜನಪ್ರಿಯಗೊಳ್ಳುತ್ತಿದ್ದು, ಪ್ರತಿನಿತ್ಯ ಹೊಸತನಕ್ಕೆ ಕಾರಣವಾಗುತ್ತಿದೆ. ಅಂಗೈನಲ್ಲಿಯೇ ಸಿಗುವ ಸಿನಿಮಾ, ವೆಬ್ ಸರಣಿಗಳಲ್ಲಿ ವೀಕ್ಷಕರು ಮುಳುಗಿದ್ದಾರೆ. ಇದಕ್ಕೆ ತಕ್ಕಂತೆ ಅಮೆಜಾನ್ ಪ್ರೈಮ್, ನೆಟ್‌ಫ್ಲಿಕ್ಸ್, ಹಾಟ್‌ಸ್ಟಾರ್, Zee 5, ಆಹಾ, MX ಪ್ಲೇಯರ್, Nee-stream, soni LIV ವೇದಿಕೆಗಳು ವಿಭಿನ್ನವಾದ ವಿಷಯಗಳನ್ನು ನೀಡಲು ಪ್ರಯತ್ನಿಸುತ್ತಿವೆ.
ಜುಲೈ 2021 ರಲ್ಲಿ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿರುವ ಮತ್ತು ಮುಂಬರುವ ವೆಬ್ ಸರಣಿಗಳು, ಸಿನಿಮಾಗಳ ಪಟ್ಟಿ ಹೀಗಿದೆ.
೧. ಮಾಲಿಕ್ – ಮಲಯಾಲಂ ಚಿತ್ರ
ಫಹಾದ್ ಫಾಸಿಲ್, ನಿಮಿಷಾ ಸಜಯನ್ ತಾರಾಂಗಣದಲ್ಲಿದ್ದು, ಕೇರಳದಲ್ಲಿ ನಡೆದ ಗಲಭೆಯೊಂದರ ಸುತ್ತ ನಡೆಯುವ ರಾಜಕೀಯದ ಕಥಾ ಹಂದರವನ್ನು ಹೊಂದಿದೆ. ಜುಲೈ 15 ಕ್ಕೆ ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿದೆ.
೨. ನಾರಪ್ಪ (ತೆಲುಗು ಸಿನಿಮಾ)
ತಮಿಳಿನ ಅಸುರನ್ ಸಿನಿಮಾದ ರಿಮೇಕ್ ನಾರಪ್ಪನಾಗಿ ತೆಲುಗಿನಲ್ಲಿ ಬರುತ್ತಿದೆ. ವಿಕ್ಟರಿ ವೆಂಕಟೇಶ್, ಧನುಷ್ ನಿರ್ವಹಿಸಿದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಯಕಿಯಾಗಿ ಪ್ರಿಯಾಮಣಿ ಇದ್ದಾರೆ. ಜುಲೈ 24 ರಂದು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ. ನಾರಪ್ಪ ಟ್ರೈಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
೩. ಕುಡಿ ಎಡಮೈತೆ (ತೆಲುಗು ವೆಬ್ ಸರಣಿ)
ಕನ್ನಡದ ನಿರ್ದೇಶಕ ಪವನ್ ಕುಮಾರ್ ನಿರ್ದೇಶಿಸಿರುವ ‘ಕುಡಿ ಎಡಮೈತೆ’ ತೆಲುಗು ವೆಬ್ ಸರಣಿಯು ಆಹಾ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಜುಲೈ 16 ರಿಂದ (ಶುಕ್ರವಾರ) ಪ್ರಸಾರವಾಗಲಿದೆ. ಈ ಕ್ರೈಂ ಥ್ರಿಲ್ಲರ್ ಸರಣಿಯಲ್ಲಿ ಅಮಲಾ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.

೪. ಖುದ್ಸಪಾ (Chutzpah) (ಹಿಂದಿ ವೆಬ್ ಸರಣಿ)
ಸೋನಿಲೈವ್ ಒಟಿಟಿಯಲ್ಲಿ ಜುಲೈ 23 ಕ್ಕೆ ಬಿಡುಗಡೆಯಾಗಲಿದೆ. ವರುಣ್ ಶರ್ಮಾ, ಮಂಜೋತ್ ಸಿಂಗ್, ಎಲಾನಝ್ ನೋರೌಜಿ, ಗೌತಮ್ ಮೆಹ್ರಾ ಸರಣಿಯಲ್ಲಿದ್ದು, ಸಿಮಾರ್‌ಪ್ರೀತ್ ಸಿಂಗ್ ನಿರ್ದೇಶನವಿದೆ. ಇಂದಿನ ಯುಗದಲ್ಲಿ ಮಾನವನ ಡಿಜಿಟಲ್ ರೂಪಾಂತರದ ಬಗ್ಗೆ ಸೂಕ್ಷ್ಮ ನೋಟವನ್ನು ನೀಡುತ್ತದೆ. 5 ವಿಭಿನ್ನ ಕಥೆಗಳನ್ನು ಹೊಂದಿದೆ.
೫. ಒಕ ಚಿನ್ನ ವಿರಾಮಂ – ತೆಲುಗು ಚಿತ್ರ
ಒಕ ಚಿನ್ನ ವಿರಾಮಂ ಆಹಾ ಒಟಿಟಿಯಲ್ಲಿ ಜುಲೈ 9ಕ್ಕೆ ಬಿಡುಗಡೆಯಾಗಿದೆ. ಒಬ್ಬ ಉದ್ಯಮಿ ಮತ್ತು ಆತನ ಗರ್ಭಿಣಿ ಪತ್ನಿಯ ಜೀವನದಲ್ಲಾಗುವ ಕಥಾಹಂದರವನ್ನು ಹೊಂದಿದೆ.

೬. ತೂಫಾನ್- ಹಿಂದಿ ಚಿತ್ರ
ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಜುಲೈ 16 ಬಿಡುಗಡೆಯಾಗಿರುವ ಫರ್ಹಾನ್ ಅಖ್ತರ್ ಅವರ ಬಹುನಿರೀಕ್ಷಿತ ಚಿತ್ರ ತೂಫಾನ್. ಮೃನಾಲ್ ಠಾಕೂರ್ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿದ್ದಾರೆ. ಬೀದಿ ಬಾಕ್ಸರ್ ಚಾಂಪಿಯನ್ ಆಗುವುದನ್ನು ಆಧರಿಸಿದ ಕಥೆ ಇದಾಗಿದ್ದು, ಪರೇಶ್ ರಾವಲ್ ಅವರು ಫರ್ಹಾನ್ ಪಾತ್ರದ ತರಬೇತುದಾರರಾಗಿ ಕಾಣಿಸಿಕೊಂಡಿದ್ದಾರೆ.
೭. ಸರ್ಪಟ್ಟ ಪರಂಬರೈ – ತಮಿಳು ಸಿನಿಮಾ
ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಜುಲೈ 22 ಬಿಡುಗೆಯಾಗಲಿರುವ ಸರ್ಪಟ್ಟ ಪರಂಬರೈ ಪ್ರೇಕ್ಷಕರು ಅತಿ ಹೆಚ್ಚು ಕಾತುರದಿಂದ ಕಾಯುತ್ತಿರುವ ಚಿತ್ರವಾಗಿದೆ. ಪಾ.ರಂಜಿತ್ ನಿರ್ದೇಶನದಲ್ಲಿ ಆರ್ಯ ನಟಿಸಿರುವ ಈ ಚಿತ್ರ 1970 ರ ದಶಕದ ಸರ್ಪಟ್ಟ ಪರಂಬರೈನ ಕಥಾ ಹಂದರವನ್ನು ಹೊಂದಿದೆ.
8. ಫೀಲ್ಸ್ ಲೈಕ್ ಇಶ್ಕ್- ಹಿಂದಿ ವೆಬ್ ಸರಣಿ
ಜುಲೈ 23 ಕ್ಕೆ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆಯಾಗಲಿರುವ, ಅನೇಕ ವಿಭಿನ್ನ ಕಥೆಗಳ ಗುಚ್ಚ ಫೀಲ್ಸ್ ಲೈಕ್ ಇಶ್ಕ್. ಈ ಕಥೆಗಳಲ್ಲಿ ಒಂದು ಕಥೆ ಆಯುಷ್ಮಾನ್ ಖುರಾನಾ ಅವರ ಪತ್ನಿ ತಾಹಿರಾ ಕಶ್ಯಪ್ ನಿರ್ದೇಶಿಸಿದ್ದಾರೆ. ಇದು ತಾಹಿರಾ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ.

೯. ಡಾಕ್ಟರ್ – ತಮಿಳು ಚಲನಚಿತ್ರ
ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಲಿರುವ ಈ ತಿಂಗಳ ಮತ್ತೊಂದು ಕುತೂಹಲಕಾರಿ ಚಿತ್ರ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಅವರ ಡಾಕ್ಟರ್. ಚಲನಚಿತ್ರವು ಆಕ್ಷನ್, ಅಪರಾಧ ಮತ್ತು ಹಾಸ್ಯದ ಮಿಶ್ರಣವಾಗಿದೆ. ಈ ಚಿತ್ರದಲ್ಲಿ ಶಿವಕಾರ್ತಿಕೇಯನ್, ಪ್ರಿಯಾಂಕಾ ಅರುಲ್ ಮುಖ್ಯ ಪಾತ್ರದಲ್ಲಿದ್ದಾರೆ.

೧೦. ನರಗಸೂರನ್ – ತಮಿಳು ಚಿತ್ರ
Soni LIV ನಲ್ಲಿ ಬಿಡುಗಡೆಯಾಗಲಿರುವ ಜುಲೈ ತಿಂಗಳ ಚಿತ್ರಗಳಲ್ಲಿ ಥ್ರಿಲ್ಲರ್ ಕಥೆಯ ನರಗಸೂರನ್ ಕೂಡ ಒಂದು. ಕಳೆದ ವರ್ಷ ಇದೇ ಸಮಯದಲ್ಲಿ ಬಿಡುಗಡೆಯಾಗಬೇಕಿತ್ತು. ಕಾರ್ತಿಕ್ ನರೇನ್ ನಿರ್ದೇಶಿಸಿರುವ ಈ ಚಿತ್ರದಲ್ಲಿ ಅರವಿಂದ್ ಸ್ವಾಮಿ, ಶ್ರಿಯಾ ಶರನ್, ಸುಂದೀಪ್ ಕಿಶನ್, ಇಂದ್ರಜಿತ್ ಸುಕುಮಾರನ್ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಒಟ್ಟಿಗೆ ನೃತ್ಯ ಮಾಡಿದ ಅಮೀರ್ ಖಾನ್ ಮತ್ತು ಕಿರಣ್ ರಾವ್: ವಿಡಿಯೊ ವೈರಲ್


