ಭಾರತದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ದಿವಾಳಿಯಾಗಿದ್ದಾರೆ ಎಂದು ಲಂಡನ್ ನ್ಯಾಯಾಲಯ ಸೋಮವಾರ ಘೋಷಿಸಿದೆ. ಈ ಘೋಷಣೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೇತೃತ್ವದ ಬ್ಯಾಂಕುಗಳ ಒಕ್ಕೂಟವು ವಿಶ್ವದಾದ್ಯಂತ ಇರುವ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನೆರವಾಗಲಿದೆ.
ವಿಜಯ್ ಮಲ್ಯ ಭಾರತದಲ್ಲಿ 9,000 ಕೋಟಿ ರೂ.ಗಳ ಸಾಲ ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿದ್ದಾರೆ.
“15.42 (ಯುಕೆ ಸಮಯ) ದಂತೆ, ನಾನು ವಿಜಯ್ ಮಲ್ಯ ಅವರನ್ನು ದಿವಾಳಿಯೆಂದು ತೀರ್ಪು ನೀಡುತ್ತೇನೆ” ಎಂದು ನ್ಯಾಯಾಧೀಶ ಮೈಕೆಲ್ ಬ್ರಿಗ್ಸ್ ಲಂಡನ್ ಹೈಕೋರ್ಟ್‌ನ ಚಾನ್ಸರಿ ವಿಭಾಗದ ಆನ್‌ಲೈನ್ ವಿಚಾರಣೆಯ ಸಂದರ್ಭದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಭ್ರಷ್ಟಾಚಾರ ಆರೋಪ ಹೊತ್ತವರು ಬಿಜೆಪಿ ಸೇರಿ ಕಳಂಕರಹಿತ ಎನಿಸಿಕೊಂಡವರ ಪಟ್ಟಿ ಇಲ್ಲಿದೆ
ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟವು ದಿವಾಳಿತನದ ಆದೇಶವನ್ನು ತಮ್ಮ ಪರವಾಗಿ ನೀಡಬೇಕೆಂದು ವಾದಿಸಿತ್ತು. ಭಾರತೀಯ ಬ್ಯಾಂಕುಗಳನ್ನು ಕಾನೂನು ಸಂಸ್ಥೆ ಟಿಎಲ್‌ಟಿ ಎಲ್‌ಎಲ್‌ಪಿ ಮತ್ತು ನ್ಯಾಯವಾದಿ ಮಾರ್ಸಿಯಾ ಶೆಕರ್ಡೆಮಿಯನ್ ಪ್ರತಿನಿಧಿಸಿದ್ದರು.
‘‘ವಿಜಯ್ ಮಲ್ಯ ತಾನು ಪಡೆದ ಸಾಲವನ್ನು ಬ್ಯಾಂಕ್‌ಗಳ ಒಕ್ಕೂಟಕ್ಕೆ ಪೂರ್ತಿಯಾಗಿ, ನಿಗದಿತ ಅವಧಿಯೊಳಗೆ ಹಿಂದಿರುಗಿಸುತ್ತಾರೆ ಎಂದು ಹೇಳಲು ಸಾಕಷ್ಟು ಆಧಾರಗಳಿಲ್ಲ” ಎಂದು ನ್ಯಾಯಾಧೀಶರು ತನ್ನ ಆದೇಶದಲ್ಲಿ ಹೇಳಿದ್ದಾರೆ.
ವಿಜಯ ಮಲ್ಯ ಅವರನ್ನು ಪ್ರತಿನಿಧಿಸಿದ್ದ ವಕೀಲರು, ‘ದಿವಾಳಿ’ ಎಂದು ಘೋಷಿಸಿದ ಆದೇಶವನ್ನು ಪ್ರಶ್ನಿಸಲು ಅವಕಾಶ ಕೊಡಬೇಕು ಎಂದು ಅರ್ಜಿಯನ್ನು ಸಲ್ಲಿಸಿದರು. ಆದರೆ, ಈ ಮೇಲ್ಮನವಿಯು ಯಶಸ್ಸು ಕಾಣುವ ಸಾಧ್ಯತೆ ಇಲ್ಲ ಎಂದು ನ್ಯಾಯಾಧೀಶರು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಇದನ್ನೂ ಓದಿ: ಸಹಕಾರ ಖಾತೆ ರಚನೆ: ಒಕ್ಕೂಟ ಸರ್ಕಾರದಿಂದ ರಾಜ್ಯದ ಹಕ್ಕುಗಳ ಮೇಲೆ ದಾಳಿ



ನಮಗೆ ಯಾವ ಧರ್ಮವು ಅಗತ್ಯವಿಲ್ಲ ಕಾರಣ ಅಧಿಕಾರ ವಂದೇ ಜೀವವಿರುವವರೆಗೆ ಸಂತೋಷಪಡಲು ಕೊಡುವಂತಹ ಒಂದು ನೀತಿ ಹಾಗಾಗಿ ಯಾವ ಧರ್ಮವು ನಮಗೆ ಸಮೀಪಿಸಲು ಲಾರದು ಹಾಗಾಗಿ ಯಾವ ಧರ್ಮವನ್ನು ನಾವು ಕಡೆಗಣಿಸದೆ ಎಲ್ಲ ಧರ್ಮವನ್ನು ಸಮಾನವಾಗಿ ಸ್ವೀಕರಿಸಿ ಇರುವವರಿಗೆ ಅಧಿಕಾರದಲ್ಲಿದ್ದು ಸಂತೋಷಪಟ್ಟು ಮುಂದುವರಿಯುವುದೇ ಅಭಿಪ್ರಾಯ ರಾಜಕೀಯ ದೇಶದ ಧರ್ಮ ಇದೇ ರೀತಿ ಇದೆ ಈ ದೇಶದ ಹತ್ತು ಸಾವಿರ ವರ್ಷಗಳಿಂದ ನಾವು ಪಡೆದುಕೊಂಡಿರುವ ಸಿವಿಲೈಜೇಷನ್.WE ARE VERY GREAT IN THIS WORLD.
BHASKER P