Homeಕರೋನಾ ತಲ್ಲಣಕೊರೊನಾ ಲಸಿಕೆ ಕೊರತೆ; ವ್ಯಾಕ್ಸಿನೇಷನ್ ಪ್ರಕ್ರಿಯೆ ನಿಲ್ಲಿಸುವತ್ತ ಕೇರಳ

ಕೊರೊನಾ ಲಸಿಕೆ ಕೊರತೆ; ವ್ಯಾಕ್ಸಿನೇಷನ್ ಪ್ರಕ್ರಿಯೆ ನಿಲ್ಲಿಸುವತ್ತ ಕೇರಳ

- Advertisement -
- Advertisement -

ಕೇರಳದ ಅನೇಕ ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ಕೊರತೆಯಾಗಿದ್ದು, ವ್ಯಾಕ್ಸಿನೇಷನ್‌‌ ಅನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಗುತ್ತದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. “ಪ್ರಸ್ತುತ ರಾಜ್ಯದಲ್ಲಿ ಶೂನ್ಯ ಲಸಿಕೆ ದಾಸ್ತಾನುಗಳಿದ್ದು, ಮುಂದಿನ ಕೆಲವು ದಿನಗಳವರೆಗೆ ರಾಜ್ಯದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಇರುವುದಿಲ್ಲ ಎಂದು ತೋರುತ್ತದೆ” ಎಂದು ಅವರು ಹೇಳಿದ್ದಾರೆ.

ತಿರುವನಂತಪುರಂ, ಕೊಲ್ಲಂ, ಪಥನಂತಿಟ್ಟ, ಅಲಪ್ಪುಝ ಜಿಲ್ಲೆಗಳಲ್ಲಿ ಯಾವುದೇ ಕೋವಿಶೀಲ್ಡ್ ಲಸಿಕೆ ಇಲ್ಲ. ಜುಲೈ 29 ರ ಮೊದಲು ಹೊಸದಾಗಿ ಲಸಿಕೆಗಳು ರಾಜ್ಯವನ್ನು ತಲುಪುವ ನಿರೀಕ್ಷೆಯಿಲ್ಲ ಎಂದು ವರದಿಗಳು ಉಲ್ಲೇಖಿಸಿವೆ.

ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 1.09 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಇದರಲ್ಲಿ 11,586 ಜನರು ಕೊರೊನಾ ಪಾಸಿಟಿವ್ ಆಗಿದ್ದಾರೆ. ಪರೀಕ್ಷಾ ಪಾಸಿಟಿವ್‌‌ ಪ್ರಮಾಣವು 10.59% ರಷ್ಟಿದೆ ಎಂದು ವೀಣಾ ಜಾರ್ಜ್‌ ಹೇಳಿದ್ದಾರೆ.

ಇದನ್ನೂ ಓದಿ: ಕೇರಳ: ಮಹಿಳೆಯರ ಸುರಕ್ಷತೆಗಾಗಿ ಪಿಂಕ್ ಪ್ರೊಟೆಕ್ಷನ್ ಯೋಜನೆ ಆರಂಭ

“ಪ್ರಸ್ತುತ ನಾವೀಗ 1.66 ಕೋಟಿ ಲಸಿಕೆಗಳನ್ನು ಪಡೆದುಕೊಂಡಿದ್ದೇವೆ, ಅವುಗಳಲ್ಲಿ ಯಾವುದನ್ನೂ ವ್ಯರ್ಥ ಮಾಡದೆ ಉಪಯೋಗಿಸಿದ್ದೇವೆ. ನಾವು 1.87 ಕೋಟಿ ಲಸಿಕೆಗಳನ್ನು ನೀಡಲು ಸಮರ್ಥರಾಗಿದ್ದೇವೆ. ಈಗಿನ ಅಂಕಿ ಅಂಶ ಕೇರಳದಲ್ಲಿ ಲಸಿಕಗಳು ಮುಗಿದಿದೆ ಎಂದು ತೋರಿಸುತ್ತಿದೆ. ಮುಂದಿನ ತಿಂಗಳು ನಮಗೆ 10 ಬೇಕು ಲಕ್ಷ ಲಸಿಕೆಗಳು ಬೇಕಾಗುತ್ತದೆ” ಎಂದು ವೀಣಾ ಜಾರ್ಜ್‌ ಹೇಳಿದ್ದಾರೆ.

“45 ವರ್ಷಕ್ಕೂ ಮೇಲ್ಪಟ್ಟವರ ವಿಭಾಗದಲ್ಲಿ, ಜನಸಂಖ್ಯೆಯ 76% ರಷ್ಟು ಜನರು ಮೊದಲ ಡೋಸ್‌ ಅನ್ನು ಪಡೆದಿದ್ದಾರೆ. ಇದರಲ್ಲಿ ಎರಡೂ ಡೋಸ್‌ ಅನ್ನು ಪಡೆದವರು 35% ಮಾತ್ರ. ಕೇರಳ ಜನಸಂಖ್ಯೆಯ 42% ದಷ್ಟು ಜನರು ಮಾತ್ರ ಕೊರೊನಾ ಪ್ರತಿಕಾಯಗಳನ್ನು ಹೊಂದಿದ್ದಾರೆಂದು ಅಧ್ಯಯನಗಳು ಹೇಳಿದೆ, ಅಂದರೆ ನಮ್ಮ ಜನಸಂಖ್ಯೆಯ ಬಹುಪಾಲು ಜನರು ಕೊರೊನಾಗೆ ತುತ್ತಾಗುವ ಸಾಧ್ಯತೆ ಇದೆ. ಆದ್ದರಿಂದ ಆದಷ್ಟು ಬೇಗನೇ ವ್ಯಾಕ್ಸಿನೇಷನ್‌ ನಡೆಯುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು” ಎಂದು ಅವರು ಹೇಳಿದ್ದಾರೆ.

ಕೇರಳವು ದೇಶದ ಉಳಿದ ರಾಜ್ಯಗಳಿಗಿಂತ ಹೆಚ್ಚು ಕೊರೊನಾ ಪೀಡಿತ ರಾಜ್ಯವಾಗಿದೆ ಎಂದು ಕೊರೊನಾ ಅಂಕಿ ಅಂಶವು ಹೇಳುತ್ತಿದೆ. ರಾಷ್ಟ್ರೀಯ ಪಾಸಿಟಿವಿಟಿ ದರ 4% ಕ್ಕಿಂತ ಕಡಿಮೆಯಿದ್ದರೆ, ಕೇರಳದ ದರ 10.59% ರಷ್ಟಿದೆ. ರಾಜ್ಯದಲ್ಲಿ 4.12 ಲಕ್ಷ ಸಕ್ರಿಯ ಕೊರೊನಾ ಸೋಂಕಿನ ಪ್ರಕರಣಗಳಿವೆ.

ಇನ್ನೂ ಹೆಚ್ಚಿನ ಕೊರೊನಾ ಲಸಿಕೆಗಳನ್ನು ಪೂರೈಸಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರವು ಒಕ್ಕೂಟ ಸರ್ಕಾರದೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದೆ ಎಂದು ವೀಣಾ ಜಾರ್ಜ್ ಹೇಳಿದ್ದಾರೆ.

ಇದನ್ನೂ ಓದಿ: ಬಕ್ರೀದ್ ಹಬ್ಬಕ್ಕೆ ಅಂಗಡಿ ತೆರೆಯಲು ಕೇರಳ ಸರ್ಕಾರದ ಅನುಮತಿ: ಸುಪ್ರೀಂಕೋರ್ಟ್ ತರಾಟೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...