Homeಮುಖಪುಟಜಯ ಮಹಾಭಾರತದ ಮರುಕಥನ

ಜಯ ಮಹಾಭಾರತದ ಮರುಕಥನ

- Advertisement -
- Advertisement -

ಭಾರತದ ಮಹಾ ಕಾವ್ಯವಾದ ಮಹಾಭಾರತದ ಮೂಲಕೃತಿ “ಜಯ”. ಅದೇನೂ ಈಗ ನಾವು ಕಾಣುತ್ತಿರುವ ಮಹಾಭಾರತದಷ್ಟು ದೊಡ್ಡದಾಗಿರಲಿಲ್ಲ. ಕುಟುಂಬವೆರಡರ ದಾಯಾದಿ ಕಲಹದ ಕತೆಯು ಬಾಯಿಂದಬಾಯಿಗೆ ಹರಡಿತು. ಸ್ಥಳದಿಂದ ಸ್ಥಳಕ್ಕೆ ಸಂಚರಿಸಿತು. ಪೀಳಿಗೆಗಳಿಂದ ಪೀಳಿಗೆಗಳಿಗೆ ದಾಟಿತು. ಹಾಗೆ ಹರಡುತ್ತಾ, ಸಂಚರಿಸುತ್ತಾ, ದಾಟುತ್ತಾ ವಿವಿಧ ಪ್ರದೇಶಗಳ ವಿವಿಧ ಸಂಸ್ಕೃತಿಗಳನ್ನು ತನ್ನದಾಗಿಸಿಕೊಳ್ಳುತ್ತಾ, ವಿವಿಧ ರೀತಿನೀತಿಗಳನ್ನು ಒಳಗೊಳ್ಳುತ್ತಾ, ವಿವಿಧ ಮಾದರಿಗಳ ಪಾತ್ರಗಳೆಲ್ಲಾ ಭಾಗವಹಿಸುತ್ತಾ ಬೃಹತ್ತಾಗಿ ಬೆಳೆದು ಮಹಾಭಾರತವಾಯಿತು.

ಮಹಾಭಾರತವೆಂಬ ಗೊಂಡಾರಣ್ಯವನ್ನು ಹೊಕ್ಕು ನೋಡಿದರೆ ನಾವು ದೇಶವೆಂದು ಈಗ ಕರೆಯುವ ಈ ಭೂಭಾಗದಲ್ಲಿ ಎಂತೆಂತಹ ಸಂಸ್ಕೃತಿಗಳಿದ್ದವು, ಸಾಮಾಜಿಕ ಪದ್ಧತಿಗಳಿದ್ದವು, ಜನರಿದ್ದರು, ಎಂತೆಂತಹ ಘನತೆ ಗೌರವಗಳಿದ್ದವು, ಯಾವ್ಯಾವ ಕಾರಣಗಳಿಂದ ಸಾಮಾಜಿಕ ಮತ್ತು ವ್ಯಕ್ತಿಗತ ಅಪಮಾನಗಳು ಮತ್ತು ಸನ್ಮಾನಗಳಾಗುತ್ತಿದ್ದವು? ಎಂತೆಂತಹ ನಮೂನೆಯ ಮನಸ್ಥಿತಿಗಳಿದ್ದವು; ಹೀಗೆ ಬಲು ಸೂಕ್ಷ್ಮ ಮತ್ತು ಸ್ಥೂಲ ವಿಚಾರಗಳೆಲ್ಲವೂ ಅನಾವರಣಗೊಳ್ಳುತ್ತಾ ಹೋಗುತ್ತವೆ.

ರಾಜಕಾರಣ, ಧರ್ಮಕಾರಣ, ಮಾನುಷಕಾರಣ, ದ್ವೇಷಕಾರಣ, ಮೋಹಕಾರಣ, ಅಹಂಕಾರಕಾರಣ, ದೌರ್ಬಲ್ಯಕಾರಣ. ಹೀಗೆ ನಾನಾ ಕಾರಣಗಳು ಮನುಷ್ಯನಲ್ಲಿ ಮತ್ತು ಮಾನುಷ ಸಮಾಜದಲ್ಲಿ ಉಂಟುಮಾಡುವ ಪರಿಣಾಮಗಳನ್ನು ವಿವರಿಸುತ್ತದೆ ಈ ಮಹಾಭಾರತ. ಚಾತುರ್ವರ್ಣ ವ್ಯವಸ್ಥೆಯು, ಪ್ರಭುತ್ವದ ದಬ್ಬಾಳಿಕೆಯು, ಸ್ವಜನಾಸಕ್ತಿ, ಸ್ವಪರಿವಾರ ಮೋಹವು ಏನೆಲ್ಲಾ ಶೋಷಣೆಗಳನ್ನು ಮಾಡಿತು, ಎಂತೆಂತಹ ದುರಂತಗಳನ್ನು ಕಂಡಿತು ಎಂದು ಕಂಡಹಾಗೇ ವಿವರಿಸುತ್ತದೆ. ಒಳ್ಳೆಯ ಅಥವಾ ಕೆಟ್ಟ ಎಂಬ ಗೆರೆ ಎಳೆದಂತಹ ಸಿದ್ಧ ಮಾದರಿಗಳನ್ನು ಮುಂದಿಡದೇ, ಒಳ್ಳೆಯತನದ ಹಿಂದಿನ ಕರಾಳ ಮುಖವನ್ನು, ಕೆಟ್ಟದೆನ್ನುವುದರ ಹಿಂದಿನ ನೈಜತೆ ಮತ್ತು ಪ್ರಾಮಾಣಿಕತೆಯ ಗುಣವನ್ನು ಗುರುತಿಸುತ್ತದೆ.

ನಿಷ್ಪಕ್ಷಪಾತ ನಿರೂಪಣೆಯೇ ಮಹಾಭಾರತದ ಶಕ್ತಿ ಮತ್ತು ಮೌಲ್ಯ. ಪಕ್ಷಪಾತ ಮಾಡುವ ಕೃಷ್ಣನು ಕೂಡ ಶಾಪಕ್ಕೆ, ದುರ್ವಿಧಿಯ ಸಾವಿಗೆ ಬಲಿಯಾಗುತ್ತಾನೆ. ಒಳ್ಳೆಯವರೆಂದು ಕೃಷ್ಣನಿಂದ ಮತ್ತು ಭೀಷ್ಮಾದಿಗಳಿಂದ ಪ್ರಾಮಾಣೀಕರಿಸಲ್ಪಡುವ ಪಾಂಡವರು ಹಾದಿಯಲ್ಲಿ ಹೆಣಗಳಾಗಿ ಬೀಳುತ್ತಾರೆ. ಇನ್ನು ಪಾತ್ರಗಳೆಂದರೆ ಅವು ಬರಿಯ ವ್ಯಕ್ತಿಗಳಲ್ಲ. ವ್ಯಕ್ತಿತ್ವದ ಮಾದರಿಗಳು. ಶಂತನುವಿನಿಂದ ಹಿಡಿದು ಪರೀಕ್ಷಿತನವರೆಗೂ ಈಗಲೂ ನಾವು ನಮ್ಮನಮ್ಮಲ್ಲಿ ಕಾಣುತ್ತಲೇ ಇರುವ ಹಲವು ಮನಸ್ಥಿತಿಗಳ, ಹಲವು ವ್ಯಕ್ತಿತ್ವಗಳ ಮಾದರಿಗಳು.

ಹಾಗಾಗಿಯೇ ಇದು ಒಂದು ಧಾರ್ಮಿಕ ಗ್ರಂಥವಲ್ಲ. ಈ ನೆಲದ ನಿವಾಸಿಗಳಿಗೆಲ್ಲಾ, ಅವರು ಯಾವುದೇ ಧರ್ಮದವರಾಗಲಿ, ತಮ್ಮತಮ್ಮಲ್ಲಿ ಕಾಣುತ್ತಿರುವ ವ್ಯಕ್ತಿತ್ವಗಳ, ಸಂಘರ್ಷಗಳ, ಬದುಕಿನ ನೋವುನಲಿವುಗಳ ಕಾರಣ ಮತ್ತು ಪರಿಣಾಮಗಳ ಸಮಾಜೋಸಾಂಸ್ಕೃತಿಕ ಕಥನವಿದು. ನಿರಂತರವಾಗಿ ಪ್ರಯೋಗಗಳಿಗೆ ಮತ್ತು ಪರಿವರ್ತನೆಗಳಿಗೆ ಒಳಪಡುತ್ತಿದ್ದ ತಾತ್ವಿಕತೆಗಳ ವಿಶ್ಲೇಷಣೆ ಇದು. ವಿಶಾಲ ಭೂಭಾಗದ ಸಂಕೀರ್ಣ ಸಂಸ್ಕೃತಿಗೆ ಇದೊಂದು ರೂಪಕ ಇತಿಹಾಸ. ಯಾರೂ ಅಮುಖ್ಯರಲ್ಲದೇ ಸಮಾಜದ ಮತ್ತು ವ್ಯಕ್ತಿಗಳ ಆಗುಹೋಗುಗಳಿಗೆ ಕಾರಣ ಕರ್ತೃಗಳಾದವರ ಒಂದು ಮಹಾಕಾವ್ಯ.

ಈ ಮಹಾಕಾವ್ಯದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಮನೋವೈಜ್ಞಾನಿಕ ವಿಶ್ಲೇಷಣೆಗಳಿಗೆ ದಾರಿ ತೋರುವ ಕೃತಿ ದೇವದತ್ತ ಪಟ್ನಾಯಕರವರ ಜಯ. ಗಿರಡ್ಡಿ ಗೋವಿಂದರಾಜ ಇದನ್ನು ಕನ್ನಡಕ್ಕೆ ತಂದಿದ್ದಾರೆ.

ಈಗ ನಾವು ತಿಳಿದಿರುವ ರಿಲೀಜಿಯನ್ ಎಂಬ ಧರ್ಮದ ಪರಿಕಲ್ಪನೆಯೇ ಇಲ್ಲದಿದ್ದ ಮಹಾಭಾರತದ ಕಾಲದಲ್ಲಿಯೂ ಧರ್ಮದ ಬಗ್ಗೆ ಮಾತಾಡುತ್ತಾರೆ. ಅದನ್ನು ಎತ್ತಿ ಹಿಡಿಯುತ್ತಾರೆ. ಅದನ್ನು ಪಾಲಿಸುತ್ತಾರೆ. ಅದಕ್ಕಾಗಿ ಬದುಕುತ್ತಾರೆ. ಅದಕ್ಕಾಗಿ ಸಾಯುತ್ತಾರೆ. ಆದರೆ ಆ ಧರ್ಮವೆಂಬುದು ಅಲ್ಲಿ ಸ್ವಧರ್ಮ ಎಂಬ ಒಬ್ಬರ ಅಥವಾ ಒಂದರ ಅಥವಾ ಒಂದು ವ್ಯವಸ್ಥೆಯ ಮೂಲ ಗುಣಸ್ವಭಾವ, ರೀತಿ ಮತ್ತು ನೀತಿ. ಅದೊಂದು ಜೈವಿಕ, ಆಧ್ಯಾತ್ಮಿಕ, ತಾತ್ವಿಕ ಮತ್ತು ಸಾಮಾಜಿಕ ಅಸ್ತಿತ್ವಗಳ ಸೂಕ್ಷ್ಮ ವಿಚಾರ.

ಮಹಾಭಾರತ ಭಾರತದ ಒಂದು ಹೆಮ್ಮೆಯ ಕಾವ್ಯ. ಆದರೆ ನಿಷ್ಪಕ್ಷಪಾತವಾದ ಈ ಮಹಾಭಾರತವನ್ನು ಪರ ಅಥವಾ ವಿರೋಧದ ನೆಲೆಗಟ್ಟುಗಳಿಂದ ನೋಡದೇ ರೂಪಕ ಇತಿಹಾಸವನ್ನು ಅಭ್ಯಾಸ ಮಾಡುವಂತೆ ದೇವದತ್ತ ಜಯವನ್ನು ಬರೆದು ಮಹದುಪಕಾರ ಮಾಡಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...

ನೆಲಮಂಗಲದಲ್ಲಿ ಹಾಸಿಗೆ ಹಿಡಿದ ಪತಿಯ ಎದುರೇ 60ವರ್ಷದ ಮಹಿಳೆಯ ಕೊಲೆ; ಐದು ಗಂಟೆಗಳಲ್ಲಿ ಆರೋಪಿ ಬಂಧನ

ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ ಪೇಟೆ ಬೀದಿಯಲ್ಲಿ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಗಂಡನ ಮುಂದೆಯೇ ಮಹಿಳೆಯೊಬ್ಬಳ ಕೊಲೆಯಾದ ಐದು ಗಂಟೆಗಳಲ್ಲಿ ನೆಲಮಂಗಲ ಪಟ್ಟಣ ಪೊಲೀಸರು 45 ವರ್ಷದ ದಿನಸಿ ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಫೆಬ್ರವರಿ...

‘ದಿ ಕೇರಳ ಸ್ಟೋರಿ 2’ ಚಿತ್ರ ನಿರ್ಮಾಪಕರು, ಸಿಬಿಎಫ್‌ಸಿ ಮಂಡಳಿಗೆ ನೋಟಿಸ್ ಜಾರಿ ಮಾಡಿದ ಕೇರಳ ಹೈಕೋರ್ಟ್

ಕೊಚ್ಚಿ: 'ದಿ ಕೇರಳ ಸ್ಟೋರಿ 2 - ಗೋಸ್ ಬಿಯಾಂಡ್' ಚಿತ್ರದ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಮತ್ತು ಅದರ ಶೀರ್ಷಿಕೆಯ ಮರುಪರಿಶೀಲನೆ ಸೇರಿದಂತೆ ಮಾರ್ಪಾಡುಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಕಣ್ಣೂರು ಮೂಲದವರು ಸಲ್ಲಿಸಿದ ಅರ್ಜಿಯ...

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...