Homeಮುಖಪುಟಮಹಾರಾಷ್ಟ್ರದಲ್ಲಿ ಮಹಾಹಗರಣ ನಡೆದಿದೆ: ಕಾಂಗ್ರೆಸ್ ನಾಯಕ ಅಹ್ಮದ್‌ ಪಟೇಲ್‌ ಆರೋಪ

ಮಹಾರಾಷ್ಟ್ರದಲ್ಲಿ ಮಹಾಹಗರಣ ನಡೆದಿದೆ: ಕಾಂಗ್ರೆಸ್ ನಾಯಕ ಅಹ್ಮದ್‌ ಪಟೇಲ್‌ ಆರೋಪ

- Advertisement -
- Advertisement -

ಇಂದು ಬೆಳಿಗ್ಗೆ ಮಹಾರಾಷ್ಟ್ರದಲ್ಲಿ ನಡೆದಿರುವುದು ಮಹಾಹಗರಣವಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಅಹ್ಮದ್‌ ಪಟೇಲ್‌ ಆರೋಪಿಸಿದ್ದಾರೆ.

ಶಿವಸೇನಾ ಮತ್ತು ಎನ್‌ಸಿಪಿಯ ಪತ್ರಿಕಾಗೊಷ್ಟಿ ನಂತರ ಕಾಂಗ್ರೆಸ್‌ ವತಿಯಿಂದ ಪ್ರತ್ಯೇಕ ಪತ್ರಿಕಾಗೋಷ್ಟಿ ನಡೆಸಿದ ಅಹ್ಮದ್‌ ಪಟೇಲ್‌, ಬೆಳಿಗ್ಗೆ ಹೊಸ ಸರ್ಕಾರ ರಚನೆಯಲ್ಲಿ ಯಾವುದೇ ಶಿಷ್ಠಾಚಾರ ಪಾಲಿಸಿಲ್ಲ, ಇದರಿಂದ ಪ್ರಜಾಪ್ರಭುತ್ವಕ್ಕೆ ಅವಮಾನವಾಗಿದೆ ಎಂದು ದೂರಿದ್ದಾರೆ.

ಎನ್‌ಸಿಪಿ ಮತ್ತು ಶಿವಸೇನೆಯೊಂದಿಗೆ ಸೇರಿ ಸರ್ಕಾರ ರಚಿಸಲು ನಾವು ಮುಂದಾಗಿದ್ದೆವೆ. ಇದರಲ್ಲಿ ವಿಳಂಬವಾಗುವುದಕ್ಕೆ ಕಾಂಗ್ರೆಸ್ ಕಾರಣವಲ್ಲ. ಹೊಸ ಸರ್ಕಾರದ ವಿಚಾರದಲ್ಲಿ ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಅವರೊಂದಿಗೆ ಪತ್ರಿಕಾಗೊಷ್ಠಿಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಭಾಗಿಯಾಗಿದ್ದರು. ಮತ್ತೋರ್ವ ಕಾಂಗ್ರೆಸ್‌ ಮುಖಂಡರಾದ ಕೆ.ಸಿ ವೇಣುಗೋಪಾಲ್‌ ಕೂಡ ಮುಂಬೈಗೆ ತೆರೆಳಿದ್ದು ಮುಂದಿನ ನಡೆಗಳ ಬಗ್ಗೆ ಚರ್ಚಿಸುತ್ತಿದ್ದಾರೆ.

ಎನ್‌ಸಿಪಿ, ಕಾಂಗ್ರೆಸ್‌ ಮತ್ತು ಶಿವಸೇನೆಯು ಕುದುರೆ ವ್ಯಾಪಾರದ ಭಯದಿಂದಾಗಿ ತಮ್ಮ ತಮ್ಮ ಶಾಸಕರನ್ನು ಜೋಪಾನ ಮಾಡಿಕೊಳ್ಳಲು ಮುಂದಾಗಿವೆ.

ಇನ್ನೊಂದೆಡೆ ಶಿವಸೇನೆಯ ಸಂಜಯ್‌ ರಾವತ್‌ ರವರು ಅಜಿತ್‌ ದೋವಲ್‌ ನಮ್ಮ ಶಾಸಕರನ್ನು ಕಿಡ್ನಾಪ್‌ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಸುದ್ದಿಗಾರರೊಡನೆ ಮಾತನಾಡಿದ ಅವರು ಬಿಜೆಪಿಗೆ ಬೆಂಬಲ ನೀಡಲು ಹೋಗಿದ್ದ 08 ಶಾಸಕರಲ್ಲಿ 05 ಶಾಸಕರು ನಮ್ಮ ಕಡೆ ವಾಪಸ್‌ ಬಂದಿದ್ದು ಅದೇಗೆ ಬಿಜೆಪಿ ಬಹುಮತ ಸಾಬೀತುಪಡಿಸುತ್ತದೆ ನೋಡಿಯೇ ಬಿಡುತ್ತೇವೆ ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಜನರ ಆದೇಶಕ್ಕೆ ಬಿಜೆಪಿ ಅಗೌರವ ತೋರಿದೆ ಎಂದು ಆಮ್‌ ಆದ್ಮಿ ಪಕ್ಷ ಆರೋಪಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...