ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತನ್ನ ಮೇಲೆ ದಾಳಿ ನಡೆದಿದೆ ಎಂದು ಆರೋಪಿಸಿದ್ದಾರೆ. ಸರ್ಕಾರಿ ವೈದ್ಯರು ಅವರ ಕಾಲು ಮತ್ತು ಕುತ್ತಿಗೆಗೆ ತೀವ್ರತರವಾದ ಗಾಯಗಳಾಗಿವೆ ಎಂದಿದ್ದಾರೆ. ಮಮತಾ ಬ್ಯಾನರ್ಜಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ “ರಾಜಕೀಯಕ್ಕಾಗಿ ದಾಳಿಯ ಬಗ್ಗೆ ಸುಳ್ಳು ಹರಡುತ್ತಿದ್ದಾರೆ” ಹಾಗಾಗಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದೆ.
ಬಂಗಾಳ ವಿಧಾನಸಭಾ ಚುನಾವಣಾ ಕಣ ದಿನ ದಿನಕ್ಕೂ ರಂಗೇರುತ್ತಿದೆ. ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ನಿನ್ನೆ ಮಮತಾ ಬ್ಯಾನರ್ಜಿ ಮೇಲೆ ದಾಳಿಯಾಗಿದ್ದರೆ, ಇಂದು ಬಿಜೆಪಿ ನಾಯಕರ ನಿಯೋಗ ಕೋಲ್ಕತ್ತಾದ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ ಮುಖ್ಯಮಂತ್ರಿಯವರ ಆರೋಪದ ವಿರುದ್ಧ ದೂರು ನೀಡಲು ಮತ್ತು ಪ್ರಕರಣದ ತನಿಖೆ ನಡೆಸಲು ಕೋರುತ್ತೇವೆ ಎಂದಿದ್ದಾರೆ.
“ದಾಳಿಯ ಬಗ್ಗೆ ನಾವು ಉನ್ನತ ಮಟ್ಟದ ತನಿಖೆ ಬಯಸುತ್ತೇವೆ, ದಾಳಿ ಹೇಗೆ ಸಂಭವಿಸಿತು, ಯಾರು ಹೊಣೆಗಾರರು..? ಘಟನೆ ನಡೆದಾಗ ರಕ್ಷಣೆ ನೀಡಬೇಕಿದ್ದ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ನಾವು ಒತ್ತಾಯಿಸುತ್ತೇವೆ” ಎಂದು ಬಂಗಾಳ ಬಿಜೆಪಿ ಉಪಾಧ್ಯಕ್ಷ ಪ್ರತಾಪ್ ಬ್ಯಾನರ್ಜಿ ಹೇಳಿದ್ದಾರೆ ಎಂದು ಎನ್‌ಡಿಟಿವಿ ಉಲ್ಲೇಖಿಸಿದೆ.
ಇದನ್ನೂ ಓದಿ: ‘ಯಾವ ದಾಳಿಯು ದೃಢತೆಯನ್ನು ಮುರಿಯದು’ – ಮಮತಾ ಮೇಲಿನ ದಾಳಿಗೆ ಟಿಎಂಸಿ ಪ್ರತಿಕ್ರಿಯೆ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ನ ನಿಯೋಗವೊಂದು ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿ ದಾಳಿಯ ಬಗ್ಗೆ ತಮ್ಮದೇ ಆದ ದೂರು ದಾಖಲಿಸಿದೆ.
66 ವರ್ಷದ ಮಮತಾ ಬ್ಯಾನರ್ಜಿ ಅವರು ನಿನ್ನೆ ಸಂಜೆ ಬಂಗಾಳ ಚುನಾವಣೆಗೆ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿದ ನಂತರ ಕೆಲವೇ ಗಂಟೆಗಳ ಅಂತರದಲ್ಲಿ ಅವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಿದರು. ’ದಾಳಿ ಷಡ್ಯಂತ್ರ ಆಗಿದೆ. ಏಕೆಂದರೆ ದಾಳಿಯ ವೇಳೆ ನನ್ನ ಸುತ್ತ ಯಾವುದೇ ಪೊಲೀಸರು ಇರಲಿಲ್ಲ’ ಎಂದಿದ್ದರು. ನಂತರ ಅವರನ್ನು 130 ಕಿ.ಮೀ ದೂರದಲ್ಲಿರುವ ಕೋಲ್ಕತ್ತಾದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಗುರುವಾರ ಬೆಳ್ಳಂಬೆಳಗೆ, ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ಮಮತಾ ಬ್ಯಾನರ್ಜಿಯ ಸೋದರಳಿಯ ಅಭಿಷೇಕ್ ಬ್ಯಾನರ್ಜಿ, ಮಮತಾ ಆಸ್ಪತ್ರೆಯಲ್ಲಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಜೊತೆಗೆ ಬಿಜೆಪಿಯನ್ನು ಗುರಿಯಾಗಿಸಿಕೊಂಡು “ಮೇ 2 ರ ಭಾನುವಾರದಂದು ಬಂಗಾಳದ ಜನರ ಶಕ್ತಿಯನ್ನು ನೋಡಲು ಬಿಜೆಪಿ ನಿಮ್ಮನ್ನು ನೀವು ಸಜ್ಜುಗೊಳಿಸಿಕೊಳ್ಳಿ” ಎಂದು ಬರೆದಿದ್ದಾರೆ.
ಇದನ್ನೂ ಓದಿ: ಪ.ಬಂಗಾಳ: ನಾಮಪತ್ರ ಸಲ್ಲಿಸಿ ಹಿಂದಿರುಗುತ್ತಿದ್ದ ಮಮತಾ ಬ್ಯಾನರ್ಜಿ ಮೇಲೆ ಹಲ್ಲೆ!
.@BJP4Bengal Brace yourselves to see the power of people of BENGAL on Sunday, May 2nd.
Get READY!!! pic.twitter.com/dg6bw1TxiU
— Abhishek Banerjee (@abhishekaitc) March 10, 2021
ಇದಕ್ಕೆ ಪ್ರತಿಕ್ರಿಯಿಸಿರುವ ಬಂಗಾಳ ಬಿಜೆಪಿ, ’ಒಬ್ಬ ಪ್ರತ್ಯಕ್ಷದರ್ಶಿಯೂ ಮಮತಾ ಬ್ಯಾನರ್ಜಿಯ ‘ದಾಳಿ’ ಆರೋಪವನ್ನು ಧೃಡಿಕರಿಸಿದಂತೆ ಕಾಣುತ್ತಿಲ್ಲ. ನಂದಿಗ್ರಾಮದ ಜನರು, ಮಮತಾ ಬ್ಯಾನರ್ಜಿ ತಮ್ಮನ್ನು ದೂಷಿಸಿ ಅಪಖ್ಯಾತಿ ತಂದಿದ್ದಕ್ಕಾಗಿ ಅವರ ಮೇಲೆ ಅಸಮಾಧಾನ ಮತ್ತು ಕೋಪಗೊಂಡಿದ್ದಾರೆ” ಎಂದು ಬಂಗಾಳ ಬಿಜೆಪಿ ಟ್ವೀಟ್ ಮಾಡಿ, ಸ್ಥಳದಿಂದ ಸಾಕ್ಷಿಗಳೆಂದು ಕೆಲವರನ್ನು ಉಲ್ಲೇಖಿಸಿದೆ.
Not one eye witness seems to corroborate Mamata Banerjee’s ‘attack’ version. People of Nandigram are upset and angry at her for blaming them and bringing disrepute.
Clearly she is nervous about her prospects in Nandigram and has now lost confidence, if any, of the people too… pic.twitter.com/vBFFjbt1UF
— BJP Bengal (@BJP4Bengal) March 11, 2021
ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್, ’ಇದು ನಿಜವಾದ ಘಟನೆಯೋ ಅಥವಾ ಉತ್ತಮವಾಗಿ ಚಿತ್ರಕಥೆ ಮಾಡಿದ ನಾಟಕವೋ ಎಂದು ನೋಡಬೇಕಾಗಿದೆ. ರಾಜ್ಯದ ಜನರೂ ಇಂತಹ ನಾಟಕವನ್ನು ಮೊದಲೇ ನೋಡಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.
ಮಮತಾ ಬ್ಯಾನರ್ಜಿ ಮೇಲೆ ನಡೆದಿರುವ ದಾಳಿಯನ್ನು ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್, ಡಿಎಂಕೆ ನಾಯಕ ಸ್ಟಾಲಿನ್, ಜೆಡಿಯು ಮುಖಂಡ ತೇಜಸ್ವಿ ಯಾದವ್, ಜೆಡಿಎಸ್ ಮುಖಂಡ ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವರು ಖಂಡಿಸಿದ್ದಾರೆ.
ಇದನ್ನೂ ಓದಿ: ಮಾ. 26ಕ್ಕೆ ಸಂಪೂರ್ಣ ಭಾರತ್ ಬಂದ್ – ಹೋರಾಟನಿರತ ರೈತರ ಕರೆ


