ಮಂಗಳೂರಿನ ಬಿಜೈಯ ಸಲೂನ್‌ಗೆ ದಾಳಿ ಮಾಡಿ ಅಲ್ಲಿರುವ ಮಹಿಳೆಯರನ್ನು ನಿಂದಿಸಿದ ಪ್ರಕರಣದ ಆರೋಪಿ ರಾಮಸೇನಾ ಸ್ಥಾಪಕ ಪ್ರಸಾದ್ ಅತ್ತಾವರ ಎಂಬ ಪೊಲೀಸರು ಗುರುವಾರ ಬಂಧಿಸಿದ್ದಾರೆ. ನಗರ ಹೊರವಲಯದ ಕುಡುಪು ಬಳಿಯ ಮನೆಯಿಂದ ಪ್ರಸಾದ್ ಅತ್ತಾವರನನ್ನು ಬಂಧಿಸಲಾಗಿದೆ ಎಂದು ವಾರ್ತಾಭಾರತಿ ವರದಿ ಮಾಡಿದೆ. ಮಂಗಳೂರು ಸಲೂನ್ ದಾಳಿ ಪ್ರಕರಣ
ದುಷ್ಕರ್ಮಿ ಪ್ರಸಾದ್ ಅತ್ತವಾರ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವಾಗಲೇ ಸಿಸಿಬಿ ಪೊಲೀಸರು ಬಂಧಿಸಿದ್ದಾಗಿ ವರದಿಯಾಗಿದ್ದು, ತಮ್ಮ ಸಂಘಟನೆಯ ಕಾರ್ಯಕರ್ತರೇ ಸಲೂನ್‌ಗೆ ನುಗ್ಗಿರುವುದಾಗಿ ಪ್ರಸಾದ್ ಅತ್ತಾವರ ಒಪ್ಪಿಕೊಂಡಿರುವುದು ವರದಿಯಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪ್ರಸಾದ್ ಅತ್ತಾವರ ನೇತೃತ್ವದ ರಾಮಸೇನಾ ಸಂಘಟನೆಯ ದುಷ್ಕರ್ಮಿಗಳು ಬಿಜೈ ಕೆಎಸ್ಆರ್‌ಟಿಸಿ ಬಳಿಯ ಕಲರ್ಸ್ ಸಲೂನ್‌ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ ಎಂದು ಗುರುವಾರ ವರದಿಯಾಗಿತ್ತು. ಅಲ್ಲದೆ, ಸಲೂನ್‌ನ ಪುರುಷ ಸಿಬ್ಬಂದಿಗೆ ಹಲ್ಲೆ ನಡೆಸಿ, ಮಹಿಳಾ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ. ಈ ಕುರಿತ ವಿಡಿಯೋವೊಂದು ವೈರಲ್ ಆಗಿತ್ತು. ಮಂಗಳೂರು ಸಲೂನ್ ದಾಳಿ ಪ್ರಕರಣ
ವಿಡಿಯೋದಲ್ಲಿ ಐದಾರು ಮಂದಿ ಯುವಕರ ತಂಡ ಏಕಾಏಕಿ ಸಲೂನ್ ಒಳಗೆ ನುಗ್ಗಿ ಪೀಠೋಪಕರಣ, ಗಾಜು, ಕಂಪ್ಯೂಟರ್ ಸೆಟ್ ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ಪುಡಿಗೈದಿರುವುದು ಮತ್ತು ವೇಶ್ಯಾವಟಿಕೆ ನಡೆಸುತ್ತಿದ್ದೀರಾ ಎಂದು ಪ್ರಶ್ನಿಸಿ ಮಹಿಳೆಯರಿಗೆ ಆವಾಜ್ ಹಾಕಿರುವ ದೃಶ್ಯಗಳಿವೆ. ಈ ವೇಳೆ ಮಹಿಳೆಯರು ಕೈ ಮುಗಿದು ಹಲ್ಲೆ ಮಾಡಬೇಡಿ ಎಂದು ಬೇಡಿಕೊಂಡಿರುವುದನ್ನೂ ವಿಡಿಯೋದಲ್ಲಿ ದಾಖಲಾಗಿತ್ತು. ಅಲ್ಲದೆ, ದಾಂಧಲೆ ನಡೆಸಿದ ದುಷ್ಕರ್ಮಿಗಳು ಕಾಂಡೋಮ್ ಪ್ಯಾಕೆಟ್‌ಗಳನ್ನ ತೋರಿಸಿ, ಅದರೆ ಬಗ್ಗೆ ಪ್ರಶ್ನಿಸುವ ದೃಶ್ಯವಿದೆ. ಈ ವೇಳೆ ಸಲೂನ್‌ನ ಮಹಿಳಾ ಸಿಬ್ಬಂದಿ “ಅದು ಯಾರು ಇಟ್ಟಿದ್ದು?” ಎಂದು ಮರು ಪ್ರಶ್ನಿಸುವುದು ಕೇಳಿಸುತ್ತದೆ.
ಘಟನೆ ಬಗ್ಗೆ ಉಡುಪಿಯಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ ಪರಮೇಶ್ವರ್, ಸಲೂನ್‌ಗೆ ನುಗ್ಗಿ ದಾಂಧಲೆ ನಡೆಸಿದವರನ್ನು ತಕ್ಷಣ ಬಂಧಿಸಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. “ಯಾವ ಉದ್ದೇಶಕ್ಕೆ ಸಲೂನ್ ಮೇಲೆ ದಾಳಿಯಾಗಿದೆ ಎಂಬುವುದು ಗೊತ್ತಿಲ್ಲ. ಇಂತಹ ಕೃತ್ಯಗಳು ನಡೆಯಬಾರದು. ಯಾರಿಗೂ ವ್ಯಾಪಾರ ಮಾಡಿಕೊಳ್ಳುವುದ್ದಕ್ಕೆ ಅಡ್ಡಿಪಡಿಸಬಾರದು. ಪ್ರತಿಯೊಬ್ಬರಿಗೂ ಕೆಲಸ ಮಾಡಿಕೊಳ್ಳುವ ಹಕ್ಕಿದೆ. ಯಾರು ಕೂಡ ಕಾನೂನು ಕೈಗೆ ಎತ್ತಿಕೊಳ್ಳಬಾರದು” ಎಂದು ಹೇಳಿದ್ದಾರೆ.
ಇದನ್ನೂಓದಿ: ಲಕ್ನೋದ ಐತಿಹಾಸಿಕ ಇಮಾಂಬರಾಗಳು ವಕ್ಫ್ ಭೂಮಿಯಲ್ಲಿ ನಿರ್ಮಿಸಲಾಗಿಲ್ಲ: ಉತ್ತರಪ್ರದೇಶ ಸರ್ಕಾರ
ಲಕ್ನೋದ ಐತಿಹಾಸಿಕ ಇಮಾಂಬರಾಗಳು ವಕ್ಫ್ ಭೂಮಿಯಲ್ಲಿ ನಿರ್ಮಿಸಲಾಗಿಲ್ಲ: ಉತ್ತರಪ್ರದೇಶ ಸರ್ಕಾರ


