Homeಕರ್ನಾಟಕಸಂವಿಧಾನ V/s ಮನುವಾದದ ನಡುವಿನ ಸಂಘರ್ಷದ ತಾರ್ಕಿಕ ಹಂತಕ್ಕೆ ಬಂದು ನಿಂತಿದ್ದೇವೆ: ಮಾವಳ್ಳಿ ಶಂಕರ್

ಸಂವಿಧಾನ V/s ಮನುವಾದದ ನಡುವಿನ ಸಂಘರ್ಷದ ತಾರ್ಕಿಕ ಹಂತಕ್ಕೆ ಬಂದು ನಿಂತಿದ್ದೇವೆ: ಮಾವಳ್ಳಿ ಶಂಕರ್

- Advertisement -
- Advertisement -

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್ ಅವರನ್ನು ಅವಮಾನಿಸಿದ ಆರೋಪ ಹೊತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು, ಅವರು ಬಾಬಾ ಸಾಹೇಬರ ಪ್ರತಿಮೆ ಮುಂದೆ ಮಂಡಿಯೂರಿ ಕ್ಷಮೆಯಾಚಿಸಬೇಕು ಎಂಬುದು ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಮುಂದಿಟ್ಟುಕೊಂಡು ದಲಿತ ಸಂಘರ್ಷ ಸಮಿತಿ ಒಕ್ಕೂಟ ನಡೆಸಿದ ಬೃಹತ್ ಪ್ರತಿಭಟನಾ ರ್‍ಯಾಲಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯಿತು.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್, “ಸಂವಿಧಾನ ಮತ್ತು ಮನುವಾದದ ನಡುವಿನ ಸಂಘರ್ಷದ ತಾರ್ಕಿಕ ಹಂತಕ್ಕೆ ಬಂದು ನಿಂತಿದ್ದೇವೆ” ಎಂದರು.

“ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಅಮಿತ್ ಶಾ ಅವರ ಹೇಳಿಕೆ ವಿರೋಧಿಸಿ ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವಷ್ಟು ಬಂದ್ ಮತ್ತು ಪ್ರತಿಭಟನೆಗಳು ಬಹುಷಃ ಹಿಂದೆದೂ ನಡೆದಿಲ್ಲ; ಇದು ದಲಿತ ಚಳವಳಿಯ ತಾಕತ್ತು. ವಿವಿಧ ಜಿಲ್ಲೆಗಳಲ್ಲಿ ಜನರು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದ್ದಾರೆ. ಅವು ಯಶಸ್ವಿಯಾಗಲೇಬೇಕು ಎನ್ನುವ ಕಾರಣಕ್ಕೆ ಹಲವು ಸಮುದಾಯಗಳು ಶ್ರಮಿಸಿವೆ. ಆದ್ದರಿಂದ, ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬೇಕಾಯಿತು” ಎಂದರು.

“ಬೇರೆಬೇರೆ ಜಿಲ್ಲೆಗಳಿಂದ ಜನರು ಬಸ್ಸು, ರೈಲು ಮತ್ತು ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಿಕೊಂಡು ಬಂದಿದ್ದಾರೆ. ರಾಜ್ಯದ ವಿವಿಧ ಗ್ರಾಮ, ಕುಗ್ರಾಮ ಮತ್ತು ಹಾಡಿಗಳಿಂದ ಕಾರ್ಯಕರ್ತರು ಇಲ್ಲಿಗೆ ಬಂದಿದ್ದಾರೆ. ನೀವು ಬಂದಿರುವ ಉದ್ದೇಶ ಈಡೇರಬೇಕಾದರೆ, ನಾವೇನು ಮಾಡಬೇಕು ಎಂಬ ಸ್ಪಷ್ಟತೆ ಇರಬೇಕು. ರಾಜಕೀಯ ಪಕ್ಷಗಳು ಬಸ್‌ಗಳಲ್ಲಿ ಜನರನ್ನು ತುಂಬಿಕೊಂಡು ಬಂದು ಮೈದಾನಗಳಲ್ಲಿ ಬಿಟ್ಟು, ಬಿರಿಯಾನಿ ಹಾಗೂ ಐದು ನೂರು ರೂಪಾಯಿ ಕೈಗೆ ಕೊಟ್ಟರೆ ಅದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಬಾಬಾ ಸಾಹೇಬರ ಹೋರಾಟದ ರಕ್ತ ಮತ್ತು ಬೆವರಿನ ಪ್ರತಿಫಲ ಉಣ್ಣುತ್ತಿರುವ ಪ್ರತಿಯೊಂದು ಸಮುದಾಯ ಕೂಡ ಈ ವಿಚಾರವನ್ನು ಉಗ್ರವಾಗಿ ಖಂಡಿಸಬೇಕಾಗಿತ್ತು. ಆದರೆ, ಇವತ್ತು ದಲಿತ ಸಮುದಾಯ ಒಡಕಿನತ್ತ ಹೋಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.

ಚಿಂತಕ ಶಿವಸುಂದರ್ ಅವರ ‘ಸಂವಿಧಾನ v/s ಸಂಘಿಗಳ ಸುಳ್ಳು ಅಭಿಯಾನ’ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

“ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ಸೇವಾಲಾಲ್ ಸ್ವಾಮೀಜಿ ಇಂದು ಎಲ್ಲಿದ್ದಾರೆ. ಇವರೆಲ್ಲಾ ಬಾಬಾ ಸಾಹೇಬರ ಋಣ ಉಂಡವರಲ್ಲವೇ? ದಲಿತ ರಾಜಕಾರಣಿಗಳ ಬಾಯಿಗೆ ಏನಾಗಿದೆ..? ಇವರ ಬಾಯಿಗೆ ಯಾರಾದರೂ ಬೀಗ ಹಾಕಿದ್ದಾರೆಯೇ? ಬಾಬಾ ಸಾಹೇಬರಿಗೆ ಅವಮಾನ ಆದಾಗ ಪ್ರತಿಭಟಿಸಲಾರದವರಿಗೆ ಮಂತ್ರಿಗಿರಿ ಮತ್ತು ರಾಜಕೀಯ ಅಧಿಕಾರ ಯಾಕೆ ಬೇಕು, ಇವರೆಲ್ಲಾ ಅವಕಾಶ ಸಿಗದೇ ಇದ್ದಾಗ ಅಳುತ್ತಾರೆ. ಯಾವ ಸಮಾಜಕ್ಕೆ ಹುಕುಂದಾರಿಕೆ ಬರುವುದಿಲ್ಲವೋ.. ಆ ಸಮಾಜ ನರಸತ್ತ ಸಮಾಜ ಆಗಿರುತ್ತದೆ, ಅದರ ರಾಜಕಾರಣಿಗಳು ನರಸತ್ತವರಾಗಿರುತ್ತಾರೆ” ಎಂದು ಆಕ್ರೋಶ ಹೊರಹಾಕಿದರು.

“ನಾವು ಒಟ್ಟಿಗೆ ಸೇರುತ್ತೇವೆ.. ಮಾತನಾಡುತ್ತೇವೆ ಎಂದಾಗ ರಾಜಕೀಯ ಪಕ್ಷಗಳು ಹಾಗೆ ಮಾಡಬೇಡಿ ಎನ್ನುತ್ತಾರೆ. ನಾವು ಮಾತನಾಡಿದರೆ ನಿಮಗೇನು ಸಮಸ್ಯೆ? ನಮಗೆ ನಾವೇ ಹೈಕಮಾಂಡ್, ಸಂವಿಧಾನ ನಮ್ಮ ಹೈಕಮಾಂಡ್” ಎಂದರು.

“ನಮ್ಮ ವಿದ್ಯಾರ್ಥಿಗಳು ಹಾಗೂ ಯುವಜನರು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಸಂವಿಧಾನ ಮತ್ತು ಮನುವಾದದ ನಡುವಿನ ತಾರ್ಕಿಕ ಸಂಘರ್ಷಕ್ಕೆ ಬಂದು ನಿಂತಿದ್ದೇವೆ. ಮನುಸ್ಮೃತಿ ಸಾವಿರಾರು ವರ್ಷಗಳಿಂದ ಈ ದೇಶದ ದುಡಿಯುವ ಜನರನ್ನು ಹಾಗೂ ಶೂದ್ರಾತಿ ಶೂದ್ರರನ್ನು ಕಾಲಡಿಯಲ್ಲಿ ಹಾಕಿ ತುಳಿಯುತ್ತಿತ್ತು. ಅಂತ ಮನುಸ್ಮೃತಿಯ ಕಾಲನ್ನು ಮುರಿದಿದ್ದು ಬಾಬಾ ಸಾಹೇಬರ ಸಂವಿಧಾನ; ಅಂತ ಸಂವಿಧಾನದ ಮೂಲ ಆಶಯಕ್ಕೆ ಇಂದು ದಕ್ಕೆಯಾಗುತ್ತಿದೆ. ನಮ್ಮನ್ನೂ ಗೌರವಿಸುವ ಸಂವಿಧಾನ ಜಾರಿಗೆ ಬರಲಿ ಎಂದು ಉಡುಪಿ ಸ್ವಾಮಿ ಹೇಳುತ್ತಾರೆ.. ಉಡುಪಿ ಸ್ವಾಮಿಯನ್ನು ಗೌರವಿಸುವ ಸಂವಿಧಾನ ಯಾವುದು.. ಮನುಸ್ಮೃತಿನಾ” ಎಂದು ಪ್ರಶ್ನಿಸಿದರು.

“ಅಂಬೇಡ್ಕರ್ ಕುಲಸ್ತರು ಹಾಗೂ ಅಂಬೇಡ್ಕರ್ ವಿಚಾರಧಾರೆ ಎಂದರೆ ಜೇನುಗೂಡು ಇದ್ದಂತೆ, ಅಂತಹ ಜೇನುಗೂಡಿಗೆ ಕೈ ಹಾಕಿದರೆ ನಿಮ್ಮನ್ನು ಸರ್ವನಾಶ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಜೇನು ಸಿಹಿಯಾಗಿದ್ದರೂ ಅದರ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ. ನಮ್ಮ ಪೂರ್ವಿಕರು ನಮಗೆ ಅಹಿಂಸೆ ಬೋಧಿಸಿದ್ದಾರೆ. ಬುದ್ಧ, ಬಸವಣ್ಣ, ಫುಲೆ ದಂಪತಿಗಳು, ನಾಲ್ವಡಿ ಕೃಷ್ಣರಾಜ ಒಡೆಯರು ನಮಗೆ ಶಾಂತಿಮಂತ್ರ ಬೋಧಿಸಿದ್ದಾರೆ. ಆ ಶಾಂತಿಮಂತ್ರದಿಂದ ದೇಶವನ್ನು ಮುನ್ನಡೆಸುತ್ತಿದ್ದೇವೆ. ನಾವು ಅಹಿಂಸಾ ಮಾರ್ಗ ಹಿಡಿದಿದ್ದರೆ ನೀವು ಏನಾಗುತ್ತಿದ್ರಿ ಎಂಬುದನ್ನು ಕಲ್ಪನೆ ಮಾಡಿಕೊಳ್ಳಿ. ಆದ್ದರಿಂದ, ತುಂಬಾ ಎಚ್ಚರಿಕೆಯಿಂದ ನೀವು ಮಾತನಾಡಬೇಕು. ಈ ದೇಶ ಇಂದು ಸೌಖ್ಯವಾಗಿದ್ದರೆ ಅದಕ್ಕೆ ಕಾರಣ ಅಸ್ಪೃಶ್ಯ ಸಮುದಾಯಗಳು ಎಂಬುದನ್ನು ನೀವು ಮರೆಯಬಾರದು” ಎಂದು ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದರು.

“ಒಂದು ಕಡೆ ಗಾಂಧಿ ಕೊಂದವರನ್ನು ಆರಾಧಿಸುತ್ತಾರೆ; ಮತ್ತೊಂದು ಕಡೆ ಗಾಂಧಿಯನ್ನು ಪೂಜಿಸುತ್ತಾರೆ. ಇಂತ ಅವಿವೇಕಿಗಳ ಬಗ್ಗೆ ನಾವು ಎಚ್ಚರದಿಂದ ಇರಬೇಕು. ಇಂತವಗೆ ದಲಿತ ಸಮುದಾದಲ್ಲಿ ಗುಲಾಮರು ಹುಟ್ಟಿಕೊಳ್ಳುತ್ತಿದ್ದಾರೆ; ಆ ಗುಲಾಮರ ಬಗ್ಗೆ ಸಮುದಾಯ ಎಚ್ಚರವಾಗಿರಬೇಕು” ಎಂದು ಕಿವಿಮಾತು ಹೇಳಿದರು.

ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ನಾವು ಕಾರಣ

“ಸರ್ಕಾರ ಕೂಡ ನಮ್ಮ ಬಗ್ಗೆ, ನಮ್ಮ ಬದುಕು ಮತ್ತು ಅಭಿವೃದ್ಧಿಯ ಬಗ್ಗೆ ಯೋಚಿಸಬೇಕು. ಕೇವಲ ಭರವಸೆ ನೀಡಬಾರದು. ರಾಜ್ಯದಲ್ಲಿ ಜಾತ್ಯತೀತ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೆ ಮೂಲ ಕಾರಣ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಮಗೂ ಅಧಿಕಾರದಲ್ಲಿ ಪಾಲು ಕೊಡಬೇಕು; ಪಾಲು ಕೊಟ್ಟರೆ ಮಾತ್ರ ದಲಿತ ಸಮುದಾಯ ನಿಮ್ಮನ್ನು ಸಹಿಸಿಕೊಳ್ಳುತ್ತದೆ.. ಕೇವಲ ಓಟ್ ಹಾಕುವುದಕ್ಕೆ ಮಾತ್ರ ನಾವು ಸೀಮಿತವಾಗಿಲ್ಲ” ಎಂದು ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

“ಅಂಬೇಡ್ಕರ್ ಭಾರತ ರತ್ನ ಅಲ್ಲ.. ಅವರು ವಿಶ್ವ ರತ್ನವಾಗಿ ಜಗತ್ತಿನಲ್ಲಿ ರಾರಾಜಿಸುತ್ತಿದೆ. ನಾವು ಅವರ ಕುಡಿಗಳಾಗಿ ಸರಿಯಾದ ರೀತಿಯಲ್ಲಿ ಬಾಬಾ ಸಾಹೇಬರ ಚಿಂತನೆ ಮುಂದುವರಿಸಬೇಕು” ಎಂದರು.

ದಸಂಸ ರಾಜ್ಯ ಪ್ರಧಾನ ಸಂಚಾಲಕರಾದ ಗುರುಪ್ರಸಾದ್ ಕೆರಗೋಡು ಅಧ್ಯಕ್ಷತೆ ವಹಿಸಿದ್ದರು, ಹಿರಿಯ ಪತ್ರಕರ್ತ ಹಾಗೂ ಹೋರಾಟಗಾರ ಇಂದೂಧರ ಹೊನ್ನಾಪುರ, ದಸಂಸ ರಾಜ್ಯ ಸಂಯೋಜಕರಾದ ವಿ.ನಾಗರಾಜ್, ಇಂದಿರಾ ಕೃಷ್ಣಪ್ಪ ಸೇರಿದಂತೆ ಹಲವಾರು ದಸಂಸ ಮುಖಂಡರು ಇದ್ದರು.

ಇದನ್ನೂ ಓದಿ; ದಲಿತ ಚಳವಳಿಯ ಪ್ರಮುಖ ಹೋರಾಟಗಾರ ಕೆ.ಎಂ. ಕೊಮ್ಮಣ್ಣ ನಿಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸತೀಶ್‌ ಜಾರಕಿಹೊಳಿ ಮೇಲಿನ ಇಡಿ ದಾಳಿಯನ್ನು ‘ಚಾರಿತ್ರ್ಯ ಹರಣ’ ಎಂದ ವಿಜಯ್ ಮಲ್ಯ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಸಾರ್ವಜನಿಕವಾಗಿ ಚಾರಿತ್ರ್ಯ...

ಒಗ್ಗಟ್ಟಿನ ಮಾತುಗಳಷ್ಟೇ ಸಾಲದು, ಕೃತಿಯಲ್ಲಿರಲಿ ದಿಟ್ಟತನ : ಬ್ರಿಕ್ಸ್ ವಿಚಾರದಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಚಾಟಿ

ಜಾಗತಿಕ ಮಟ್ಟದಲ್ಲಿ ಬ್ರಿಕ್ಸ್ (BRICS) ಒಕ್ಕೂಟದ ಪ್ರಭಾವ ಹೆಚ್ಚುತ್ತಿರುವುದನ್ನು ಸ್ವಾಗತಿಸಿರುವ ಕಾಂಗ್ರೆಸ್, ಈ ಒಕ್ಕೂಟದ ಅಧ್ಯಕ್ಷತೆಯನ್ನು ವಹಿಸಿರುವ ಭಾರತವು ‘ಗ್ಲೋಬಲ್ ಸೌತ್’ (Global South) ರಾಷ್ಟ್ರಗಳ ನಡುವೆ ತನ್ನ ರಾಜತಾಂತ್ರಿಕ ಸ್ಥಾನಮಾನವನ್ನು ಮರುಸ್ಥಾಪಿಸಲು...

9/11 ರ ಹಿಂದಿನ ದಾಳಿಯನ್ನು ಇರಾನ್ ಜೊತೆಗಿನ ಇಂದಿನ ಯುದ್ಧಕ್ಕೆ ಜೋಡಿಸಿದ ಡೊನಾಲ್ಡ್‌ ಟ್ರಂಪ್

"ಸೆಪ್ಟೆಂಬರ್ 11, 2001 ರ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ಎಂದಿಗೂ ಮರೆಯುವುದಿಲ್ಲ. 25 ವರ್ಷಗಳ ನಂತರವೂ ಇರಾನ್ ಮೇಲೆ ದಾಳಿ ಮಾಡುವ ಮೂಲಕ ದೇಶವು ಭಯೋತ್ಪಾದನೆ ವಿರುದ್ಧದ ಯುದ್ಧವನ್ನು ಮುಂದುವರೆಸಿದೆ" ಎಂದು ಅಧ್ಯಕ್ಷ...

SIR ನೋಟಿಸ್ ಮತ್ತು ವಿಚಾರಣೆಯಲ್ಲಿ ಅಕ್ರಮ : ಚು. ಆಯೋಗದ ವಿರುದ್ಧ ನಾಗರಿಕ ಸಂಘಟನೆಗಳಿಂದ 2ನೇ ಎಫ್‌ಐಆರ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ, ಆಗಸ್ಟ್ 24ರಂದು ರಾಜ್ಯ ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಕರಡು ಮತದಾರರ ಪಟ್ಟಿಯನ್ನು ತಿರಸ್ಕರಿಸಿ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಎಫ್‌ಐಆರ್ ಬಿಡುಗಡೆ...

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...