Homeಕರ್ನಾಟಕಮಂಗಳೂರು ಪ್ರತಿಭಟನೆ ಕನ್ನಡ ನ್ಯೂಸ್ ಚಾನೆಲ್‍ಗಳ ಪಕ್ಷಪಾತದ ಧೋರಣೆ

ಮಂಗಳೂರು ಪ್ರತಿಭಟನೆ ಕನ್ನಡ ನ್ಯೂಸ್ ಚಾನೆಲ್‍ಗಳ ಪಕ್ಷಪಾತದ ಧೋರಣೆ

- Advertisement -
- Advertisement -

ಒಂದು ಪತ್ರ

‘ಪೌರತ್ವ’ ಕಾಯ್ದೆಯನ್ನು ವಿರೋಧಿಸಿ ಇತ್ತೀಚೆಗೆ ಮಂಗಳೂರಲ್ಲಿ ನಡೆದ ಪ್ರತಿಭಟನೆಯ ವೇಳೆ ಪೊಲೀಸರು ನಡೆಸಿದ ಗೋಲಿಬಾರ್‍ನಿಂದ ಇಬ್ಬರು ಮೃತಪಟ್ಟು ಅನೇಕರು ಗಾಯಗೊಂಡಿರುವ ಸುದ್ದಿಯ ಗಂಭೀರತೆಯನ್ನು ತಗ್ಗಿಸಲು ಕೆಲವೂಂದು ಟಿ.ವಿ. ವಾಹಿನಿಗಳು ಪ್ರಯತ್ನಿಸುತ್ತಿದೆ. ಉತ್ತರಪ್ರದೇಶದಲ್ಲಿ ಸಂಘಪರಿವಾರದ ಜನರು ಹಾಡುಹಗಲೇ ಪೊಲೀಸರನ್ನು ಅಟ್ಟಾಡಿಸಿಕೊಂಡು ಕೊಂದ ಹಾಗೂ ಅವರ ಜೀಪಿನಲ್ಲಿಯೇ ಹತ್ಯೆಮಾಡಿದಾಗ ಜಾಗ್ರತಗೊಳ್ಳದ ಪೊಲೀಸ್‍ಪ್ರೇಮ ಈಗ ಯಡಿಯೂರಪ್ಪರವರ ನೆಚ್ಚಿನ ಪದದಲ್ಲಿ ಹೇಳುವುದಾದರೆ ನೂರಕ್ಕೆ ನೂರು ಜಾಗೃತವಾಗಿದೆ. ಅದಿರಲಿ.

ಪ್ರತಿಭಟನೆಯ ದೃಶ್ಯಾವಳಿಯ ತುಣುಕುಗಳನ್ನು ಪೋಣಿಸಿ ಪ್ರತಿಭಟನಾಕಾರರನ್ನೇ ಅಪರಾಧಿಗಳು ಎಂಬಂತೆ ಬಿಂಬಿಸುತ್ತಿರುವ ಹಿನ್ನೆಲೆಯಲ್ಲಿರುವ ಕನ್ನಡದ ಕೆಲವು ವಾಹಿನಿಗಳ ಮನೋಸ್ಥಿತಿ ಇಲ್ಲಿಯ ಮುಸ್ಲಿಮರಿಗೆ ಅಜ್ಞಾತವಲ್ಲ.

ಪಬ್ಲಿಕ್ ಟಿ.ವಿ. ಎಂಬ ಒಂದು ವಾಹಿನಿ ಪೊಲೀಸರ ಮೇಲಿನ ದಾಳಿಯನ್ನು ಪ್ರಸಾರಗೂಳಿಸಿದ ದೃಶ್ಯಾವಳಿಗಳ ಕುರಿತು ನಡೆಸಿದ ಪ್ಯಾನಲ್ ಚರ್ಚೆಯಲ್ಲಿ ಆ್ಯಂಕರ್‍ನೊಬ್ಬ ಪ್ರತಿಭಟನೆಗಾರರ ಪರವಾಗಿ ಭಾಗವಹಿಸಿದ ಅಶ್ರಫ್ ಎಂಬವರಿಗೆ ಎನ್.ಆರ್.ಸಿ, ಸಿ.ಎ.ಎ. ಎಂದರೇನೆಂದು ಎಂಬ ಪ್ರಶ್ನೆಯನ್ನು ಕೀ ಕೊಟ್ಟ ಗೊಂಬೆಯಂತೆ ಪುನರಾವರ್ತಿಸಿ ಅತನ ಚಾನಲ್ ಪ್ರಸಾರಗೊಳಿಸಿದ ದೃಶ್ಯಾವಳಿಯ ಸಾಚಾತನವನ್ನು ಪ್ರಶ್ನಿಸಲು ಅವಕಾಶವನ್ನೇ ಕೊಡಲಿಲ್ಲ. ಚರ್ಚೆಯ ನಡುವೆ ಅದರ ತುಣುಕುಗಳನ್ನು ಪ್ರಸಾರಗೊಳಿಸುತ್ತಲೂ ಇದ್ದರು. ಆದರೆ ಕ್ಯಾಪ್ಟನನ ಚಾನೆಲ್ ನೈಜಸಂಗತಿ ಹೊರಬಾರದಂತೆ ಪೌರತ್ವದ ಬೇಲಿ ಹಾಕಿತು. ಚಾಣಕ್ಯರಾದ ಅಶ್ರಫ್ ಬಾರಿಬಾರಿಗೂ ಚರ್ಚೆಯ ದಿಕ್ಕು ತಪ್ಪಿಸಬೇಡಿ ಎಂದು ವಿನಂತಿಸಿದರೂ ಪ್ರಯೋಜನವಾಗಲಿಲ್ಲ. ಪೊಲೀಸರ ಮೇಲಿನ ದಾಳಿಯನ್ನು ಪ್ರಸಾರಗೊಳಿಸಿದಂತೆ ಅವರು ನಡೆಸಿದ ದೌರ್ಜನ್ಯದ ದೃಶ್ಯಾವಳಿಗಳು ಲೋಕವನ್ನೆಲ್ಲ ಜಾಲಾಡುವ ಈ ಚಾನಲ್‍ಗೆ ಲಭ್ಯವಾಗದೆ ಹೋಯಿತೇ? ಸಂಘರ್ಷಪೀಡಿತ ಸಿರಿಯಾದ ಪಟ್ಟಣವಾದ ‘ಇದ್ಲಿಬ್’ಅನ್ನು ‘ಇದ್ರಿಸ್’ ಎಂದು ಉಚ್ಚರಿಸುವ ವಾಹಿನಿಯ ಕ್ಯಾಪ್ಟನ್ (ಹೀಗೆಂದು ಅಕ್ಕರೆಯಿಂದ ಕರೆಯುತ್ತಿದ್ದ ಒಬ್ಬ ಆ್ಯಂಕರ್ ಈಗ ಬೇರೊಂದು ಚಾನೆಲ್‍ನಲ್ಲಿದ್ದಾರೆ) ಮುಸ್ಲಿಮರ ಪರವಾಗಿ ಪ್ರಕಟಿಸದಿರಲು (ಎಲ್ಲಾ ಚಾನೆಲ್‍ಗಳು ಹಾಗೆ ಪ್ರಸಾರಗೊಳಿಸಿದ ನಂತರ) ಅಸಾಧ್ಯವಾದಾಗ ಒಂದು ಔದಾರ್ಯವೆಂಬಂತೆ ಪ್ರಸಾರಗೊಳಿಸುತ್ತಿರುವುದನ್ನು ಮುಸ್ಲಿಮರು ಬಲ್ಲರು. ಆತನ ಹಾವಭಾವ, ಮಾತಿನ ಶೈಲಿ, ಸ್ವರಗಳ ಏರಿಳಿತದಿಂದ ಇದನ್ನು ಗಮನಿಸಬಹುದಾಗಿದೆ. ಬಾರಿಬಾರಿಗೂ ತನ್ನನ್ನು ಚೆಡ್ದಿ ಎಂದು ಕರೆಯುತ್ತಾರೆಂದು ಅವಲತ್ತುಕೊಳ್ಳುವ ಅಥವಾ ಸಂತೋಷಪಡುವ ಕ್ಯಾಪ್ಟನ್ ಈಗ ಪ್ಯಾಂಟ್ ಬಂದಿರುವುದರಿಂದ ಚೆಡ್ಡಿ ಕಾಲಹರಣಗೊಂಡಿದೆಯೆಂದು ನೆನಪಿಸಿ ಕೊಡುವುದನ್ನು ಮರೆಯುವುದಿಲ್ಲ.

ಕೆಲವು ಚಾನೆಲ್‍ಗಳು ಮುಸ್ಲಿಮರ ಸಮಸ್ಯೆಗಳ ಕುರಿತು ಚರ್ಚೆ ನಡೆಸುವಾಗ ಒಂದಿಬ್ಬರು ಕಾಯಂ ಗಿರಾಕಿಗಳನ್ನು ಪ್ಯಾನೆಲ್‍ನಲ್ಲಿ ಕೂರಿಸಿ ಪೂರ್ವ ನಿರ್ಧರಿತವಾದಂತೆ ಸೋಲಿಸಿ ಹಿಂದೆ ಕಳುಹಿಸಿಬಿಡುತ್ತವೆ. ಜಿಲ್ಲೆಯ ವಿದ್ಯಾವಂತ, ಬುದ್ಧಿವಂತ ಮುಸ್ಲಿಮ್ ಪ್ರತಿಭೆಗಳನ್ನು ಪ್ಯಾನಲ್ ಚರ್ಚೆಗೆ ಕೂರಿಸುವ ಧೈರ್ಯ ತೆಗೆದುಕೊಳ್ಳುವುದಿಲ್ಲ. ಏಕೆಂದರೆ, ಮುಸ್ಲಿಮರ ನೈಜ ಸಮಸ್ಯೆಗಳು ಹೊರಬರುವುದು ಅವರಿಗೆ ಬೇಕಿಲ್ಲ.
ಪೌರತ್ವ ಕಾಯ್ದೆಯ ಪ್ರಕಾರ ಪಾಕಿಸ್ತಾನ, ಬಾಂಗ್ಲಾದೇಶ, ಅಫಘಾನಿಸ್ತಾನದಿಂದ ಬರುವ ಮುಸ್ಲಿಮೇತರ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ಲಭಿಸುತ್ತದೆ. ಅಕ್ರಮ ವಲಸಿಗನಾದ ಓರ್ವ ಮುಸ್ಲಿಮ್ ಹಿಂದೂಧರ್ಮಕ್ಕೆ ಮತಾಂತರವಾದರೆ ಅವನಿಗೆ ಪೌರತ್ವ ಲಭಿಸುತ್ತದೆಯೇ? ಹಾಗೆಯೇ ಓರ್ವ ಹಿಂದೂ ಇಸ್ಲಾಮಿಗೆ ಮತಾಂತರವಾದರೆ ಅವನ ಪೌರತ್ವ ರದ್ದಾಗುತ್ತದೆಯೇ? ಒಟ್ಟಾರೆಯಗಿ ಧರ್ಮಾಧಾರಿತ ಪೌರತ್ವ ಸಂವಿಧಾನದ ಮೂಲಭೂತ ಸ್ವರೂಪಕ್ಕೆ ವಿರುದ್ಧವಾಗಿದೆ.

ಕನ್ನಡದ ಚಾನೆಲ್‍ಗಳು ದಿನಬೆಳಗಾದರೆ ಪ್ರಸಾರಗೊಳಿಸುತ್ತಿರುವ ಜ್ಯೋತಿಷ್ಯ, ಫಲ ಜ್ಯೋತಿಷ್ಯ, ವಾಸ್ತು, ಹೀಗೂ ಉಂಟೇ? ಮುಂತಾದ ಕಾರ್ಯಕ್ರಮದ ಪ್ರಕಾರ ಈ ಲೋಕ ಅದೆಷ್ಟೋ ಸಲ ನಿರ್ನಾಮವಾಗಬೇಕಿತ್ತು| ಕರಾವಳಿಯಂತೂ ನೂರಾರುಬಾರಿ ಸುನಾಮಿಗೆ ಕೊಚ್ಚಿಹೋಗಬೇಕಿತ್ತು| ಮಲೆಯಾಳಂ ಚಾನೆಲ್‍ಗಳು ಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಮೂಡಿಸಲು ಪ್ರಯತ್ನಿಸುವಾಗ ನಮ್ಮ ಕೆಲವು ಚಾನೆಲ್‍ಗಳು ಜನರನ್ನು ಮೂಢನಂಬಿಕೆ, ಕಂದಾಚಾರಗಳ ಕೂಪಕ್ಕೆ ತಳ್ಳುತ್ತಿದೆ. ನಮ್ಮ ಚಾನೆಲ್‍ಗಳು ಹತ್ತಿಪ್ಪತ್ತು ಮಂದಿಯನ್ನು ಗುಡ್ಡೆ ಹಾಕಿಕೊಂಡು ಚಾನೆಲನ್ನು ಮೀನು ಮಾರುಕಟ್ಟೆಯಾಗಿ ಮಾರ್ಪಡಿಸಿರುವ ಸುಳ್ಳಿನ ಸರದಾರ ಅರ್ನಾಬ್ ಗೋಸ್ವಾಮಿಯನ್ನು ಅನುಸರಿಸುವ ಬದಲು ಎನ್.ಡಿ.ಟಿ.ವಿ.ಯ ರವೀಶ್‍ಕುಮಾರ್ ಹಾಗೂ ಇಂಡಿಯಾ ಟುಡೆಯ ರಾಜ್‍ದೀಪ್ ಸರ್ದೇಸಾಯಿ ಅವರನ್ನು ಅನುಸರಿಸಲಿ. ಬಿ.ಬಿ.ಸಿ, ಸಿ.ಎನ್.ಎನ್, ಅಲ್ ಜಝೀರ ಪ್ರಸಾರಗೊಳಿಸುವ ಅಂತರ್ ರಾಷ್ಟ್ರೀಯ ಸುದ್ದಿಗಳನ್ನು ಮರುಪ್ರಸಾರಗೊಳಿಸಿ (ಮೌಢ್ಯ ಬಿತ್ತರಿಸುವ ಬದಲಿಗೆ) ತಮ್ಮ ಚಾನೆಲ್‍ಗಳ ಗುಣಮಟ್ಟವನ್ನು ಹೆಚ್ಚಿಸಲು ಪ್ರಯತ್ನಿಸಲಿ. ರಿಮೋಟ್ ಜನರ ಕೈಯಲ್ಲಿಯೇ ಇರುವುದರಿಂದ ಜನರು ತಾವು ಹೇಳಿದ್ದನ್ನೇ ಪರಮಸತ್ಯವೆಂದು ನಂಬುತ್ತಾರೆ ಎಂಬ ಭ್ರಮೆ ಯಾರಿಗೂ ಬೇಡ.

ಜಿಲ್ಲೆಯಮಟ್ಟಿಗೆ ಹೇಳುವುದಾದರೆ ಬೆಳಗ್ಗಿನ ಪತ್ರಿಕೆಗಳಿಗಿಂತ ಸಂಜೆ ಪತ್ರಿಕೆಗಳೇ ಹೆಚ್ಚು ಜಾತ್ಯತೀತವಾದಿಯಾಗಿವೆ. ಅವುಗಳ ಸಂಘಪರಿವಾರಕ್ಕೆ ನೀಡಿದಷ್ಟೇ ಪ್ರಾಮುಖ್ಯತೆಯನ್ನು ಇತರರಿಗೂ ನೀಡುವ ಮೂಲಕ ತಕ್ಕಡಿಯ ಮುಳ್ಳನ್ನು ನೇರವಾಗಿರಿಸಲು ಪ್ರಯತ್ನಿಸುತ್ತಿದೆ. ರಾಜ್ಯಮಟ್ಟದಲ್ಲಿ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಜಾವಾಣಿ, ವಾರ್ತಾಭಾರತಿ, ನ್ಯಾಯಪಥದಂತಹ ಪತ್ರಿಕೆಗಳಿರುವಂತೆ ಒಂದು ಚಾನಲ್‍ನ ಅಗತ್ಯವಿದೆ. ಜಾತ್ಯತೀತ ಪ್ರೇಮಿಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವರೆಂದು ಆಶಿಸಲೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...