Homeಮುಖಪುಟಇನ್ನೂ ಸುಡುತ್ತಿರುವ ಮಣಿಪುರ; ಸಣ್ಣಸಣ್ಣ ಸಮುದಾಯಗಳ ಬಗ್ಗೆ ಪ್ರಭುತ್ವದ ನಿರ್ಲಜ್ಜ ನಿರ್ಲಕ್ಷ್ಯ

ಇನ್ನೂ ಸುಡುತ್ತಿರುವ ಮಣಿಪುರ; ಸಣ್ಣಸಣ್ಣ ಸಮುದಾಯಗಳ ಬಗ್ಗೆ ಪ್ರಭುತ್ವದ ನಿರ್ಲಜ್ಜ ನಿರ್ಲಕ್ಷ್ಯ

- Advertisement -
- Advertisement -

ಮಣಿಪುರ ಈಶಾನ್ಯ ಭಾರತದ ಒಂದು ರಾಜ್ಯವಾಗಿದ್ದು, ಇದು ಹಿಂದೆ ಬರ್ಮಾ ಎಂದು ಕರೆಯಲ್ಪಡುತ್ತಿದ್ದ ಮ್ಯಾನ್ಮಾರ್‌ನೊಂದಿಗೆ ಉದ್ದನೆಯ ಅಂತಾರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿದೆ. ಮಣಿಪುರದ ರಾಜಧಾನಿ ಇಂಫಾಲ್ ರಾಜ್ಯದ ಹೃದಯಭಾಗದಲ್ಲಿದೆ. ಇದು ಎಲ್ಲಾ ದಿಕ್ಕುಗಳಿಂದಲೂ ಬೆಟ್ಟಗಳಿಂದ ಸುತ್ತುವರಿದ ಕಣಿವೆಯಲ್ಲಿದೆ.

ಕಣಿವೆಯಲ್ಲಿ ವಾಸಿಸುವ ಜನರ ಗುಂಪುಗಳನ್ನು ಒಟ್ಟಾಗಿ ಮೈತ್‌ಯಿ ಎಂದು ಕರೆಯಲಾಗುತ್ತದೆ. ಮೈತ್‌ಯಿ ಜನರ ಇತಿಹಾಸ ಹೆಚ್ಚು ದಾಖಲಾಗಿರದಿದ್ದರೂ, ಆ ಜನಸಮುದಾಯದ ಸಂಸ್ಕೃತಿ ಸೂಚಿಸುವಂತೆ ಕಣಿವೆಯ ಈ ಸಮುದಾಯಗಳು ಮಾತೃಪ್ರಧಾನ ವ್ಯವಸ್ಥೆಯಿಂದ ಹುಟ್ಟಿ, ನಂತರದ ದಿನಗಳಲ್ಲಿ ಹಿಂದೂ ಧರ್ಮದ ಪ್ರಭಾವದಲ್ಲಿ ಪಿತೃಪ್ರಭುತ್ವ ವ್ಯವಸ್ಥೆಗೆ ಹೊರಳಿಕೊಂಡಿವೆ ಎಂಬುದನ್ನು ಗುರುತಿಸಬಹುದು. ಮೈತ್‌ಯಿ ಸಮಾಜವು ಬ್ರಾಹ್ಮಣರಿಂದ ಕೂಡಿದೆ; ರಾಜ್‌ಕುಮಾರರು ಎಂದು ಕರೆಯಲ್ಪಡುವ ಆಡಳಿತ ವರ್ಗವು ಕೃಷಿಯಲ್ಲಿ ತೊಡಗಿಸಿಕೊಂಡಿರುವ ಹಿಂದುಳಿದ ಗುಂಪುಗಳಾಗಿವೆ. ಮೇಲ್ವರ್ಗದವರು ಕಣಿವೆಯ ಮಧ್ಯಭಾಗದಲ್ಲಿ ವಾಸಿಸುತ್ತಾರೆ ಹಾಗೂ ಇತರೆ ಸಮುದಾಯಗಳು ಬೆಟ್ಟಗಳ ಅಂಚಿನಲ್ಲಿ ವಾಸಿಸುತ್ತಾರೆ. ಎಲ್ಲಾ ಮೈತ್‌ಯಿ ಸಮುದಾಯಗಳನ್ನು ಒಕ್ಕೂಟ ಸರ್ಕಾರದ ಪಟ್ಟಿಯಲ್ಲಿ ಇತರ ಹಿಂದುಳಿದ ವರ್ಗಗಳಾಗಿ ವರ್ಗೀಕರಿಸಲಾಗಿದೆ. ಮೈತ್‌ಯಿಗಳು ಸಂವಿಧಾನದ 8ನೇ ಶೆಡ್ಯೂಲ್ ಅಡಿಯಲ್ಲಿ ಗುರುತಿಸಲಾಗಿರುವ ತಮ್ಮದೇ ಮಣಿಪುರಿ ಭಾಷೆಯನ್ನು ಹಾಗೂ ಲಿಪಿಯನ್ನು ಹೊಂದಿದ್ದಾರೆ. ಮೈತ್‌ಯಿ ಸಂಸ್ಕೃತಿ ಮತ್ತು ಭಾಷೆಯು ಬರ್ಮೀಯ ಸಂಪ್ರದಾಯಗಳಿಂದ ಪ್ರಭಾವಿತವಾಗಿದೆ.

ಮೈತ್‌ಯಿ ಸಮುದಾಯಗಳು 1ನೇ ಶತಮಾನದಿಂದಲೂ ಆನುವಂಶಿಕವಾದ ರಾಜಪ್ರಭುತ್ವಗಳಿಂದ ಆಳಲ್ಪಟ್ಟಿವೆ. 1830ರಲ್ಲಿ, ಬರ್ಮಾವು ಬ್ರಿಟಿಷ್ ವಸಾಹತುವಿನ ಆಡಳಿತಕ್ಕೊಳಪಟ್ಟ ಸಂದರ್ಭದಲ್ಲಿ ಮಣಿಪುರಿ ರಾಜ್ಯವು ಬ್ರಿಟಿಷರಿಂದ ರಕ್ಷಿಸಲ್ಪಟ್ಟ ಪ್ರದೇಶವಾಯಿತು. ಆದಾಗ್ಯೂ, ಬ್ರಿಟಿಷರ ಪ್ರಭಾವವು ಹೆಚ್ಚಾಗಿ ಕಂಡುಬಂದಿದ್ದು ಮೈತ್‌ಯಿಗಳ ನಡುವೆಯೇ.

ಮೈತ್‌ಯಿ ಸಮುದಾಯದಲ್ಲಿ ಹೆಚ್ಚಿನವರು ಕಣಿವೆಯಲ್ಲಿಯೇ ವಾಸಿಸುವ ಕಾರಣದಿಂದಾಗಿ ಹಾಗೂ ರಾಜಪ್ರಭುತ್ವದ ಅಡಿಯಲ್ಲಿ ಸಂಘಟಿತರಾಗಿರುವ ಕಾರಣಕ್ಕಾಗಿ, ಮಣಿಪುರದ ಮೇಲೆ ಪ್ರಾಬಲ್ಯ ಸಾಧಿಸಿದ್ದಾರೆ ಮಾತ್ರವಲ್ಲ ಅಲ್ಲಿನ ಆಗು-ಹೋಗುಗಳನ್ನು ನಿಯಂತ್ರಿಸಿದ್ದಾರೆ. ಮಣಿಪುರಿ ಭಾಷೆಯಾಗಿರಲಿ ಅಥವಾ ಮಣಿಪುರಿ ಸಂಸ್ಕೃತಿಯಾಗಿರಲಿ- ಮಣಿಪುರಿ ಎಂದು ಜಗತ್ತಿಗೆ ತಿಳಿದಿರುವ ಎಲ್ಲವೂ- ಮೈತ್‌ಯಿ ಜನರನ್ನೇ ಪ್ರತಿನಿಧಿಸುತ್ತದೆ. ಮೈತ್‌ಯಿಗಳು ರಾಜ್ಯ ಜನಸಂಖ್ಯೆಯಲ್ಲಿ ಶೇ.60 ಇದ್ದಾರೆ.

ಮಣಿಪುರದ ಬೆಟ್ಟಗಳು ಹೆಚ್ಚಾಗಿ ಹುಲ್ಲುಗಾವಲುಗಳಾಗಿದ್ದು ಮೆಟ್ಟಿಲು ಮತ್ತು ಇಳಿಜಾರು ಕೃಷಿ ಪದ್ಧತಿಗೆ ಸೂಕ್ತವಾಗಿದೆ ಹಾಗೂ ಜಾನುವಾರು ಸಾಕಣೆಗೆ ಅನುಕೂಲಕರವಾಗಿದೆ. ಬೆಟ್ಟಗಳಲ್ಲಿ ಸ್ಥಳೀಯ ಬುಡಕಟ್ಟು ಜನಾಂಗದವರು ವಾಸಿಸುತ್ತಿದ್ದಾರೆ. ಬ್ರಿಟಿಷರು ಇವರನ್ನು ಕುಕಿ-ಜುವೋ ಜನರು ಎಂದು ಹೆಸರಿಸಿದ್ದಾರೆ. ಕುಕಿ ಬುಡಕಟ್ಟು ಜನಾಂಗದವರು ಮ್ಯಾನ್ಮಾರ್‌ಗೆ ವಿಸ್ತರಿಸಿರುವ ಬೆಟ್ಟಗಳ ಇಳಿಜಾರುಗಳಲ್ಲಿಯೂ ವಾಸಿಸುತ್ತಾರೆ. ಸಂವಿಧಾನದ ಅಡಿಯಲ್ಲಿ ಸುಮಾರು 50 ಕುಕಿ ಬುಡಕಟ್ಟುಗಳನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ. ಕುಕಿ ಬುಡಕಟ್ಟು ಜನಾಂಗದವರು ಸಾಂಪ್ರದಾಯಿಕವಾಗಿ ಕೃಷಿಕರಾಗಿದ್ದಾರೆ. ಅರಣ್ಯದಲ್ಲಿ ಸಿಗುವ ಉತ್ಪನ್ನಗಳು ಮತ್ತು ಜಾನುವಾರುಗಳೇ ಇವರ ಜೀವನಾಧಾರ. ಸಾಂಪ್ರದಾಯಿಕವಾಗಿ ಅವರು ರಾಜಪ್ರಭುತ್ವ ಅಥವಾ ಆಡಳಿತ ವ್ಯವಸ್ಥೆಯ ಅಡಿಯಲ್ಲಿ ಸಂಘಟಿತರಾಗಿರಲಿಲ್ಲ. ಬದಲಿಗೆ ಸಮುದಾಯದ ಹಿರಿಯರ ನಿರ್ದೇಶನದಲ್ಲಿ ಆಡಳಿತವನ್ನು ನಡೆಸುತ್ತಿದ್ದರು. ಅನೇಕ ಕುಕಿ ಬುಡಕಟ್ಟುಗಳು ತಮ್ಮದೇ ಆದ ಭಾಷೆಯನ್ನು ಹೊಂದಿದ್ದರೂ, ಮಧ್ಯಕಾಲೀನ ಜ್ಞಾನ ವ್ಯವಸ್ಥೆಗಳೊಂದಿಗೆ ಸಂಪರ್ಕವಿರದಿದ್ದ ಕಾರಣ ಅವು ಲಿಪಿಗಳನ್ನು ಹೊಂದಿಲ್ಲ. ಬುಡಕಟ್ಟುಗಳು ಸ್ಥೂಲವಾಗಿ ವ್ಯಾಖ್ಯಾನಿಸಲಾದ ಕುಟುಂಬ ವ್ಯವಸ್ಥೆಯನ್ನು ಹೊಂದಿದ್ದರೂ ಕೂಡ ಹೆಚ್ಚಾಗಿ ಸಾಮುದಾಯಿಕ ಜೀವನ ವ್ಯವಸ್ಥೆಯನ್ನು ಅನುಸರಿಸುತ್ತವೆ. ಮಹಿಳೆಯರು ಸಮುದಾಯಗಳ ಸಂಪನ್ಮೂಲಗಳಿಗೆ ಸಂಬಂಧಿಸಿದ ವ್ಯವಹಾರಗಳ ನಿರ್ವಹಣೆಯ ವಿಚಾರದಲ್ಲಿ ಮುಂಚೂಣಿಯಲ್ಲಿದ್ದರೆ, ಪುರುಷರು ದೈಹಿಕ ಶ್ರಮ ಬೇಡುವ ಕೆಲಸಗಳನ್ನೂ, ಸಮುದಾಯಗಳನ್ನು ರಕ್ಷಿಸುವ ಕೆಲಸಗಳನ್ನು ಮಾಡುತ್ತಾರೆ. ಕುಕಿಗಳು ಅಲೆಮಾರಿ ಬುಡಕಟ್ಟುಗಳಲ್ಲದಿದ್ದರೂ, ಅವರು ಭೂಮಿಯ ಒಡೆಯರಲ್ಲ ಮತ್ತು ಇತರೆ ಸಂಪನ್ಮೂಲಗಳನ್ನು ಹೊಂದಿಲ್ಲ. ತಮ್ಮ ಜೀವನೋಪಾಯಕ್ಕಾಗಿ ಸಂಪೂರ್ಣವಾಗಿ ಅರಣ್ಯ ಮತ್ತು ಮಳೆಯನ್ನು ಅವರು ಅವಲಂಬಿಸಿದ್ದಾರೆ. ಕಠಿಣ ಜೀವನ ಶೈಲಿಯ ಕಾರಣದಿಂದ ಯೋಧರಂತೆಯೇ ಅವರು ದೈಹಿಕವಾಗಿ ಕಟ್ಟುಮಸ್ತಾಗಿದ್ದಾರೆ ಮತ್ತು ಮಾನಸಿಕವಾಗಿ ದೃಢವಾಗಿದ್ದಾರೆ. ಕುಕಿ ಜನರು ಮತ್ತವರ ಸಂಸ್ಕೃತಿಯ ಯಾವುದೇ ದಾಖಲಿತ ಇತಿಹಾಸವಿಲ್ಲ ಮತ್ತು ಭಾರತದಲ್ಲಿನ ಇತರ ಬುಡಕಟ್ಟುಗಳಂತೆ ಯಾವುದೇ ಸಾಂಸ್ಕೃತಿಕ ಅಥವಾ ರಾಜಕೀಯ ಗುರುತುಗಳನ್ನು ಅವರು ಹೊಂದಿಲ್ಲ.

ಇದನ್ನೂ ಓದಿ: ಮಣಿಪುರ ಹಿಂಸಾಚಾರ: ಸರ್ಕಾರ ತೆಗೆದುಕೊಂಡ ಕ್ರಮಗಳ ವರದಿ ಸಲ್ಲಿಸಲು ಸುಪ್ರೀಂ ಸೂಚನೆ

ಕುಕಿಗಳು ಮತ್ತು ಮೈತ್‌ಯಿಗಳ ನಡುವೆ ಸಂಪನ್ಮೂಲಗಳಿಗಾಗಿ ಹಿಂದಿನಿಂದಲೂ ಪೈಪೋಟಿಯಿದ್ದು, ಇದು ಕಣಿವೆ-ಬೆಟ್ಟ ಎಂಬ ವಿಭಜನೆಗೆ ಕಾರಣವಾಗಿದೆ. ಅಲ್ಲದೇ, ಮಣಿಪುರ ಹಾಗೂ ಬರ್ಮಾದಲ್ಲಿ 1919ರ ಆಂಗ್ಲೋ ಕುಕಿ ಯುದ್ಧಗಳಲ್ಲಿ, ಕುಕಿಗಳು ಬ್ರಿಟಿಷರನ್ನು ಯಶಸ್ವಿಯಾಗಿ ಎದುರಿಸಿದರು. ಇದು ಬ್ರಿಟಿಷರ ರಕ್ಷಣೆಯಲ್ಲಿ ಉಳಿದಿದ್ದ ಮೈತ್‌ಯಿಗಳಿಂದ ಅವರನ್ನು ಇನ್ನಷ್ಟೂ ದೂರವಾಗಿಸಿತು. ಆದಾಗ್ಯೂ, ಸುವಾರ್ತಾಬೋಧಕರು ಈ ಬೆಟ್ಟಗಳಿಗೆ ಲಗ್ಗೆಯಿಟ್ಟು ಕುಕಿಗಳ ನಡುವೆ ಕ್ರಿಶ್ಚಿಯನ್ ಧರ್ಮವನ್ನು ಹರಡಿದರು; ಇದು ಬೆಟ್ಟಗಳಲ್ಲಿ ಇಂಗ್ಲಿಷ್ ಶಿಕ್ಷಣದ ಪ್ರಸಾರಕ್ಕೆ ಕಾರಣವಾಯಿತು. ಕ್ರಿಶ್ಚಿಯನ್ ಧರ್ಮ ಮತ್ತು ಇಂಗ್ಲಿಷ್ ಕುಕಿ ಬುಡಕಟ್ಟು ಜನಾಂಗದವರಿಗೆ ಸಾಮಾನ್ಯ ಧಾರ್ಮಿಕ ಗುರುತನ್ನು ಒದಗಿಸಿದವು. ಆದರೂ, ಬೆಟ್ಟಗಳಲ್ಲಿಯೇ ಉಳಿದ ಕುಕಿಗಳು 20ನೇ ಶತಮಾನದ ಯಾವುದೇ ಬೆಳವಣಿಗೆಗಳಿಗೆ ಒಡ್ಡಿಕೊಳ್ಳಲು ಸಾಧ್ಯವಾಗಲಿಲ್ಲ. ಆದಕಾರಣ, ಮೈತ್‌ಯಿಗಳು ಮತ್ತು ಕುಕಿಗಳ ನಡುವೆ ಮಾನವ ಅಭಿವೃದ್ಧಿಯ ವಿಚಾರದಲ್ಲಿ ಅಂತರವು ಹೆಚ್ಚುತ್ತಲೇ ಹೋಯಿತು. ಇದರ ಜೊತೆಗೆ, ಬ್ರಿಟಿಷ್ ವಸಾಹತುಶಾಹಿಯು 19ನೇ ಶತಮಾನದಲ್ಲಿ ನಾಗಾಲ್ಯಾಂಡ್ ಮತ್ತು ಬರ್ಮಾದಿಂದ ಸ್ಥಳಾಂತರಗೊಂಡ ಬುಡಕಟ್ಟುಗಳನ್ನು ಕರೆತಂದಿತು, ಅವರು ನಂತರ ಭೂಸಂಪನ್ಮೂಲಗಳಿಗಾಗಿ ಕುಕಿಗಳೊಂದಿಗೆ ಸ್ಪರ್ಧೆಗಿಳಿದರು. ಆದ್ದರಿಂದ, ಕುಕಿಗಳು ಈಗ ಬುಡಕಟ್ಟು ಜನಸಂಖ್ಯೆಯ ಗಮನಾರ್ಹ ಪ್ರಮಾಣದಲ್ಲಿರುವ ನಾಗಾ ಬುಡಕಟ್ಟುಗಳೊಂದಿಗೆ ಸಂಘರ್ಷದಲ್ಲಿದ್ದಾರೆ.

1947ರಲ್ಲಿ, ಮಣಿಪುರ ಸಾಮ್ರಾಜ್ಯವು ಭಾರತಕ್ಕೆ ಸೇರಿಕೊಂಡು, ಅಸ್ಸಾಂ ರಾಜ್ಯದ ಆಡಳಿತಕ್ಕೆ ಒಳಪಟ್ಟಿತು; ಇದು ಬುಡಕಟ್ಟುಗಳ ಭವಿಷ್ಯವನ್ನು ಭಾರತದ ಫ್ರಭುತ್ವಕ್ಕೆ ಗಂಟುಹಾಕಿತು. ಮಣಿಪುರದಲ್ಲಿ ಹೆಚ್ಚಿನ ಸಂಪನ್ಮೂಲಗಳನ್ನು ಹೊಂದಿದ್ದ, ಹೆಚ್ಚು ಸಂಘಟಿತರಾಗಿದ್ದ ಮತ್ತು ಆಡಳಿತ ವರ್ಗದೊಂದಿಗೆ ರಾಜಕೀಯ ಸಾಮೀಪ್ಯ ಸಾಧಿಸಿದ್ದ ಮೈತ್‌ಯಿಗಳು ಅಧಿಕಾರದ ದಲ್ಲಾಳಿಗಳಾದರು. ಗಡಿ ನಿಯಂತ್ರಣಗಳಿಂದಾಗಿ ಬರ್ಮಾದೊಂದಿಗಿನ ಸಂಪರ್ಕ ಕಡಿಮೆಯಾದಂತೆ ಕುಕಿಗಳು ಸಂಪನ್ಮೂಲಗಳಿಗಾಗಿ ಮೈತ್‌ಯಿಗಳನ್ನೇ ಅವಲಂಬಿಸಬೇಕಾಯಿತು.

ರಾಜಕೀಯವಾಗಿ ಮೂಲೆಗುಂಪಾಗಿದ್ದ ಕುಕಿಗಳು ಮತ್ತು ನಾಗಾಗಳು ಸಂಘಟಿತ ಹಿಂಸಾಚಾರದ ಮೂಲಕ ತಮ್ಮ ಗುರುತನ್ನು ಪ್ರತಿಪಾದಿಸಲು ಮತ್ತು ತಮ್ಮ ಅಸಹಾಯಕತೆಯನ್ನು ಹೊರಹಾಕಲು ಪ್ರಾರಂಭಿಸಿದರು. ಶೀಘ್ರದಲ್ಲೇ, ಬುಡಕಟ್ಟುಗಳು ಸಶಸ್ತ್ರ ಗುಂಪುಗಳನ್ನು ಸಂಘಟಿಸಿದರು. ವಿಭಿನ್ನ ರಾಷ್ಟ್ರೀಯತಾವಾದಿ ಹೆಸರುಗಳೊಂದಿಗೆ ಅವರು ಅದನ್ನು ಗುರುತಿಸಿಕೊಳ್ಳುತ್ತಾರೆ. ರಕ್ಷಣೆಗಾಗಿ ಬೆಟ್ಟಗಳ ಅಂಚಿನಲ್ಲಿ ವಾಸಿಸುತ್ತಿದ್ದ ಮೈತ್‌ಯಿಗಳು ಕೂಡ ಸಶಸ್ತ್ರ ಗುಂಪುಗಳನ್ನು ರಚಿಸಿಕೊಂಡರು. ಇದು ಮಣಿಪುರದಲ್ಲಿ ರಕ್ತಸಿಕ್ತ ದಂಗೆಯ ಕಾಲಾವಧಿಯ ಪ್ರಾರಂಭಕ್ಕೆ ಮುನ್ನುಡಿಯಾಯಿತು.

1972ರಲ್ಲಿ ಅಸ್ಸಾಂನಿಂದ ಬೇರ್ಪಟ್ಟ ಮಣಿಪುರ ರಾಜ್ಯದ ರಚನೆಯಾಯಿತು. ಮತಕ್ಷೇತ್ರಗಳನ್ನು ಹೇಗೆ ನಿರ್ಧರಿಸಲಾಗಿತ್ತೆಂದರೆ, ಬುಡಕಟ್ಟುಗಳಿಗೆ ಯಾವುದೇ ವಿಧಾನಸಭೆಯಲ್ಲಿ ಶೇ.20ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದ್ದರಿಂದ ಭಾರತ ಸರ್ಕಾರವು ಬುಡಕಟ್ಟುಗಳ ಭೂಮಿ ಮತ್ತು ಸಂಪನ್ಮೂಲಗಳನ್ನು ರಕ್ಷಿಸುವ ವಿಧಿ 317 ಸಿಅನ್ನು ಜಾರಿಗೆ ತಂದಿತು. ಇದು ಟ್ರೈಬಲ್ ಹಿಲ್ ಕೌನ್ಸಿಲ್‌ನ ರಚನೆಯನ್ನು ಕಡ್ಡಾಯಗೊಳಿಸಿತು; ಇದು ರಾಜ್ಯ ಶಾಸಕಾಂಗವು ಜಾರಿ ಮಾಡುವ ಕಾನೂನುಗಳನ್ನು ಪರಿಶೀಲಿಸುವ ಮತ್ತು ತಿರಸ್ಕರಿಸುವ ಅಧಿಕಾರವನ್ನು ಹೊಂದಿದೆ. ಈ ಟ್ರೈಬಲ್ ಹಿಲ್ ಕೌನ್ಸಿಲ್ ಬುಡಕಟ್ಟುಗಳ ನಾಗರಿಕ ವ್ಯವಹಾರಗಳನ್ನು ಸಹ ನಿಯಂತ್ರಿಸುತ್ತದೆ.

ಆದರೂ, ಉದಾರೀಕರಣ ನಂತರದ ಕಾಲಘಟ್ಟದಲ್ಲಿ ಮೈತ್‌ಯಿಗಳು ಹೆಚ್ಚಿನ ಸಂಪನ್ಮೂಲಗಳನ್ನು ಕಬಳಿಸುತ್ತಿದ್ದಾರೆಂದು ಬುಡಕಟ್ಟುಗಳು ಭಾವಿಸಿದವು. ಆದಕಾರಣ, ಸಮುದಾಯಗಳ ನಡುವಿನ ಹಿಂಸಾಚಾರಗಳು ಮುಂದುವರಿಯಿತು ಮಾತ್ರವಲ್ಲ ಹೆಚ್ಚಾಯಿತು. ಬೆಟ್ಟಗಳಲ್ಲಿ ಕೂಡ ಬುಡಕಟ್ಟುಗಳ ನಡುವಿನ ವೈರತ್ವಗಳು ಹೆಚ್ಚಾದವು. 1972ರಿಂದ, ರಾಜ್ಯಾಡಳಿತ ಮೈತ್‌ಯಿಗಳ ನಿಯಂತ್ರಣದಲ್ಲಿದೆ. ಬೆಟ್ಟಗಳಲ್ಲಿ ಶಿಕ್ಷಣ ಹಾಗೂ ಅಭಿವೃದ್ಧಿಯನ್ನು ಕಾಣದ ಬುಡಕಟ್ಟುಗಳು ಜೀವನೋಪಾಯಕ್ಕಾಗಿ ಅಫೀಮನ್ನು ಬೆಳೆದು ಅದರ ವ್ಯಾಪಾರದಲ್ಲಿ ತೊಡಗಿದರು. ಇದು ಬುಡಕಟ್ಟುಗಳನ್ನು ಇತರ ಭಾರತೀಯ ಸಮುದಾಯಗಳಿಂದ ಇನ್ನಷ್ಟು ದೂರವಾಗಿಸಿತು. ಭಾರತ ಸರ್ಕಾರವು ಶಸ್ತ್ರಾಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ (Armed Forces Special Protection Act) ಅನ್ನು ಜಾರಿಗೆ ತಂದಿತು. ಇದು ಹಿಂಸಾಚಾರವನ್ನು ಹೆಚ್ಚಿಸಿತು ಹಾಗೂ ಈ ಪ್ರದೇಶದ ಅಭಿವೃದ್ಧಿಗೆ ಮಾರಕವಾಯಿತು ಮತ್ತು ಅಲ್ಲಿನ ಜನಸಮುದಾಯಗಳ ಪರಕೀಯತೆಯನ್ನು ಹೆಚ್ಚಿಸಿತು. ಮಣಿಪುರದ ಬುಡಕಟ್ಟು ಜನಾಂಗಗಳು ಮಾದಕವಸ್ತುಗಳ ವ್ಯಾಪಾರ, ಲೈಂಗಿಕ ವೃತ್ತಿ, ಭಯೋತ್ಪಾದನೆ ಮತ್ತು ಗಡಿಯಾಚೆಗಿನ ಅಕ್ರಮ ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳಲು ಪ್ರಾರಂಭಿಸಿದರು. ಅವರು ಭಾರತದ ಈಶಾನ್ಯವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ಮ್ಯಾನ್ಮಾರ್‌ನ ಸಶಸ್ತ್ರ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದಾರೆಂದು ಬಗೆಯಲಾಯಿತು. 2005ರ ಹೊತ್ತಿಗೆ, ಪರಿಸ್ಥಿತಿಯು ಎಷ್ಟು ಹದಗೆಟ್ಟಿತ್ತೆಂದರೆ ಗುಡ್ಡಗಾಡು ಪ್ರದೇಶಗಳು ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ದೇಶದಲ್ಲಿಯೇ ಅತ್ಯಂತ ಹಿಂದುಳಿದಿದ್ದವು ಮಾತ್ರವಲ್ಲ ಭಾರತದಲ್ಲಿ ಅತಿ ಹೆಚ್ಚು ಹೆಚ್.ಐ.ವಿ ಪ್ರಕರಣಗಳು ಮತ್ತು ಮಾದಕ ದ್ರವ್ಯ ಸೇವನೆಯಲ್ಲಿ ಈ ಪ್ರದೇಶವೇ ಮುಂಚೂಣಿಯಲ್ಲಿತ್ತು. ಬುಡಕಟ್ಟು ಯುವಕರು ತಮ್ಮದೇ ಆದ ಅಸ್ಮಿತೆಯನ್ನು ಹೊಂದಲಾರದೆ ತಳಮಳಗೊಂಡಿದ್ದರು. ಅಲ್ಲದೇ, ಶಿಕ್ಷಣ ಮತ್ತು ಜೀವನೋಪಾಯವಿಲ್ಲದೆ ಸಾಮಾಜಿಕ ಚಲನಶೀಲತೆ (Social Mobility) ಇವರಿಗೆ ಸಾಧ್ಯವಾಗಲೇ ಇಲ್ಲ. ಲೈಂಗಿಕ ವೃತ್ತಿ ಮತ್ತು ಅಫೀಮು ವ್ಯಾಪಾರವೇ ಈ ಪ್ರತ್ಯೇಕಿತ ಸಮುದಾಯಗಳಿಗೆ ಲಭ್ಯವಿದ್ದ ಅತ್ಯುತ್ತಮ ಆಯ್ಕೆಗಳಾಗಿದ್ದವು. ಮಣಿಪುರದಲ್ಲಿ ಮೈತ್‌ಯಿಗಳಿಂದ ತಾರತಮ್ಯವನ್ನು ಅನುಭವಿಸಿದ ಬುಡಕಟ್ಟುಗಳ ಯುವಕ-ಯುವತಿಯರು ರಾಜ್ಯದಲ್ಲಿ ಉದ್ಯೋಗಾವಕಾಶಗಳನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಮಣಿಪುರದ ಹೊರಗಿನ ಭಾರತದಲ್ಲಿನ ಸಮಾಜ ಮತ್ತು ಆರ್ಥಿಕತೆಯೊಂದಿಗೆ ಅವರನ್ನು ಜೋಡಿಸಬಲ್ಲ ಯಾವುದೇ ಶಿಕ್ಷಣ ಮತ್ತು ಕೌಶಲ್ಯಗಳನ್ನು ಅವರು ಹೊಂದಿರಲಿಲ್ಲ. ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್ ಹಾಗೂ ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸೊಸೈಟಿಯಂತಹ ಇತರೆ ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆಗಳು ಈ ಸಮುದಾಯಗಳ ಆರೋಗ್ಯ ರಕ್ಷಣೆಯ ಸಲುವಾಗಿ ಮಧ್ಯಪ್ರವೇಶಿಸಿದವು.

ಆದರೂ, 2010ರ ನಂತರದಲ್ಲಿ ಭಾರತ ಸರ್ಕಾರವು ನಾಗಾಲ್ಯಾಂಡ್‌ನಲ್ಲಿ ನಾಗಾಗಳೊಂದಿಗೆ ಶಾಂತಿ ಮಾತುಕತೆಗಳನ್ನು ಪ್ರಾರಂಭಿಸಿದ್ದರಿಂದ ಹಿಂಸಾಚಾರವು ಕ್ರಮೇಣ ಕಡಿಮೆಯಾಯಿತು ಮತ್ತು ಕುಕಿಗಳೂ ಹಿಂಸಾಚಾರದಲ್ಲಿ ತೊಡಗದಂತೆ ಮನವೊಲಿಸಲಾಯಿತು. ಇದರಿಂದ ಗುಡ್ಡಗಾಡು ಪ್ರದೇಶದಲ್ಲಿ ಅಲ್ಪಮಟ್ಟದ ಅಭಿವೃದ್ಧಿ ಸಾಧ್ಯವಾಯಿತು. ಒಂದು ತಲೆಮಾರಿನ ಕುಕಿ ಯುವಕರು ಮಣಿಪುರದಾಚೆಗಿನ ದೆಹಲಿ, ಮುಂಬೈ ಮತ್ತು ಬೆಂಗಳೂರಿನಂತಹ ನಗರಗಳಲ್ಲಿ ಉದ್ಯೋಗವನ್ನು ಹುಡುಕಿಕೊಳ್ಳಲು ಸಾಧ್ಯವಾಯಿತು.

ಇದನ್ನೂ ಓದಿ: ಮಣಿಪುರ; ರಾಷ್ಟ್ರೀಯ ಏಕತೆಯ ಸವಾಲಿಗೆ ರಾಷ್ಟ್ರೀಯತೆ ಕಣ್‌ಮುಚ್ಚಿರುವುದೇಕೆ?

ಆದರೆ, 2022ರ ಆರಂಭದಲ್ಲಿ ಅಧಿಕಾರ ವಹಿಸಿಕೊಂಡ ಹೊಸ ಬಿಜೆಪಿ ಸರ್ಕಾರವು ಕುಕಿ ಬುಡಕಟ್ಟು ಜನಾಂಗದವರ ಶಾಂತಿಯನ್ನು ಕದಡಿತು. ನಂತರ ಸಂರಕ್ಷಿತ ಅರಣ್ಯ ಪ್ರದೇಶಗಳಿಂದ ಆದಿವಾಸಿಗಳನ್ನು ಹೊರದೂಡಲು ಪ್ರಾರಂಭಿಸಿತು ಮತ್ತು ಹಲವಾರು ಬುಡಕಟ್ಟು ಜನರನ್ನು ಅವರು ಅಕ್ರಮ ವಲಸಿಗರು ಎಂದು ಆರೋಪಿಸಿ ಬಂಧಿಸಲಾಯಿತು. ಮಾರ್ಚ್ 23ರಂದು, ಹೈಕೋರ್ಟಿನ ಆದೇಶವು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮೈತ್‌ಯಿಗಳನ್ನು ಪರಿಶಿಷ್ಟ ಬುಡಕಟ್ಟು ಎಂದು ಗುರುತಿಸುವಂತೆ ಆದೇಶಿಸಿತು. ಅಂದರೆ, ಆ ಆದೇಶ ಮೈತ್‌ಯಿಗಳು, ಕುಕಿಗಳ ಭೂ ಸಂಪನ್ಮೂಲಗಳ ಮೇಲೆ ಹಕ್ಕು ಸಾಧಿಸಲು ರಹದಾರಿ ಮಾಡಿಕೊಟ್ಟಂತೆ. ಅವರ ಭೂಪ್ರದೇಶದಿಂದಲೇ ಅವರನ್ನು ಒಕ್ಕಲೆಬ್ಬಿಸಲಾಗುತ್ತಿರುವುದು, ಕುಕಿಗಳ ಬಂಧನಗಳು ಮತ್ತು ನ್ಯಾಯಾಲಯದ ಆದೇಶವು ಕುಕಿಗಳಲ್ಲಿ ಅಗಾಧ ಅಭದ್ರತೆಯನ್ನು ಸೃಷ್ಟಿಸಿತು. ಬುಡಕಟ್ಟು ಜನಾಂಗದವರು ಭೂ ದಾಖಲೆಗಳನ್ನು ಹೊಂದಿಲ್ಲದ ಕಾರಣ, ತಮ್ಮ ಅರಣ್ಯ ಭೂಮಿಯನ್ನು ಮೈತ್‌ಯಿಗಳು ಕಬಳಿಸುತ್ತಾರೆ ಎಂಬ ಭಯ ಅವರದ್ದು. ಅರಣ್ಯ ಭೂಮಿ ಕುಕಿ ಜನರಿಗಿರುವ ಏಕೈಕ ಜೀವನೋಪಾಯ ಮತ್ತು ಅಸ್ಮಿತೆಯ ಗುರುತಾಗಿದೆ.

ಕುಕಿಗಳು ಸರ್ಕಾರದ ಕ್ರಮ ಮತ್ತು ನ್ಯಾಯಾಲಯದ ಆದೇಶವನ್ನು ಪ್ರತಿಭಟಿಸಿದರು. ಆದರೆ, ಈ ಕ್ರಮಗಳಿಗೆ ರಾಜಕೀಯವಾಗಿ ಸವಾಲೆಸೆಯಲು ಅಗತ್ಯವಿರುವ ರಾಜಕೀಯ ಪ್ರಾತಿನಿಧ್ಯವನ್ನು ಅವರು ಹೊಂದಿಲ್ಲ. ಕಾನೂನು ಹೋರಾಟ ನಡೆಸಲು ಅವರ ಬಳಿ ಸಾಕಷ್ಟು ಸಂಪನ್ಮೂಲಗಳಿಲ್ಲ. ತಮ್ಮ ಪರವಾಗಿ ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸಲು ಅವರಿಗೆ ಭಾರತದಲ್ಲಾಗಲೀ, ವಿದೇಶಗಳಲ್ಲಾಗಲೀ ಅಗತ್ಯವಿರುವ ಸಾಮಾಜಿಕ ಬಂಡವಾಳವಿಲ್ಲ. ಸರ್ಕಾರಗಳ ಮೇಲೆ ಪ್ರಭಾವ ಬೀರಲು ಅಥವಾ ಸರ್ಕಾರ ತಮ್ಮ ಮುಂದೆ ಮಂಡಿಯೂರುವಂತೆ ಮಾಡಲು ಯಾವುದೇ ಪ್ರಮುಖ ವ್ಯಾಪಾರ ಅಥವಾ ವ್ಯವಹಾರಗಳಲ್ಲಿ ಅವರು ಸೂಕ್ತ ಪಾಲುಗಳನ್ನು ಹೊಂದಿಲ್ಲ. ಹಿಂಸೆಯನ್ನು ಪ್ರತಿಭಟನೆಯ ಸಾಧನವಾಗಿ ಬಳಸುತ್ತಿರುವುದನ್ನು ವಿವರಿಸುವುದು ಬಹುಶಃ ಅವರು ಅನುಭವಿಸುತ್ತಿರುವ ಪ್ರತ್ಯೇಕತೆಯೇ.

ಪ್ರಭುತ್ವದ ಆಡಳಿತದ ಸೂಕ್ಷ್ಮತೆ ಅಡಗಿರುವುದು ಸಣ್ಣ ಜನಾಂಗಗಳ ಅಸ್ಮಿತೆ ಹಾಗೂ ಜೀವನೋಪಾಯವನ್ನು ರಕ್ಷಿಸುತ್ತಲೇ ವಿಶಾಲ ಸಮಾಜದೊಂದಿಗೆ ಅವರನ್ನು ಘನತೆಯಿಂದ ಕೂಡಿಸಿಕೊಳ್ಳುವುದಾಗಿದೆ. ಈ ನಿಟ್ಟಿನಲ್ಲಿ ರಾಜ್ಯಾಡಳಿತದಲ್ಲಿನ ವೈಫಲ್ಯ ಕಣ್ಣಿಗೆ ರಾಚುತ್ತಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...