Homeಮುಖಪುಟಮಣಿಪುರ; ರಾಷ್ಟ್ರೀಯ ಏಕತೆಯ ಸವಾಲಿಗೆ ರಾಷ್ಟ್ರೀಯತೆ ಕಣ್‌ಮುಚ್ಚಿರುವುದೇಕೆ?

ಮಣಿಪುರ; ರಾಷ್ಟ್ರೀಯ ಏಕತೆಯ ಸವಾಲಿಗೆ ರಾಷ್ಟ್ರೀಯತೆ ಕಣ್‌ಮುಚ್ಚಿರುವುದೇಕೆ?

- Advertisement -
- Advertisement -

ಕುಟುಂಬದ ಮುಖ್ಯಸ್ಥನ ಮೊದಲ ಹೊಣೆಗಾರಿಕೆ, ತನ್ನ ಕುಟುಂಬವನ್ನು ಒಗ್ಗಟ್ಟಾಗಿ ಇಟ್ಟುಕೊಳ್ಳುವುದು ಮತ್ತು ಪಕ್ಕದ ಮನೆಯವರನ್ನು ವಿಚಾರಿಸಿಕೊಳ್ಳುವುದು ಹಾಗೂ ಓಣಿಯಲ್ಲಿ ಡಂಗುರ ಬಾರಿಸುವ ಸರದಿ ನಂತರವೇ ಬರುತ್ತೆ. ಇದೇ ರೀತಿಯಲ್ಲಿ ದೇಶದ ನಾಯಕತ್ವದ ಮೊದಲ ಹೊಣೆಗಾರಿಕೆ, ದೇಶದ ಎಲ್ಲಾ ಪ್ರದೇಶಗಳ, ವರ್ಗಗಳ ಹಾಗೂ ಸಮುದಾಯಗಳ ಏಕತೆಯನ್ನು ಖಚಿತಪಡಿಸುವುದು, ವೈಮನಸ್ಸು ಹುಟ್ಟುಕೊಳ್ಳಲು ಬಿಡದೇ, ಅಕಸ್ಮಾತ್ ಪರಸ್ಪರ ಆತಂಕ ಅಥವಾ ಜಗಳಗಳ ಮೊದಲ ಚಿಹ್ನೆ ಕಾಣಿಸಿದರೆ ಕೂಡಲೇ ಅದನ್ನು ಸರಿಪಡಿಸುವುದು. ಟಿವಿ ಸ್ಟುಡಿಯೋಗಳಲ್ಲಿ ಕುಳಿತುಕೊಂಡು ನೆರೆಯ ದೇಶದ ಮೇಲೆ ಗಾಳಿಯ ತಲವಾರನ್ನು ಝಳಪಿಸುವುದು ರಾಷ್ಟ್ರೀಯತೆಯ ಕುರುಹಲ್ಲ. ನಿಜವಾದ ರಾಷ್ಟ್ರೀಯತೆ ಸದ್ದುಗದ್ದಲವಿಲ್ಲದೇ ರಾಷ್ಟ್ರೀಯ ಏಕತೆಯಲ್ಲಿ ಕಂಡುಬಂದ ಎಲ್ಲಾ ಬಿರುಕುಗಳನ್ನು ಮುಚ್ಚುವುದು, ಎಲ್ಲಾ ವಿವಾದಗಳಲ್ಲಿ ನ್ಯಾಯ ಮತ್ತು ಸಮನ್ವಯ ಸಾಧಿಸುವುದು, ದೇಶವನ್ನು ತನ್ನೊಳಗಿನಿಂದಲೇ ಗಟ್ಟಿಗೊಳಿಸುವುದು. ರಾಷ್ಟ್ರದ ರೂಪದಲ್ಲಿರುವ ಮನೆಯಲ್ಲಿ ಹತ್ತಿಕೊಂಡ ಬೆಂಕಿಯನ್ನು ನೋಡಿ ಮುಖ ಬೇರೆಡೆ ತಿರುಗಿಸುವುದು ಅಥವಾ ಅದರಲ್ಲಿ ಪೆಟ್ರೋಲ್ ಚಿಮುಕಿಸುವುದು- ಅದು ಮತ್ತೇನೇ ಆಗಿರಲಿ ರಾಷ್ಟ್ರೀಯತೆಯಂತೂ ಆಗಲು ಸಾಧ್ಯವಿಲ್ಲ.

ಇಂದು ಮಣಿಪುರವು ಭಾರತೀಯ ರಾಷ್ಟ್ರೀಯತೆಯನ್ನು ಪರೀಕ್ಷೆಗೆ ಒಡ್ಡುತ್ತಿದೆ. ಭಾರತದ ಈ ಮಣಿ ತುಂಡಾಗುತ್ತಿದೆ. ಭಾರತ ಮಾತೆಯ 120 ಮಕ್ಕಳು ಇನ್ನೊಮ್ಮೆ ಏಳಲಾರದಂತೆ ಮಣ್ಣಿನಲ್ಲಿ ಮಲಗಿಬಿಟ್ಟಿದ್ದಾರೆ. ಸುಮಾರು 45,000 ಮನೆ ಕಳೆದುಕೊಂಡಿದ್ದಾರೆ. ಎರಡು ತಿಂಗಳಿಗಿಂತಲೂ ಹೆಚ್ಚು ಸಮಯವಾಗಿದ್ದರೂ ರಕ್ತ ಚಿಮ್ಮುವುದು ನಿಂತಿಲ್ಲ. ಪರಸ್ಪರ ಶತ್ರುಗಳಾಗಿ ರಕ್ತ ಹರಿಸಲು ನಿಂತಿರುವ ಸಮುದಾಯಗಳು ಸರಕಾರಿ ಶಸ್ತ್ರಾಗಾರಗಳನ್ನು ಲೂಟಿ ಮಾಡಿ, ಆಟೋಮ್ಯಾಟಿಕ್ ರೈಫಲ್‌ಗಳನ್ನು ಕೈಯಲ್ಲಿ ಹಿಡಿದುಕೊಂಡು ರಸ್ತೆಗಳಲ್ಲಿ ತಿರುಗಾಡುತ್ತಿದ್ದಾರೆ. ಡ್ರೋನ್‌ಗಳಿಂದ ತಮ್ಮ ವಿರೋಧಿ ಬಣಗಳ ಜನರ ಅಡಗುತಾಣಗಳನ್ನು ಹುಡುಕುತ್ತಿದ್ದಾರೆ, ದಾಳಿ ಮಾಡುತ್ತಿದ್ದಾರೆ. ಕೇವಲ ಪೊಲೀಸರಲ್ಲ, ಸೈನ್ಯವೂ ಹತಾಶವಾಗಿದೆ. ಆದರೆ ಈಶಾನ್ಯ ಭಾರತದ ಈ ದುರಂತದ ಬಗ್ಗೆ ದೇಶ ಕಣ್ಮುಚ್ಚಿಕೊಂಡು ಕುಳಿತಿದೆ. ಉಮ್ಮೀದ್ ಫಾಜಲಿ ಅವರ ಮಾತುಗಳಲ್ಲಿ ಹೇಳಬೇಕೆಂದರೆ, “ಗರ್ ಕಯಾಮತ್ ಯೆ ನಹೀಂ ತೊ ಕಯಾಮತ್ ಕ್ಯಾ ಹೈ/ ಶಹರ್ ಜಲತಾ ರಹಾ ಔರ್ ಲೋಗ್ ನ ಘರ್ ಸೆ ನಿಕಲೆ”- “ಇದು ಪ್ರಳಯವಲ್ಲ ಎಂದಾದರೆ ಮತ್ಯಾವುದು ಪ್ರಳಯ/ನಗರ ಉರಿಯುತ್ತಲಿತ್ತು ಹಾಗೂ ಜನರು ಮನೆಯಿಂದ ಹೊರಬರಲಿಲ್ಲ”.

ನರೇಂದ್ರ ಮೋದಿ

ದೇಶಕ್ಕೆ ಈ ಸತ್ಯದ ಅರಿವಿಲ್ಲದೇ ಇರಬಹುದು ಆದರೆ ಇದನ್ನು ನಮ್ಮ ಪ್ರಧಾನಮಂತ್ರಿಗಳಿಂದ ಮರೆಮಾಚಲು ಸಾಧ್ಯವಿಲ್ಲ. ದುರದೃಷ್ಟವೆಂದರೆ ಕಳೆದ ಎರಡು ತಿಂಗಳಿಂದ ನರೇಂದ್ರ ಮೋದಿ ಮಣಿಪುರದ ಸ್ಥಿತಿಯ ಬಗ್ಗೆ ಒಂದು ಮಾತನ್ನೂ ಹೇಳಿಲ್ಲ. ಶಾಂತಿಗಾಗಿ ಒಂದು ಮನವಿಯನ್ನೂ ಮಾಡಿಲ್ಲ. ಎರಡು ಸಾಂತ್ವನದ ಮಾತುಗಳನ್ನೂ ಆಡಿಲ್ಲ. ರಾಷ್ಟ್ರಕ್ಕೆ ಸಂಬೋಧಿಸಿಯೂ ಇದರ ಬಗ್ಗೆ ಮಾತಾಡಿಲ್ಲ. ಅವರ ಮನ್ ಕಿ ಬಾತ್‌ನಲ್ಲಿಯೂ ಮಣಿಪುರದ ಬಗ್ಗೆ ಒಂದು ಪದ ಬಂದಿಲ್ಲ. ಮಣಿಪುರದ ನೋವನ್ನು ಹೇಳಲು ಬಂದ ಪ್ರತಿನಿಧಿಮಂಡಲದೊಂದಿಗೆ ಎರಡು ನಿಮಿಷ ಮಾತನಾಡಲೂ ಪುರುಸೊತ್ತಿಲ್ಲ. ತಮ್ಮ ಪಕ್ಷದ ಮುಖ್ಯಮಂತ್ರಿ ಹಾಗೂ ಈ ಸಮಸ್ಯೆಯ ಮೂಲವಾಗಿರುವ ಬಿರೇನ್ ಸಿಂಗ್‌ರನ್ನು ತೆಗೆದುಹಾಕುವ ಯಾವ ಸಂಕೇತವನ್ನೂ ನೀಡಿಲ್ಲ. ಎರಡು ತಿಂಗಳಿಂದ ಈ ದುರಂತವನ್ನು ಬಗೆಹರಿಸುವಲ್ಲಿ ವಿಫಲವಾದ ದೇಶದ ಗೃಹಸಚಿವರಿಗೆ ಯಾವ ಸಂದೇಶವನ್ನೂ-ಸೂಚನೆಯನ್ನೂ ಕೊಟ್ಟಿಲ್ಲ. ಹಾಗೂ ಈ ಅರಾಜಕತೆಯನ್ನು ನಿಲ್ಲಿಸಲು ಕೇಂದ್ರ ಸರಕಾರಕ್ಕಿರಬೇಕಾದ ಸಾಂವಿಧಾನಿಕ ಹೊಣೆಗಾರಿಕೆ ಯಾವ ಅರಿವೂ ಇದ್ದಂತಿಲ್ಲ. ಒಂದು ವೇಳೆ ನೀವು ಅಥವಾ ನಾನು ಇಂದು ಮಣಿಪುರದ ವಾಸಿಗಳಾಗಿದ್ದರೆ ಖಂಡಿತವಾಗಿಯೂ ದೇಶದ ಪ್ರಧಾನಮಂತ್ರಿ ಎಲ್ಲಿದ್ದಾರೆ ಎಂದು ಹುಡುಕುತ್ತಿದ್ದೆವು. ಅಥವಾ ಈ ದೇಶ ನನ್ನದೇ ಎಂಬ ಪ್ರಶ್ನೆಯನ್ನು ಈ ಪ್ರಕ್ಷುಬ್ದ ಕ್ಷಣಗಳಲ್ಲಿ ಕೇಳುತ್ತಿದ್ದೆವು.

ಇದನ್ನೂ ಓದಿ: ಮಣಿಪುರದಲ್ಲಿ ಮುಂದುವರೆದ ಹಿಂಸಾಚಾರ: ಗುಂಡಿನ ಚಕಮಕಿಯಲ್ಲಿ ಮೈತಿ ಸಮುದಾಯದ ಇಬ್ಬರ ಸಾವು

ರಾಷ್ಟ್ರೀಯ ಏಕತೆಯ ಬಗ್ಗೆ ಪ್ರಧಾನಮಂತ್ರಿಯವರ ನಿರ್ಲಕ್ಷ್ಯಕ್ಕೆ ಇದು ಮೊದಲನೆಯ ಉದಾಹರಣೆಯೇನೂ ಅಲ್ಲ. ಕಳೆದ ಒಂಬತ್ತು ವರ್ಷಗಳಲ್ಲಿ ಯಾವಾಗೆಲ್ಲ ದೇಶ ಯಾವುದೇ ಭಾಗದಲ್ಲಿ ಇಂತಹ ಸವಾಲುಗಳು ಹುಟ್ಟಿಕೊಂಡವೋ, ಆಗೆಲ್ಲ ಪ್ರಧಾನಮಂತ್ರಿಯವರು ದೇಶದ ಮುಖ್ಯಸ್ಥನ ಜವಾಬ್ದಾರಿ ವಹಿಸುವ ಬದಲಿಗೆ ಮೌನ ತಳೆದಿದ್ದಾರೆ. ಪಂಜಾಬ್ ಮತ್ತು ಹರಿಯಾಣ ನಡುವೆ ಜಲವಿವಾದ ಎದುರಾದಾಗ, ಅದನ್ನು ಬಗೆಹರಿಸುವ ಯಾವ ಪ್ರಯತ್ನವನ್ನೂ ಪ್ರಧಾನಮಂತ್ರಿ ಮಾಡಲಿಲ್ಲ. ತನ್ನನ್ನು ತಾನು ರಾಷ್ಟ್ರೀಯವಾದಿ ಎಂದು ಘೋಷಿಸುವ ಅವರ ಪಕ್ಷವು ಹರಿಯಾಣದಲ್ಲಿ ಜನರ ಭಾವನೆಗಳನ್ನು ಕೆರಳಿಸುವ ಕೆಲಸದಲ್ಲಿ ತೊಡಗಿದ್ದಾಗ, ಅತ್ತ ಪಂಜಾಬಿನ ವಿಧಾನಸಭೆಯಲ್ಲಿ ಕುಳಿತ ಅವರ ಶಾಸಕರು ಪಂಜಾಬಿನ ಜನರನ್ನು ಓಲೈಸುವುದಕ್ಕಾಗಿ ತದ್ವಿರುದ್ಧವಾದ ಹೇಳಿಕೆಗಳನ್ನು ನೀಡುತ್ತಿದ್ದರು. ಪ್ರಧಾನಮಂತ್ರಿಯವರು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಒಟ್ಟಿಗೆ ಕೂರಿಸಿ ಈ ವಿಷಯವನ್ನು ಬಗೆಹರಿಸುವ ಪ್ರಯತ್ನವನ್ನೂ ಮಾಡಲಿಲ್ಲ ಹಾಗೂ ತಮ್ಮ ಪಕ್ಷಕ್ಕೆ ಬರಬಹುದಾದ ನಾಲ್ಕೈದು ವೋಟುಗಳ ಆಸೆ ಬಿಟ್ಟು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಲ್ಲಿ ಕೆಲಸ ಮಾಡಬೇಕು ಎಂಬ ಸಲಹೆಯನ್ನೂ ನೀಡಲಿಲ್ಲ. ಕರ್ನಾಟಕ ಮತ್ತು ತಮಿಳನಾಡು ನಡುವಿನ ಕಾವೇರಿ ಜಲವಿವಾದದ ಬಗ್ಗೆಯೂ ಇದೇ ರೀತಿಯ ರಾಜಕೀಯದ ಆಟವನ್ನು ಆಡಲಾಗುತ್ತಿದೆ. ಪ್ರಧಾನಮಂತ್ರಿಗೆ ತಮಿಳನಾಡಿನ ಸೆಂಗೋಲ್‌ಅನ್ನು ರಾಷ್ಟ್ರೀಯ ಪ್ರತೀಕವನ್ನಾಗಿಸುವುದರಲ್ಲಿ ಆಸಕ್ತಿ ಇದೆ ಆದರೆ ತಮಿಳನಾಡಿನ ರೈತರ ಕುಂದುಕೊರತೆಗಳನ್ನು ನೀಗಿಸಲು ಕರ್ನಾಟಕದಲ್ಲಿನ ತಮ್ಮದೇ ಪಕ್ಷದ ಮುಖ್ಯಮಂತ್ರಿಯೊಂದಿಗೆ ಮಾತುಕತೆ ಮಾಡಲು ಯಾವ ಆಸಕ್ತಿಯೂ ಇದ್ದಿಲ್ಲ. ಹರಿಯಾಣದಲ್ಲಿ ಜಾತೀಯ ಹಿಂಸೆ ಆದಾಗ, ಅಲ್ಲಿನ ಅನೇಕ ನಗರಗಳು ಹತ್ತಿಕೊಂಡು ಉರಿದವು, ಸರಕಾರ ಮೌನವಾಗಿತ್ತು, ಪ್ರಧಾನಮಂತ್ರಿ ಏನನ್ನೂ ಹೇಳಲಿಲ್ಲ. ಅವರ ಪಕ್ಷದ ನಾಯಕರು ಈ ಹಿಂಸೆಯಲ್ಲಿ ಮತಗಳ ಲಾಭ ನಷ್ಟದ ತಕ್ಕಡಿ ತೂಗುತ್ತಿದ್ದರು; ಆದರೆ ಪ್ರಧಾನಮಂತ್ರಿಯವರು ಮಾತ್ರ ಈ ಯಾವುದೇ ಒಂದು ಬಿರುಕನ್ನು ಸರಿಪಡಿಸುವ ಯಾವ ಪ್ರಯತ್ನವನ್ನೂ ಮಾಡಲಿಲ್ಲ.

ರಾಜೀವ್ ಗಾಂಧಿ

ಆದರೆ, ಒಂದು ವೇಳೆ ಮನೆಗೆ ಬೆಂಕಿ ಬಿದ್ದಿದೆ ಹಾಗೂ ಅದರಲ್ಲಿ ಬೇಳೆ ಬೇಯಿಸಿಕೊಳ್ಳುವ ಅವಕಾಶ ಇದೆ ಎಂದಾಗ ಆ ಅವಕಾಶವನ್ನು ಮಾತ್ರ ನರೇಂದ್ರ ಮೋದಿಯವರು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ಪ್ರಶ್ನೆ ಏನೆಂದರೆ, ಇದೆಂತಹ ರಾಷ್ಟ್ರೀಯತೆ, ರಾಷ್ಟ್ರವು ಒಡೆದುಹೋಗುತ್ತಿದ್ದರೂ ಅದರ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ವಹಿಸುವ ರಾಷ್ಟ್ರೀಯತೆ ಎಂತಹದ್ದು?

ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಪ್ರಧಾನಮಂತ್ರಿಯಾಗಿದ್ದ ಅವಧಿಯನ್ನು ನೆನಪಿಸುವುದು ಸೂಕ್ತ. 1985ರಲ್ಲಿ ರಾಜೀವ್ ಗಾಂಧಿ ಪ್ರಧಾನಮಂತ್ರಿಯಾದಾಗ ಅವರ ವಯಸ್ಸು, ಅವರ ರಾಜಕೀಯ ತಿಳಿವಳಿಕೆ ಹಾಗೂ ಅನುಭವವು ನರೇಂದ್ರ ಮೋದಿಯವರಿಗೆ ಹೋಲಿಸಿದರೆ ಬಹಳ ಕಡಿಮೆ ಎನ್ನಬಹುದು. ಸಿಖ್ ನರಮೇಧದ ಕಳಂಕವೂ ಅವರ ಪಕ್ಷದ ಮೇಲಿತ್ತು. ಆದರೆ ಈ ಹೊಸ ಮತ್ತು ಅನನುಭವಿ ಪ್ರಧಾನಿಯು ಪಂಜಾಬಿನಲ್ಲಿ ಸಂತ ಲೋಂಗೊವಾಲ್‌ರೊಂದಿಗೆ ಒಪ್ಪಂದ ಮಾಡಿಕೊಂಡರು. ಆಸ್ಸಾಂನಲ್ಲಿ ಏಳು ವರ್ಷಗಳಿಂದ ನಡೆಯುತ್ತಿದ್ದ ಆಂದೋಲನವನ್ನು ಮುಕ್ತಾಯಗೊಳಿಸಿದರು, ತಮ್ಮ ಪಕ್ಷದ ಚುನಾವಣಾ ಸೋಲನ್ನು ಒಪ್ಪಿಕೊಂಡರು. ಮಿಜೋರಾಂನಲ್ಲಂತೂ ಅವರು ತಮ್ಮ ಪಕ್ಷದ ಸರಕಾರವನ್ನು ತೆಗೆದುಹಾಕಿ ವಿದ್ರೋಹಿ ಲಾಲಡೆಂಗ್‌ಅನ್ನು ಮುಖ್ಯಮಂತ್ರಿಯಾಗಿ ನೇಮಿಸಿದರು ಹಾಗೂ ಆ ಗಡಿಪ್ರದೇಶದ ರಾಜ್ಯದಲ್ಲಿ ದೀರ್ಘಕಾಲೀನ ಶಾಂತಿಗೆ ದಾರಿಮಾಡಿಕೊಟ್ಟರು. ತಮ್ಮ ಹೋಲಿಕೆಯನ್ನು ಜವಾಹರಲಾಲ್ ನೆಹರು ಅವರೊಂದಿಗೆ ಮಾಡಲು ಉತ್ಸುಕರಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಈ ಹೋಲಿಕೆ ಬಹುಶಃ ಇಷ್ಟವಾಗದೇ ಇರಬಹುದು ಆದರೆ ರಾಷ್ಟ್ರೀಯ ಏಕತೆಗಾಗಿ ರಾಜಕೀಯ ರಿಸ್ಕ್‌ಗಳನ್ನು ತೆಗೆದುಕೊಂಡು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವ ವಿಷಯದಲ್ಲಿ ಸದ್ಯಕ್ಕೆ ರಾಜೀವ್ ಗಾಂಧಿಗಿಂತ ಅವರು ಹಿಂದಿದ್ದಾರೆ. ಈಗ ಅವರು ದೇಶಕ್ಕೆ ಮರಳಿದ್ದು ದೇಶದ ಮುಖ್ಯಸ್ಥನಿಗೆ ಇರಬೇಕಾದ ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸುವ ಕೆಲಸದ ಆರಂಭವನ್ನು ಮಣಿಪುರದಿಂದ ಮಾಡುವವರು ಎಂದು ಆಶಿಸೋಣ.

ಕನ್ನಡಕ್ಕೆ: ರಾಜಶೇಖರ ಅಕ್ಕಿ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ಸ್ವರಾಜ್ ಇಂಡಿಯಾ ಸಂಸ್ಥಾಪಕರಲ್ಲೊಬ್ಬರು, ರಾಜಕೀಯ ಚಿಂತಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...