Homeಮುಖಪುಟಟ್ವಿಟರ್ ಅರ್ಜಿ ವಜಾಗೊಳಿಸಿ ಕೇಂದ್ರದ ಪರ ಹೈಕೋರ್ಟ್ ತೀರ್ಪು

ಟ್ವಿಟರ್ ಅರ್ಜಿ ವಜಾಗೊಳಿಸಿ ಕೇಂದ್ರದ ಪರ ಹೈಕೋರ್ಟ್ ತೀರ್ಪು

- Advertisement -
- Advertisement -

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿದ್ದ ಹಲವು ನಿರ್ಬಂಧಗಳು ಮತ್ತು ಟೇಕ್ ಡೌನ್ ಆದೇಶಗಳನ್ನು ಪ್ರಶ್ನಿಸಿ, “ಟ್ವಿಟರ್ ಸಂಸ್ಥೆ” ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಅದರ ಜೊತೆಗೆ ಟ್ವಿಟರ್ ಸಂಸ್ಥೆಗೆ 50 ಲಕ್ಷ ರೂ. ದಂಡ ವಿಧಿಸಲಾಗಿದೆ.

ಫೆಬ್ರವರಿ 2021 ರಿಂದ ಫೆಬ್ರವರಿ 2022 ರ ನಡುವೆ ಕೇಂದ್ರ ಸರ್ಕಾರವು 39 ಟ್ವೀಟ್‌ಗಳು ಮತ್ತು ಖಾತೆಗಳನ್ನು ನಿರ್ಬಂಧಿಸುವ ಆದೇಶ ಹೊರಡಿಸಿತ್ತು. ಆ ಆದೇಶವನ್ನು ಪ್ರಶ್ನಿಸಿ ಟ್ವಿಟರ್ ಮನವಿಯನ್ನು ಸಲ್ಲಿಸಿತ್ತು. ಟ್ವಿಟರ್ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಈ ಸಂಬಂಧದ ರಿಟ್ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಬೆಳಗ್ಗೆ ಪ್ರಕಟಿಸಿತು. ದಂಡದ ಮೊತ್ತವನ್ನು 45 ದಿನಗಳಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿಸುವಂತೆ ಆದೇಶಿಸಲಾಗಿದೆ. ಒಂದೊಮ್ಮೆ 45 ದಿನಗಳಲ್ಲಿ ದಂಡವನ್ನು ಪಾವತಿಸಲು ವಿಫಲವಾದರೆ ದಿನಕ್ಕೆ 5 ಸಾವಿರದಂತೆ ಹೆಚ್ಚುವರಿ ದಂಡ ವಿಧಿಸಲಾಗುವುದು” ಎಂದು ನ್ಯಾಯಪೀಠ ಹೇಳಿದೆ.

”ಸ್ವೀಟ್‌ಗಳನ್ನು ಮತ್ತು ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಲು ಕೇಂದ್ರಕ್ಕೆ ಅಧಿಕಾರವಿದೆ ಎಂಬುದು ಕೇಂದ್ರ ಸರ್ಕಾರದ ಪರ ವಕೀಲರ ವಾದ ಸಮರ್ಥನೆಯಿಂದ ಪೀಠಕ್ಕೆ ಮನವರಿಕೆಯಾಗಿದೆ” ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.

“ನೀವು [ಟ್ವಿಟ್ಟರ್] ನಿಯಮಗಳನ್ನು ಜಾರಿಗೆ ತರಲು ಏಕೆ ವಿಳಂಬಗೊಳಿಸಿದ್ದೀರಿ, ಒಂದು ವರ್ಷಕ್ಕೂ ಹೆಚ್ಚು ವಿಳಂಬ ಮಾಡಿರುವುದಕ್ಕೆ ಯಾವುದೇ ಕಾರಣವನ್ನು ನೀಡಿಲ್ಲ… ನಂತರ ನೀವು ಇದ್ದಕ್ಕಿದ್ದಂತೆ ಪಾಲಿಸುತ್ತೀರಿ ಮತ್ತು ನ್ಯಾಯಾಲಯವನ್ನು ಸಂಪರ್ಕಿಸುತ್ತೀರಿ. ನೀವು ಕಾನೂನಿನ ಪರಿಚಯವಿಲ್ಲದ ರೈತರಲ್ಲ, ಆದರೆ ಬಿಲಿಯನ್ ಡಾಲರ್ ಕಂಪನಿಯವರು” ಎಂದು ನ್ಯಾಯಮೂರ್ತಿ ದೀಕ್ಷಿತ್ ಹೇಳಿದರು.

ಕೇಂದ್ರದ ವಾದವನ್ನು ತಮಗೆ ಮನವರಿಕೆಯಾಗಿದೆ ಎಂದ ನ್ಯಾಯಾಧೀಶರು, ಕೇಂದ್ರ ಸರ್ಕಾರವು ಟ್ವೀಟ್‌ಗಳನ್ನು ತೆಗೆದುಹಾಕಲು ಟ್ವಿಟರ್‌ಗೆ ಕೇಳುವ ಅಧಿಕಾರವನ್ನು ಹೊಂದಿದ್ದು ಮಾತ್ರವಲ್ಲದೆ ಖಾತೆಗಳನ್ನು ನಿರ್ಬಂಧಿಸಲು ಕಂಪನಿಯನ್ನು ಕೇಳಬಹುದು” ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಇದನ್ನೂ ಓದಿ: ಯುಸಿಸಿ ಜಾರಿ ಮುನ್ನ ಮರುಚಿಂತಿಸದಿದ್ರೆ ಪ್ರತಿರೋಧ ಎದುರಿಸಬೇಕಾಗುತ್ತದೆ: ಕೇಂದ್ರಕ್ಕೆ ಫಾರೂಕ್ ಅಬ್ದುಲ್ಲಾ ಎಚ್ಚರಿಕೆ

ಏನಿದು ಪ್ರಕರಣ?

ಫೆಬ್ರವರಿ 2021ರಲ್ಲಿ, ನವೆಂಬರ್ 2022ರ ನಡುವೆ ನಡೆದ ದೊಡ್ಡ ಪ್ರಮಾಣದ ರೈತ ಪ್ರತಿಭಟನೆಗಳನ್ನು ನಿಭಾಯಿಸುವಲ್ಲಿ ಕೇಂದ್ರ ಸೋತಿದೆ, ಕೇಂದ್ರ ಸರ್ಕಾರ ರೈತ ವಿರೋಧ ಕಾನೂನು ತರುತ್ತಿದೆ ಎಂದು ಟೀಕಿಸಿದ ನೂರಾರು ಖಾತೆಗಳನ್ನು ತೆಗೆದುಹಾಕಲು ಸರ್ಕಾರವು ಟ್ವಿಟರ್ ಅನ್ನು ಕೇಳಿದೆ. ಮೊದಲು ಸರ್ಕಾರದ ಬೇಡಿಕೆಯನ್ನು ಟ್ವಿಟರ್ ಸಂಸ್ಥೆ ನಿರಾಕರಿಸಿತು, ಆಗ ತನ್ನ ಸ್ಥಳೀಯ ಉದ್ಯೋಗಿಗಳಿಗೆ ಜೈಲಿಗೆ ಹಾಕುವ ಬೆದರಿಕೆ ಹಾಕಲಾಯಿತು.

ಟ್ವಿಟರ್ ಖಾತೆಗಳನ್ನು ನಿರ್ಬಂಧಿಸುವ ಕೇಂದ್ರ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಜುಲೈನಲ್ಲಿ, ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಕೇಂದ್ರ ಸರ್ಕಾರ “ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಫೆಬ್ರವರಿ 2021 ಮತ್ತು ನವೆಂಬರ್ 2022ರ ನಡುವೆ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು 175 ಟ್ವೀಟ್‌ಗಳನ್ನು ಮತ್ತು 1,400ಕ್ಕೂ ಹೆಚ್ಚು ಖಾತೆಗಳನ್ನು ತೆಗೆದುಹಾಕಲು ಕೇಳಿಕೊಂಡಿದೆ ಎಂದು ಕಂಪನಿಯು ಹೈಕೋರ್ಟ್‌ಗೆ ತಿಳಿಸಿದೆ.

ವಿಚಾರಣೆಯ ಸಂದರ್ಭದಲ್ಲಿ, ”ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ನ ಬಳಕೆದಾರರಿಗೆ ಅವರ ಖಾತೆಗಳನ್ನು ಯಾಕೆ ನಿರ್ಬಂಧಿಸಬೇಕು ಎನ್ನುವ ಬಗ್ಗೆ ಕಾರಣವನ್ನು ಸರ್ಕಾರ ನೀಡಬೇಕು” ಎಂದು ಟ್ವಿಟರ್ ವಾದಿಸಿತ್ತು.

”ನೋಟಿಸ್ ನೀಡದೆ ತಮ್ಮ ಖಾತೆಗಳನ್ನು ನಿರ್ಬಂಧಿಸಿದರೆ 19ನೇ ವಿಧಿಯ (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು) ಅಡಿಯಲ್ಲಿ ತನ್ನ ಬಳಕೆದಾರರ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತದೆ ಮತ್ತು ಖಾತೆಗಳನ್ನು ನಿರ್ಬಂಧಿಸಲು ಕಾರಣವನ್ನು ನಮೂದಿಸಬೇಕು” ಎಂದು ಅದು ನ್ಯಾಯಾಲಯಕ್ಕೆ ತಿಳಿಸಿತ್ತು.

ಇದಕ್ಕೆ ಉತ್ತರವಾಗಿ ಕೇಂದ್ರ ಸರ್ಕಾರವು, ”ಟ್ವಿಟರ್ ವಿದೇಶಿ ವ್ಯಾಪಾರ ಸಂಸ್ಥೆಯಾಗಿದ್ದು, ಸರ್ಕಾರದ ಆದೇಶದ ಮೇರೆಗೆ ಖಾತೆಗಳನ್ನು ನಿರ್ಬಂಧಿಸಿದವರ ಪರವಾಗಿ ಮಾತನಾಡುವ ಹಕ್ಕು ಇಲ್ಲ” ಎಂದು ದರ್ಪದ ಹೇಳಿಕೆ ನೀಡಿತ್ತು.

ಕಳೆದ ವರ್ಷ ಏಪ್ರಿಲ್‌ನಲ್ಲಿಯೂ ಸಹ, ಲಕ್ಷಗಟ್ಟಲೆ ಜನರು ಕೋವಿಡ್ ಎರಡನೇ ಅಲೆಗೆ ಸಾವಿಗೀಡಾದರು. ಈ ಸಮಯದಲ್ಲಿ ಸರ್ಕಾರವು ಕೋವಿಡ್ -19 ಅನ್ನು ನಿರ್ವಹಿಸುತ್ತಿರುವುದನ್ನು ಟೀಕಿಸಿದ ಖಾತೆಗಳನ್ನು ತೆಗೆದುಹಾಕಲು ಕೇಂದ್ರವು ಟ್ವಿಟರ್‌ಗೆ ಕೇಳಿಕೊಂಡಿತ್ತು. ಆದರೆ ಟ್ವಿಟರ್ ಈ ಬಗ್ಗೆ ತಲೆಕೆಡಸಿಕೊಳ್ಳಲಿಲ್ಲ, ಆಗಲೂ  ಕೇಂದ್ರವು ಟ್ವಿಟರ್ ಮೇಲೆ ಮುಗಿಬಿದ್ದಿತ್ತು.

ಹೈಕೋರ್ಟ್‌ ತೀರ್ಪಿಗೆ ಪ್ರತಿಕ್ರಿಯೆ

ಈ ಬಗ್ಗೆ ಇಂಟರ್ನೆಟ್ ಫ್ರೀಡಂ ಫೌಂಡೇಶನ್‌ನ ರಾಧಿಕಾ ರಾಯ್ ಅವರು ಪ್ರತಿಕ್ರಿಯಿಸಿ, ”ಸರ್ಕಾರವು ಪಕ್ಷಪಾತದ ರೀತಿಯಲ್ಲಿ ಜಾರಿಗೆ ತಂದಿರುವ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ರೂಪಿಸಲಾದ ಕಾರ್ಯವಿಧಾನವನ್ನು ಮಾತ್ರ ನ್ಯಾಯಾಲಯ ಗಮನಿಸುತ್ತಿದೆ. ಏಕೆಂದರೆ ಕಾಯಿದೆಯ ಸೆಕ್ಷನ್ 69A, ಇಂಟರ್ನೆಟ್ ಸೇವಾ ಪೂರೈಕೆದಾರರು, ಟೆಲಿಕಾಂ ಸೇವಾ ಪೂರೈಕೆದಾರರು, ವೆಬ್ ಹೋಸ್ಟಿಂಗ್ ಸೇವೆಗಳು, ಸರ್ಚ್ ಇಂಜಿನ್‌ಗಳು ಮತ್ತು ಆನ್‌ಲೈನ್ ಮಾರುಕಟ್ಟೆ ಸ್ಥಳಗಳಂತಹ ಆನ್‌ಲೈನ್ ಮಧ್ಯವರ್ತಿಗಳಿಗೆ ವಿಷಯವನ್ನು ನಿರ್ಬಂಧಿಸುವ ಆದೇಶಗಳನ್ನು ನೀಡಲು ಸರ್ಕಾರಕ್ಕೆ ಅವಕಾಶ ನೀಡುತ್ತದೆ” ಎಂದು ಹೇಳಿದರು.

ವಿಷಯವನ್ನು ಬರೆದವರ ಗಮನಕ್ಕೆ ತರದೇ ಅದನ್ನು ತೆಗೆದುಹಾಕುವಿಕೆ ಮತ್ತು ಸರ್ಕಾರದ ಸೂಚನೆಗಳನ್ನು ಸಾರ್ವಜನಿಕಗೊಳಿಸುತ್ತಿಲ್ಲ. ಇದು ನೈಸರ್ಗಿಕ ನ್ಯಾಯದ ತತ್ವಗಳನ್ನು ನಿರಾಶೆಗೊಳಿಸುತ್ತದೆ. ಏಕೆಂದರೆ ಇದು ಸಂತ್ರಸ್ತರು, ಪೀಡಿತರು ವಾಪಸ್ ಸಮರ್ಪಕವಾಗಿ ಸವಾಲು ಹಾಕಲು ಅನುಮತಿಸುವುದಿಲ್ಲ. ಎಂದು ರಾಯ್ ಹೇಳಿದ್ದಾರೆ.

ಖಾತೆಗಳ ಹಲವಾರು ಪೋಸ್ಟ್‌ಗಳನ್ನು ಏಕಕಾಲಕ್ಕೆ ನಿರ್ಬಂಧಿಸುವಿಕೆಯನ್ನು ಅನುಮತಿಸುವ ನ್ಯಾಯಾಲಯದ ನಿರ್ಧಾರವು ಸಮಾನ ಆಯ್ಕೆಯ ಸಿದ್ಧಾಂತಕ್ಕೆ ವಿರುದ್ಧವಾಗಿದೆ. “ಒಂದು ಖಾತೆಯು ತನ್ನ ನೀತಿಗಳನ್ನು ಪದೇ ಪದೇ ಉಲ್ಲಂಘಿಸಿದರೆ, ಅದನ್ನು ನಿಷೇಧಿಸಲಾಗುವುದು ಎಂದು ಟ್ವಿಟರ್ ಸ್ವತಃ ಹೇಳುತ್ತದೆ. ಹಾಗಿದ್ದರೂ ಸರ್ಕಾರವು ಕೇವಲ ಒಂದು ಟ್ವೀಟ್‌ನ ಆಧಾರದ ಮೇಲೆ ಅದನ್ನು ಮಾಡಿದಾಗ, ಅವರು ಬಳಕೆದಾರರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುತ್ತಾರೆ. ಅಲ್ಲದೆ, ಬಳಕೆದಾರರು ತಮ್ಮ ಖಾತೆಗಳನ್ನು ಸರ್ಕಾರ ತಡೆಹಿಡಿಯಲು ಕಾರಣವೇನೆಂದು ಸಹ ಹಲವಾರು ಬಾರಿ ತಿಳಿದುಕೊಳ್ಳಲು ಸಾಧ್ಯವಿಕಾರಣಗಳ ಬಗ್ಗೆ ಅಪರೂಪವಾಗಿ ತಿಳಿಸುತ್ತಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...