Homeಚಳವಳಿಮನಮೋಹನ್ ಸಿಂಗ್‌ ಎಂಬ ಮೌನಿಸಿಂಗ್...  ಇತಿಹಾಸ ಎಂದು ನಿಮ್ಮನ್ನು ಮರೆಯುವುದಿಲ್ಲ...

ಮನಮೋಹನ್ ಸಿಂಗ್‌ ಎಂಬ ಮೌನಿಸಿಂಗ್…  ಇತಿಹಾಸ ಎಂದು ನಿಮ್ಮನ್ನು ಮರೆಯುವುದಿಲ್ಲ…

- Advertisement -
- Advertisement -

ಇಂದು ಪ್ರಜಾವಾಣಿಯ ಮುಖಪುಟದಲ್ಲಿ ಎ. ನಾರಾಯಣ್ ಅವರ “ಆಪದ್ಬಾಂಧವ ಅರ್ಥಮಾಂತ್ರಿಕ” ಲೇಖನದಲ್ಲಿ  ಮನಮೋಹನ್ ಸಿಂಗ್  ಅವರಿಗಿಂತಲೂ ಜಗತ್ತಿನಲ್ಲಿ ಪ್ರಖ್ಯಾತ ಅರ್ಥಶಾಸ್ತ್ರಜ್ಞರು  ಇರಬಹುದು ಆದರೆ, ಒಬ್ಬ ಅರ್ಥಶಾಸ್ತ್ರಜ್ಞನಾಗಿ ಆರ್ಥಿಕವಲಯದ ಎಲ್ಲಾ ಆಯಾಕಟ್ಟಿನ ಉನ್ನತ ಹುದ್ದೆಗಳನ್ನು ಅಲಂಕರಿಸಿದರೂ ನಿಗರ್ವಿಯಾಗಿ ನಿರ್ಗಮಿಸಿದರು,  ಎಂದು ಓದುವಾಗ ಒಂದು ಕ್ಷಣ ರೋಮಾಂಚನವಾಯಿತು.

ಮನಮೋಹನ್ ಸಿಂಗ್ ಅವರನ್ನು ವಿಶ್ಲೇಷಣೆ ಮಾಡಿ ಬರೆಯಲು ನಾನು ಅರ್ಥಶಾಸ್ತ್ರದ ವಿದ್ಯಾರ್ಥಿ ಅಲ್ಲ ಆದರೆ, ಎರಡುವರೆ ದಶಕದಿಂದ ಸಾಮಾಜಿಕ ಕಾರ್ಯಕರ್ತೆಯಾಗಿ ಹಾಗೂ ರಾಜಕೀಯ ಕಾರ್ಯಕರ್ತೆಯಾಗಿ ನನಗನ್ನಿಸುವುದೇನೆಂದರೆ, ಮನಮೋಹನ್ ಸಿಂಗ್‌ ಅವರು  ತಾವು ಜೀವಿತವಾಗಿರುವಾಗಲೇ, ಜಗತ್ತಿನ ದೊಡ್ಡ ದೊಡ್ಡ ಅರ್ಥಶಾಸ್ತ್ರಜ್ಞರೆಲ್ಲರೂ ತಮ್ಮನ್ನು ಹಾಡಿ ಹೊಗಳಿದವರನ್ನು ಹಾಗೆಯೇ ತಮ್ಮನ್ನು ಅತ್ಯಂತ ಹೀನಾಯವಾಗಿ ಜರಿದವರನ್ನೂ  ಒಟ್ಟೊಟ್ಟಿಗೆ  ತಮ್ಮ ಬದುಕಿನ ಕಾಲಘಟ್ಟದಲ್ಲಿ ಕಂಡರೂ, ಹೊಗಳಿಕೆಗೂ  ಹಾಗೂ ತೆಗಳಿಕೆಗೂ ಅವರ ಮೌನವೇ ಉತ್ತರವಾಗಿತ್ತು…

ಇವತ್ತಿನ ರಾಜಕೀಯ ವ್ಯವಸ್ಥೆಯಲ್ಲಿ “ಏನು ಮಾತಾಡಬೇಕು ಎನ್ನುವುದಕ್ಕಿಂತ ಏನೆಲ್ಲಾ ಮಾತಾಡಬಾರದು” ಎನ್ನುವುದನ್ನು ಸ್ವಾಸ್ಥ ನಾಗರಿಕ ಸಮಾಜ ಅತ್ಯಂತ ಗಂಭೀರವಾಗಿ ಯೋಚಿಸುವ ಕಾಲಘಟ್ಟದಲ್ಲಿ, ಮನಮೋಹನ್ ಸಿಂಗ್ ಅವರನ್ನು ಜರಿಯುವುದಕ್ಕಾಗಿ ಬಳಸಿದ ಆ ಮೌನಿಸಿಂಗ್ ಎಂಬ ಪದವೇ ಉತ್ತರವಲ್ಲವೇ? ಯಾಕೋ ಈ ಮೌನಿಸಿಂಗ್ ಎಂಬ ಪದ ನನಗೆ ಬಲು ತಂಪಾಗಿ ಇಂದು ಕೇಳಿಸುತ್ತಿದೆ.‌ ಕಾರಣ  “ಆಡದೇ ಮಾಡುವನು ರೂಢಿಯೊಳಗುತ್ತಮನು” ಎಂಬ ಸರ್ವಜ್ಞನ ಮಾತಿನಂತೆ ಕತ್ತಲಿನಲ್ಲಿ ಕಂದೀಲ ದೀಪದಲ್ಲಿ ವಿದ್ಯಾಭ್ಯಾಸ ಮಾಡಿದರೂ,  ಭಾರತದ ಅರ್ಥವ್ಯವಸ್ಥೆಯ ಪ್ರಜ್ವಲ ಬೆಳಕಾಗಿ ಮೌನವಾಗಿಯೇ ಪ್ರಕಾಶಿಸಿದ್ದು ಒಂದು ಅತ್ಯದ್ಭುತವಾದ ಸಂಗತಿ.

ವಿರೋಧಪಕ್ಷದವರಿಂದ “ಆಕ್ಸಿಡೆಂಟಲ್ ಪ್ರಧಾನಿ” ಎಂದು ಟೀಕೆಗೆ ಒಳಪಟ್ಟರೂ, ಭಾರತದ ಆರ್ಥಿಕ ವ್ಯವಸ್ಥೆಯನ್ನು ಎಲ್ಲಿಯೂ ಆಕ್ಸಿಡೆಂಟ್ ಆಗದ ಹಾಗೆ ಆಡಳಿತ ನಡೆಸಿ ಆರ್ಥಿಕ ಜಗತ್ತಿನ ಮಾಂತ್ರಿಕನಾಗಿ ಮೌನವಾಗಿಯೇ ಮೆರೆದರು.

ಪ್ರಸ್ತುತ ದೇಶದ ಪ್ರಧಾನಿಯವರ ಮಾಧ್ಯಮಗೋಷ್ಠಿಗಾಗಿ 10 ವರ್ಷಗಳಿಂದಲೂ ಕೂಗುಗಳಿದ್ದರೂ, ಮನಮೋಹನ್ ಸಿಂಗ್ ಅವರು 117 ಮಾಧ್ಯಮಗೋಷ್ಠಿಗಳಲ್ಲಿ ನಿರಂತರವಾಗಿ ಮಾತನಾಡುತ್ತಾ, ತಮ್ಮ ಕೊನೆಯ ಗೋಷ್ಠಿಯಲ್ಲಿ ನೂರಕ್ಕೂ ಹೆಚ್ಚು ಮಾಧ್ಯಮ ಪ್ರತಿನಿಧಿಗಳ ಮುಂದೆ “ನಾನು ಮಾತನಾಡುವುದಕ್ಕೆ ಹೆದರುವ ಪ್ರಧಾನಿಯಲ್ಲ” ಎಂದು ಹೇಳಿದ್ದು ಇದೇ ಮೌನಿಸಿಂಗ್ ಮನಮೋಹನ್ ಸಿಂಗ್ ಅವರೇ….

ಹೀಗೆ ಹೇಳಿ ಮಾತಿನ ತೂಕವನ್ನು ಜಗತ್ತಿಗೆ ಸಾರಿದರು.

ಈ 10-11 ವರ್ಷಗಳಲ್ಲಿ ದೇಶದ ಆಡಳಿತ ವ್ಯವಸ್ಥೆಯಲ್ಲಿ ಕೇವಲ ಮಾತುಗಳನ್ನು ಕೇಳಿ ಕೇಳಿ ಸಾಕಾಗಿ ಹೋಗಿದೆ.‌ ಇಂದು ಬರೀ ಮಾತುಗಳಿಂದಲೇ ದೇಶದ ಅಭಿವೃದ್ಧಿ ಹಾಗೂ ಸಾಮಾಜಿಕ ಸ್ವಾರ್ಥಕ್ಕೆ ಧಕ್ಕೆ ಉಂಟಾಗಿರುವಾಗ, ಮಾತು ಬಂಗಾರದಂತೆ ಬಳಸಿ ಆರ್ಥಿಕ ಸಾರೋಟದಲ್ಲಿ ಜರಿದವರಿಂದಲೇ ಮೆರವಣಿಗೆ ಮಾಡಿಸಿಕೊಂಡವರು ಇದೇ ಮನಮೋಹನ್ ಸಿಂಗ್…‌ ಅಲ್ಲವೇ ?

ಪ್ರಾಧ್ಯಾಪಕನಿಂದ ಪ್ರಧಾನಿ ಹುದ್ದೆ ಏರಿದರೂ, ವಿಶ್ವದ್ಯಾಂತ ಅನೇಕ ರಾಷ್ಟ್ರಗಳಲ್ಲಿ ಪ್ರವಾಸ ಮಾಡಿದರೂ,  ಅನೇಕ ಪ್ರಶಸ್ತಿಗೆ ಭಾಜನರಾಗಿ ಅನೇಕ ಸಾಧನೆಗಳನ್ನು  ಮಾಡಿದರೂ,  ಎಲ್ಲಿಯೂ ಫೋಟೋಶೂಟ್ ಮಾಡಿಸಿಕೊಳ್ಳದೆ ಯಾವುದನ್ನು ಪ್ರಚಾರ ಮಾಡಿಕೊಳ್ಳದೆ, ಮೌನವಾಗಿಯೇ ತಮ್ಮ ಹೆಸರನ್ನು ಇತಿಹಾಸದ ಪುಟಗಳಲ್ಲಿ ಸೇರಿಸಿದ ಮಾಂತ್ರಿಕ, ಅವರೇ ಹೇಳಿದಂತೆ “ಯಾವಾಗ ಏನಾಗಬೇಕೋ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ” ( Nobody power on earth can stop an idia whose time has come ) ಎಂದು, ಪ್ರಕೃತಿಯ ಕರೆಗೆ ಓಗೊಟ್ಟು ಸಾಗಿದ ಆರ್ಥಿಕ ಜಗತ್ತಿನ ಸಾಮ್ರಾಟ, ಮೌನವಾಗಿಯೇ ಸಾಧಿಸಿದ ಕಾರ್ಯಗಳು ಈ ಜಗತ್ತು ಇರುವವರೆಗೂ ಮಾತಾಡುತ್ತವೆ..

ಮನಮೋಹನ್ ಸಿಂಗ್‌ ಎಂಬ ಮೌನಿಸಿಂಗ್ ಹೋಗಿಬನ್ನಿ, ಇತಿಹಾಸ ನಿಮ್ಮನ್ನು ಎಂದೂ ಮರೆಯುವುದಿಲ್ಲ….

ಮನಮೋಹನ್ ಸಿಂಗ್ ಅವರ ಬದುಕು, ಆರ್ಥಿಕ ನೀತಿಗಳು ನಮಗೆಲ್ಲ ಪ್ರೇರಣೆ : ಸಿಎಂ ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...