ಭಗತ್ ಸಿಂಗ್, ರಾಜ್‌ಗುರು ಮತ್ತು ಸುಖದೇವ್ ಅವರ 90 ನೇ ಹುತಾತ್ಮ ದಿನವನ್ನು ದೇಶಾದ್ಯಂತ ಆಚರಿಸಲಾಗಿದೆ. ದೆಹಲಿಯ ಗಡಿಗಳಲ್ಲಿ ಪ್ರತಿಭಟನಾ ನಿರತ ರೈತರು ಶಹೀದ್ ದಿವಸ್ ಆಚರಿಸಿ ಹುತಾತ್ಮರ ವಿಚಾರಗಳನ್ನು ಪ್ರಸ್ತುತಪಡಿಸಿದ್ದಾರೆ.
ಯುವಜನತೆ ತಮ್ಮ ಸ್ಫೂರ್ತಿಯ ಸೆಲೆಗಳ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು. ಭಗತ್ ಸಿಂಗ್, ಶಿವರಾಮ್ ರಾಜ್‌ಗುರು ಮತ್ತು ಸುಖದೇವ್ ಥಾಪರ್ ಅವರನ್ನು ಮಾರ್ಚ್ 23, 1931 ರಂದು ಗಲ್ಲಿಗೇರಿಸಲಾಯಿತು. ವಸಾಹತುಶಾಹಿ ದಬ್ಬಾಳಿಕೆಯ ವಿರುದ್ಧ ಈ ಮೂರು ಯುವ ಕ್ರಾಂತಿಕಾರಿ ದನಿಗಳನ್ನು ಬ್ರಿಟಿಷ್ ಸರ್ಕಾರವು ತಡೆಯೊಡ್ಡಿತ್ತು. ಆದರೆ ಇಂದಿಗೂ ಈ ಮೂರು ಕ್ರಾಂತಿ ಕಿಡಿಗಳು ದೇಶದ ಯುವ ಜನರಲ್ಲಿ ಬೆರೆತು ಹೋಗಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ ತಿಳಿಸಿದೆ.
ದಬ್ಬಾಳಿಕೆಯ ವಿರುದ್ಧ ಈ ಮೂರು ಯುವ ದನಿಗಳ ತ್ಯಾಗವನ್ನು ನೆನಪಿಸಿಕೊಳ್ಳುತ್ತಾ, ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಹೋರಾಟ ನಡೆಸುತ್ತಿರುವ ರೈತರು ಇಂದು (ಮಾರ್ಚ್ 23) ದೆಹಲಿ ಗಡಿಯಲ್ಲಿ ಹುತಾತ್ಮ ದಿನವನ್ನು ಆಚರಿಸಿದರು. ಭಗತ್ ಸಿಂಗ್, ರಾಜ್‌ಗುರು, ಸುಖದೇವ್ ವಿಚಾರಗಳನ್ನು ಮೊಳಗಿಸಿದ್ದಾರೆ.
ಇದನ್ನೂ ಓದಿ: ಭಗತ್ ಸಿಂಗ್ ಹುತಾತ್ಮ ದಿನ: ದೆಹಲಿಯ ಗಡಿಗಳಲ್ಲಿ ನೆರೆಯಲಿದ್ದಾರೆ ಯುವಜನರ ದಂಡು!
ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ‘ಇಂಕ್ವಿಲಾಬ್ ಜಿಂದಾಬಾದ್’ ಎಂಬ ಘೋಷಣೆಯನ್ನು ಕೂಗಿದ್ದಾರೆ. ಪಂಜಾಬ್, ಹರಿಯಾಣ ಸೇರಿದಂತೆ ಹಲವು ರಾಜ್ಯಗಳಿಂದ ಬಂದಿದ್ದ ಯುವಜನತೆ ಈ ಹುತಾತ್ಮ ದಿನಕ್ಕೆ ಸಾಕ್ಷಿಯಾಗಿದ್ದಾರೆ. ಭಗತ್ ಸಿಂಗ್, ರಾಜ್‌ಗುರು, ಸುಖದೇವ್ ಚಿತ್ರಗಳು ಪ್ರತಿಭಟನಾ ತಾಣಗಳ ವೇದಿಕೆಗಳನ್ನು, ಜನರ ಮನಸ್ಸು ಮತ್ತು ಧ್ವಜಗಳಲ್ಲೂ ಸ್ಥಾನ ಪಡೆದುಕೊಂಡಿದ್ದವು.
ಹುತಾತ್ಮ ದಿನದ ಕೆಲವು ಕ್ಷಣಗಳು ಇಲ್ಲಿವೆ….




ಕರ್ನಾಟಕ ವಿದ್ಯಾರ್ಥಿ ಸಂಘಟನೆಯು ಮಂಡ್ಯದಲ್ಲಿ ಕ್ಯಾಂಡಲ್ ಮಾರ್ಚ್ ಮಾಡುತ್ತಾ, ಭಗತ್ ಸಿಂಗ್ ಅವರ ನೆನಪಿನಲ್ಲಿ ಕ್ರಾಂತಿಕಾರಿ ಗೀತೆಗಳನ್ನು ಹಾಡುತ್ತಾ ಜನರಲ್ಲಿ ಭಗತ್ ಸಿಂಗ್ ವಿಚಾರಗಳನ್ನು ತುಂಬುವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಮೋದಿ ಸರ್ಕಾರದ ಬಳಿ ಅಭಿವೃದ್ದಿಯ ಅಜೆಂಡಾವಿಲ್ಲ, ಕೋಮುವಾದ ಅಜೆಂಡಾ ಮಾತ್ರವಿದೆ: ಯುದುವೀರ್ ಸಿಂಗ್


