Homeಕರ್ನಾಟಕಜನಾಕ್ರೋಶದ ಸ್ಫೋಟ: ರಾಜ್ಯಾದ್ಯಂತ ಮನೆಗಳಲ್ಲಿಯೇ ಭುಗಿಲೆದ್ದ ಪ್ರತಿಭಟನೆಗಳು

ಜನಾಕ್ರೋಶದ ಸ್ಫೋಟ: ರಾಜ್ಯಾದ್ಯಂತ ಮನೆಗಳಲ್ಲಿಯೇ ಭುಗಿಲೆದ್ದ ಪ್ರತಿಭಟನೆಗಳು

ಜನರು ತಮ್ಮ ಮನೆ ಮುಂದೆಯೇ ತಟ್ಟೆ ಲೋಟ ಬಡಿದು, ಖಾಲಿ ಚೀಲ ಪ್ರದರ್ಶಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

- Advertisement -
- Advertisement -

ಜನರ ಜೀವ ಮತ್ತು ಜೀವನೋಪಾಯ ಉಳಿಸಲು ಸರ್ಕಾರ ಕೈಗೊಳ್ಳಬೇಕಾದ ಪಂಚ ತುರ್ತು ಕ್ರಮಗಳ ಬಗ್ಗೆ ತಿಂಗಳಿನಿಂದ ಹೋರಾಟ ಮಾಡುತ್ತಿರುವ ಜನಾಗ್ರಹ ಆಂದೋಲನವು ಕರೆ ನೀಡಿದ್ದ ರಾಜ್ಯವ್ಯಾಪಿ ಜನಾಗ್ರಹ ಪ್ರತಿಭಟನೆಗೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ರಾಜ್ಯಾದ್ಯಂತ ಜನಾಕ್ರೋಶ ಭುಗಿಲೆದ್ದಿದೆ.

ಕೊರೊನಾ ಲಾಕ್‌ಡೌನ್‌ನಿಂದಾಗಿ ಜನರು ತತ್ತರಿಸಿ ಹೋಗಿದ್ದಾರೆ, ಈಗಲೂ ಬೆಡ್, ಆಕ್ಸಿಜನ್ ಸಮಸ್ಯೆ ಬಗೆಹರಿದಿಲ್ಲ. ಇಂತಹ ಸಂದರ್ಭದಲ್ಲಿ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡಬೇಕಾದ ಸರ್ಕಾರ ಕೈಚೆಲ್ಲಿ ಕೂತಿದೆ. ಭಿಕ್ಷೆ ರೀತಿಯಲ್ಲಿ ಬಿಡಿಗಾಸಿನ ಪ್ಯಾಕೇಜ್ ಘೋಷಣೆ ಮಾಡಿ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸದಲ್ಲಿ ಸರ್ಕಾರ ನಿರತವಾಗಿದೆ ಎಂದು ಜನರು ಕಿಡಿಕಾರಿದ್ದಾರೆ.

ಇದನ್ನೂ ಓದಿ: “ನಾವೂ ಬದುಕಬೇಕು”: ರಾಜ್ಯಾದ್ಯಂತ ಜನಾಗ್ರಹ ಆಂದೋಲನ

ಹಾಗಾಗಿ ಕೂಡಲೇ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ಬಡಜನರಿಗೆ ಸಮರ್ಪಕ ಪಡಿತರ ಮತ್ತು ಮಾಸಿಕ 5000 ರೂಗಳನ್ನು ನೀಡಬೇಕು. ರೈತರಿಗೆ ಸಬ್ಸಿಡಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಉಚಿತ ಚಿಕಿತ್ಸೆ, ಸರ್ವರಿಗೂ ವ್ಯಾಕ್ಸಿನ್, ಬಿಪಿಎಲ್ ಜನರಿಗೆ ಸಮಗ್ರ ದಿನಸಿ – ಮಾಸಿಕ 5000 ನೆರವು ಧನ, ಅನಾಥವಾದ ಕುಟುಂಬಗಳಿಗೆ 5 ಲಕ್ಷ ಪರಿಹಾರ ಮತ್ತು ಕೃಷಿ ಬೀಜ, ಗೊಬ್ಬರಕ್ಕೆ ವಿಶೇಷ ಸಬ್ಸಿಡಿ ಈ ಐದು ಪಂಚ ಕ್ರಮಗಳನ್ನು ಜಾರಿಗೆ ತರಬೇಕೆಂದು ಜನಾಗ್ರಹ ಆಂದೋಲನ ಆಗ್ರಹಿಸಿದೆ. ಜನಪರ ಸಂಘಟನೆಗಳು ಹಾಗೂ ಪಕ್ಷಗಳು ಕರೆ ನೀಡಿವೆ.

ಜನರ ಜೀವ ಉಳಿಸುವ ಕ್ರಮಗಳಿಗಾಗಿ ಹಾಗೂ ಸಂಕಷ್ಟದಲ್ಲಿರುವ ಜನರ ಜೀವನೋಪಾಯಕ್ಕೆ ಆಸರೆಯಾಗಬಲ್ಲ ಪ್ಯಾಕೇಜಿಗಾಗಿ ತಮ್ಮ ತಮ್ಮ ಮನೆ ಮುಂದೆಯೇ ಜನರು ತಟ್ಟೆ ಲೋಟ ಬಡಿದು, ಖಾಲಿ ಚೀಲ ಪ್ರದರ್ಶಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಜನಾಗ್ರಹ ಆಂದೋಲನಕ್ಕೆ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ಬೆಂಬಲ ವ್ಯಕ್ತಪಡಿಸಿವೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, “ಕಾಂಗ್ರೆಸ್ ಪಕ್ಷವು ಈ ಜನಾಗ್ರಹ ಆಂದೋಲನವನ್ನು ಹಾಗೂ ಅದರ ಹಕ್ಕೊತ್ತಾಯಗಳನ್ನು ಬೆಂಬಲಿಸುತ್ತದೆ” ಎಂದಿದ್ದಾರೆ.

ರಾಜ್ಯದ ವಿವಿದ ಕಡೆ ನಡೆಯುತ್ತಿರುವ ಜನಾಗ್ರಹ ಆಂದೋಲನದ ಕೆಲ ಚಿತ್ರಗಳು ಇಲ್ಲಿವೆ.


ಇದನ್ನೂ ಓದಿ: “ನಾವೂ ಬದುಕಬೇಕು”: ಜನಾಗ್ರಹ ಆಂದೋಲನಕ್ಕೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಬೆಂಬಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...