ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಅಮೆಜಾನ್‌ನಲ್ಲಿ ಪುಸ್ತಕವೊಂದು ಬಿಡುಗಡೆಯಾಗಿದೆ. ಮೇ 23 ರಂದು ಬಿಡುಗಡೆಯಾಗಿರುವ ಈ ಪುಸ್ತಕದ ಹೆಸರು “ಮಾಸ್ಟರ್‌ಸ್ಟ್ರೋಕ್: ಭಾರತದ ಉದ್ಯೋಗ ಬೆಳವಣಿಗೆಯಲ್ಲಿ ಪ್ರಧಾನ ಮಂತ್ರಿಗೆ ಸಹಾಯ ಮಾಡಿದ 420 ರಹಸ್ಯಗಳು!”.
ಪುಸ್ತಕದ ಲೇಖಕನ ಹೆಸರು ನಿರುದ್ಯೋಗಿ ಭಕ್ತ (ಬೆರೋಜ್ಗರ್ ಭಕ್ತ್) ಎಂದಿದ್ದು. ಈ ಪುಸ್ತಕದಲ್ಲಿ 56 ಪುಟಗಳಿದ್ದು, ಎಲ್ಲವೂ ಖಾಲಿ ಪುಟಗಳಾಗಿವೆ. ಪುಸ್ತಕದ ಬಗ್ಗೆ ಹಲವು ಮಂದಿ ಕಾಮೆಂಟ್ ಮಾಡಿದ್ದು, ಪುಸ್ತಕದೊಳಗಿರುವ ವಿಷಯ ಅದ್ಭುತವಾಗಿದೆ ಎಂದಿದ್ದಾರೆ.
ಪುಸ್ತಕದ ವಿವರಣೆಯಲ್ಲಿ, “ಕೊರೊನಾ ವಿರುದ್ಧದ ಹೋರಾಟದಲ್ಲಿ ಅದ್ಭುತವಾಗಿ ಗೆಲುವು ಸಾಧಿಸಲು ಮತ್ತು ಸಮೃದ್ಧಿಯ ಹಾದಿಯಲ್ಲಿ ನಡೆಯಲು ಹೆಣಗಾಡುತ್ತಿರುವ ರಾಷ್ಟ್ರಕ್ಕೆ ಒಬ್ಬ ಮಹಾನ್ ನಾಯಕ ಹೇಗೆ ಸಹಾಯ ಮಾಡಿದನು” ಎಂಬುದರ ಬಗ್ಗೆ ಬರೆಯಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಕೇಂದ್ರದ ದಮನಕಾರಿ ರಾಜಕೀಯ ತಂತ್ರ ಮತ್ತು ಕೋವಿಡ್ ನಂತರದಲ್ಲಿ ಸಂಭವಿಸಬಹುದಾದ ಹೊಸ ಬದಲಾವಣೆಗಳು
Someone has published a book on Amazon titled Masterstroke with 56 empty pages. Amazon has approved it. pic.twitter.com/UkJPLJX4mF
— PS (@D10SPS) May 25, 2021

ಇಂತಹ ಒಂದು ಪುಸ್ತಕವನ್ನು ಅಮೆಜಾನ್ ಒಪ್ಪಿಕೊಂಡಿದ್ದರ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿದೆ.
ಭಯಂಕರ್ ಲೋಗ್ ಎಂಬ ಟ್ವಿಟ್ಟರ್ ಖಾತೆ ಬಳಕೆದಾರರು, “ಭಾರತದಲ್ಲಿ ಅಮೆಜಾನ್ ಶೀಘ್ರದಲ್ಲೇ ಮುಚ್ಚಲಿದೆ ಎಂದು ತೋರುತ್ತಿದೆ. ಯಾರೋ ಒಬ್ಬರು ಅಮೆಜಾನ್‌ನಲ್ಲಿ ಮಾಸ್ಟರ್‌ಸ್ಟ್ರೋಕ್ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ. ಇದು ಪೂರ್ತಿ ಖಾಲಿ ಪುಟಗಳನ್ನು ಹೊಂದಿದೆ” ಎಂದು ಕೀಟಲೆ ಮಾಡಿದ್ದಾರೆ.
Looks like Amazon is going to shut soon in India.
Someone has published a book on Amazon titled Masterstroke. It has all blank pages ???? pic.twitter.com/Y5vybkBFik— भयंकर लोग (@BhayankarLog) May 25, 2021

ಪುಸ್ತಕದ ವಿಮರ್ಶೆಗಳಲ್ಲಿ ಹಲವು ಮಂದಿ ತುಂಬ ಅದ್ಭುತ ಪುಸ್ತಕ, ಓದಲೇ ಬೇಕು, ಮಾಸ್ಟರ್‌ಪೀಸ್, ಮಾಸ್ಟರ್‌ಸ್ಟ್ರೋಕ್, ಲೇಖಕರಿಗೆ ಧನ್ಯವಾದಗಳು ಎಂಬಂತಹ ಮಾತುಗಳನ್ನು ಹೇಳಿದ್ದಾರೆ.
“ಈ ಪುಸ್ತಕ ತುಂಬಾ ಸೃಜನಶೀಲ ಮತ್ತು ಅದನ್ನು ಓದುವ ಮೋಜನ್ನು ನೀಡಿದೆ. ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ 5-ಸ್ಟಾರ್ ರೇಟಿಂಗ್‌ಗೆ ಈ ಪುಸ್ತಕ ಅರ್ಹವಾಗಿದೆ. ಇದು ಇಲ್ಲಿಯವರೆಗೆ ನಾನು ತುಂಬಾ ವೇಗವಾಗಿ ಓದಿದ ಪುಸ್ತಕ” ಎಂದು ವ್ಯಕ್ತಿಯೊಬ್ಬರು ಬರೆದಿದ್ದಾರೆ.
“ಇದು ಬಹಳ ಉತ್ತಮ ಪುಸ್ತಕ. ಈ ಪುಸ್ತಕವು 420 ವ್ಯಕ್ತಿಯ 420 ರಹಸ್ಯಗಳನ್ನು ಹೇಳುತ್ತದೆ, 2014 ರಿಂದ ದೇಶವು ಹೇಗೆ ಪ್ರಗತಿ ಸಾಧಿಸಿದೆ ಎಂಬುದರ ಬಗ್ಗೆ ವಿವರಿಸುತ್ತದೆ. ಈ ಪುಸ್ತಕ ನೊಬೆಲ್ ಪ್ರಶಸ್ತಿಯನ್ನು ಪಡೆಯಬೇಕು” ಎಂದು ಮತ್ತೊಬ್ಬರು ಹೇಳಿದ್ದಾರೆ.
ನಿರುದ್ಯೋಗಿ ಭಕ್ತನ ಈ ಪುಸ್ತಕಕ್ಕೆ ಫೈವ್ ಸ್ಟಾರ್ ರೇಟೀಂಗ್ ದೊರೆತಿದೆ. 56 ಪುಟಗಳ ಖಾಲಿ ಪುಸ್ತಕದ ಬೆಲೆ 56 ರೂಪಾಯಿ. ಪುಸ್ತಕವನ್ನು ಮಕ್ಕಳಿಂದ 18 ವರ್ಷದವರು ಓದಬಹುದು ಎಂದಿದೆ.
ಇದನ್ನೂ ಓದಿ: ರೈತ ಹೋರಾಟಕ್ಕೆ 6 ತಿಂಗಳು- ಹೇಗಿದೆ ಪ್ರತಿಭಟನಾ ನಿರತ ಗಡಿಗಳಲ್ಲಿನ ಪರಿಸ್ಥಿತಿ..?


