Homeಅಂತರಾಷ್ಟ್ರೀಯಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು: ಟ್ರಂಪ್‌ಗೆ ವಿಚ್ಛೇಧನ ನೀಡಲಿರುವ ಮೆಲೆನಿಯಾ?

ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲು: ಟ್ರಂಪ್‌ಗೆ ವಿಚ್ಛೇಧನ ನೀಡಲಿರುವ ಮೆಲೆನಿಯಾ?

ರಿಪಬ್ಲಿಕನ್ ನಾಯಕ ಡೊನಾಲ್ಡ್ ಟ್ರಂಪ್‌ಗೆ ವಿಚ್ಛೇಧನ ನೀಡಲು ಮೆಲೆನಿಯಾ, ಟ್ರಂಪ್ ಶ್ವೇತ ಭವನದ ಕಚೇರಿಯಿಂದ ಹೊರ ಬರುವ "ಪ್ರತಿ ನಿಮಿಷವನ್ನು ಎಣಿಸುತ್ತಿದ್ದಾರೆ" ಎಂದು ಅವರ ಮಾಜಿ ಸಹಾಯಕ ಹೇಳಿದ್ದಾರೆ.

- Advertisement -
- Advertisement -

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತು, ಡೊನಾಲ್ಡ್ ಟ್ರಂಪ್ ಶ್ವೇತಭವನದಿಂದ ಹೊರಬರುತ್ತಿರುವ ಸಂದರ್ಭದಲ್ಲಿ ಅವರು ತಮ್ಮ ಪತ್ನಿ ಮೆಲೆನಿಯಾ ಅವರನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಮೆಲೆನಿಯಾ ವಿಚ್ಛೇಧನ ನೀಡಲಿದ್ದಾರೆ ಎಂದು ಅವರ ಮಾಜಿ ಸಹಾಯಕರೊಬ್ಬರು ತಿಳಿಸಿದ್ದಾರೆ ಎನ್ನಲಾಗಿದೆ.

ರಿಪಬ್ಲಿಕನ್ ನಾಯಕ ಡೊನಾಲ್ಡ್ ಟ್ರಂಪ್‌ಗೆ ವಿಚ್ಛೇಧನ ನೀಡಲು ಮೆಲೆನಿಯಾ, ಟ್ರಂಪ್ ಶ್ವೇತ ಭವನದ ಕಚೇರಿಯಿಂದ ಹೊರ ಬರುವ “ಪ್ರತಿ ನಿಮಿಷವನ್ನು ಎಣಿಸುತ್ತಿದ್ದಾರೆ” ಎಂದು ಅವರ ಮಾಜಿ ಸಹಾಯಕ ಹೇಳಿದ್ದಾರೆ.

’ಡೊನಾಲ್ಡ್ ಮತ್ತು ಮೆಲೆನಿಯಾ ಟ್ರಂಪ್ ಅವರ 15 ವರ್ಷಗಳ ವಿವಾಹ ಸಂಬಂಧ ಮುಗಿದಿದೆ. “ಮೆಲಾನಿಯಾ ಅವರು ಟ್ರಂಪ್ ಕಚೇರಿಯಿಂದ ಹೊರ ಬರುವ ಪ್ರತಿ ನಿಮಿಷವನ್ನು ಎಣಿಸುತ್ತಿದ್ದಾರೆ. ಅವರು ವಿಚ್ಛೇಧನ ಪಡೆಯಬಹುದು” ಎಂದು ಒಮರೋಸಾ ಮನಿಗಾಲ್ಟ್ ನ್ಯೂಮನ್ ಹೇಳಿದ್ದಾರೆ.

ಮೆಲೆನಿಯಾ ಟ್ರಂಪ್ ಈ ಮೊದಲೇ ವಿಚ್ಚೇಧನ ನೀಡಬಹುದಿತ್ತಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಜಿ ಸಹಾಯಕ “ಡೊನಾಲ್ಡ್ ಟ್ರಂಪ್ ಅವರು ಅಧಿಕಾರದಲ್ಲಿದ್ದಾಗ, ಆಕೆ ವಿಚ್ಛೇಧನ ನೀಡಿದ್ದರೇ ಆಕೆಯನ್ನು “ಶಿಕ್ಷಿಸಲು” ಟ್ರಂಪ್ ಯಾವುದಾದರೂ ಒಂದು ಮಾರ್ಗವನ್ನು ಕಂಡುಕೊಳ್ಳುತ್ತಿದ್ದರು” ಎಂದಿದ್ದಾರೆ ಎಂದು ಡೈಲಿ ಮೇಲ್ ಉಲ್ಲೇಖಿಸಿದೆ.

ಇದನ್ನೂ ಓದಿ: ಅಮೆರಿಕಾ ಚುನಾವಣೆ: ಜೋ ಬೈಡನ್‌ಗೆ ಗೆಲುವು; ಟ್ರಂಪ್‌ಗೆ ಮುಖಭಂಗ!

ಇನ್ನೊಬ್ಬ ಮಾಜಿ ಸಹಾಯಕ ಸ್ಟೆಫನಿ ವೋಲ್ಕಾಫ್, ಡೊನಾಲ್ಡ್ ಮತ್ತು ಮೆಲೆನಿಯಾ ಟ್ರಂಪ್ ಅವರು ಶ್ವೇತಭವನದಲ್ಲಿ ಪ್ರತ್ಯೇಕ ಮಲಗುವ ಕೋಣೆಗಳನ್ನು ಹೊಂದಿದ್ದು, ಅವರದ್ದು,”ವ್ಯವಹಾರಿಕೆ ಮದುವೆ ಅಷ್ಟೇ” ಎಂದಿದ್ದಾರೆ.

ಜೊತೆಗೆ ಡೊನಾಲ್ಡ್ ಟ್ರಂಪ್ ಅವರ ಸಂಪತ್ತಿನ ಸಮಾನ ಪಾಲು ಮಗ ಬ್ಯಾರನ್‌ಗೂ ಬರಬೇಕು ಎಂದು ಮೆಲೆನಿಯಾ ಟ್ರಂಪ್ ಒಪ್ಪಂದದ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಸ್ಟೆಫನಿ ವೋಲ್ಕಾಫ್ ಹೇಳಿದ್ದಾರೆ.

ಇನ್ನು 2016 ರಲ್ಲಿ, ಡೊನಾಲ್ಡ್ ಟ್ರಂಪ್ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಾಗ ಮೆಲೆನಿಯಾ ಟ್ರಂಪ್ ಕಣ್ಣೀರು ಸುರಿಸಿದ್ದರು. ಆಗ ಆಕೆಯ ಸ್ನೇಹಿತ “ಟ್ರಂಪ್ ಗೆಲ್ಲುತ್ತಾರೆಂದು ಅವಳು ಎಂದಿಗೂ ನಿರೀಕ್ಷಿಸಿರಲಿಲ್ಲ” ಎಂದು ಹೇಳಿದ್ದರು.

ಇತ್ತ ಡೊನಾಲ್ಡ್ ಟ್ರಂಪ್ ತಮ್ಮ ಸೋಲನ್ನು ಒಪ್ಪಿಕೊಳ್ಳಬೇಕು ಮತ್ತು ಶ್ವೇತ ಭವನದಿಂದ ಒಳ್ಳೆಯ ನಿರ್ಗಮನವನ್ನು ಪಡೆಯಬೇಕು ಎಂದು ಪತ್ನಿ ಮೆಲೆನಿಯಾ ಟ್ರಂಪ್ ಸೇರಿದಂತೆ ಟ್ರಂಪ್ ಆಂತರಿಕ ವಲಯ ಟ್ರಂಪ್ ಮೇಲೆ ಒತ್ತಡ ಹಾಕುತ್ತಿದೆ ಎಂದು ವರದಿಗಳು ತಿಳಿಸಿವೆ.

ಚುನಾವಣೆಯ ಬಗ್ಗೆ ಮೆಲೆನಿಯಾ ಬಹಿರಂಗವಾಗಿ ಪ್ರತಿಕ್ರಿಯಿಸದಿದ್ದರೂ, ಅವರು ತಮ್ಮ ಅಭಿಪ್ರಾಯವನ್ನು ಖಾಸಗಿಯಾಗಿ ತೋರಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.


ಇದನ್ನೂ ಓದಿ: ಚಿಲ್ ಡೊನಾಲ್ಡ್ ಚಿಲ್!: ಟ್ರಂಪ್ ಟ್ರೋಲ್ ಮಾಡಿ ಸೇಡು ತೀರಿಸಿಕೊಂಡ ಗ್ರೇಟಾ ಥನ್ಬರ್ಗ್!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಸರ್ವಾಧಿಕಾರಿಗಳ ಕಪಿಮುಷ್ಠಿಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತದಾನ ಮಾಡಿ: ಖರ್ಗೆ, ರಾಹುಲ್‌ ಗಾಂಧಿ ಆಗ್ರಹ

0
ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಬಿರುಸಿನಿಂದ ನಡೆಯುತ್ತಿದೆ. ಸರ್ವಾಧಿಕಾರಿಗಳ ಕಪಿಮುಷ್ಠಿಯಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತದಾರರು ಮನೆಯಿಂದ ಹೊರಗೆ ಬಂದು ಮತ ಚಲಾಯಿಸುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ. ಇದು ಸಾಮಾನ್ಯ...