ಹಲವು ಬಾರಿ ನಾಲಿಗೆ ಹರಿಯಬಿಟ್ಟು ಮನಬಂದಂತೆ ಮಾತನಾಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಇಂದು ಮತ್ತೆ ತಮ್ಮ ತಪ್ಪನ್ನು ಪುನಾರಾವರ್ತನೆ ಮಾಡಿದ್ದಾರೆ. ಅಧಿಕಾರಿಯೊಬ್ಬರ ಮನೆಯ ವೈಯಕ್ತಿಕ ವಿಷಯಗಳನ್ನೆಲ್ಲ ಸಾರ್ವಜನಿಕ ಸಭೆಯಲ್ಲಿ ಪ್ರಸ್ತಾಪಿಸುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ. ಮಾಧುಸ್ವಾಮಿಯವರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ತುಮಕೂರಿನಲ್ಲಿ ನಡೆದ 2020-21 ನೇ ಸಾಲಿನ ಮೂರನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪಿಆರ್‌ಐಡಿ ಎಇಇ ಅಧಿಕಾರಿಯ ವಿರುದ್ದ ಏಕವಚನದಲ್ಲಿ ಹರಿಹಾಯ್ದಿದ್ದಾರೆ.
ಕೆಲಸ ಮಾಡದೇ ಹೆಂಡ್ತಿಗೆ ಸೀರೆ ತರೋಕೆ ಹೋಗಿದ್ದ? ಕೆಲಸ ಮಾಡದಿದ್ದರೂ ನಿನ್ನ ರಕ್ಷಣೆಗೆ ಬರುವ ಆ ಸೀರೆ ಸುತ್ತುವ ಕೃಷ್ಣ ಯಾರು? ಜಾಡಿಸಿ ಒದ್ದರೆ ಎಲ್ಲಿಗೆ ಹೋಗಿ ಬೀಳ್ತಿಯಾ ಗೊತ್ತಾ? ಯಾವ ಸೋಪು ಹಾಕಿ ನಿನ್ನ ಹೆಂಡ್ತಿ ಸೀರೆ ತೋಳಿತ್ತೀಯಾ? ರ್ಯಾಸ್ಕಲ್ ಏನು ತಿಳ್ಕಂಡಿದ್ದೀರಾ ನೀವು? ರೆಸ್ಯುಲೂಷನ್ ಮಾಡ್ಸಿ ಸಸ್ಪೆಂಡ್ ಮಾಡ್ಸಿ ಈ ನನ್ಮಕ್ಕಳನ್ನ.. ಎಂದು ಮಾಧುಸ್ವಾಮಿಯವರು ನಾಲಿಗೆ ಹರಿಬಿಟ್ಟಿದ್ದಾರೆ.
ಕೆಲಸ ಮಾಡದೇ ಅಧಿಕಾರಿಗಳು ಜಿಲ್ಲೆಯನ್ನೇ ಸಾಯಿಸುತ್ತಿದ್ದಾರೆ. ಕೊರೊನಾ, ನೀತಿ ಸಂಹಿತೆಯ ಹೆಸರಿನಲ್ಲಿ ಜಡಗಟ್ಟಿದ್ದಾರೆ. ಒಂದೇ ಒಂದು ಕಾಮಗಾರಿಯನ್ನು ಸಮರ್ಪಕವಾಗಿ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಸಚಿವ ಮಾಧುಸ್ವಾಮಿ ವರ್ತನೆ ತಪ್ಪು, ಸಹಿಸಲು ಸಾಧ್ಯವಿಲ್ಲ: ಸಿಎಂ ಯಡಿಯೂರಪ್ಪ
ಇದೇ ಮಾಧುಸ್ವಾಮಿಯವರು ಈ ಹಿಂದೆ ಕೋಲಾರದಲ್ಲಿ ಮನವಿ ನೀಡಲು ಬಂದ ರೈತ ಮಹಿಳೆಯನ್ನು ರ್ಯಾಸ್ಕಲ್ ಎಂದು ಕರೆಯುವ ಮೂಲಕ ತೀವ್ರ ಟೀಕೆಗೆ ಒಳಗಾಗಿದ್ದರು. ತುಮಕೂರಿನಲ್ಲಿ ಹಿರಿಯ ರೈತ ಮುಖಂಡರೊಂದಿಗೆ ಅನುಚಿತವಾಗಿ ವರ್ತಿಸಿ ಟೀಕೆ ಎದುರಿಸಿದ್ದರು. ಇಂದು ಸಹ ಅದನ್ನು ಪುನಾರಾವರ್ತನೆ ಮಾಡಿದ್ದಾರೆ.
ಮಾಧುಸ್ವಾಮಿಯವರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಇದನ್ನೂ ಓದಿ: ಗಣಿ ಲೂಟಿಯಾದಾಗ ಮೌನವಿದ್ದ ಮಾಧುಸ್ವಾಮಿ, ಸಾಮಾನ್ಯರ ವಿರುದ್ಧ ತಿರುಗಿಬೀಳುವುದೇಕೆ?



ಮಾದೇವಸ್ವಾಮಿ ಒಬ್ಬ ಮಂತ್ರಿಯಾಗಿರಿ ಅಷ್ಟೇ ..ಸಂಸತ್ತಿನಲ್ಲಿ ಎರಡು ಮಾತಾಡ್ ತಕ್ಷಣ ಅವರು ತನ್ನನ್ನು ತಾನು ರಾಜ ಅಂತ ತಿಳ್ಕೊಂಡಿದ್ದಾರೆ. ಸಸ್ಪೆಂಡ್ ಮಾಡೊಕೆ ನೀವ್ಯಾರು ?ಆಡಳಿತ ನಡೆಸಿ . ದಬ್ಬಾಳಿಕೆ ಬೇಡ.