Homeಕರ್ನಾಟಕನೀವು ಅಧಿಕಾರದಲ್ಲಿದ್ದಾಗ ಹೀರೋ ಆಗಿ ಕಂಡಿದ್ದ ಪೊಲೀಸರು ಈಗ ವಿಲನ್ ಆದರೆ?; ಹೆಚ್​ಡಿಕೆ ವಿರುದ್ಧ ಕಿಡಿಕಾರಿದ...

ನೀವು ಅಧಿಕಾರದಲ್ಲಿದ್ದಾಗ ಹೀರೋ ಆಗಿ ಕಂಡಿದ್ದ ಪೊಲೀಸರು ಈಗ ವಿಲನ್ ಆದರೆ?; ಹೆಚ್​ಡಿಕೆ ವಿರುದ್ಧ ಕಿಡಿಕಾರಿದ ಆರ್. ಅಶೋಕ್

ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಹರಿದು ಹೋಗುತ್ತವೆ ಎಂಬ ಭಯ ಕುಮಾರಸ್ವಾಮಿ ಅವರನ್ನು ಕಾಡುತ್ತಿದೆ. ಹೀಗಾಗಿ ಆ ಸಮುದಾಯದ ಮತಗಳನ್ನು ಸೆಳೆಯೋ ಕಾರಣಕ್ಕೆ ಕುಮಾರಸ್ವಾಮಿ ಇಂತಹ ಹೇಳಿಕೆ ನೀಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.

- Advertisement -
- Advertisement -

ಬೆಂಗಳೂರು (ಜನವರಿ 23); ಜೆಡಿಎಸ್ ಅಧಿಕಾರದಲ್ಲಿರುವಾಗ ಪೊಲೀಸರು ಹೀರೋ ರೀತಿ ಕಂಡರು. ಆದರೆ, ಅಧಿಕಾರ ಹೋದ ತಕ್ಷಣ ಪೊಲೀಸರು ವಿಲನ್ ಆಗಿದ್ದಾರೆಯೇ? ಎಂದು ಸಚಿವ ಆರ್. ಅಶೋಕ್ ಕುಮಾರ್ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಸಜೀವ ಬಾಂಬ್ ಅನ್ನು ಪೊಲೀಸರು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದ್ದರು. ಆದರೆ, ಪೊಲೀಸರ ಈ ಕಾರ್ಯಾಚರಣೆಯನ್ನು ಹೆಚ್.ಡಿ. ಕುಮಾರಸ್ವಾಮಿ ಅಣಕು ಪ್ರದರ್ಶನ ಎಂದು ಕುಹಕವಾಡಿದ್ದರು. ಅಲ್ಲದೆ, ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಹರ್ಷ ವಿರುದ್ಧ ಕಿಡಿಕಾರಿದ್ದರು.

ಕುಮಾರಸ್ವಾಮಿ ಅವರ ಈ ಹೇಳಿಕೆ ಇಂದು ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಹಿರಿಯ ನಾಯಕ ಹಾಗೂ ಸಚಿವ ಆರ್. ಆಶೋಕ್, “ಹೆಚ್ಡಿಕೆ ಅಧಿಕಾರದಲ್ಲಿದ್ದಾಗ ಅವರಿಗೆ ಪೊಲೀಸರು ಬೇಕಿತ್ತು. ಅವರನ್ನು ಹೀರೋ ರೀತಿ ಬಿಂಬಿಸುತ್ತಿದ್ದರು. ಆದರೆ, ಅಧಿಕಾರ ಹೋದ ತಕ್ಷಣ ಪೊಲೀಸರು ವಿಲನ್ ಆಗಿದ್ದಾರೆ.

ಅಲ್ಪಸಂಖ್ಯಾತ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಹರಿದು ಹೋಗುತ್ತವೆ ಎಂಬ ಭಯ ಕುಮಾರಸ್ವಾಮಿ ಅವರನ್ನು ಕಾಡುತ್ತಿದೆ. ಹೀಗಾಗಿ ಆ ಸಮುದಾಯದ ಮತಗಳನ್ನು ಸೆಳೆಯೋ ಕಾರಣಕ್ಕೆ ಕುಮಾರಸ್ವಾಮಿ ಇಂತಹ ಹೇಳಿಕೆ ನೀಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆತ್ಮಕಥೆ ಜಟಾಪಟಿ: ನಕಲಿ ಪುಸ್ತಕ ಬಳಸಿ ರಾಷ್ಟ್ರೀಯ ಭದ್ರತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಾಹುಲ್ ಕ್ಷಮೆಯಾಚಿಸಬೇಕು: ಬಿಜೆಪಿ ಒತ್ತಾಯ

ನವದೆಹಲಿ: ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ತಮ್ಮ ಆತ್ಮಚರಿತ್ರೆ "ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ" ಪ್ರಕಾಶಕರು ಬಿಡುಗಡೆ ಮಾಡಿದ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕೆ ರಾಹುಲ್ ಗಾಂಧಿ ಅವರ ಮುಖ...

ಆತ್ಮಕಥೆ ಜಟಾಪಟಿ : ಅಂದು ಪುಸ್ತಕ ಪ್ರಿ- ಆರ್ಡರ್ ಮಾಡಿ ಎಂದಿದ್ದ ನರವಾಣೆ, ಇಂದು ಪ್ರಕಟವೇ ಆಗಿಲ್ಲ ಎನ್ನುತ್ತಿದ್ದಾರೆ

ಕಳೆದ ಹತ್ತು ದಿನಗಳಿಂದ ದೇಶದಾದ್ಯಂತ ಚರ್ಚೆಯಲ್ಲಿರುವ ತನ್ನ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಆತ್ಮಕಥೆಯ ಕುರಿತು ಮಾಜಿ ಭೂ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಮೌನ ಮುರಿದಿದ್ದಾರೆ. "ಪುಸ್ತಕದ ಮುದ್ರಿತ ಅಥವಾ...

ಗೌರವ್ ಗೊಗೊಯ್ ಸಹಿತ ಮೂವರು ಕಾಂಗ್ರೆಸ್ ನಾಯಕರ ವಿರುದ್ಧ 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಅಸ್ಸಾಂ ಸಿಎಂ

ಕಾಂಗ್ರೆಸ್ ನಾಯಕರಾದ ಜಿತೇಂದ್ರ ಸಿಂಗ್, ಭೂಪೇಶ್ ಬಘೇಲ್ ಮತ್ತು ಗೌರವ್ ಗೊಗೊಯ್ ವಿರುದ್ದ 500 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ. "ಪತ್ರಿಕಾಗೋಷ್ಠಿಯ ಮೂಲಕ...

ಕೇರಳದಲ್ಲಿ ಸರ್ಕಾರ ಬದಲಾವಣೆಗೆ ಕವಿ ಸಚ್ಚಿದಾನಂದನ್ ಕರೆಗೆ ಎಡಪಕ್ಷಗಳ ತೀವ್ರ ವಿರೋಧ; ಇದು ಸಾರ್ವಜನಿಕ ಭಾವನೆ ಎಂದ ವಿಪಕ್ಷಗಳು

ಕೇರಳದಲ್ಲಿ ನಿರಂತರ ಆಡಳಿತ ಅಪೇಕ್ಷಣೀಯವಲ್ಲ ಮತ್ತು ಅಧಿಕಾರವು ರಾಜಕೀಯ ರಂಗಗಳ ನಡುವೆ ಪರ್ಯಾಯವಾಗಿರಬೇಕು ಎಂದು ಹಿರಿಯ ಕವಿ ಮತ್ತು ಕೇರಳ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ. ಸಚ್ಚಿದಾನಂದನ್ ಹೇಳಿದ್ದಾರೆ. ಈ ಹೇಳಿಕೆ ಆಡಳಿತಾರೂಢ...

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿ ರಕ್ಷಣೆ; ದೀಪಕ್ ಕೊಂದವರಿಗೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದ ವ್ಯಕ್ತಿ ಬಂಧನ

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿ ರಕ್ಷಿಸಿದ್ದ ಜಿಮ್ ಮಾಲೀಕ ದೀಪಕ್ ಕುಮಾರ್ (ಮೊಹಮ್ಮದ್ ದೀಪಕ್) ಅವರನ್ನು ಕೊಂದವರಿಗೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದ ವ್ಯಕ್ತಿಯನ್ನು ಉತ್ತರಾಖಂಡ ಪೊಲೀಸರು ಸೋಮವಾರ (ಫೆ.9) ಬಂಧಿಸಿದ್ದಾರೆ. ಬಿಹಾರದ...

ಬಾಂಗ್ಲಾದೇಶ: ಚುನಾವಣೆಗೂ ಮುನ್ನ 62 ವರ್ಷದ ಹಿಂದೂ ಅಕ್ಕಿ ವ್ಯಾಪಾರಿ ಸುಶೇನ್ ಚಂದ್ರ ಸರ್ಕಾರ್ ಹತ್ಯೆ

ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಗೆ ಮತದಾನಕ್ಕೆ ಕೆಲವೇ ಗಂಟೆಗಳ ಮೊದಲು, ಸೋಮವಾರ ತಡರಾತ್ರಿ ಬಾಂಗ್ಲಾದೇಶದ ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಹಿಂದೂ ಅಕ್ಕಿ ವ್ಯಾಪಾರಿಯೊಬ್ಬರನ್ನು ಅವರ ಅಂಗಡಿಯೊಳಗೆ ಹತ್ಯೆಯಾಗಿದೆ.  ತ್ರಿಶಾಲ್ ಉಪಜಿಲಾದ ಬೋಗರ್ ಬಜಾರ್ ಛೇದಕದಲ್ಲಿರುವ "ಮೆಸರ್ಸ್ ಭಾಯ್...

ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವಾಗಲೇ ಮಸೀದಿ ಕೆಡವಿದ ಉತ್ತರ ಪ್ರದೇಶ ಸರ್ಕಾರ

ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವಾಗಲೇ ಉತ್ತರ ಪ್ರದೇಶ ಆಡಳಿತವು ಬರೇಲಿ ಜಿಲ್ಲೆಯ ಮಸೀದಿಯನ್ನು ನೆಲಸಮಗೊಳಿಸಿದೆ. ಮಸೀದಿ ನಿರ್ಮಾಣ ಕುರಿತಾದ ಪ್ರಕರಣ ಅಲಹಾಬಾದ್ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿದೆ. ಭೋಜಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪಿಪಾರಿಯಾ...

‘ನಾನು ಮಾಜಿ ಸೇನಾ ಮುಖ್ಯಸ್ಥರನ್ನು ನಂಬುತ್ತೇನೆ’ : ಜನರಲ್ ನರವಾಣೆ ಪುಸ್ತಕದ ಕುರಿತ ಪ್ರಕಾಶಕರ ಹೇಳಿಕೆಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ

ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ ಆತ್ಮಕಥೆಯ ಪ್ರಕಾಶಕರ ವಿರುದ್ಧ ರಾಹುಲ್ ಗಾಂಧಿ ಮಂಗಳವಾರ (ಫೆ.10) ಗಂಭೀರ ಆರೋಪ ಮಾಡಿದ್ದಾರೆ. ನರವಾಣೆ ಅವರ ನೆನಪುಗಳ ಆಧಾರಿತ ಪುಸ್ತಕವು ಈಗಾಗಲೇ ಮಾರಾಟಕ್ಕೆ...

‘ಆದಿತ್ಯನಾಥನ ಆಡಳಿತದಲ್ಲಿ ಬ್ರಾಹ್ಮಣರು ಅಸುರಕ್ಷಿತರು, ಸನಾತನಿಗಳು ಎಂದಿಗೂ ಮರೆಯುವುದಿಲ್ಲ’ ಎಂಬ ಅರ್ಥದಲ್ಲಿ ಪೋಸ್ಟ್ ಮಾಡಿದ ಪತ್ರಕರ್ತನ ಬಂಧನ

ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಪತ್ರಕರ್ತರೊಬ್ಬರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುರಿತು ಆಕ್ಷೇಪಾರ್ಹ ಮತ್ತು ಪ್ರಚೋದನಕಾರಿ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು...

ಹಿಮಂತ ಬಿಸ್ವಾ ಶರ್ಮಾ ‘ಗುಂಡು ಹಾರಿಸುವ’ ವಿಡಿಯೋ ವಿರುದ್ಧದ ಅರ್ಜಿ; ವಿಚಾರಣೆಗೆ ಸಮ್ಮತಿಸಿದ ಸುಪ್ರೀಂ ಕೋರ್ಟ್

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ನಿರ್ದಿಷ್ಟ ಸಮುದಾಯದ ಸದಸ್ಯರ ಮೇಲೆ ಗುರಿಯಿಟ್ಟು ರೈಫಲ್‌ನಿಂದ ಗುಂಡು ಹಾರಿಸುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೊದ ಕುರಿತು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಎಡಪಂಥೀಯ...