Homeಮುಖಪುಟಮುಖ್ಯಮಂತ್ರಿಯಾದ ದಿನದಂದೆ ಪ್ರಮುಖ ಐದು ಯೋಜನೆಗಳಿಗೆ ಸಹಿ ಹಾಕಿದ ಎಂಕೆ ಸ್ಟಾಲಿನ್!

ಮುಖ್ಯಮಂತ್ರಿಯಾದ ದಿನದಂದೆ ಪ್ರಮುಖ ಐದು ಯೋಜನೆಗಳಿಗೆ ಸಹಿ ಹಾಕಿದ ಎಂಕೆ ಸ್ಟಾಲಿನ್!

ಐದು ಯೋಜನೆಗಳಲ್ಲಿ ನಾಲ್ಕು ಚುನಾವಣಾ ಸಮಯಲ್ಲಿ ನೀಡಿದ್ದ ಭರವಸೆಗಳಾಗಿದೆ.

- Advertisement -

ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ ದಿನದಂದೆ ಎಂ.ಕೆ. ಸ್ಟಾಲಿನ್ ಅವರು, ಪಡಿತರ ಚೀಟಿದಾರರಿಗೆ ನಗದು ರೂಪದಲ್ಲಿ ಕೊರೊನಾ ಪರಿಹಾರ ಸೇರಿದಂತೆ ಐದು ಪ್ರಮುಖ ಯೋಜನೆಗಳಿಗೆ ಶುಕ್ರವಾರ ಸಹಿ ಹಾಕಿದ್ದಾರೆ.

4,153.39 ಕೋಟಿ ರೂ.ಗಳ ವೆಚ್ಚದಲ್ಲಿ ರಾಜ್ಯದ ಎಲ್ಲಾ ಪಡಿತರ ಚೀಟಿದಾರರಿಗೆ ಮೊದಲ ಹಂತದಲ್ಲಿ 2,000 ರೂ. ಕೊರೊನಾ ಪರಿಹಾರವಾಗಿ ನೀಡಲಾಗುವುದು ಎಂದು ಪ್ರಕಟಣೆಗಳು ತಿಳಿಸಿವೆ. ಇದರಿಂದಾಗಿ ಒಟ್ಟು 2.07 ಕೋಟಿ ಪಡಿತರ ಕಾರ್ಡುದಾರರಿಗೆ ಅನುಕೂಲವಾಗಲಿದೆ.

ಇದನ್ನೂ ಓದಿ: ರಾಜ್ಯಕ್ಕೆ ಆಮ್ಲಜನಕ ನೀಡುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಆದೇಶ- ’ಬೆಡ್’ ವಿಚಾರದಲ್ಲೇ ಇರುವ BJP ಸಂಸದರು!

ಸಾರ್ವಜನಿಕರಿಗೆ ದೈನಂದಿನ ಖರ್ಚಿನಲ್ಲಿನ ಉಳಿತಾಯ ಮಾಡುವಂತಾಗಲು, ಸರ್ಕಾರಿ ಡೈರಿಯಾದ ‘ಅವಿನ್’ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ ಮೂರು ರೂಗಳನ್ನು ಇಳಿಸಿದ್ದಾರೆ. ಇದು ಮೇ 16 ರಿಂದ ಜಾರಿಗೆ ಬರಲಿದೆ.

ಮಹಿಳಾ ಕಲ್ಯಾಣ ಕುರಿತ ಮತ್ತೊಂದು ಚುನಾವಣಾ ಪ್ರಣಾಳಿಕೆಯ ಭರವಸೆಯನ್ನು ಈಡೇರಿಸುವ ಹೆಜ್ಜೆಯಾಗಿ, “ದುಡಿಯುವ ಮಹಿಳೆಯರು ಮತ್ತು ಶಾಲಾ-ಕಾಲೇಜಿಗೆ ಹೋಗುವ ಬಾಲಕಿಯರಿಗೆ ಮೇ 8 ರಿಂದ ಸಾಮಾನ್ಯ ಶುಲ್ಕ ಬಸ್ಸುಗಳಲ್ಲಿ ಮತ್ತು ಸಾರ್ವಜನಿಕ ಸಾರಿಗೆ ಬಸ್‌ಗಳಲ್ಲಿ ನಗರಗಳ ನಡುವೆ ಉಚಿತ ಪ್ರಯಾಣವನ್ನು ಘೋಷಿಸಲಾಗಿದೆ”

ಮತ್ತೊಂದು ಮಹತ್ವದ ಘೋಷಣೆಯಲ್ಲಿ, ಎಂಕೆ ಸ್ಟಾಲಿನ್ ಅವರು, ಮುಖ್ಯಮಂತ್ರಿಗಳ ವಿಮಾ ಯೋಜನೆಯಡಿ ಕೊರೊನಾ ವೈರಸ್‌ನಿಂದಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ವೈದ್ಯಕೀಯ ಬಿಲ್‌ಗಳನ್ನು ರಾಜ್ಯ ಸರ್ಕಾರವು ಭರಿಸಲಿದೆ ಎಂದು ಘೋಷಿಸಿದ್ದಾರೆ.

ಇದನ್ನೂ ಓದಿ: ಸಂಸ್ಕಾರಕ್ಕೆ ಬರುವವರಿಗೆ ಉಚಿತ ಟಿ,ಕಾಫಿ ನೀಡುತ್ತೇವೆಂದು ನಗುಮುಖದ ಫ್ಲೆಕ್ಸ್‌; ಕನಿಷ್ಠ ಸಂವೇದನೆ ಮರೆತ BJP

ತಮ್ಮ ಚುನಾವಣಾ ಪ್ರಚಾರದ ಸಮಯದಲ್ಲಿ ಲಕ್ಷಾಂತರ ಅರ್ಜಿಗಳನ್ನು ನೀಡಿದ ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸಲು ಪ್ರತ್ಯೇಕ ಇಲಾಖೆಯನ್ನು ರಚಿಸುವುದಾಗಿ ಅವರು ಘೋಷಿಸಿದ್ದಾರೆ. ಈ ಅರ್ಜಿಗಳನ್ನು 100 ದಿನಗಳಲ್ಲಿ ಪರಿಹರಿಸಲು ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಇಂದು ಘೋಷಣೆಯಾಗಿರುವ ಒಟ್ಟು ಐದು ಯೋಜನೆಗಳಲ್ಲಿ ವೈರಸ್ ರೋಗಿಗಳ ವೈದ್ಯಕೀಯ ಬಿಲ್‌ಗಳನ್ನು ಪಾವತಿಸುವುದರ ಹೊರತುಪಡಿಸಿ, ಇತರ ನಾಲ್ಕು ಯೋಜನೆಗಳು ಡಿಎಂಕೆಯ ಚುನಾವಣಾ ಪ್ರಣಾಳಿಕೆಯ ಭರವಸೆಗಳಾಗಿವೆ.

ಎಂ.ಕೆ ಸ್ವಾಲಿನ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿ ತಮ್ಮ ಕಚೇರಿಗೆ ಬರುವ ಮೊದಲು, ತಮಿಳುನಾಡಿನ ಮಾಜಿ ಮುಖ್ಯಮಂತ್ರಿಗಳು, ಡಿಎಂಕೆಯ ಹಿರಿಯ ನಾಯಕರುಗಳೂ ಆದ ಸಿ.ಎನ್.ಅಣ್ಣಾದೊರೈ ಮತ್ತು ಎಂ. ಕರುಣಾನಿಧಿ ಅವರ ಸ್ಮಾರಕಗಳಿಗೆ ಭೇಟಿ ನೀಡಿ ಹೂವಿನ ಗೌರವ ಸಲ್ಲಿಸಿದರು. ಸಾಮಾಜಿಕ ಸುಧಾರಕ ‘ಪೆರಿಯಾರ್’ ಅವರಿಗೂ ಗೌರವ ಸಲ್ಲಿಸಿದರು.

ಇದನ್ನೂ ಓದಿ: ಬೆಂಬಲಿಗರನ್ನು ಸೆಳೆಯಲು ‘ಪಾಕಿಸ್ತಾನಿ’ ಯುವತಿಯ ಫೋಟೊ ಬಳಸುತ್ತಿರುವ BJP ಐಟಿ ಸೆಲ್!

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತದ ಮಾತೃ ಭಾಷೆ ಸಂಸ್ಕೃತವೇ? ದ್ರಾವಿಡವೇ?

ಯಾವುದೇ ಭಾಷೆಯ ಮೂಲ ಉದ್ದೇಶ ಸಂವಹನ. ಸಂವಹನದ ಉದ್ದೇಶದಿಂದ ಬಳಸಲಾಗುವ ಯಾವುದೇ ಭಾಷೆಗಳಲ್ಲಿ ಮೇಲು ಕೀಳು ಎಂಬ ಭಾವವೇ ನಿಕೃಷ್ಟವಾದದ್ದು. ಜಗತ್ತಿನ ಮೂಲೆ ಮೂಲೆಗಳಲ್ಲಿ ಮನುಷ್ಯರು ಬಳಸುವ ಎಲ್ಲಾ ಭಾಷೆಗಳಿಗೂ ತನ್ನದೇ ಆದ...
Wordpress Social Share Plugin powered by Ultimatelysocial