ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರದ ವಸಾಯಿ ಶಾಸಕ ಹಿತೇಂದ್ರ ಠಾಕೂರ್ ಅವರು ವಸಾಯಿ-ವಿರಾರ್ ಮುನ್ಸಿಪಲ್ ಕಮಿಷನರ್ ಅನಿಲ್ ಕುಮಾರ್ ಪವಾರ್ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದು, ಕಚೇರಿಗೆ ಬಂದು ಥಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಸ್ವಾತಂತ್ರ್ಯ ದಿನದ ಕಾರ್ಯಕ್ರಮದ ಬಳಿಕ ಮಹಾನಗರ ಪಾಲಿಕೆಯ ಪ್ರಧಾನ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಶಾಸಕ ಹಿತೇಂದ್ರ ಠಾಕೂರ್ ನಾಗರಿಕರು ಮತ್ತು ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ್ದಾರೆ.
ಜನರು ಆರೋಗ್ಯ ಸಮಸ್ಯೆಗಳು, ನೀರಿನ ಕೊರತೆ ಮತ್ತು ಸಂಚಾರ ದಟ್ಟಣೆಯ ಬಗ್ಗೆ ಹೇಳುವಾಗ ಆಯುಕ್ತ ಅನಿಲ್ ಕುಮಾರ್ ಪವಾರ್ ವಿರುದ್ಧ ಶಾಸಕ ಹಿತೇಂದ್ರ ಠಾಕೂರ್ ಅವರು ಕೋಪಗೊಂಡಿದ್ದಾರೆ.ಈ ವೇಳೆ ಆಯುಕ್ತರಿಗೆ ತರಾಟೆಗೆ ತೆಗೆದುಕೊಂಡ ಶಾಸಕರು “ನೀವು ನಿಮ್ಮನ್ನು ರಾಜ ಎಂದುಕೊಂಡಿದ್ದರೆ, ನಾನು ಕಚೇರಿಗೆ ಬಂದು ನಿಮ್ಮನ್ನು ಹೊಡೆಯುತ್ತೇನೆ” ಎಂದು ಹೇಳಿದ್ದಾರೆ.
ಠಾಕೂರ್ ಅವರು ಕಮಿಷನರ್ ಮಾತ್ರವಲ್ಲದೆ ಮುನ್ಸಿಪಲ್ ಡೆಪ್ಯುಟಿ ಕಮಿಷನರ್ ಚಾರುಶೀಲಾ ಪಂಡಿತ್ ಅವರಿಗೂ ತರಾಟೆಗೆ ತೆಗೆದುಕೊಂಡಿದ್ದಾರೆ. ಡೆಪ್ಯುಟಿ ಕಮಿಷನರ್ ಚಾರುಶೀಲಾ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಲು ಪ್ರಯತ್ನಿಸಿದಾಗ, ಠಾಕೂರ್ ಅವರು ಕಮಿಷನರ್ ಇದಕ್ಕೆ ಉತ್ತರ ಕೊಡಬೇಕು ಎಂದು ಹೇಳಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು free Press journal ವರದಿ ಮಾಡಿದೆ. ಸಂಚಾರ ದಟ್ಟಣೆಯ ಕುರಿತು ಹೆಚ್ಚುವರಿ ಆಯುಕ್ತ ರಮೇಶ ಮನಾಳೆ ನೀಡಿದ ವಿವರಣೆಯನ್ನು ಠಾಕೂರ್ ಅವರು ತಿರಸ್ಕರಿಸಿದ್ದು , ಅಧಿಕಾರಿಗಳು ನಡೆಸಿದ ಸಮೀಕ್ಷೆಗಳ ಗುಣಮಟ್ಟದ ಬಗ್ಗೆ ಪ್ರಶ್ನಿಸಿದ್ದಾರೆ.
ಈ ಕುರಿತು ಕಮಿಷನರ್ ಸೇರಿ ಯಾವೊಬ್ಬ ಅಧಿಕಾರಿ ಕೂಡ ಪ್ರತಿಕ್ರಿಯೆಯನ್ನು ನೀಡಿಲ್ಲ ಎನ್ನಲಾಗಿದೆ.ಆದರೆ ಶಾಸಕರ ವರ್ತನೆ ಇದೀಗ ವಿವಾದಕ್ಕೆ ಕಾರಣವಾಗಿದೆ.
ಇದನ್ನು ಓದಿ: ಬುರ್ಖಾಧಾರಿ ಮಹಿಳೆಗೆ ಗನ್ ತೋರಿಸಿ “ಹಿಂದೂ ದೇವತೆ”ಯ ಹೆಸರು ಕೂಗುವಂತೆ ಆಗ್ರಹಿಸಿದ್ದ RPF ಪೇದೆ


