Homeಮುಖಪುಟಬುರ್ಖಾಧಾರಿ ಮಹಿಳೆಗೆ ಗನ್ ತೋರಿಸಿ “ಹಿಂದೂ ದೇವತೆ”ಯ ಹೆಸರು ಕೂಗುವಂತೆ ಆಗ್ರಹಿಸಿದ್ದ RPF ಪೇದೆ

ಬುರ್ಖಾಧಾರಿ ಮಹಿಳೆಗೆ ಗನ್ ತೋರಿಸಿ “ಹಿಂದೂ ದೇವತೆ”ಯ ಹೆಸರು ಕೂಗುವಂತೆ ಆಗ್ರಹಿಸಿದ್ದ RPF ಪೇದೆ

- Advertisement -
- Advertisement -

ಜೈಪುರ –ಮುಂಬೈ ಎಕ್ಸ್ ಪ್ರೆಸ್ ವೇ ರೈಲಿನಲ್ಲಿ ನಾಲ್ವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಆರ್ ಪಿಎಫ್ ಪೇದೆ ಅದೇ ರೈಲಿನಲ್ಲಿ ಬುರ್ಖಾಧಾರಿ ಮಹಿಳೆಗೆ “ಜೈ ಮಾತಾ ದಿ” ಎಂದು ಘೋಷಣೆ ಕೂಗುವಂತೆ ಆಗ್ರಹಿಸಿದ್ದಾನೆ ಎಂದು ತನಿಖೆಯ ವೇಳೆ ಬಯಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಪ್ರಕರಣದ ಕುರಿತು ತನಿಖೆ ನಡೆಸುವ ಬೊರಿವಲಿ ರೈಲ್ವೇ ಪೊಲೀಸರು, ಸಂತ್ರಸ್ತ ಮಹಿಳೆಯನ್ನು ಗುರುತಿಸಿದ್ದಾರೆ. ಮತ್ತು ಮಹಿಳೆಯಿಂದ ಹೇಳಿಕೆಯನ್ನು ಪಡೆಯಲಾಗಿದೆ ಎಂದು ಹೇಳಿದ್ದಾರೆ.

ಪ್ರಕರಣದಲ್ಲಿ ಮಹಿಳೆಯನ್ನು ನಿರ್ಣಾಯಕ ಸಾಕ್ಷಿಯನ್ನಾಗಿ ಮಾಡಲಾಗಿದೆ. ವರದಿಗಳ ಪ್ರಕಾರ, ರೈಲಿನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಘಟನೆ ಸೆರೆಯಾಗಿದೆ.

ಹತ್ಯೆ ಆರೋಪಿ ಚೌಧರಿ ಮೊದಲು B-3 ಕೋಚ್ ನಲ್ಲಿ ಬುರ್ಖಾ ಧರಿಸಿದ್ದ ಪ್ರಯಾಣಿಕ ಮಹಿಳೆಯನ್ನು ಗುರಿಯಾಗಿಸಿಕೊಂಡಿದ್ದ ಮತ್ತು ಗನ್ ನ್ನು ತೋರಿಸಿ ಎರಡೆರಡು ಬಾರಿ  “ಜೈ ಮಾತಾ ದಿ” ಎಂದು ಕೂಗುವಂತೆ ಒತ್ತಾಯಿಸಿದ್ದಾನೆ ಎಂದು ತನಿಖೆಯ ವೇಳೆ ಬಹಿರಂಗವಾಗಿದೆ.

ಸಹಾಯಕ ಸಬ್ ಇನ್ಸ್‌ಪೆಕ್ಟರ್ ಟಿಕಾರಾಂ ಮೀನಾ ಮತ್ತು ಮೂವರು ಪ್ರಯಾಣಿಕರಾದ ಅಬ್ದುಲ್ ಕಾದರ್ ಮೊಹಮ್ಮದ್ ಹುಸೇನ್ ಭಾನ್‌ಪುರವಾಲಾ, ಸೈಯದ್ ಸೈಫುದ್ದೀನ್ ಮತ್ತು ಅಸ್ಗರ್ ಅಬ್ಬಾಸ್ ಶೇಖ್ ಅವರನ್ನು ಹತ್ಯೆ ಮಾಡಿದ ಪೇದೆ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಇದಲ್ಲದೆ ಪ್ರಕರಣದ ಬಳಿಕ ಆರೋಪಿ ಚೌದರಿಯ  ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ಆರೋಪಿಗೆ ಯಾವುದೇ ಮಾನಸಿಕ ಅಸ್ವಸ್ಥತೆ ಇಲ್ಲ ಎನ್ನುವುದನ್ನು ದೃಢಪಡಿಸಿದ್ದಾರೆ.

ಇದನ್ನು ಓದಿ: ಮಣಿಪುರ, ಹರಿಯಾಣದಂತೆ ದೇಶದೆಲ್ಲೆಡೆ ಸಂಘರ್ಷ ಮುಂದುವರಿದರೆ ಭಾರತ ಹೇಗೆ ವಿಶ್ವಗುರುವಾಗುತ್ತದೆ?: ಕೇಜ್ರಿವಾಲ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ನವೀಕರಿಸಿದ ಅಂಕಿ ಅಂಶ: 4 ಹಂತಗಳಲ್ಲಿ 1.07 ಕೋಟಿ ಮತಗಳಲ್ಲಿ ವ್ಯತ್ಯಾಸ!

0
2024ರ ಲೋಕಸಭಾ ಚುನಾವಣೆಯ ಮೊದಲ ನಾಲ್ಕು ಹಂತಗಳ ಮತದಾನದ ಪ್ರತಿ ರಾತ್ರಿ ಚುನಾವಣಾ ಆಯೋಗ ನೀಡಿದ ಮತದಾನದ ಅಂಕಿ-ಅಂಶಗಳನ್ನು ವಿಶ್ಲೇಷಣೆ ಮಾಡಿದಾಗ ಮೊದಲ ನಾಲ್ಕು ಹಂತಗಳಲ್ಲಿ ಸುಮಾರು 1.07 ಕೋಟಿ ಮತಗಳ ವ್ಯತ್ಯಾಸವನ್ನು...