Homeಕರ್ನಾಟಕಅರಣ್ಯ ಹಕ್ಕು ಅನುಷ್ಠಾನಕ್ಕೆ ಒತ್ತಾಯಿಸಿ ಬುಡಕಟ್ಟು ಸಮುದಾಯಗಳ ಹೋರಾಟ 5ನೇ ದಿನಕ್ಕೆ...

ಅರಣ್ಯ ಹಕ್ಕು ಅನುಷ್ಠಾನಕ್ಕೆ ಒತ್ತಾಯಿಸಿ ಬುಡಕಟ್ಟು ಸಮುದಾಯಗಳ ಹೋರಾಟ 5ನೇ ದಿನಕ್ಕೆ…

ಡಿ.ಬಿ ಕುಪ್ಪೆಯಲ್ಲಿ 11 ದಿನಗಳ ಕಾಲ ಹೋರಾಟ ನಡೆಸಿದ್ದೇವೆ. ಎಚ್‌.ಕೋಟೆಯಲ್ಲಿ 10 ದಿನ ಪ್ರತಿಭಟಿಸಿದ್ದೇವೆ. ಈಗ ಪಿರಿಯಾಪಟ್ಟಣದಲ್ಲಿ ಕಳೆದ 5 ದಿನಗಳಿಂದ ಹೋರಾಟ ನಡೆಸುತ್ತಿದ್ದೇವೆ. ಜನಪ್ರತಿನಿಧಿಗಳಿಗೆ ನಮ್ಮ ಸಮಸ್ಯೆಗಳನ್ನು ಅರ್ಥಮಾಡಿಸಲು ಹೋರಾಟವನ್ನು ಜೀವಂತವಿಟ್ಟಿದ್ದೇವೆ.

- Advertisement -
- Advertisement -

ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ವತಿಯಿಂದ ವೈಯಕ್ತಿಕ ಅರಣ್ಯ ಹಕ್ಕು ಅನುಷ್ಠಾನಕ್ಕೆ ಒತ್ತಾಯಿಸಿ ಪಿರಿಯಾಪಟ್ಟಣ ತಾಲೂಕು ಪಂಚಾಯತ್ ಎದುರು ನಡೆಯುತ್ತಿರುವ ಆಹೋರಾತ್ರಿ ನಿರಂತರ ಧರಣಿ ಸತ್ಯಾಗ್ರಹವು 5ನೇ ದಿನಕ್ಕೆ ಕಾಲಿಟ್ಟಿದೆ.

ಇಂದು ಪಿರಿಯಾಪಟ್ಟಣ ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಿರೂಪ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಬುಡಕಟ್ಟು ಕಲ್ಯಾಣ ಇಲಾಖೆಯ ಅಧಿಕಾರಿಗಳು, ಧರಣಿ ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದರಾದರರೂ ಧರಣಿ ನಿರತರು ಬೇಡಿಕೆ ಈಡೇರುವವರೆಗೂ ಮುಂದುವರಿಸುವುದಾಗಿ ಪಟ್ಟು ಹಿಡಿದಿದ್ದಾರೆ.

ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿಯಾದ ನಂತರ 1972ರ ವನ್ಯಜೀವಿ ಕಾಯ್ದೆಯಂತೆ ಅರಣ್ಯ ಮತ್ತು ಅಣೆಕಟ್ಟುಗಳಿಂದ ಬಾಧಿತರಾದವರಿಗೆ ಪುನರ್ವಸತಿ ನೀಡಬೇಕಿದೆ. ಈ ಕುರಿತು ನಾವು ಮೇ ತಿಂಗಳಲ್ಲಿ ಚಳವಳಿ ಮಾಡಿದಾಗ ಪ್ರಿನ್ಸಿಪಲ್‌ ಸೆಕ್ರಟರಿಯಾದ ಕುಮಾರ್‌ ನಾಯಕ್‌‌ರವರ ನೇತೃತ್ವದಲ್ಲಿ ಸಭೆ ಆಯಿತು. ತುರ್ತಾಗಿ ಅನುಷ್ಠಾನ ಮಾಡುತ್ತೇವೆ ಎಂದರು. ಆದರೆ ಇಲ್ಲಿಯವರೆಗೂ ನಮ್ಮ ಸಮಸ್ಯೆಗಳು ಬಗೆಹರಿದಿಲ್ಲವೆಂದು ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ಕಾರ್ಯದರ್ಶಿ ಶೈಲೇಂದ್ರ ಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೋ ಓದಿ: ಚರಂಡಿ ಗುಂಡಿಯಲ್ಲಿ ಸಿಲುಕಿದ ಕಾರ್ಮಿಕನನ್ನು ರಕ್ಷಿಸಲು ಹರಸಾಹಸ: ತುಮಕೂರಿನಲ್ಲೊಂದು ಆತಂಕದ ಘಟನೆ – ವಿಡಿಯೋ ನೋಡಿ

ಅರಣ್ಯ ಹಕ್ಕು ಕಾಯ್ದೆಯನ್ನು ಪಂಚಾಯಿತಿ ಮತ್ತು ಉಪವಿಭಾಗ ಮಟ್ಟದಲ್ಲಿಯೂ ಪರಿಶೀಲನೆ ನಡೆಸಿ ಜಾರಿ ಮಾಡಬಹುದು. ಜಿಲ್ಲಾಧಿಕಾರಿಗಳು ಹಕ್ಕು ಪತ್ರ ನೀಡಬಹುದು. ಅರಣ್ಯದ ಒಳಗೆ ಇರುವವರು ಕೂಡ ಅವರು ಬದುಕುವ ವಿಚಾರಕ್ಕೆ ಭೂಮಿ ನೀಡುವಲ್ಲಿ ಈ ಸರ್ಕಾರಗಳು ಮೀನಾಮೇಷ ಎಣಿಸುತ್ತಿವೆ. ಅರಣ್ಯವನ್ನು ಖಾಸಗಿಯವರಿಗೆ ಗಣಿಗಾರಿಕೆ ಮತ್ತು ರೆಸಾರ್ಟ್‌ಗಾಗಿ ಬರೆದುಕೊಡಲು ಸರ್ಕಾರ ಸಿದ್ದವಾಗಿದೆ. ಇಲ್ಲಿ ಪಾರಂಪರಿಕವಾಗಿ ಬದುಕಿ ಬಂದ ಸಮುದಾಯಗಳಿದ್ದರೆ ಅದಕ್ಕೆ ಅವಕಾಶವಾಗುವುದಿಲ್ಲವೆಂದು ಅವರನ್ನು ಹೊರದಬ್ಬಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಡಿ.ಬಿ ಕುಪ್ಪೆಯಲ್ಲಿ 11 ದಿನಗಳ ಕಾಲ ಹೋರಾಟ ನಡೆಸಿದ್ದೇವೆ. ಎಚ್‌.ಕೋಟೆಯಲ್ಲಿ 10 ದಿನ ಪ್ರತಿಭಟಿಸಿದ್ದೇವೆ. ಈಗ ಪಿರಿಯಾಪಟ್ಟಣದಲ್ಲಿ ಕಳೆದ 5 ದಿನಗಳಿಂದ ಹೋರಾಟ ನಡೆಸುತ್ತಿದ್ದೇವೆ. ಜನಪ್ರತಿನಿಧಿಗಳಿಗೆ ನಮ್ಮ ಸಮಸ್ಯೆಗಳನ್ನು ಅರ್ಥಮಾಡಿಸಲು ಹೋರಾಟವನ್ನು ಜೀವಂತವಿಟ್ಟಿದ್ದೇವೆ. ನಮ್ಮ ಸಮುದಾಯಕ್ಕೆ ಸಾಮಾಜಿನ ನ್ಯಾಯ ಸಿಗಬೇಕಿದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತವನ್ನು ಎಚ್ಚರಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತೇವೆ ಎಂದು ಶೈಲೇಂದ್ರ ಕುಮಾರ್‌ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...