ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಪಕ್ಷವು ಮೂವರು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮಾಜಿ ಸಚಿವ ಸಿ ಟಿ ರವಿ, ಪರಿಷತ್ ಸದಸ್ಯರಾಗಿದ್ದ ಎನ್ ರವಿಕುಮಾರ್ ಮತ್ತು ಬಸವಕಲ್ಯಾಣದ ಮಾಜಿ ಶಾಸಕ ಎಂ ಜಿ ಮೂಳೆ ಅವರಿಗೆ ಟಿಕೆಟ್ ನೀಡಿದೆ.
ಸೋಮವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಕಾರಣ ಬಿಜೆಪಿ ಇಂದು ಮೂವರು ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಹನ್ನೊಂದು ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅದರಲ್ಲಿ ಮೂರರಲ್ಲಿ ಗೆಲ್ಲುವ ಅವಕಾಶ ಬಿಜೆಪಿಗಿದೆ. ಹೀಗಾಗಿ ಮೂರು ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆ.
ನಾಮಪತ್ರ ಸಲ್ಲಿಕೆಗೆ ಸೋಮವಾರ ಅಂತಿಮ ದಿನವಾಗಿದ್ದು, ಮಂಗಳವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ಗುರುವಾರ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ. ಜೂನ್ 13ರಂದು ಮತದಾನ ನಡೆಯಲಿದ್ದು, ಅದೇ ದಿನ ಮತ ಎಣಿಕೆ ನಡೆದು ಫಲಿತಾಂಶ ಹೊರ ಬೀಳಲಿದೆ.
I wholeheartedly thank Hon’ble Prime Minister Shri @narendramodi Ji, Union Home Minister Shri @AmitShah Ji, BJP National President Shri @JPNadda Ji, BJP National General Secretary (Organisation) Shri @blsanthosh Ji, our senior leader Shri @BSYBJP Avaru, State BJP President Shri… pic.twitter.com/4rY3ZeUtlL
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) June 2, 2024
ಇದನ್ನು ಓದಿ: ಮೂರು ಹಂತದ ಕದನ ವಿರಾಮ ಪ್ರಸ್ತಾಪ; ಯುದ್ಧ ಕೊನೆಗೊಳಿಸುತ್ತಾ ಇಸ್ರೇಲ್?


