Homeರಾಷ್ಟ್ರೀಯಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ...

ಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ – ಶ್ರೀಪಾದ್‌ ಭಟ್

- Advertisement -
- Advertisement -

ತಮ್ಮ ಸ್ಥಳೀಯ ಮತಬ್ಯಾಂಕ್ ರಾಜಕಾರಣದ ಜೊತೆಗೆ ವಿದೇಶಿ ನೀತಿಯನ್ನು ತಳುಕು ಹಾಕುವುದು.

ಉದಾಹರಣೆಗೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಇರಾನ್ ಮೇಲಿನ ಯುದ್ಧದ ಸಮಯದಲ್ಲಿ ಮೋದಿ ನೇತೃತ್ವದ ಸರ್ಕಾರವು ತಾನು ಇರಾನ್ ಪರ ನಿಲುವು ತಾಳಿದರೆ ತಮ್ಮನ್ನು ಮತದಾರರು ದುರ್ಬಲರು ಎಂದು ತಿಳಿಯುತ್ತಾರೆ… ತಾನು ಸಹ ಅಮೇರಿಕಾ-ಇಸ್ರೇಲ್ ತರಹ ತೋಳ್ಬಲ ಪ್ರದರ್ಶಿಸುವ ವಿಶ್ವಗುರು ಎನ್ನುವ ಪ್ರಚಾರ ಮುಕ್ಕಾಗದಂತೆ ನೋಡಿಕೊಳ್ಳಬೇಕು..
ಇಸ್ರೇಲ್ ಹಾಗೂ ನೇತನ್ಯಾಹು ನಮ್ಮ ರೀತಿ, ಇಲ್ಲಿನ ಹಿಂದುತ್ವ ರಾಜಕಾರಣ ಅಲ್ಲಿನ ಜುಡಾಯಿಸಂ… ಇಬ್ಬರಿಗೂ ಇಸ್ಲಾಂ ಸಮಾನ ಶತೃ ಎನ್ನುವ ಕಥನ ಸೃಷ್ಟಿಸಲಾಗಿದೆ.. ಈಗ ಅದನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಿದೆ.. ಇದಕ್ಕಾಗಿ ಇಸ್ರೇಲ್ ನ ಭಯೋತ್ಪಾದನೆ ಧೋರಣೆಯನ್ನು ಬೆಂಬಲಿಸುವಂತಹ ಸ್ಥಿತಿಯಲ್ಲಿದ್ದಾರೆ…
ಇಲ್ಲಿ ಮುಸ್ಲಿಂರ ವಿರುದ್ಧ ನೆರೇಶನ್ ಸೃಷ್ಟಿಸಿ ಜಾಗತಿಕವಾಗಿ ಇಸ್ಲಾಂ ದೇಶದ ಪರವಾಗಿ ಮಾತನಾಡಿದರೆ ತಮ್ಮ ಮತಬ್ಯಾಂಕ್ ಮೇಲೆ ಪರಿಣಾಮ ಬೀರುತ್ತದೆ…
ಒಂದುವೇಳೆ ಕಾಂಗ್ರೆಸ್ ಪಕ್ಷ, ಚಿಂತಕರು, ಸಂಘಟನೆಗಳು ಏನಾದರೂ ಇರಾನ್ ಪರ ನಿಲುವು ತಾಳಿದರೆ ಅವರನ್ನು ದೇಶದ್ರೋಹಿಗಳು ಎಂದು ಪ್ರಚಾರ ಮಾಡಲು ಮತ್ತು ಮುಂಬರುವ ಪ.ಬಂಗಾಳ, ಅಸ್ಸಾಂ ಚುನಾವಣೆಗಳಲ್ಲಿ ಇದನ್ನು ಬಳಸಿಕೊಳ್ಳಲು ಅನುಕೂಲವಾಗುತ್ತದೆ…
ಪ್ರಚಾರದ ಸಂದರ್ಭದಲ್ಲಿ ಮೋದಿ ‘ನಾವು ದೇಶದ ಹಿತಕ್ಕಾಗಿ, ಅವರು ಇರಾನ್ ಹಿತಕ್ಕಾಗಿ’ ಎಂದು ಭಾಷಣ ಮಾಡುವುದರಲ್ಲಿ ಅನುಮಾನವೇ ಇರಲಿಲ್ಲ…
ಒಟ್ಟಿನಲ್ಲಿ ಪ.ಬಂಗಾಳ, ಕೇರಳ, ಅಸ್ಸಾಂ ರಾಜ್ಯದ ಚುನಾವಣಾ ಪ್ರಚಾರದ ಹೊತ್ತಿಗೆ ಇರಾನ್ – ಮುಸ್ಲಿಂ ವಿರುದ್ಧ ನೆರೇಶನ್ ನ ರೆಸಿಪಿ ತಯಾರಿಸುವ ಕೆಲಸ ಶುರುವಾಗಿತ್ತು…

ಆದರೆ ಎರಡು ವಾರಗಳಲ್ಲಿ ಎಲ್ಲವೂ ತಲೆಕೆಳಗಾಗಿ ಮೋದಿ ‘ಇಂಡಿಯಾ ದೇಶ ಇರಾನ್ ನ ಸ್ನೇಹಿತರು’ ಎನ್ನುವ ಸ್ಥಿತಿ ನಿರ್ಮಾಣವಾಗಿದೆ…

ಅತ್ತ ಸರ್ಕಾರದ ಮಟ್ಟದಲ್ಲಿ

ಈ ಯುದ್ಧ ಬಹು ದಿನಗಳ ಕಾಲ ನಡೆಯುವುದಿಲ್ಲ. ನಾಲ್ಕೈದು ದಿನಗಳಲ್ಲಿ ಮುಗಿದು ಇರಾಕ್, ಈಜಿಪ್ಟ್ ರೀತಿ ಇರಾನ್ ಶರಣಾಗುತ್ತದೆ, ಆಂತರಿಕವಾಗಿ ಅಲ್ಲಿನ ಜನ ಬೀದಿಗೆ ಬರುತ್ತಾರೆ.. ಹೀಗಾಗಿ ಆರಂಭದಿಂದಲೂ ಅಮೇರಿಕಾ -ಇಸ್ರೇಲ್ ಪರವಾಗಿದ್ದರೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ.. ಇದು ಈ ಸರ್ಕಾರದ ಯೋಚನಾ ಲಹರಿ.. ಇದು ಸಂಭವಿಸಿದರೆ ‘ಮೋದಿ ಅಂದರೆ ಸಾಮಾನ್ಯವೇ’ ಎನ್ನುವ ಪ್ರಚಾರ…
ಆದರೆ ಎಲ್ಲಾ ತಲೆಕೆಳಗಾಗಿ ಇಂದು ಯುದ್ಧ ಆರಂಭಿಸಿದ ಟ್ರಂಪ್ ಗೆ ಮುಂದಿನ ದಾರಿ ಏನು? ಯುದ್ಧ ನಿಲ್ಲಿಸುವುದು ಹೇಗೆ? ಇದರಿಂದ ಹೊರಬರಲು ದಾರಿಗಳೇನು? ಒಂದೂ ಗೊತ್ತಾಗದೆ ದಿಗ್ಮೂಢಗೊಂಡಿದ್ದರೆ ಇವರನ್ನು ನಂಬಿ ರಾಜತಾಂತ್ರಿಕ ವ್ಯವಹಾರ ಮಾಡಿ ದೇಶದ ಘನತೆ ಹಾಳುಗೆಡವಿದ್ದು ಮೋದಿಯವರ ಸಾಧನೆ…

ಮೋದಿಯವರು ಯುದ್ಧ ನಡೆಯುವ ಎರಡು ದಿನಗಳ ಮುಂಚೆ ಇಸ್ರೇಲ್ ದೇಶಕ್ಕೆ ಹೋಗಿದ್ದು ಯಾಕೆ? ನೇತನ್ಯಾಹುನ್ನು ಹೊಗಳಿದ್ದು ಯಾಕೆ? ಇದು ಅವರ ವೈಯಕ್ತಿಕ ನಿಲುವೇ? ಅಥವಾ ವಿದೇಶಾಂಗ ಇಲಾಖೆಯದೇ?
ಇವರಿಗೆ ತಮ್ಮ ಭೇಟಿಯ ನಂತರ ಕೆಲವೇ ದಿನಗಳಲ್ಲಿ ಯುದ್ಧ ಪ್ರಾರಂಭವಾಗುತ್ತದೆ ಎಂದು ಗೊತ್ತಿರಲಿಲ್ಲವೇ? ಅದರ ಮುನ್ಸೂಚನೆ ಇರಲಿಲ್ಲವೇ? ಹೌದಾದರೆ ಅಮೆರಿಕ -ಇಸ್ರೇಲ್ ದೇಶಗಳು ಭಾರತದ ಜಿಗ್ರಿ ದೋಸ್ತ್ ಎನ್ನುವ ಮಾತಿಗೆ ಬೆಲೆಯಿಲ್ಲದಂತಾಯಿತೇ?
ಟ್ರಂಪ್, ನೇತಾನ್ಯಾಹು ನನಗೆ ತೀರಾ ಹತ್ತಿರ ಎಂದು ಹೇಳಿಕೊಳ್ಳುವ ಮೋದಿಯವರ ವಿಶ್ವಾಸಾರ್ಹತೆ ಪ್ರಶ್ನಾರ್ಹವಲ್ಲವೇ?
ದೇಶದ ಹಿತಾಸಕ್ತಿಯನ್ನು ಈ ರೀತಿ ವೈಯಕ್ತಿಕ ವೈಭವೀಕರಣಕ್ಕೆ ಬಲಿ ಕೊಟ್ಟಂತಲ್ಲವೇ?
ಅಥವಾ ಗೊತ್ತಿದ್ದರೆ ಕೊಲ್ಲಿ ರಾಷ್ಟ್ರಗಳಲ್ಲಿರುವ ಭಾರತೀಯರನ್ನು ಎಚ್ಚರಿಸುವ, ಅಲ್ಲಿಂದ ಕರೆತರುವ ಪ್ರಯತ್ನ ಯಾಕೆ ಮಾಡಲಿಲ್ಲ?

ಅಮೇರಿಕಾ-ಇಸ್ರೇಲ್ ದಾಳಿಯನ್ನು, ಖಮೇನಿ ಹತ್ಯೆಯನ್ನು ಇದುವರೆಗೂ ಖಂಡಿಸಿಲ್ಲ.. ಯುದ್ಧ ಪ್ರಾರಂಭವಾಗಿ ಒಂದು ವಾರದ ನಂತರ ವಿದೇಶಾಂಗ ಕಾರ್ಯದರ್ಶಿ ಇರಾನಿನಲ್ಲಿನ ಸಾವುಗಳಿಗೆ ಒಂದು ಸಾಲಿನಲ್ಲಿ ಖೇದ ವ್ಯಕ್ತಪಡಿಸುತ್ತಾರೆ.
ಆದರೆ ಈ ಸಾವಿರಾರು ಸಾವುಗಳಿಗೆ ಕಾರಣರಾದವರ ಕುರಿತು ಹೇಳಿಕೆ ನೀಡುವುದಿಲ್ಲ
ಆದರೆ ವಿಶ್ವಸಂಸ್ಥೆಯಲ್ಲಿ ಗಲ್ಫ್ ದೇಶಗಳ ಮೇಲಿನ ಇರಾನ್ ದಾಳಿಯನ್ನು ಖಂಡಿಸುವ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿ ಸಹಿ ಹಾಕುತ್ತಾರೆ..
ಇದು ತಟಸ್ಥ ನೀತಿಯೇ?

ಭಾರತ ಬ್ರಿಕ್ಸ್ ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದೆ. ಆದರೆ ಈ ಒಕ್ಕೂಟದ ಸದಸ್ಯ ದೇಶವಾದ ಇರಾನ್ ಪರ ಮಾತನಾಡುತ್ತಿಲ್ಲ..
ಮುಂದಿನ ನವೆಂಬರ್ ತಿಂಗಳಲ್ಲಿ ಬ್ರಿಕ್ಸ್ ಶೃಂಗಸಭೆ ಇದೆ. ಆಗ ಯಾವ ಮುಖ ಹೊತ್ತು ಭಾಗವಹಿಸುತ್ತದೆ?
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಜೊತೆಗೆ ಮೋದಿಯವರು ಫೋನ್ ಮೂಲಕ ಮಾತನಾಡಿ ‘ಹೊರ್ಮೂಜ್ ಜಲಸಂಧಿ’ ಮೂಲಕ ತೈಲ ನೌಕೆಗಳು ಹಾದು ಹೋಗಲು ಕುರಿತು ಚರ್ಚೆ ನಡೆಸಿದರು ಎಂದು ವರದಿಯಾಗಿದೆ. ನಿಜ ಇದು ಅಗತ್ಯವಿದೆ.
ಆದರೆ ಇರಾನ್ ‘ಭಾರತದಿಂದ ರಾಜತಾಂತ್ರಿಕವಾಗಿ ಮರಳಿ ನಮಗೇನು ಸಿಗುತ್ತಿದೆ’ ಎಂದು ಕೇಳುತ್ತಿದೆ.. ಇದಕ್ಕೆ ಭಾರತದ ಬಳಿ ಉತ್ತರವಿಲ್ಲ..
ಹೊರ್ಮೂಜ್ ಜಲಸಂಧಿ ಮೂಲಕ ಭಾರತದ ಹತ್ತಾರು ತೈಲ ನೌಕೆಗಳು ಹಾದು ಬರಬೇಕು ಎಂದು ಗೊತ್ತಿದ್ದರೂ ಇರಾನ್ ಜೊತೆಗೆ ಮಾತುಕತೆ ನಡೆಸುವ ಗೋಜಿಗೆ ಹೋಗದೆ ಅದರ ವಿರೋಧಿ ಪಾಳ್ಯದಲ್ಲಿ ಗುರುತಿಸಿಕೊಂಡಿದ್ದು ಅನೈತಿಕತೆ ಮತ್ತು ರಾಜತಾಂತ್ರಿಕ ವೈಫಲ್ಯ.

ಜೂನ್ 2025ರಲ್ಲಿಯೇ ಅಮೇರಿಕಾ ಏಕಪಕ್ಷೀಯವಾಗಿ ಇರಾನ್ ಮೇಲೆ ದಾಳಿ ಮಾಡಿದಾಗ ಎಚ್ಚೆತ್ತುಕೊಂಡು ಸುರಕ್ಷಿತ ಪ್ರಮಾಣದ ತೈಲ ಸಂಗ್ರಹದ ಕಡೆ ಯಾಕೆ ಗಮನ ಹರಿಸದೆ ವ್ಯರ್ಥವಾಗಿ ಕಾಲ ಕಳೆದರು? ಇಂದಿನ ಗಂಭೀರ ಪರಿಸ್ಥಿತಿ ತಂದುಕೊಂಡಿದ್ಯಾಕೆ?
ಇದನ್ನು ‘ಉತ್ತಮ ಆಡಳಿತ ‘ ಎಂದು ಕರೆಯಲು ಸಾಧ್ಯವೇ?

ರಷ್ಯಾ ಜೊತೆಗೆ ತೈಲ ಖರೀದಿ ಸಂಬಂಧದ ವ್ಯವಹಾರ ಒಪ್ಪಂದ ಕುರಿತು ಸರ್ಕಾರದ ನಡೆ ಅವಮಾನಕರವಾಗಿದೆ. ಉತ್ತಮ ರಾಜತಾಂತ್ರಿಕತೆಯ ಕೊರತೆ ಮತ್ತು ಆ ಕುರಿತು ಅಜ್ಞಾನದ ಕಾರಣ ಇಡೀ ದೇಶವೇ ಸಂದಿಗ್ಧತೆಯಲ್ಲಿದೆ.
ರಷ್ಯಾ ಜೊತೆಗೆ ತೈಲ ಖರೀದಿ ವ್ಯವಹಾರವನ್ನು ಸಮರ್ಥವಾಗಿ ನಿರ್ವಹಿಸಿದ್ದರೆ ಇಂದಿನ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ…

ಇದಕ್ಕೆ ಮೋದಿ ನೇತೃತ್ವದ ಸರ್ಕಾರ ಜವಾಬ್ದಾರಿ ಹೊರಬೇಕು.. ಉತ್ತರ ಕೊಡಬೇಕು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ಬೃಹತ್ ದಾಳಿ: ಹಲವು ಉನ್ನತ ನಾಯಕರನ್ನು ಕೊಲ್ಲಲಾಗಿದೆ ಎಂದು ವಿಡಿಯೋ ಹಂಚಿಕೊಂಡ ಟ್ರಂಪ್

ಟೆಹ್ರಾನ್ ಮೇಲೆ ನಡೆದ ದಾಳಿಯ ವೀಡಿಯೊವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದು, ಹಲವಾರು ಇರಾನ್ ಮಿಲಿಟರಿ ನಾಯಕರ ಸಾವಿಗೆ ಅದು ಕಾರಣ ಎಂದು ಹೇಳಿಕೊಂಡಿದ್ದಾರೆ. "ಟೆಹ್ರಾನ್‌ನಲ್ಲಿ ನಡೆದ ಈ ಬೃಹತ್ ದಾಳಿಯೊಂದಿಗೆ, ಇರಾನ್‌ನ...

ಅಸ್ಸಾಂ ಚುನಾವಣೆ : ನುಸುಳುಕೋರರಿಂದ ಯುವ ಕಲ್ಯಾಣಕ್ಕೆ ವರಸೆ ಬದಲಿಸಿದ ಬಿಜೆಪಿ

ಅಸ್ಸಾಂ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಬಾಕಿ ಇರುವಾಗ ಬಿಜೆಪಿ ತನ್ನ ಪ್ರಚಾರದ ವರಸೆಯನ್ನು ಬದಲಿಸಿಕೊಂಡಿದೆ. ನುಸುಳುಕೋರರನ್ನು ಹೊರಹಾಕುತ್ತೇವೆ, ಅಕ್ರಮ ವಲಸೆಗೆ ಕಡಿವಾಣ ಹಾಕುತ್ತೇವೆಂದು ಅಬ್ಬರಿಸುತ್ತಿದ್ದ ಬಿಜೆಪಿಗರು, ಈಗ ನುಸುಳಕೋರರ ವಿಷಯವನ್ನು ಬದಿಗೊತ್ತಿದ್ದಾರೆ....

ಕುಡಿದ ಮತ್ತಿನಲ್ಲಿ ಕಾರು ಚಾಲನೆ: ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ 19ವರ್ಷದ ಯುವಕ ಸಾವು 

ಬೆಂಗಳೂರು: ಕುಡಿದ ಮತ್ತಿನಲ್ಲಿ ಹದಿಹರೆಯದ ಯುವಕನೊಬ್ಬ ಚಲಾಯಿಸುತ್ತಿದ್ದ ಕಾರು, 19 ವರ್ಷದ ಯುವಕನ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಮಲ್ಲೇಶಪಾಳ್ಯದ ಮಾರುತಿನಗರದ 10 ನೇ ಮುಖ್ಯ ರಸ್ತೆಯಲ್ಲಿ ಶುಕ್ರವಾರ ತಡರಾತ್ರಿ...

ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಇರಾನ್‌ನಿಂದ ತೈಲ ಖರೀದಿಸಿದ ಭಾರತ

ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯ ಮೂಲಕ ಸರಬರಾಜಿನಲ್ಲಿ ಅಡ್ಡಿ ಉಂಟಾಗಿರುವ ಮಧ್ಯೆ, ಭಾರತೀಯ ಸಂಸ್ಕರಣಾಗಾರರು ಇರಾನ್ ತೈಲವನ್ನು ಖರೀದಿಸಿದ್ದಾರೆ ಎಂದು ತೈಲ ಸಚಿವಾಲಯ ಶನಿವಾರ (ಏ.4) ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ವಿಶ್ವದ...

ಉತ್ತರ ಪ್ರದೇಶ: ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ಮದರಸಾ ಶಿಕ್ಷಕರ ಬಂಧನ

ಹತ್ತು ವರ್ಷದ ವಿದ್ಯಾರ್ಥಿಯೊಬ್ಬನನ್ನು ಥಳಿಸಿದ ಆರೋಪದ ಮೇಲೆ ಇಬ್ಬರು ಮದರಸಾ ಶಿಕ್ಷಕರನ್ನು ಬಂಧಿಸಿರುವುದಾಗಿ ಉತ್ತರ ಪ್ರದೇಶ ಪೊಲೀಸರು ಶನಿವಾರ ತಿಳಿಸಿದ್ದಾರೆ.  ಈ ಸಂಬಂಧ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ದಿನಾಂಕವಿಲ್ಲದ ವೀಡಿಯೊದಲ್ಲಿ ಒಬ್ಬ ಮದರಸಾ...

ಕೊಡಗು | ಚಾರಣಕ್ಕೆ ತೆರಳಿದ್ದ ಯುವತಿ ನಾಪತ್ತೆ ಪ್ರಕರಣ : 3 ದಿನ ಕಳೆದರೂ ಸಿಗದ ಸುಳಿವು, ಎಎನ್‌ಎಫ್‌ನಿಂದ ತೀವ್ರ ಶೋಧ

ಕೊಡಗು ಜಿಲ್ಲೆಯ ಕಕ್ಕಬ್ಬೆ ಸಮೀಪದ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದ ಕೇರಳ ಮೂಲದ ಯುವತಿಯೊಬ್ಬರು ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. ನಾಪತ್ತೆಯಾಗಿರುವ ಯುವತಿಯನ್ನು ಕೇರಳದ...

ಭವಿಷ್ಯದ ಸಂಘರ್ಷದಲ್ಲಿ ಪಾಕಿಸ್ತಾನ ಕೋಲ್ಕತ್ತಾ ಮೇಲೆ ದಾಳಿ ಮಾಡುತ್ತದೆ: ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್

 ಲಾಹೋರ್: ಭವಿಷ್ಯದಲ್ಲಿ ಯಾವುದೇ ದುಸ್ಸಾಹಸಗಳು ನಡೆದರೆ ಕೋಲ್ಕತ್ತಾದಲ್ಲಿ ದಾಳಿ ನಡೆಸುವ ಮೂಲಕ ಭಾರತಕ್ಕೆ ಪ್ರತ್ಯುತ್ತರ ನೀಡುವುದಾಗಿ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಶನಿವಾರ ಎಚ್ಚರಿಕೆ ನೀಡಿದ್ದಾರೆ. "ಈ ಬಾರಿ ಭಾರತ ಯಾವುದೇ ಸುಳ್ಳು...

ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ

2018ರ ವಿಧಾನಸಭಾ ಚುನಾವಣೆಯ ವೇಳೆ ದಾಖಲಾಗಿದ್ದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣ ವಿರುದ್ಧ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ (42ನೇ ಎಸಿಎಂಎಂ ಕೋರ್ಟ್) ಜಾಮೀನು...

ಪ್ಯಾಲೆಸ್ತೀನ್ ಜನರೊಂದಿಗೆ ಒಗ್ಗಟ್ಟು ಪ್ರದರ್ಶನ: ದೆಹಲಿಯ ಮೆಕ್‌ಡೊನಾಲ್ಡ್ಸ್ ಹೊರಗೆ ಪ್ರತಿಭಟನೆ

ಪ್ಯಾಲೆಸ್ಟೈನ್ ಜೊತೆ ಒಗ್ಗಟ್ಟಿನ ಭಾರತೀಯ ಜನರು (ಐಪಿಎಸ್‌ಪಿ) ಗುಂಪಿನ ಸದಸ್ಯರು (ಏ.3) ಜನಪಥ್ ಪ್ರದೇಶದ ಮೆಕ್‌ಡೊನಾಲ್ಡ್ಸ್ ಔಟ್‌ಲೆಟ್‌ನ ಹೊರಗೆ ದಿಢೀರ್ ಪ್ರತಿಭಟನೆಯನ್ನು ಆಯೋಜಿಸಿದ್ದರು. ಪ್ಯಾಲೆಸ್ತೀನಿಯನ್ನರನ್ನು ಒಳಗೊಂಡ ನಡೆಯುತ್ತಿರುವ ಸಂಘರ್ಷದಲ್ಲಿ ಮೆಕ್‌ಡೊನಾಲ್ಡ್ಸ್ ಮತ್ತು ಕೋಕಾ-ಕೋಲಾದಂತಹ ಬಹುರಾಷ್ಟ್ರೀಯ...

‘ಇರಾನಿಯನ್ನರು ಸ್ಮಾರ್ಟ್ ಚೆಸ್ ಆಡುತ್ತಿದ್ದು, ಟ್ರಂಪ್ ಭ್ರಮಾಲೋಕದಲ್ಲಿದ್ದಾರೆ..’; ಮಾಜಿ ರಾಜತಾಂತ್ರಿಕ ಅಧಿಕಾರಿ ಕೆ.ಪಿ. ಫ್ಯಾಬಿಯನ್

ಪ್ರಸ್ತುತ ನಡೆಯುತ್ತಿರುವ ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಮಾತನಾಡಿದ ಭಾರತದ ಮಾಜಿ ರಾಯಭಾರಿ ಕೆ.ಪಿ. ಫ್ಯಾಬಿಯನ್, "ಇರಾನಿಯನ್ನರು ಸ್ಮಾರ್ಟ್ ಚೆಸ್ ಆಟವನ್ನು ಆಡುತ್ತಿದ್ದಾರೆ. ಆದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳು...