ಕಳೆದ 2 ತಿಂಗಳಿನಿಂದ ಶಾಂತಿಯುತವಾಗಿ ನಡೆದುಕೊಂಡು ಬಂದ ರೈತರ ಪ್ರತಿಭಟನೆ ಈಗ ಹಿಂಸಾತ್ಮಕ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ. ಜನವರಿ 26 ರಂದು ಲಕ್ಷಾಂತರ ರೈತರು ದೆಹಲಿಯಲ್ಲಿ ಟ್ರ್ಯಾಕ್ಟರ್ ಪೆರೇಡ್ ನಡೆಸಿದ್ದರು. ಈ ವೇಳೆ ಪ್ರಚೋದಿತ ಗುಂಪೊಂದು ಕೆಂಪುಕೋಟೆಗೆ ನುಗ್ಗಿ ಸಿಖ್ ಧಾರ್ಮಿಕ ಧ್ವಜ ಹಾರಿಸಿತ್ತು. ಇದರ ಕುರಿತು ದೇಶದಾದ್ಯಂತ ಪರ-ವಿರೋಧ ಚರ್ಚೆಗಳು ವ್ಯಾಪಕವಾಗಿ ನಡೆದಿತ್ತು. ಇದರ ಬೆನ್ನಲ್ಲೇ ದೆಹಲಿ-ಉತ್ತರಪ್ರದೇಶದ ಗಡಿಯಲ್ಲಿರುವ ರೈತರು ಸ್ಥಳ ಖಾಲಿ ಮಾಡಬೇಕು ಎಂದು ಆದೇಶಿಸಲಾಗಿತ್ತು.
ಮರುದಿನ ರಾತ್ರಿ ರೈತರ ಮೇಲೆ ಪೊಲೀಸರು ಹಲ್ಲೆ ನಡೆಸಲು ಯೋಜಿಸಿದ್ದಾರೆ ಎಂಬ ಆರೋಪಗಳೂ ಕೇಳಿ ಬಂದಿತ್ತು. ಆದರೆ ರೈತ ಮುಖಂಡ ರಾಕೇಶ್ ಟಿಕಾಯತ್ ಗುರುವಾರ ರಾತ್ರಿ ಭಾವನಾತ್ಮಕ ಭಾಷಣದ ನಂತರ ಶುಕ್ರವಾರ ಕಿಸಾನ್ ಮಹಾಪಂಚಾಯತ್‌ಗೆ 10 ಸಾವಿರಕ್ಕೂ ಹೆಚ್ಚು ರೈತರು ಮುಜಪ್ಪರ್‌ನಗರದಿಂದ ಗಾಜಿಪುರ ಗಡಿಗೆ ಬಂದರು.
ಇದರ ಬೆನ್ನಲ್ಲೇ ಸಿಂಘು ಗಡಿಯಲ್ಲಿ ಕೆಲವು ದುಷ್ಕರ್ಮಿಗಳ ಆಯುಧದಾರಿ ಗುಂಪೊಂದು ರೈತರ ಟೆಂಟುಗಳಿಗೆ ನುಗ್ಗಿ ದಾಂಧಲೆ ನಡೆಸಿ ಹಲ್ಲೆ ಮಾಡಿತ್ತು. ಇಲ್ಲಿ ಕಲ್ಲು ತೂರಾಟ ಸೇರಿದಂತೆ ರೈತರು, ದುಷ್ಕರ್ಮಿಗಳು ಮತ್ತು ಪೊಲೀಸರ ನಡುವೆ ಮಾರಾಮಾರಿ ನಡೆದಿತ್ತು. ಆದರೆ ದುಷ್ಕರ್ಮಿಗಳು ಗುಂಪು ಬ್ಯಾರಿಕೇಡ್ ದಾಟಿ ರೈತರ ಟೆಂಟುಗಳಿಗೆ ನುಗ್ಗುವ ತನಕ ಪೊಲೀಸರು ಕೈಕಟ್ಟಿ ನಿಂತಿದ್ದರು ಎಂದು ಆರೋಪಿಸಲಾಗಿದೆ. ಇದು ಸರ್ಕಾರವೇ ಪಿತೂರಿ ನಡೆಸಿ ಕಳುಹಿಸಿರುವ ಗುಂಪು ಎಂದು ಹಲವರು ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟಕ್ಕೆ ಬೆಂಬಲ ಸೂಚಿಸಿ ರಾಜೀನಾಮೆ ನೀಡಿದವರೆಷ್ಟು?: ಇಲ್ಲಿದೆ ವಿವರ
ಇದರ ಭಾಗವಾಗಿ ಟ್ವಿಟರ್‌ನಲ್ಲಿ #ModiPlanningFarmerGenocide (ರೈತರ ನರಮೇಧ ನಡೆಸಲು ಯೋಜಿಸುತ್ತಿರುವ ಮೋದಿ) ಎಂದು ಆಕ್ರೋಶ ಭುಗಿಲೆದ್ದಿದೆ. ಈ ವರದಿ ಬರೆಯುವ ವೇಳೆಗೆ ಈ ಹ್ಯಾಶ್‌ಟ್ಯಾಗ್ ಬಳಸಿ ಸುಮಾರು 1.5 ಲಕ್ಷಕ್ಕೂ ಹೆಚ್ಚು ಜನ ಟ್ವೀಟ್ ಮಾಡಿದ್ದರು.

ಶುಕ್ರವಾರ ಸಿಂಘು ಗಡಿಯಲ್ಲಿ ದುಷ್ಕರ್ಮಿಗಳ ಗುಂಪು ನಡೆಸಿದ ಹಲ್ಲೆಯಿಂದ ಗಾಯಗೊಂಡವರ ಚಿತ್ರವನ್ನು ಹಂಚಿಕೊಂಡಿರುವ ಧೀರಜ್, “ನೋವು ಯಾವಾಗಲೂ ಕಣ್ಣೀರಿನಲ್ಲಿ ಮಾತ್ರ ಇರುವುದಿಲ್ಲ. ಕೆಲವೊಮ್ಮೆ ನಗುವಿನಲ್ಲೂ ಇರುತ್ತದೆ” ಎಂದು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
Pain is not always in tears; sometimes its present in smile..#ModiPlanningFarmerGenocide pic.twitter.com/ZE7REIkb4E
— Dheeraj (@Dheeraj59249032) January 30, 2021
ಇದನ್ನೂ ಓದಿ: ರೈತ ಹೋರಾಟ ಮುಗಿಸಲು ಕೇಂದ್ರದ ಸಂಚು: ಕ್ರೊನೊಲಜಿ ಹೀಗಿದೆ
ದೆಹಲಿ ಪೊಲೀಸರು ರೈತರ ಟ್ರ್ಯಾಕ್ಟರ್ ಮೇಲಿರುವ ರಾಷ್ಟ್ರಧ್ವಜವನ್ನು ಕಿತ್ತುಹಾಕುತ್ತಿರುವ ವೀಡಿಯೋವನ್ನು ಹಂಚಿಕೊಂಡಿರುವ ಕುಲ್ವೀರ್ ತಿವಾನಾ, “ದೆಹಲಿ ಪೊಲೀಸರು ರಾಷ್ಟ್ರಧ್ವಜವನ್ನು ಏನು ಮಾಡುತ್ತಿದ್ದಾರೆ? ರೈತರನ್ನು ದೂಷಿಸಲಾಗಿತ್ತಿದೆ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
#ModiPlanningFarmerGenocide#BJPGoonAttackingFarmers
What Delhi police do with national flag??Blaming Farmers ?? pic.twitter.com/Gy8WZhfwyu— Kulvir Tiwana (@KulvirTiwana7) January 30, 2021
ರೈತರ ಮೇಲೆ ನಡೆದ ಹಲ್ಲೆಯಲ್ಲಿ ಗಾಯಗೊಂಡಿರುವ ರೈತರ ವೀಡಿಯೋವನ್ನು ಹಂಚಿಕೊಂಡಿರುವ ದವಿಂದರ್ ಸಿಂಗ್, “ಪೆಟ್ರೋಲ್ ಬಾಂಬ್‌ಗಳಿಗೆ, ಅಶ್ರುವಾಯು ದಾಳಿಗೆ ಮತ್ತು ಮತ್ತು ಕಲ್ಲೇಟಿಗೆ ಸಾಕ್ಷಿಯಾದ ರೈತರು” ಎಂದು ಟ್ವೀಟ್ ಮಾಡಿದ್ದಾರೆ.
Farmers who witnessed petrol bombs, tear gas, stone pelting at #SinghuBorder #ModiPlanningFarmerGenocide
pic.twitter.com/3hOYsJYvPn— Davinder Singh (@Davinde83140028) January 30, 2021
ಕಳೆದ ವರ್ಷ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದ ಗಲಭೆಯಲ್ಲಿ ಬಂದೂಕುಧಾರಿ ವ್ಯಕ್ತಿಯೊಬ್ಬ ಸಿಎಎ-ಎನ್‌ಆರ್‌ಸಿ ಪ್ರತಿಭಟನಾಕಾರರ ವಿರುದ್ಧ ಬಂದೂಕು ಹಿಡಿದಿರುವ ಚಿತ್ರ ಮತ್ತು ಶುಕ್ರವಾರ ಸಿಂಘು ಗಡಿಯಲ್ಲಿ ದುಷ್ಕರ್ಮಿಗಳ ಗುಂಪು ಪ್ರತಿಭಟನಾ ನಿರತ ರೈತರ ಮೇಲೆ ಕಲ್ಲು ಎಸೆಯುತ್ತಿರುವ ಚಿತ್ರವನ್ನು ಹಂಚಿಕೊಂಡಿರುವ ಡಿ ಎನ್ ಯಾದವ್, “ಎರಡೂ ಚಿತ್ರಗಳಲ್ಲಿಯೂ ನೀವು ದೆಹಲಿ ಪೊಲೀಸರನ್ನು ನೋಡಬಹುದು” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಹೆಚ್ಚುತ್ತಿರುವ ಬೆಂಬಲ – ಗಡಿಗಳಲ್ಲಿ ತೀವ್ರಗೊಳ್ಳುತ್ತಿರುವ ರೈತ ಹೋರಾಟ
ರೈತರ ಮೇಲಿನ ಈ ಹಲ್ಲೆಯು ಸರ್ಕಾರಿ ಪ್ರಾಯೋಜಿತ ಎಂಬುದು ಇಂತಹ ಚಿತ್ರಗಳಿಂದ ತಿಳಿದುಬರುತ್ತದೆ ಎಂದು ಟ್ವಿಟ್ಟಿಗರು ಆರೋಪಿಸಿದ್ದಾರೆ. ಈ ಚಿತ್ರದಲ್ಲಿ ವ್ಯಕ್ತಿಯೊಬ್ಬ ರೈತರ ಕಡೆ ಕಲ್ಲು ಬೀಸುತ್ತಿದ್ದಾನೆ. ಆದರೆ ಅವನ ಹಿಂದೆಯೇ ಪೊಲೀಸರು ಇದನ್ನು ನೋಡುತ್ತಾ ನಿಂತಿದ್ದಾರೆ.
You Can see Delhi Police ??#ModiPlanningFarmerGenocide
Shaheen bagh Sindhu border pic.twitter.com/JsBeJJ2DuG
— D.N.Yadav (@dnyadav) January 30, 2021
ರೈತರ ಉತ್ಸಾಹದ ಮಾತುಗಳನ್ನು ಉಲ್ಲೇಖಿಸುವ ವೀಡಿಯೋವನ್ನು ಹಂಚಿಕೊಂಡಿರುವ ಮಂದೀಪ್ ಜಸ್ಸಿ, “ನಮ್ಮ ಹಿರಿಯರ ಉತ್ಸಾಹ ಮತ್ತು ಸ್ಪೂರ್ತಿಯನ್ನು ನೋಡಿ” ಎಂದು ಟ್ವೀಟ್ ಮಾಡಿದ್ದಾರೆ.
See the passion, enthusiasm and encouragement of our elders
#ModiPlanningFarmerGenocide pic.twitter.com/RMa12h4e42
— Mandeep jassi (@mandeepjassi1) January 30, 2021
ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಮತ್ತು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಬೇಕೆಂದು ಒತ್ತಾಯಿಸಿ ಲಕ್ಷಾಂತರ ರೈತರು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರನ್ನು ಬೆಂಬಲಿಸಿ ದೇಶದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ದುಷ್ಕರ್ಮಿಗಳಿಂದ ಕಲ್ಲೆಸೆತ, ರೈತರ ಟೆಂಟುಗಳ ನಾಶ: ಸಿಂಘು ಗಡಿಯಲ್ಲಿ ಪ್ರತ್ಯುತ್ತರ ನೀಡಿದ ರೈತರು


