ನಮ್ಮ ಸಾಂಸ್ಕೃತಿಕ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಮೂಲಕ ಮೊಘಲರು ಮತ್ತು ಬ್ರಿಟಿಷರು ಭಾರತೀಯ ಆರ್ಥಿಕತೆಯ ಮೇಲೆ ದಾಳಿ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರ ಹೇಳಿದ್ದಾರೆ.
ಭಾರತದ ಆರ್ಥಿಕತೆಯನ್ನು ದುರ್ಬಲಗೊಳಿಸಲು ಮೊಘಲರು ಮತ್ತು ಬ್ರಿಟಿಷರು ಮುಂದಾಗಿದ್ದರು ಎಂದ ಅವರು ಮೊಘಲರ ಆಗಮನದ ಮೊದಲು ಭಾರತವು ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿತ್ತು. ಬ್ರಿಟಿಷರು ದೇಶವನ್ನು ತೊರೆಯುವ ಹೊತ್ತಿಗೆ ಅದು ಕೇವಲ ತನ್ನ ಅದ್ಭುತ ಸ್ವಭಾವದ ನೆರಳು ಮಾತ್ರವಾಗಿದೆ ಎಂದು ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ವಿಶ್ವ ಹಿಂದೂ ಆರ್ಥಿಕ ವೇದಿಕೆಯಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಮೊಘಲರು ಭಾರತದ ಮೇಲೆ ದಾಳಿ ಮಾಡುವ ಮೊದಲು, ದೇಶವು ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿಯಾಗಿತ್ತು ಎಂದು ವಿವರಿಸಿದರು. ಮೊಘಲರು ಭಾರತಕ್ಕೆ ಬರುವ ಹೊತ್ತಿಗೆ ಭಾರತವು ವಿಶ್ವದ ಆರ್ಥಿಕತೆಯ ಮೂರನೇ ಒಂದು ಭಾಗದಷ್ಟು ಪಾಲನ್ನು ಹೊಂದಿತ್ತು ಎಂದಿದ್ದಾರೆ.
“ಮೊಘಲ್ ಯುಗದಲ್ಲಿ ಭಾರತವು ಶೇಕಡಾ 36 ಕ್ಕಿಂತ ಹೆಚ್ಚು ಪಾಲನ್ನು ಹೊಂದಿರುವ ವಿಶ್ವ ಆರ್ಥಿಕತೆಯಲ್ಲಿ ಅತಿದೊಡ್ಡ ಪಾಲುದಾರರಾಗಿದ್ದರು ಮತ್ತು ಅವರು ಹೊರಟು ಬ್ರಿಟಿಷರು ಬರುವ ಹೊತ್ತಿಗೆ ಭಾರತದ ಪಾಲು ಶೇಕಡಾ 20 ಕ್ಕೆ ಇಳಿದಿತ್ತು” ಎಂದು ಉತ್ತರ ಪ್ರದೇಶದ ಸಿಎಂ ಹೇಳಿದ್ದಾರೆ
ದೇಶದಲ್ಲಿ ತಮ್ಮ 200 ವರ್ಷಗಳ ಆಳ್ವಿಕೆಯಲ್ಲಿ, ಬ್ರಿಟಿಷರು ಭಾರತೀಯ ಆರ್ಥಿಕತೆಯನ್ನು ದುರ್ಬಲಗೊಳಿಸಿದರು ಮತ್ತು ಅವರು ಹೊರಡುವ ಹೊತ್ತಿಗೆ ಅದನ್ನು ಕೇವಲ ಶೇ.೪ಕ್ಕೆ ಇಳಿಸಿದ್ದರು ಎಂದು ಅವರು ಒತ್ತಿ ಹೇಳಿದ್ದಾರೆ.
ಮುಂಬರುವ ವರ್ಷಗಳಲ್ಲಿ ಕೇವಲ ಉತ್ತರ ಪ್ರದೇಶವೊಂದರಲ್ಲೇ ಒಂದು ಟ್ರಿಲಿಯನ್ ಆರ್ಥಿಕತೆ ಮಾಡುವುದಾಗಿ ಯೋಗಿ ಆದಿತ್ಯನಾಥ್ ಈ ತಿಂಗಳ ಆರಂಭದಲ್ಲಿ ಪ್ರತಿಪಾದಿಸಿದ್ದರು.
“ನಮ್ಮಲ್ಲಿ ಮಂತ್ರಿಗಳು ಮತ್ತು ಅಧಿಕಾರಗಳು ದೂರದೃಷ್ಟಿ ಹೊಂದಿದ್ದಾರೆ. ಸಂವಾದಾತ್ಮಕ ಅಧಿವೇಶನ ನಡೆಯಲಿದ್ದು, ಅಲ್ಲಿ ನಾವು ಅಭಿವೃದ್ಧಿ ಯೋಜನೆಗಳ ಪ್ರಯೋಜನಗಳು ರಾಜ್ಯದ ಪ್ರತಿಯೊಬ್ಬ ವ್ಯಕ್ತಿಗೂ ತಲುಪುವಂತೆ ನೋಡಿಕೊಳ್ಳಲು ಮಾರ್ಗಸೂಚಿಯನ್ನು ರೂಪಿಸುತ್ತೇವೆ. ಉತ್ತರ ಪ್ರದೇಶವನ್ನು 1 ಟ್ರಿಲಿಯನ್ ಆರ್ಥಿಕತೆಯನ್ನಾಗಿ ಮಾಡುವುದು ನಮ್ಮ ಗುರಿ” ಅವರು ಹೇಳಿದ್ದಾರೆ.
ಸಿಎಂ ಯೋಗಿಯವರ ಈ ಮಾತುಗಳನ್ನು ಬಹಳಷ್ಟು ಜನ ಟೀಕಿಸಿದ್ದರೆ ಇನ್ನಷ್ಟು ಜನ ಲೇವಡಿ ಮಾಡಿದ್ದಾರೆ. ಖ್ಯಾತ ಯೂಟೂಬರ್ ಧೃವ್ ರಾಠೀ ” ವಾವ್! ಫಂಟಾ ಬಾಬಾನಿಗೆ ಆರ್ಥಿಕತೆಯ ಬಗ್ಗೆ ಬಹಳಷ್ಟು ಜ್ಞಾನವಿದ್ದು ಇವರನ್ನು ಭಾರತದ ಅರ್ಥ ಸಚಿವರನ್ನಾಗಿ ಮಾಡಬೇಕೆಂದು ಮೋದಿಯವರಲ್ಲಿ ಮನವಿ ಮಾಡುತ್ತೇನೆ” ಎಂದು ಟ್ರೋಲ್ ಮಾಡಿದ್ದಾರೆ.
ಮೋಘಲರು ಭಾರತವನ್ನು ಆಳುತ್ತಿದ್ದಾಗ ಭಾರತ ವಿಶ್ವದಲ್ಲೇ ನಂಬರ್ ಒನ್ ಆರ್ಥಿಕತೆಯಾಗಿತ್ತು. ಈ ಮೋದಿ ಆಳ್ವಿಕೆಯಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕಿಂತಲೂ ಕಳಪೆಯಾಗಿದೆ ಎಂದು ಅಶೋಕ್ ಸಾವಾನ್ ರವರು ಟೀಕಿಸಿದ್ದಾರೆ.
ಮೂರು ಪೆಗ್ ಗೋಮುತ್ರ ಕುಡಿದಾಗ: ಭಾರತದ ಆರ್ಥಿಕತೆ ಕುಸಿತಕ್ಕೆ ಮೊಘಲರು ಮತ್ತು ಬ್ರಿಟಿಷರು ಕಾರಣ
ಐದು ಪೆಗ್ ಗೋಮುತ್ರ ಕುಡಿದಾಗ : ಭಾರತದ ಆರ್ಥಿಕತೆ ಕುಸಿತಕ್ಕೆ ಅಲೆಕ್ಸಾಂಡರ್ ಮತ್ತು ಮೌರ್ಯರು ಕಾರಣ ಎಂದು ಅದ್ವೈದ್ ಎಂಬುವವರು ಟ್ರೋಲ್ ಮಾಡಿದ್ದಾರೆ.



Thank God, he didn’t say that bcos of Congress !!!?