ಅವನು ಡ್ರೈವರ್ ಅಲ್ಲ, ನಾನು ಮಾತ್ರ ಡ್ರೈವರ್. ಮತ್ತೆ ನಿನ್ನೆ ಅವರ ಹುಟ್ಟಿದ ಹಬ್ಬ ಇರಲಿಲ್ಲ. ಅವನ ಹುಟ್ಟಿದ್ದು ನವೆಂಬರ್ 03ರಂದು. ನೀವು ಚಾನೆಲ್‌ನವರು ನಿಮಗೆ ಬೇಕಾದ ಒಂದೊಂದೇ ನ್ಯೂಸ್ ತೆಗೆದುಕೊಳ್ಳುತ್ತೀರಿ. ನಿಮ್ಮ ತಪ್ಪು ನಿಮಗೆ ಗೊತ್ತಾಗುತ್ತಿಲ್ಲ. ನಿಮಗೆ ಟಿ.ಆರ್.ಪಿ ಅಷ್ಟೇ ಮುಖ್ಯ ಎಂದು ಸುರತ್ಕಲ್‌ನಲ್ಲಿ ಕೊಲೆಯಾದ ಫಾಝಿಲ್ ತಂದೆ ನೋವು ತೋಡಿಕೊಂಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ವಾಚ್ ತರಲು ಹೋದಾಗ, ಬಟ್ಟೆ ತರಲು ಹೋದಾಗ ಕೊಲೆಯಾಯಿತು ಅನ್ನುತ್ತೀರಿ. ಅದು ಸುಳ್ಳು. ಜೊತೆಗೆ ಅವನು ಯಾವ ಸಂಘ ಸಂಸ್ಥೆಗಳಿಗೂ ಸೇರಿರಲಿಲ್ಲ, ನಮಗೆ ಜಾತಿ ಬೇಧ ಇಲ್ಲ. ನಮಗೆ ಗಂಡು ಹೆಣ್ಣು ಎಂಬ ಎರಡೇ ಜಾತಿ ಇರುವುದು” ಎಂದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಎಂಪಿ, ಎಂಎಲ್‌ಎ ಬಿಡಿ, ಇದುವರೆಗೂ ಜಿಲ್ಲಾಧಿಕಾರಿ ಸಹ ನಮ್ಮನ್ನು ಭೇಟಿಯಾಗಿಲ್ಲ. ಸಿಎಂ ಅಂತೂ ಕೇಳಲೇಬೇಡಿ, ಅವರು ಹಿಂದೂ ಮುಸ್ಲಿಂರನ್ನು ಬೇರೆ ಬೇರೆ ಮಾಡಿದ್ದಾರೆ. ನಮಗೆ ಪರಿಹಾರ ಬೇಡ, ನ್ಯಾಯ ಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಹೆಲ್ಮೆಟ್ ಹಾಕದಿದ್ದರೆ ಕೇಸ್ ಹಾಕುತ್ತೀರಿ, ಆದರೆ ಸುರತ್ಕಲ್ ಎಂಬ ದೊಡ್ಡ ಸಿಟಿಯಲ್ಲಿ ಸಿಸಿಟಿವಿ ಕ್ಯಾಮರಗಳನ್ನು ಪರಿಶೀಲಿಸಲು ಆಗುವುದಿಲ್ಲವೇ? ಹಿಂದೂಗಳ ಕೊಲೆಯಾದರೆ ಮಾತ್ರ ಅವುಗಳನ್ನು ಪರಿಶೀಲಿಸಲಾಗುತ್ತದೆ, ಆದರೆ ನಮಗೆ ಏಕಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ; ಯುಪಿ ಮಾಡೆಲ್ ತರ್ತೀವಿ ಅನ್ನುವ ಬೊಮ್ಮಾಯಿಯವರೆ, ಯುಪಿ ಮಾಡೆಲ್ ಎಂದರೇನು ಗೊತ್ತೆ?
ಒಬ್ಬ ಎಂಎಲ್‌ಗೆ 5 ವರ್ಷ ಅಧಿಕಾರ. ಆದರೆ ನಾಲ್ಕು ವರ್ಷ ಏನೂ ಮಾಡುವುದಿಲ್ಲ, ಕೊನೆಗೆ ಪಾಪದವನನ್ನು ಸಾಯಿಸಿ ಅದರ ಮೇಲೆ ವೋಟ್ ಪಡೆದು ಗೆಲ್ಲುತ್ತಾರೆ. ಒಳ್ಳೆಯ ಕೆಲಸ ಮಾಡಿ ಗೆಲ್ಲುವುದು ಅವರಿಗೆ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎಂಎಲ್‌ಎ, ಮಿನಿಷ್ಟರ್ ಮಕ್ಕಳು ಸಾಯುವುದಿಲ್ಲ, ಅಮಾಯಕರ ಮಕ್ಕಳು ಮಾತ್ರ ಸಾಯುತ್ತಾರೆ. ಯಾವ ತಂದೆ ತಾಯಿಗೂ, ಅವರು ಹಿಂದೂ-ಮುಸ್ಲಿಂ ಕ್ರಿಶ್ಚಿಯನ್ ಯಾರೇ ಆಗಲಿ ಈ ತರದ ಕಷ್ಟ ಬರಬಾರದು. ನಮಗೆ ನ್ಯಾಯ ಬೇಕು ಎಂದರು.



ಕೊಲೆಯಾದ ಫಾಜಿಲ್ ತಂದೆ ನೋವು ತೋಡಿಕೊಂಡಿದ್ದಾರೆ.
ಮೊದಲ ಪ್ಯಾರಾದಲ್ಲಿ ‘ಕೊಲೆಯಾದ ಫಾಝಿಲ್ ನೋವು ತೋಡಿಕೊಂಡಿದ್ದಾರೆ’ ಎಂದಿದೆ! ಸರಿಪಡಿಸಿ.