Homeಮುಖಪುಟ‘ಗುಜರಾತಿಗಳನ್ನು ಹೊರ ಕಳುಹಿಸಿದರೆ ಮಹಾರಾಷ್ಟ್ರದಲ್ಲಿ ಹಣವೆ ಇರಲ್ಲ’: ಮಹಾರಾಷ್ಟ್ರ ರಾಜ್ಯಪಾಲ ವಿವಾದಾತ್ಮಕ ಹೇಳಿಕೆ

‘ಗುಜರಾತಿಗಳನ್ನು ಹೊರ ಕಳುಹಿಸಿದರೆ ಮಹಾರಾಷ್ಟ್ರದಲ್ಲಿ ಹಣವೆ ಇರಲ್ಲ’: ಮಹಾರಾಷ್ಟ್ರ ರಾಜ್ಯಪಾಲ ವಿವಾದಾತ್ಮಕ ಹೇಳಿಕೆ

- Advertisement -
- Advertisement -

ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ಮಹಾರಾಷ್ಟ್ರದಿಂದ ಹೊರಕ್ಕೆ ಕಳುಹಿಸಿದರೆ ರಾಜ್ಯದಲ್ಲಿ ಯಾವುದೆ ಹಣ ಉಳಿಯುವುದಿಲ್ಲ ಎಂದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಶುಕ್ರವಾರ ಹೇಳಿದ್ದಾರೆ. ಮುಂಬೈನ ಪಶ್ಚಿಮ ಉಪನಗರವಾದ ಅಂಧೇರಿಯ ಚೌಕ್‌ಗೆ ನಾಮಕರಣ ಸಮಾರಂಭದ ವೇಳೆ ಮಾತನಾಡುತ್ತಾ ವಿವಾದ ಸೃಷ್ಟಿಸಿದ್ದಾರೆ.

ಶುಕ್ರವಾರದಂದು ಮಾಡಿದ್ದ ಭಾಷಣದ ವೇಳೆ ಅವರು, ‘‘ಮಹಾರಾಷ್ಟ್ರದಿಂದ ಅದರಲ್ಲೂ ಮುಂಬೈ ಮತ್ತು ಥಾಣೆಯಿಂದ ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ಹೊರಕ್ಕೆ ಕಳುಹಿಸಿದರೆ ಇಲ್ಲಿ ಯಾವುದೆ ಹಣ ಉಳಿಯುವುದಿಲ್ಲ. ಮುಂಬೈ ದೇಶದ ಆರ್ಥಿಕ ರಾಜಧಾನಿಯಾಗಿ ಉಳಿಯಲು ಸಾಧ್ಯವಾಗುವುದಿಲ್ಲ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಮುಂಬೈಯನ್ನು ದೇಶದ ಆರ್ಥಿಕ ರಾಜಧಾನಿಯನ್ನಾಗಿ ಮಾಡುವಲ್ಲಿ ರಾಜಸ್ಥಾನಿ-ಮಾರ್ವಾಡಿ ಮತ್ತು ಗುಜರಾತಿ ಸಮುದಾಯಗಳ ಕೊಡುಗೆಯನ್ನು ಕೊಶ್ಯಾರಿ ಶ್ಲಾಘಿಸಿದ್ದಾರೆ ಎಂದು ರಾಜಭವನದ ಪ್ರಕಟಣೆ ತಿಳಿಸಿದೆ. ರಾಜಸ್ಥಾನಿ-ಮಾರ್ವಾಡಿ ಸಮುದಾಯವು ದೇಶದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದಾರೆ. ಅಲ್ಲಿದೆ ನೇಪಾಳ ಮತ್ತು ಮಾರಿಷಸ್‌ನಂತಹ ದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ರಾಜ್ಯಪಾಲರು ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ:’ತಮ್ಮವರೇ ಬೆನ್ನಿಗೆ ಚೂರಿ ಹಾಕಿದರು’; ಚಿತ್ರವನ್ನು ಟ್ವೀಟ್‌ ಮಾಡಿದ ಸಂಜಯ್ ರಾವತ್

ಈ ಸಮುದಾಯದವರು ಎಲ್ಲಿಗೆ ಹೋದರೂ ವ್ಯಾಪಾರ ಮಾಡುವುದಲ್ಲದೇ ಶಾಲೆ, ಆಸ್ಪತ್ರೆಗಳನ್ನು ರಚಿಸುವ ಮೂಲಕ ಪರೋಪಕಾರದ ಕಾರ್ಯಗಳನ್ನು ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.

ಶಿವಸೇನೆ ಮತ್ತು ಕಾಂಗ್ರೆಸ್‌ನ ಹಲವಾರು ನಾಯಕರು ಕೋಶ್ಯಾರಿ ಅವರ ಹೇಳಿಕೆಯನ್ನು ವಿರೋಧಿಸಿದ್ದು, ಈ ಹೇಳಿಕೆಗೆ ರಾಜ್ಯಪಾಲರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ಕಷ್ಟಪಟ್ಟು ದುಡಿಯುವ ಮರಾಠಿ ಜನರನ್ನು ರಾಜ್ಯಪಾಲರು ಅವಮಾನಿಸಿದ್ದಾರೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಶನಿವಾರ ಹೇಳಿದ್ದಾರೆ. ‘‘ಬಿಜೆಪಿ ಪ್ರಾಯೋಜಿತ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದ ಕೂಡಲೇ ಮರಾಠಿಗರಿಗೆ ಅವಮಾನವಾಗುತ್ತಿದೆ” ಎಂದು ರಾವತ್ ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಅಂದು ಅಮಿತ್ ಶಾ ಕೊಟ್ಟ ಮಾತು ಉಳಿಸಿಕೊಂಡಿದ್ದರೆ, ಇಂದು ಮಹಾರಾಷ್ಟ್ರ ಬಿಜೆಪಿ ಸಿಎಂ ಹೊಂದಿರುತ್ತಿತ್ತು: ಉದ್ಧವ್ ಠಾಕ್ರೆ

ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್ ಮತ್ತು ಸಚಿನ್ ಸಾವಂತ್ ಕೂಡ ಈ ವಿಡಿಯೋವನ್ನು ಟ್ವೀಟ್ ಮಾಡಿ ರಾಜ್ಯಪಾಲರು ಈ ಹೇಳಿಕೆ ನೀಡಬಾರದಿತ್ತು ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

‘ಕೇಜ್ರಿವಾಲ್ ಚುನಾವಣಾ ಪ್ರಚಾರ ಮಾಡಬಾರದೆಂದು ಬಿಜೆಪಿ ಬಯಸುತ್ತದೆ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’;...

0
ಎಎಪಿ ಎನ್‌ಜಿಒ ಅಲ್ಲ, ಅದು ರಾಷ್ಟ್ರೀಯ ಪಕ್ಷ, ಕೇಜ್ರಿವಾಲ್ ಅವರು ಚುನಾವಣಾ ಪ್ರಚಾರದಿಂದ ದೂರವಿರಬೇಕೆಂದು ಬಿಜೆಪಿ ಬಯಸುತ್ತದೆ, ನಾನು ಅವರ ಪರವಾಗಿ ಪ್ರಚಾರ ಮಾಡುತ್ತೇನೆ ಎಂದು ಪಂಜಾಬ್‌ ಸಿಎಂ ಭಗವಂತ್ ಸಿಂಗ್ ಮಾನ್...