Homeಮುಖಪುಟಮಹಾರಾಷ್ಟ್ರ:’ತಮ್ಮವರೇ ಬೆನ್ನಿಗೆ ಚೂರಿ ಹಾಕಿದರು’; ಚಿತ್ರವನ್ನು ಟ್ವೀಟ್‌ ಮಾಡಿದ ಸಂಜಯ್ ರಾವತ್

ಮಹಾರಾಷ್ಟ್ರ:’ತಮ್ಮವರೇ ಬೆನ್ನಿಗೆ ಚೂರಿ ಹಾಕಿದರು’; ಚಿತ್ರವನ್ನು ಟ್ವೀಟ್‌ ಮಾಡಿದ ಸಂಜಯ್ ರಾವತ್

- Advertisement -
- Advertisement -

ಬುಧವಾರ (ಜೂನ್ 29) ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಉದ್ಧವ್ ಠಾಕ್ರೆ ಅವರಿಗೆ ಶಿವಸೇನೆಯ ಸ್ವಂತ ನಾಯಕರು ಹೇಗೆ ಬೆನ್ನಿಗೆ ಚೂರಿ ಹಾಕಿದರು ಎಂಬುದನ್ನು ಸೂಚಿಸುವ ಚಿತ್ರವನ್ನು ಶಿವಸೇನೆಯ ಸಂಸದ ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.

ಮುಖ್ಯಮಂತ್ರಿಯಾಗಿದ್ದ ಉದ್ಧವ್ ಠಾಕ್ರೆ ಅವರು ಕಳೆದ ವಾರ ಸುಮಾರು 40 ಶಿವಸೇನಾ ಶಾಸಕರಿಂದ ಬಂಡಾಯವನ್ನು ಎದುರಿಸಿದ್ದರು. ಅಂದೇ ಮಾತನಾಡಿದ್ದ ಅವರು ತಮ್ಮದೇ ಪಕ್ಷದ ನಾಯಕರು ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಬಯಸದಿದ್ದರೆ ರಾಜೀನಾಮೆ ನೀಡುವುದಾಗಿ ಸ್ಪಷ್ಟಪಡಿಸಿದ್ದರು.

ಕಳೆದ ಶುಕ್ರವಾರ ವರ್ಚುವಲ್ ಭಾಷಣದಲ್ಲಿ ಉದ್ಧವ್‌ ಠಾಕ್ರೆ, ಬಂಡಾಯ ಶಾಸಕರನ್ನು ಉಲ್ಲೇಖಿಸಿ “ಸ್ವಂತ ಜನರಿಂದ ದ್ರೋಹ”ವಾಗಿದೆ. ಅದರ ಹೊರತಾಗಿಯೂ ತನಗೆ ಬೆಂಬಲ ನೀಡಿದ ಶಿವಸೇನಾ ಕಾರ್ಯಕರ್ತರು ಮತ್ತು ಪಕ್ಷದ ನಾಯಕರಿಗೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ಜುಬೇರ್‌ ಬಂಧನ: ಬರವಣಿಗೆ, ಟ್ವೀಟ್ ಆಧಾರದಲ್ಲಿ ಪತ್ರಕರ್ತರನ್ನು ಜೈಲಿಗೆ ಹಾಕಬಾರದು- ವಿಶ್ವಸಂಸ್ಥೆ

ಇಂದು ಟ್ವೀಟ್‌ ಮಾಡಿರುವ ಸಂಜಯ್‌ ರಾವತ್, ಉದ್ಧವ್ ಠಾಕ್ರೆಯನ್ನು ಪ್ರತಿನಿಧಿಸುವ ಬಿಳಿ ಕುರ್ತಾದ ವ್ಯಕ್ತಿಯ ಚಿತ್ರಣವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಕುರ್ತಾ ಹಿಂಭಾಗದಲ್ಲಿ ಹರಿದಿದ್ದು, ಮೂರು ಉದ್ದನೆಯ ಉಗುರು ಗುರುತುಗಳು ಮತ್ತು ರಕ್ತ ತೊಟ್ಟಿಕ್ಕುತ್ತಿದೆ. ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಾಸಕರು ಬಿಜೆಪಿಯ ನೇರ ಬೆಂಬಲದೊಂದಿಗೆ ಮಾಜಿ ಮುಖ್ಯಮಂತ್ರಿಗೆ ಹೇಗೆ ಬೆನ್ನಿಗೆ ಚೂರಿ ಹಾಕಿದರು ಎಂಬುದು ಎಂದು ಮಾರ್ಮಿಕವಾಗಿ ಸಂಜಯ್ ರಾವತ್‌ ತಿಳಿಸಿದ್ದಾರೆ.

ಚಿತ್ರಕ್ಕೆ “ಇದು ನಿಖರವಾಗಿ ಏನಾಯಿತು ಎಂಬುದು” ಎಂದು ಸಂಜಯ್ ರಾವತ್ ವಿವರಣೆ ನೀಡಿದ್ದಾರೆ.

ಬಂಡಾಯ ಶಾಸಕರು ಗುಜರಾತ್‌ನ ಸೂರತ್‌ಗೆ ತೆರಳಿದ ನಂತರ ಕಳೆದ ವಾರ ಬಿಜೆಪಿ ಆಡಳಿತದ ಅಸ್ಸಾಂನಲ್ಲಿ ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಆಗಲೇ ಠಾಕ್ರೆ ಅವರು ತಮ್ಮ ಮುಖ್ಯಮಂತ್ರಿಗಳ ಅಧಿಕೃತ ನಿವಾಸ “ವರ್ಷ” ದಿಂದ ತಮ್ಮ ಕುಟುಂಬದ ಮನೆಯಾದ “ಮಾತೋಶ್ರೀ” ಗೆ ಮರಳಿದ್ದರು.

ಮುಖ್ಯಮಂತ್ರಿ ಸ್ಥಾನಕ್ಕೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ರಾಜೀನಾಮೆ ನೀಡುವುದಾಗಿ ಬುಧವಾರ ರಾತ್ರಿ ಘೋಷಿಸಿದ ಬೆನ್ನಲ್ಲೇ, ಭಾರತೀಯ ಜನತಾ ಪಾರ್ಟಿಯ (ಬಿಜೆಪಿ) ಉನ್ನತ ನಾಯಕರು ತಮ್ಮ ಮುಂದಿನ ನಡೆಯನ್ನು ಕಾರ್ಯತಂತ್ರ ರೂಪಿಸಲು ದಕ್ಷಿಣ ಮುಂಬೈನ ಪಂಚತಾರಾ ಹೋಟೆಲ್‌ನಲ್ಲಿ ಸಭೆ ನಡೆಸಿದ್ದಾರೆ.

39 ಬಂಡಾಯ ಶಾಸಕರು ಮತ್ತು ಸ್ವತಂತ್ರ ಶಾಸಕರನ್ನು ಒಳಗೊಂಡಿರುವ ಶಿವಸೇನೆಯ ಏಕನಾಥ್ ಶಿಂಧೆ ಬಣದ ಬೆಂಬಲದೊಂದಿಗೆ ದೇವೇಂದ್ರ ಫಡ್ನವಿಸ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಗೆ ಬಿಜೆಪಿ ಹಕ್ಕು ಚಲಾಯಿಸಲಿದೆ. ಶಿಂಧೆ ಮತ್ತು ಬಂಡಾಯ ಶಾಸಕರು ಇಂದು ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ಉದ್ಧವ್‌ ಠಾಕ್ರೆ ರಾಜೀನಾಮೆ: ಸರ್ಕಾರ ರಚನೆಗೆ ಬಿಜೆಪಿ ನಾಯಕರ ಸಭೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...