- Advertisement -
- Advertisement -
ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಛತ್ತೀಸ್ ಘಡದ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ರೈತರ ಸಮಸ್ಯೆ ಸಹ ಒಂದು ಮಹತ್ವದ ಅಂಶವಾಗಿತ್ತು ಎಂಬ ಮಾತುಗಳು ಕೇಳಿಬಂದಿವೆ. ಈಗ ಈ ಐದು ವರ್ಷಗಳಲ್ಲಿ ಮೋದಿ ಸರ್ಕಾರ ರೈತರಿಗೆ ಕೊಟ್ಟಿದ್ದೇನು ಎಂಬುದನ್ನು ವಿಶ್ಲೇಷಿಸಿದ್ದಾರೆ ಎಐಕೆಎಸ್‍ಸಿಸಿ ರೈತ ಹೋರಾಟ ಸಮಿತಿಯ ಯೋಗೇಂದ್ರ ಯಾದವ್. ವಿಡಿಯೋ ನೋಡಿ
ಮೋದಿ ಸರ್ಕಾರ ರೈತರಿಗೆ ಏನು ಮಾಡಿದೆ?
ಕಳೆದ 70 ವರ್ಷಗಳಲ್ಲಿ ಯಾವ ಸರ್ಕಾರವು ರೈತಸ್ನೇಹಿಯಾಗಿ ಕೆಲಸ ಮಾಡಿಲ್ಲ. ಆದ್ರೆ ಅದೇ 70 ವರ್ಷದಲ್ಲಿ ಯಾವ ಸರ್ಕಾರವು ಇಷ್ಟು ಪ್ರಮಾಣದಲ್ಲಿ ರೈತದ್ರೋಹಿ ಆಗಿರಲಿಲ್ಲ.
ಎಲ್ಲಾ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಸುಮಾರಷ್ಟು ಆಶ್ವಾಸನೆ ಕೊಡುತ್ತವೆ. ನಂತರ ಅವುಗಳನ್ನು ಈಡೇರಿಸುವುದಿಲ್ಲ. ಈ ಪಕ್ಷ (ಬಿಜೆಪಿ) ಕೂಡಾ ಸಿಕ್ಕಾಪಟ್ಟೆ ಆಶ್ವಾಸನೆ ಕೊಟ್ಟಿತ್ತು. ಸ್ವಾಮಿನಾಥನ್ (2006) ವರದಿಯ ಶಿಫಾರಸ್ಸುಗಳನ್ನು ಜಾರಿಗೆ ತರ್ತೀವಿ ಎಂದು ಹೇಳಿದ್ದರು. ಆದರೆ ಅದನ್ನು ಈಡೇರಿಸಲಿಲ್ಲ. ಅಸಲಿಗೆ ಸುಳ್ಳು ಹೇಳಿದರು. ಪರವಾಗಿಲ್ಲ.

ಎಲ್ಲಾ ಸರ್ಕಾರಗಳು ಬಹಳಷ್ಟು ಸಾಧನೆ ಮಾಡಿರುವುದಾಗಿ ಹೇಳಿಕೊಳ್ಳುತ್ತವೆ. ನಮ್ಮ ಪ್ರಧಾನಿಗಳಂತೂ ಸ್ವಲ್ಪ ಜಾಸ್ತಿನೆ ದೊಡ್ಡದೊಡ್ಡ ಸಾಧನೆ ಹೇಳಿಕೊಳ್ತಾರೆ.. ಆದಾಯವನ್ನು ದುಪ್ಪಟ್ಟು ಮಾಡ್ತೀನಿ…
ದುಪ್ಪಟ್ಟು ಮಾಡುವ ಮಾತಿರಲಿ, ಆದರೆ ವಾಸ್ತವ ಏನೆಂದ್ರೆ, ನಮ್ಮ ದೇಶದ ರೈತನ ಸ್ಥಿತಿ ಐದು ವರ್ಷಗಳ ಹಿಂದೆ ಹೇಗಿತ್ತೊ ಈಗಲೂ ಹಾಗೆಯೇ ಇದೆ.. ಆದಾಯ ದುಪ್ಪಟ್ಟು ಅನ್ನೋದು ದಿಕ್ಕುದಿಸೆಯಿಲ್ಲದ ಮಾತಷ್ಟೆ..
ಅದನ್ನೂ ಬಿಟ್ಟು ಬಿಡೋಣ….
ನೀವು (ಸರ್ಕಾರ) ರೈತರು ಆತಂಕ ಮತ್ತು ಸಮಸ್ಯೆಗಳ ಸುಳಿಯಲ್ಲಿದ್ದಾಗ ಅವರ ನೆರವಿಗೆ ಬಂದಿರಾ? ಅಂಥಾ ಭಯಾನಕ ಕ್ಷಾಮ ಕಾಡಿದಾಗಲೂ ಅವರು ರೈತರಿಗೆ ನೆರವಾಗಲಿಲ್ಲ. ಬದಲಿಗೆ ಅಂಥಾ ಪರಿಸ್ಥಿಯಲ್ಲಿ ರೈತರ ಮೇಲೆ ಇನ್ನಷ್ಟು ಸಂಕಷ್ಟ ಹೇರಿದರು, ನೋಟ್ ಬ್ಯಾನ್ ಮೂಲಕ. ಆ ಏಟನ್ನು ನಮ್ಮ ರೈತರು ಇದುವರೆಗೆ ಸುಧಾರಿಸಿಕೊಳ್ಳಲು ಸಾಧ್ಯವಾಗಿಲ್ಲ.
ಬೀದಿ ಪಶುಗಳ ಸಮಸ್ಯೆಯನ್ನು ನಿರ್ಮಿಸಿದ್ದು ಅವರೇ. ನಮ್ಮ ರೈತರು ನೆರವಿಗಾಗಿ ಬೇಡುತ್ತಿದ್ದಾರೆ. ಬೇಸಾಯಕ್ಕೆ ಬೇಕಾದ ಕಚ್ಚಾ ವಸ್ತುಗಳ ಬೆಲೆ ಜಾಸ್ತಿಯಾಗಿದೆ. ಅದು ರಸಗೊಬ್ಬರ ಇರಬಹುದು, ಡೀಸೆಲ್ ಇರಬಹುದು, ಎಲ್ಲವೂ ದುಬಾರಿಯಾಗಿವೆ.
ಇದಿಷ್ಟೇ ಅಲ್ಲದೇ, ರೈತರಿಂದ ಅವರ ಜಮೀನುಗಳನ್ನು ಕಸಿದುಕೊಳ್ಳುವ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಮೋದಿ ಸರ್ಕಾರ ರೈತರಿಗೆ ಏನು ಮಾಡಿದೆ ಅಂತ ನನ್ನನ್ನು ಕೇಳ್ತಾರೆ? 

ನಾನು ಹೇಳ್ತೀನಿ, ಕಳೆದ 70 ವರ್ಷಗಳಲ್ಲಿ ಎಲ್ಲಾ ಸರ್ಕಾರಗಳು ರೈತರನ್ನು ನಿರ್ಲಕ್ಷಿಸುತ್ತಾ, ಅವರನ್ನು ಆಸ್ಪತ್ರೆಗಳ ಜನರಲ್ ವಾರ್ಡಿನ ಹಾಸಿಗೆ ಮೇಲೆ ರೋಗಿಗಳನ್ನಾಗಿಸುತ್ತಾ ಬಂದಿದ್ದವು. ಮೋದಿ ಸರ್ಕಾರ ಅವರನ್ನು ಜನರಲ್ ವಾರ್ಡ್‍ನಿಂದ ಸೀದಾ ಐಸಿಯುಗೆ ತಂದು ಹಾಕಿದೆ.
ಇದು ಮೋದಿ ಸರ್ಕಾರದ ಸಾಧನೆ


