Homeಅಂತರಾಷ್ಟ್ರೀಯನೇಚರ್ ವಿಜ್ಞಾನ ಪತ್ರಿಕೆಯ 150 ವರ್ಷಗಳು : ಅನುರಣನ - ಡಾ.ಟಿ.ಎಸ್‌ ಚನ್ನೇಶ್‌

ನೇಚರ್ ವಿಜ್ಞಾನ ಪತ್ರಿಕೆಯ 150 ವರ್ಷಗಳು : ಅನುರಣನ – ಡಾ.ಟಿ.ಎಸ್‌ ಚನ್ನೇಶ್‌

ಒಂದು "ಇಲ್ಲಸ್ಟ್ರೇಟೆಡ್ ವೀಕ್ಲಿ ವಿಜ್ಞಾನ ಪತ್ರಿಕೆ"ಯಾಗಿ ಆರಂಭವಾದ "ನೇಚರ್" ವಿಜ್ಞಾನವನ್ನು ಹಂಚುವ ಆತ್ಯಂತಿಕ ಉದ್ದೇಶವುಳ್ಳದ್ದಾಗಿತ್ತು. ಅದರ ಶ್ರೇಷ್ಠತೆಯು ಹೇಗೆ ಬೆಳೆಯಿತೆಂದರೆ ಅದರಲ್ಲಿ ಪ್ರಕಟಿಸುವುದೇ ಹೆಮ್ಮೆಯ ಸಂಗತಿ ಎಂದು ವಿಜ್ಞಾನಿಗಳೂ ಭಾವಿಸತೊಡಗಿ ಅದೊಂದು ಪ್ರಬುದ್ಧ ವಿಜ್ಞಾನ ಸಂಶೋಧನಾ ಪತ್ರಿಕೆಯಾಗಿ ಹೊರಹೊಮ್ಮಿತು.

- Advertisement -
- Advertisement -

ಹಿಂದಿನ ವಾರ ಇದೇ ಅಂಕಣದಲ್ಲಿ 150 ವರ್ಷಗಳ ಹಿಂದಿನ ಆವಿಷ್ಕಾರವಾದ ಮೂಲವಸ್ತುಗಳ ಆವರ್ತ ಜೋಡಣೆಗಳ ಬಗೆಗೆ ಚರ್ಚಿಸಲಾಗಿತ್ತು. ವಿಜ್ಞಾನದ ಇತಿಹಾಸದಲ್ಲಿ ಅಷ್ಟೇ ಕಾಲಾಂತರದ ಪ್ರಮುಖವಾದ ಮತ್ತೊಂದು ಘಟನೆಯನ್ನು ಹೇಳಬೇಕಿದೆ. ಇಲ್ಲಿಗೆ ನೂರೈವತ್ತು ವರ್ಷಗಳ ಹಿಂದೆ ಇದೇ ನವೆಂಬರ್ ತಿಂಗಳ ನಾಲ್ಕನೆಯ ತಾರೀಖು “ನೇಚರ್” ಎಂಬ ವಿಜ್ಞಾನ ಪತ್ರಿಕೆಯೊಂದು ಇಂಗ್ಲೆಂಡಿನಿಂದ ಪ್ರಕಟವಾಗಿತ್ತು. 1869ರಲ್ಲಿ ಆರಂಭವಾದ ಈ ಪತ್ರಿಕೆಯು ಇಂದಿನವರೆಗೂ ಪ್ರತೀ ವಾರ ಪ್ರಕಟವಾಗುವುದಲ್ಲದೆ, ಇಡೀ 150 ವರ್ಷಗಳ ವಿಜ್ಞಾನದ ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿದೆ. ಕಳೆದ ಒಂದೂವರೆ ಶತಮಾನವೂ ಸಹ ವಿಜ್ಞಾನದ ಅನೇಕ ಬಹು ಮುಖ್ಯವಾದ ಘಟನೆಗಳಿಗೆ ಕಾರಣವಾಗಿದ್ದು, ಅವುಗಳಲ್ಲಿ ಹಲವಾರು ಈ ಪತ್ರಿಕೆಯ ಸಹಯೋಗವನ್ನು ಹೊಂದಿರುವುದು ವಿಶೇಷ ಸಂಗತಿ. ಅಂತಹ ಘಟನೆಗಳನ್ನು ಕಾಲದಿಂದ ಕಾಲಕ್ಕೆ ಕೊಂಡೊಯ್ಯುವಲ್ಲಿ ಹಾಗೂ ಅವುಗಳನ್ನು ಮುಂದುವರೆಸುವಲ್ಲಿ “ನೇಚರ್” ಪತ್ರಿಕೆಯ ಪಾತ್ರ ದೊಡ್ಡದು.

ವಿಜ್ಞಾನ ಮತ್ತು ಸಮಾಜದ ನಡುವಣ ಸಂಬಂಧವನ್ನು ಬೌದ್ಧಿಕ ಮತ್ತು ಭಾವನಾತ್ಮಕವಾದ ತಿಳಿವಿನಲ್ಲಿ ತರುವಂತೆ ಮಾಡುವ ಬ್ರಿಟಿಷ್ ಪ್ರಯೋಗಗಳು ಅನನ್ಯವಾದವು. ಇದೇ ನವೆಂಬರ್ ತಿಂಗಳಲ್ಲೇ ಸುಮಾರು 358 ವರ್ಷಗಳ ಹಿಂದೆ ಪ್ರಾರಂಭವಾದ ಬ್ರಿಟನ್ನಿನ ರಾಯಲ್ ಸೊಸೈಟಿಯು ವಿಜ್ಞಾನದ ಸಾರ್ವಜನಿಕ ಭಾಷಣಗಳನ್ನು ಏರ್ಪಡಿಸುವ ಮೂಲಕ ಇಂತಹ ಸಾಧ್ಯತೆಗಳಿಗೆ ಅಡಿಪಾಯ ಹಾಕಿಕೊಟ್ಟಿದೆ. ಅಲ್ಲಿಯೇ “ನೇಚರ್” ಪತ್ರಿಕೆಯ ಆರಂಭಕ್ಕೂ ಇಂತಹ ಸಾಮುದಾಯಿಕ ಆಸಕ್ತಿಯು ಕಾರಣವಾಗಿದೆ. ಬ್ರಿಟನ್ನಿನ ಖ್ಯಾತ ಕವಿ ವಿಲಿಯಂವಡ್ರ್ಸ್‍ವರ್ಥ್ ಅವರ ಕವಿತೆಯ ಸಾಲು “To the solid ground of NATURE trusts the Mind that builds for aye” ಪತ್ರಿಕೆ ಹೆಸರನ್ನು “ನೇಚರ್” ಎಂದು ಕರೆಯಲು ಕಾರಣವಾಗಿದೆ. “ನಿಸರ್ಗದ ಅಡಿಪಾಯದ ಭದ್ರತೆಯು ಅದನ್ನು ಕಟ್ಟುವ ಮನಸ್ಸನ್ನು ಸದಾ ನಂಬಿದೆ” ಎನ್ನುವ ಅರ್ಥದ ಈ ಸಾಲು ಪತ್ರಿಕೆಯನ್ನು ಉದ್ದೇಶವನ್ನೂ ಸಮರ್ಥಿಸಲು ಯುಕ್ತವಾಗಿದೆ. ನಿಸರ್ಗವನ್ನು ಅರ್ಥಮಾಡಿಕೊಳ್ಳುವ ಹುಡುಕಾಟವಾಗಿರುವ ವಿಜ್ಞಾನದ ಹಾದಿಯು ಸುಗಮವಾಗಿರಲು ಗಟ್ಟಿಯಾದ ಮನಸ್ಸುಗಳು ಬೇಕು. ಅದನ್ನೇ ಪತ್ರಿಕೆಯ ಧೋರಣೆಯೆಂಬಂತೆ ಪತ್ರಿಕೆಯ ಟ್ಯಾಗ್‍ಲೈನ್ ಆಗಿ ನಿರಂತರವಾಗಿ 75 ವರ್ಷಗಳ ಕಾಲ ಈ ಸಾಲು ಮುಖಪುಟದಲ್ಲಿ ಅಚ್ಚಾಗುತ್ತಿತ್ತು.

“ನೇಚರ್” ಒಂದು “ಇಲ್ಲಸ್ಟ್ರೇಟೆಡ್ ವೀಕ್ಲಿ ವಿಜ್ಞಾನ ಪತ್ರಿಕೆ”ಯಾಗಿ ಆರಂಭವಾಯಿತು. ಅಂದರೆ ಒಂದು ಸಚಿತ್ರ ಪತ್ರಿಕೆಯಾಗಿ ಜನತೆಗೆ ವಿಜ್ಞಾನವನ್ನು ಹಂಚುವ ಆತ್ಯಂತಿಕ ಉದ್ದೇಶವುಳ್ಳದ್ದಾಗಿತ್ತು. ಅದರ ಶ್ರೇಷ್ಠತೆಯು ಹೇಗೆ ಬೆಳೆಯಿತೆಂದರೆ ಅದರಲ್ಲಿ ಪ್ರಕಟಿಸುವುದೇ ಹೆಮ್ಮೆಯ ಸಂಗತಿ ಎಂದು ವಿಜ್ಞಾನಿಗಳೂ ಭಾವಿಸತೊಡಗಿ ಅದೊಂದು ಪ್ರಬುದ್ಧ ವಿಜ್ಞಾನ ಸಂಶೋಧನಾ ಪತ್ರಿಕೆಯಾಗಿ ಹೊರಹೊಮ್ಮಿತು. ಇಂದಿಗೂ ಒಂದೂವರೆ ಶತಮಾನಗಳ ಕಾಲದ ನಂತರವೂ ಜಗತ್ತಿನ ಶ್ರೇಷ್ಠ ವಿಜ್ಞಾನ ಪತ್ರಿಕೆಗಳಲ್ಲೊಂದಾಗಿದೆ. ಇಂದಿಗೂ ವಿಜ್ಞಾನಿಗಳಿಗೆ ಅದರಲ್ಲಿ ಪ್ರಕಟಿಸುವುದೇ ಹೆಮ್ಮೆಯ ಸಂಗತಿಯಾಗಿದೆ.

ಕಳೆದ ನೂರೈವತ್ತು ವರ್ಷಗಳೂ ಸಹ ವಿಜ್ಞಾನದ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾದವು. ನಮ್ಮ ಬಹುಪಾಲು ವೈಜ್ಞಾನಿಕ ತಿಳಿವುಗಳು ಮಹತ್ತರವಾದ ತಿರುವುಗಳನ್ನು ಪಡೆದದ್ದೇ ಈ ಕಾಲದಲ್ಲಿ. ನಮ್ಮನ್ನು ಕುರಿತಂತೆಯೇ ಬದಲಾದ ತಿಳಿವಿನ ಶೋಧಗಳನ್ನು ಉದಾಹರಣೆಯಾಗಿ ನೋಡೋಣ. ಇದೇ ಪತ್ರಿಕೆಯಲ್ಲಿ 1925ರ ಫೆಬ್ರವರಿಯಲ್ಲಿ ಮಾನವ ಮತ್ತು ವಾನರ ಸಂತತಿಯ ಸಂಬಂಧಗಳ ಪಳೆಯುಳಿಕೆಗಳ ಪತ್ತೆಯ ಶೋಧವೊಂದನ್ನು ಪ್ರಕಟಿಸಿತು. ಇದು ಮಾನವ ಕುಲವು ಆಫ್ರಿಕಾದ ವಾನರ ಸಂತತಿಯೊಂದರಿಂದ ವಿಕಾಸಗೊಂಡ ಸಂಗತಿಗೆ ಉದಾಹರಣೆಗಳಿಂದ ವಿವರಿಸಿತ್ತು. ಅದು ಆಗಿನ ತಿಳಿವಳಿಕೆಗೆ ಬಲವಾದ ತಿರುವು ಕೊಟ್ಟದ್ದಲ್ಲದೆ, ಡಾರ್ವಿನ್ನರ ವಿಕಾಸವಾದದ ಊಹೆಯ ಆಫ್ರಿಕಾದ ನೆಲೆಗೆ ಪುಷ್ಠಿಕೊಟ್ಟಿತ್ತು. ಮುಂದೆ 80 ವರ್ಷಗಳ ತರುವಾಯು ಇದೇ ಪತ್ರಿಕೆಯು 2005ರಲ್ಲಿ ಮಾನವ ಸಂಕುಲವಾದ “ಹೋಮೊ”ವಿನಲ್ಲಿ ಹಲವು ವೈವಿಧ್ಯತೆಗಳಿರುವ ಕುರುಹುಗಳ ಶೋಧವನ್ನು ಪ್ರಕಟಿಸಿ ನಮ್ಮ ವಿಕಾಸದ ತಿಳಿವಳಿಕೆಯನ್ನು ಮುಂದುವರೆಸಿತ್ತು. ಅದಾದಕೂಡಲೇ ಅಂತಹ ತಿಳಿವಳಿಕೆಯ ಮಾನವನ ಇತಿಹಾಸ ಪೂರ್ವ ಸಾಕ್ಷ್ಯಗಳನ್ನು ಹುಡುಕಲು ಸಾಧ್ಯವಾಯಿತು. ಅದರಿಂದಾಗಿ ಕೇವಲ 30,000 ದಿಂದ 60,000 ವರ್ಷಗಳ ಹಿಂದಿನವರೆಗೂ ಮಾನವ ಸಂಕುಲದ ವಿವಿಧ ಪ್ರಭೇದಗಳು ಸಾಹಸಚರ್ಯ ನಡೆಸಿದ್ದ ಕುರುಹುಗಳು ದೊರೆತವು. ಅಂದರೆ ಆಧುನಿಕ ಮಾನವನು ನಿಯಾಂಡರ್‍ತಲ್ ಮಾನವರೊಡನಾಟವಿದ್ದ ಸಾಕ್ಷ್ಯಗಳು ಸಿಕ್ಕವು. ಹೀಗೆ ಅಂತಹ ಬಹುಮುಖ್ಯವಾದ ಐತಿಹಾಸಿಕ ವೈಜ್ಞಾನಿಕ ಶೋಧಗಳನ್ನು ಪತ್ರಿಕೆ ಪ್ರಕಟಿಸಿ ನಮ್ಮ ತಿಳಿವಳಿಕೆಯನ್ನು ಗಟ್ಟಿ ಮಾಡಿದೆ.

ಭೌತವಿಜ್ಞಾನದ ಬಹುಮುಖ್ಯ ಕೊಡುಗೆಗಳಲ್ಲೂ ಪತ್ರಿಕೆಯ ಪಾತ್ರವಹಿಸಿದೆ. 1932ರಲ್ಲೇ ಪರಮಾಣುವಿನ ಹೊಸ ಕಣ “ನ್ಯೂಟ್ರಾನ್”ಅನ್ನು ಪತ್ತೆ ಹಚ್ಚಿದ ಶೋಧವನ್ನು ಪತ್ರಿಕೆಯು ಪ್ರಕಟಿಸಿತ್ತು. ಆ ವೇಳೆಗಾಗಲೇ ತಿಳಿದಿದ್ದ “ಪ್ರೋಟಾನು” ಮತ್ತು “ಇಲೆಕ್ಟ್ರಾನ್”ಗಳ ಜೊತೆಗೆ ಪರಮಾಣುವಿಗೆ ಹೊಸ ಸಂಗಾತಿ ಇರುವುದು ಗೊತ್ತಾಗಿತ್ತು. ಮುಂದೆ ಪತ್ರಿಕೆಯು ಕಣಭೌತವೈಜ್ಞಾನಿಕ ಸಂಗತಿಗಳ ಶೋಧಗಳ ತಿಳಿವನ್ನು ಪ್ರಕಟಿಸಿದ್ದರ ಹಿನ್ನೆಲೆಯಲ್ಲಿ ಇಂದು ಮೂಲಭೂತ ಕಣಗಳ ಕುರಿತ ಅರಿವು ಹೆಚ್ಚಿದೆ. ಇಂತಹ ಶೋಧಗಳ ತಿಳಿವಿನ ಹರವು ಭೂಮಿಯಾಚೆಗೂ ಪಸರಿಸಿ ಭೂಮಿಯಂತಹ ಅನ್ಯಗ್ರಹಗಳ ಮೊಟ್ಟಮೊದಲ ಅರಿವನ್ನೂ 1995ರಲ್ಲಿ ಪತ್ರಿಕೆಯು ಹೊರತಂದಿತ್ತು. ಬೇರೊಂದು ಗೆಲಾಕ್ಸಿಯಲ್ಲಿರುವ ಸೂರ್ಯನಂತಹದೇ ನಕ್ಷತ್ರವನ್ನು ಸುತ್ತುತ್ತಿರುವ ಗ್ರಹದ ಪತ್ತೆಯಾಗಿತ್ತು. ಆ ಶೋಧಕ್ಕೆ ಇದೇ ವರ್ಷ 2019ರ ನೊಬೆಲ್ ಪುರಸ್ಕಾರವೂ ದೊರೆತಿದೆ.

ನೇಚರ್ ಪತ್ರಿಕೆಯ ಅತ್ಯಂತ ನೆನಪಲ್ಲಿ ಉಳಿಯುವಂತಹ ಪ್ರಕಟಣೆ ಎಂದರೆ “ಡಿ.ಎನ್.ಎ.” ರಚನೆಯ ಕುರಿತ 1953 ಪ್ರಕಟಣೆಗಳು. ನೊಬೆಲ್ ಬಹುಮಾನವನ್ನು ತಂದುಕೊಟ್ಟ ಆ ಪ್ರಕಟಣೆ ಇಂದಿಗೂ ನೇಚರ್ ಪತ್ರಿಕೆಯ ಬಹು ಚರ್ಚಿತ ವೈಜ್ಞಾನಿಕ ಪ್ರಬಂಧ. ಇದು ಜೀವಿವಿಜ್ಞಾನದ ತಿಳಿವನ್ನೇ ಬದಲಿಸಿತಲ್ಲದೆ, ಆ ಮುಂದಿನ ಜೀವಿವಿಜ್ಞಾನದ ಶೋಧನೆಯ ದಿಕ್ಕನ್ನೂ ಬದಲಿಸಿತು. ಅದರಂತೆ ಅತ್ಯಂತ ಹೆಮ್ಮೆಯ ಮಾನವ ತಳಿಯ ಮೊದಲ ಡ್ರಾಫ್ಟ್ ಸಹ ಇದೇ ಪತ್ರಿಕೆಯಲ್ಲಿ ವರದಿಯಾಗಿತ್ತು. ಇದರಿಂದಾಗಿ ಈಗೆಲ್ಲಾ ಕೃಷಿ, ವೈದ್ಯಕೀಯ, ಆನುವಂಶಿಕ ತಿಳಿವು, ಅಪರಾಧ ಪತ್ತೆದಾರಿಕೆಯ ನ್ಯಾಯ ಮುಂತಾದವೆಲ್ಲಾ ಇಂದು ಭಿನ್ನವಾಗಿ ಚರ್ಚಿಸಲು ಸಾಧ್ಯವಾಗಿದೆ.

ಯಾವುದೇ ಪತ್ರಿಕೆಯು ತನ್ನ ಉದ್ದೇಶಿತ ಗುರಿಯಲ್ಲಿ ಜವಾಬ್ದಾರಿಯುತ ಸನ್ನಿವೇಶವನ್ನು ಕಾಪಾಡಿಕೊಳ್ಳುವುದೂ ಮುಖ್ಯ. ಕಳೆದ ಶತಮಾನದ ಅನ್ವೇಷಣೆಗಳು ಹಲವು ಅತ್ಯಂತ ಉಪಯುಕ್ತ ತಂತ್ರಜ್ಞಾನಗಳನ್ನು ಕೊಟ್ಟಿದೆ. ಅದರ ಜೊತೆಯಲ್ಲೇ ಪರಿಸರವನ್ನು ವಿನಾಶದತ್ತ ಕೊಂಡೊಯ್ಯುವ ದಿಶೆಯಲ್ಲೂ ಅಪಾಯಕಾರಿ ಅನುಶೋಧಗಳೂ ನಡೆದಿವೆ. ಪತ್ರಿಕೆಯು 1974ರಲ್ಲೇ ಮೊದಲ ಬಾರಿಗೆ ಕ್ಲೋರೊಫ್ಲುರೋಕಾರ್ಬನ್‍ಗಳಿಂದ ಬಿಡುಗಡೆಯಾಗುವ ಕ್ಲೋರಿನ್ ಆಗಸದಾಚೆಗಿನ ಓಝೋನ್ ಪದರವನ್ನು ನಾಶಗೊಳಿಸುವ ಬಗೆಗೆ ಪ್ರಕಟಿಸಿತ್ತು. ಅದಾದ ಒಂದು ದಶಕದಲ್ಲಿ ಮೊಟ್ಟಮೊದಲ ಓಝೋನ್ ವಿನಾಶದ ತಿಳಿವಿನ ಸಾಕ್ಷಿಯು ಅಂಟಾರ್ಟಿಕಾದ ಮೇಲುಗಡೆ ಪತ್ತೆಯಾಗಿತ್ತು. ಇದರಿಂದಾಗಿ ಮುಂದೆ 1989ರಲ್ಲಿ ಓಝೋನ್ ನಾಶಪಡಿಸುವ ಹೊರಸೂಸುಗಳನ್ನು ಕಡಿಮೆಗೊಳಿಸುವ ಅಂತರರಾಷ್ಟ್ರೀಯ ಒಪ್ಪಂದ “ಮಾಂಟ್ರಿಯಲ್ ಪ್ರೊಟೊಕಾಲ್” ಜಾರಿ ಬರಲು ಕಾರಣವಾಯಿತು.

ಹೀಗೆ ವಿಜ್ಞಾನದ ಒಂದೂವರೆ ಶತಮಾನದ ಏರಿಳಿತಗಳ ಶೋಧಗಳ ತಿಳಿವು, ಚರ್ಚೆ, ಮತ್ತಿತರ ಮಹತ್ವದ ಸಂಗತಿಗಳಿಗೆ ಸಾಕ್ಷಿಯಾದ “ನೇಚರ್” ಭವಿಷ್ಯದ ವಿಜ್ಞಾನದ ಹಾದಿಯನ್ನೂ ಪ್ರಮುಖವಾಗಿ ಪರಿಗಣಿಸಿದೆ. ಇದರ ಹಿನ್ನೆಲೆಯಲ್ಲಿ 18ರಿಂದ 25 ವಯೋಮಾನದವರಿಗಾಗಿ ಅಂತರರಾಷ್ಟ್ರೀಯ ವಿಜ್ಞಾನ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿತ್ತು. ಸ್ಪರ್ಧೆಯಲ್ಲಿ 68 ದೇಶಗಳ 661 ಸ್ಪರ್ಧಿಗಳು ಭಾಗವಹಿಸಿದ್ದರು. ಅದರಲ್ಲಿ ಮೊದಲ ಬಹುಮಾನ ಪಡೆದ ಇಂಗ್ಲೆಂಡಿನ ನಾಟಿಂಗ್‍ಹ್ಯಾಂ ವಿಶ್ವವಿದ್ಯಾಲಯದ ಮನೋವಿಜ್ಞಾನದ ಪಿಎಚ್.ಡಿ ವಿದ್ಯಾರ್ಥಿನಿ ಯಾಸ್ಮಿನ್ ಅಲಿ ಎಂಬ ಹೆಣ್ಣುಮಗಳು ಬರೆದ “ಬೀಥೊವೆನ್ಸ್ ಡ್ರೀಮ್ (Beethoven’s dream)” ಪ್ರಬಂಧವನ್ನು ಕುರಿತು ಕೆಲವು ಸಂಗತಿಗಳನ್ನು ಹೇಳಿ ಇಂದಿನ ಅನುರಣನವನ್ನು ಮುಗಿಸುತ್ತೇನೆ.

ಯಾಸ್ಮಿನ್ ಅವಳಿ ಹೆಣ್ಣುಮಗಳು. ಆಕೆಯ ಜೊತೆಯಲ್ಲೇ ಹುಟ್ಟಿದ ಸಹೋದರನ ಕಿವುಡುತನ (Sensorineural hearing loss) ನಿಧಾನವಾಗಿ ಆವರಿಸಿದ್ದು, ಅದು ಖ್ಯಾತ ಸಂಗೀತಗಾರ ಬೀಥೊವೆನ್ ಅನುಭವಿಸಿದ ಕಾಯಿಲೆಯೇ ಆಗಿತ್ತು. ತನ್ನ ಪಿಎಚ್.ಡಿ ಸಂಶೋಧನೆಯಲ್ಲೂ ಮನೋವೈಜ್ಞಾನಿಕ ವಿಚಾರಗಳನ್ನು ಕಲಿತ ಆಕೆ ತನ್ನ ಸಹೋದರನು ಅನುಭವಿಸುತ್ತಿರುವ ಹಾಗೂ ಬೀಥೊವೆನ್ ಅನುಭವಿಸಿದ ಶ್ರವಣ ನಷ್ಟ ಇಂದು ಗುಣಪಡಿಸುವತ್ತ ವೈಜ್ಞಾನಿಕ ಶೋಧವಾಗುವ ಸಾಧ್ಯತೆಯನ್ನು ಆಶಿಸುತ್ತಾಳೆ. ನಾಳಿನ ಜಗತ್ತನ್ನು ಇಂದಿನ ದಿನಕ್ಕಿಂತ ಉತ್ತಮಪಡಿಸುವ ವಿಜ್ಞಾನದ ಸಂಶೋಧನೆಯ ಕುರಿತು ಮುಂದೊಂದು ದಿನ “ಸ್ವರ್ಗದಲ್ಲಿ ನಾನು ಕೇಳಬಹುದು” ಎಂಬ ಬೀಥೊವನ್ ಆಶಯದೊಂದಿಗೆ ಮುಕ್ತಾಯವಾಗುತ್ತದೆ. ಒಟ್ಟಾರೆ ಪ್ರಬಂಧವು ಶ್ರವಣ ನಷ್ಟದ ವೈಜ್ಞಾನಿಕ ಸಂಗತಿಯನ್ನು ಸಂಗೀತದಂತೆ ಲಯಬದ್ಧವಾಗಿಸಿ ಅದರ ನರಮಂಡಲದ ಜೀವಿಕೋಶಗಳ ಪುನರುತ್ಪಾದನೆಯ ಸಾಧ್ಯತೆಯನ್ನು ಆಶಿಸುವ ಪ್ರಬಂಧವು ವಿಜ್ಞಾನದ ಹುಡುಕಾಟಕ್ಕೆ ಕೊಟ್ಟಿರುವ ರೂಪಕವಾಗಿದೆ.

ಇಂತಹ ಅದ್ಭುತಗಳ ಸಾಕ್ಷಿಯಾದ “ನೇಚರ್” ಒಂದು ವಿಜ್ಞಾನ ಪತ್ರಿಕೆಯಾಗಿ ಮಾತ್ರವಲ್ಲ, ಒಂದು ಪತ್ರಿಕೋದ್ಯಮಕ್ಕೆ ಮಾದರಿಯಾಗಲ್ಲದು. ಇಂದು ನೇಚರ್ ವಿಸ್ತಾರಗೊಂಡು ಹಲವು ವಿಭಾಗಗಳಾಗಿ ಪ್ರಕಟವಾಗುತ್ತಿದೆ. ಪ್ರತಿಯೊಂದೂ ತನ್ನ ಶ್ರೇಷ್ಠತೆಯನ್ನು ಬಿಟ್ಟುಕೊಡದೆ ಜಗದ್ವಿಖ್ಯಾತ ಪತ್ರಿಕೆಯಾಗಿಯೇ ಮುಂದುವರೆದಿದೆ. ಶತಮಾನಗಳ ಸತ್ಯದ ಹುಡುಕಾಟಗಳನ್ನು ಮತ್ತಷ್ಟು ಸ್ಪಷ್ಟವಾಗಿಸುವ ಯಶಸ್ಸಿಗೆ “ನೇಚರ್” ಪತ್ರಿಕೆಗೆ ಶುಭಾಶಯಗಳನ್ನು ಹೇಳೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...