Homeಅಂಕಣಗಳುಮೋದಿ-ಷಾರನ್ನು ಎದುರಿಸಲು ನಡೆಯಬೇಕಿರುವುದು ಭಿನ್ನ ಬಗೆಯ ರಾಜಕೀಯ ಆಂದೋಲನ

ಮೋದಿ-ಷಾರನ್ನು ಎದುರಿಸಲು ನಡೆಯಬೇಕಿರುವುದು ಭಿನ್ನ ಬಗೆಯ ರಾಜಕೀಯ ಆಂದೋಲನ

- Advertisement -
- Advertisement -

ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಉರುಳಿತು. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. ರಾಜಕೀಯ ಎತ್ತ ಸಾಗಿದೆ ಎಂಬುದನ್ನು ಕುರಿತು ಮತದಾರ ಯೋಚಿಸುವ ಕಾಲ ಈಗ ಸನ್ನಿಹಿತವಾಗಿದೆ.

ಭಾರತದ ರಾಜಕೀಯ ಹೊಲಸಾಗಿದೆ. ದ್ವೇಷ ಭಾವನೆಯಿಂದ ಕೂಡಿದ ಕೇಂದ್ರ ಸರ್ಕಾರ ಬರ್ಬರ ಕಾನೂನುಗಳನ್ನು ರಚಿಸುತ್ತಿದೆ. ಇದ್ದ ಕಾನೂನುಗಳನ್ನು ತಿರುಚಿ ಬರೆಯುತ್ತಿದೆ; ಸರ್ಕಾರದ ಧೋರಣೆಯನ್ನು ಪ್ರಶ್ನಿಸುವ ವಿಚಾರವಾದಿಗಳ ಮೇಲೆ ಕಟ್ಟಲೆ ಹೇರಿ, ಸರ್ಕಾರದ ಧೋರಣೆಯನ್ನು ಪ್ರಶ್ನಿಸುವವರನ್ನು ನಕ್ಸಲರೆಂದು ಪರಿಗಣಿಸಿ ಗೂಂಡಾ ಕಾಯ್ದೆ ಹೊರಿಸುವ ಸಂಭವವಿದೆ.

ಎಲ್ಲಾ ರಾಜಕೀಯ ಪಕ್ಷಗಳಲ್ಲೂ ಕ್ರಿಮಿನಲ್ ಕೇಸ್‍ಗಳನ್ನು ಹೊತ್ತವರು, ರಿಯಲ್ ಎಸ್ಟೇಟ್ ದಂಧೆ ಮಾಡುವವರು, ಪಕ್ಷಗಳನ್ನು ಕಬ್ಜಾ ಮಾಡುವವರು, ಪಕ್ಷವನ್ನು ನಾಶ ಮಾಡುವ ಪ್ರವೃತ್ತಿಯವರು ಇದ್ದಾರೆ. ಅಶಿಸ್ತು ತಾರಕಕ್ಕೇರಿದೆ. ಸಮಯಸಾಧಕರು, ಮೀರ್‍ಸಾದಿಕ್‍ಗಳು ರಾಜಕೀಯ ದಾಳ ಉರುಳಿಸಿ, ತಮ್ಮ ಪಕ್ಷದ ಪತನಕ್ಕೆ ಸಂಚು ಮಾಡಲು ಮುಂದಾಗಿದ್ದಾರೆ. ಜಾತಿಯ ಆಧಾರದ ಮೇಲೆ ಶಾಸಕರನ್ನು ಆರಿಸಿಕೊಂಡ ದೇವೇಗೌಡರು, ಸಿದ್ದರಾಮಯ್ಯ ಮುಂತಾದವರಿಗೆ ಚಳ್ಳೇ ಹಣ್ಣು ತಿನ್ನಿಸಿದ ದುಷ್ಟ ಶಾಸಕರು ಸರಿಯಾಗಿಯೇ ಬುದ್ಧಿ ಕಲಿಸಿದ್ದಾರೆ.

ರಾಜಕೀಯ ಪಕ್ಷದಲ್ಲಿದ್ದುಕೊಂಡು ಶಿಸ್ತಿನಿಂದ, ಶ್ರದ್ಧೆಯಿಂದ, ಪ್ರಾಮಾಣಿಕವಾಗಿ ನಡೆದುಕೊಳ್ಳುವ ಅನೇಕ ಯೋಗ್ಯ ನಿಷ್ಠಾವಂತ ಕಾರ್ಯಕರ್ತರು ಎಲ್ಲ ಪಕ್ಷಗಳಲ್ಲಿ ಇದ್ದರೂ, ಅವರನ್ನು ಕಡೆಗಣಿಸಿ ಅವರು ತಮ್ಮ ಜಾತಿಯವರೆಂಬ ಕಾರಣಕ್ಕಾಗಿ, ಲಕ್ಷಾಂತರ ರೂಗಳನ್ನು ಪಕ್ಷಕ್ಕೋ, ಕಿಸೆಗೆ ಬಿಡುವುದಕ್ಕೋ ಕೊಟ್ಟವರಿಗೆ ಮಾತ್ರ ಸೀಟು ಸಿಗುತ್ತಿದೆ. ಈ ಜನ ಸಂಸ್ಥೆಗೆ ಏಕೆ ವಿಧೇಯರಾಗಿರಬೇಕು? ಇಂತಹವರಿಗೆ ಸೀಟನ್ನು ಮಾರುವುದು ಪರಿಪಾಠವಾಗಿರುವಾಗ ಅವರು ಸಂಸ್ಥೆಯವರ ಘನತೆ ಗೌರವಗಳ ಬಗೆಗೆ ಯಾಕೆ ಯೋಚಿಸುತ್ತಾರೆ? ನಾವು ಬಂದಿರುವುದೇ ದೋಚುವುದಕ್ಕೆ, ಸ್ವಾರ್ಥ ಸಾಧನೆಗೆ ಎನ್ನುವ ಜನರ ದೃಷ್ಟಿಯಲ್ಲಿ ರಾಜಕೀಯ ಪಕ್ಷ ಒಂದು ಮಾರಾಟ ಸಂಸ್ಥೆ, ತಮ್ಮ ಅಭ್ಯುದಯಕ್ಕಾಗಿ ನೆರವಾಗುವ ಒಂದು ಚಿಮ್ಮು ಹಲಗೆ!

ದೇವೇಗೌಡರಂತಹ ಒಬ್ಬ ನಾಯಕರಿಗೆ ತಮ್ಮ ಪಕ್ಷ ಪ್ರೈವೇಟ್ ಪಾರ್ಟನರ್‍ಷಿಪ್ಪಿನ ಒಂದು ಉದ್ಯಮ. ಶಾಸನಸಭೆಗೆ 30-40 ಜನ ತಮ್ಮ ಪಾರ್ಟಿಯಿಂದ ಶಾಸಕರಾಗಿ ಗೆದ್ದು ಬಂದರೆ ಸಾಕು. ಈ ಅಲ್ಪ ಸಂಖ್ಯೆಯ ಶಾಸಕರನ್ನು ಇಟ್ಟುಕೊಂಡು ಉಳಿದ ಪಾರ್ಟಿಗಳ ಜೊತೆಗೆ ವ್ಯವಹಾರ ಕುದುರಿಸುತ್ತಾರೆ. ಅಧಿಕಾರ ಪಡೆದುಕೊಳ್ಳುತ್ತಾರೆ. ತಮ್ಮ ಮಗನಿಗೋ, ಸೊಸೆಗೋ, ಮೊಮ್ಮಗನಿಗೋ ಪಟ್ಟಕಟ್ಟಲು ಅದನ್ನು ಬಳಸಿಕೊಳ್ಳುತ್ತಾರೆ.

ಯಡಿಯೂರಪ್ಪನವರಿಗೆ ಮುಖ್ಯಮಂತ್ರಿ ಪಟ್ಟ ಸಿಕ್ಕಿತು. ತಮ್ಮ ಮಗನ ಅಧಿಕಾರ ಹೋಯಿತು. ದೇವೇಗೌಡರಿಂದ ವ್ಯಾಪಾರ ಆರಂಭವಾಯಿತು. ಬಿಜೆಪಿ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುವುದಾಗಿ ಬೋರಂಟಿ ಬಿಟ್ಟರು. ಯಡಿಯೂರಪ್ಪನವರು ನಿಮ್ಮ ಸಹಕಾರ ಬೇಕಾಗಿಲ್ಲ. ನಮಗೆ ಬಹುಮತ ಸಿಕ್ಕರೆ ನಿಮ್ಮ ಹಂಗೇನು? ಎಂದರು. ಗೌಡರು ತಮ್ಮ ವರಸೆ ತೋರಿಸಿಯೇ ಬಿಟ್ಟರು. ‘ನಾನು ನಿಮಗೆ ನಿಮ್ಮ ಒಳ್ಳೆಯ ಕೆಲಸಕ್ಕೆ ಮಾತ್ರ ಬೆಂಬಲ ಕೊಡುತ್ತೇನೆ’ ಎಂದು ನಾನು ಹೇಳಿದ್ದು ಎಂದು ತಮ್ಮ ಹಿಂದಿನ ನಿಲುವಿಗೆ ಹೊಸ ವ್ಯಾಖ್ಯಾನ ಮಾಡಿದರು.

ಇನ್ನು ಅಧಿಕಾರಾರೂಢ ಭಾಜಪ ಸರ್ಕಾರದ ಬಗ್ಗೆ ಹೇಳುವುದಾದರೆ, ಅದು ಸರ್ವಾಧಿಕಾರಿ ಮನೋಭಾವದ ಸಂಸ್ಥೆ. Hidden Agenda ಇರುವ ಸಂಸ್ಥೆ. ಹಿಂದುತ್ವ ಪ್ರತಿಪಾದಕರ ಸಂಸ್ಥೆ. ಬಿಜೆಪಿಯೆಂಬುದು ತನ್ನ ಟೆಂಟಕಲ್ಸನ್ನು ಬೆಳೆಸಿಕೊಂಡು ಆಕ್ಟೋಪಸ್‍ನಂತೆ ಇಡೀ ಭಾರತವನ್ನು ತನ್ನದಾಗಿಸಿಕೊಳ್ಳುವ ಮಹತ್ವಾಕಾಂಕ್ಷೆಯುಳ್ಳ ಸಂಸ್ಥೆ. ಒದೀತೀನಿ, ಅದಕ್ಕೆ ತಯಾರಾಗಿ ಎಂದು ಅವರ ಆಡಳಿತ ನೀತಿಯನ್ನು ಒಪ್ಪದವರಿಗೆ ಗೃಹಮಂತ್ರಿ ಅಮಿತ್ ಶಾ ಅಬ್ಬರಿಸಿ ಹೇಳಿದ್ದಾರೆ.

ಚಾಣಕ್ಯನಂತೆ ತನಗಾಗದವರನ್ನು ಮುಗಿಸುವುದು ಹೇಗೆ? ಅವರನ್ನು ಮಣಿಸುವುದು ಹೇಗೆ? ಎಂದೆಲ್ಲ ಯೋಜನೆ ಮಾಡುವುದರಲ್ಲಿ ಯೋಜನೆ ರೂಪಿಸುವುದರಲ್ಲಿ ಮಗ್ನರಾಗಿದ್ದಾರೆ ಮೋದಿ, ಅಮಿತ್ ಶಾ.

ಕರ್ನಾಟಕದಲ್ಲಿ ಪ್ರಥಮ ಪ್ರಯತ್ನದಲ್ಲೇ ದಂತಭಗ್ನರಾದ ಯಡಿಯೂರಪ್ಪನವರು ಮತ್ತೆ ಅಧಿಕಾರಕ್ಕೆ ಬರಲು ಹರಸಾಹಸ ಮಾಡಿದರು. ಆಡಳಿತ ಪಕ್ಷದ ಶಾಸಕರನ್ನು ಖರೀದಿಸುವ, ಪಕ್ಷಾಂತರಿಗೊಳಿಸುವ ತನ್ನ ಮಾತೃಸಂಸ್ಥೆಯನ್ನು ತೊರೆದು ಹೊರಬರುವ ಎಲ್ಲಾ ತಂತ್ರಗಳನ್ನೂ ಮಾಡಿ, ಅದರಲ್ಲಿ ಜಯಶಾಲಿಗಳೂ ಆದರು. ಭಾಜಪದ ಈ ಹುನ್ನಾರವನ್ನು ಶಾಸಕ ಕೃಷ್ಣ ಭೈರೇಗೌಡರು, ಇತ್ತೀಚೆಗೆ ನಡೆದ ಅಸೆಂಬ್ಲಿ ಅಧಿವೇಶನದಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟರು. ಮೋದಿ, ಶಾ ಅವರು ಪಶ್ಚಿಮ ಬಂಗಾಳದಲ್ಲಿ, ಕೇರಳದಲ್ಲಿ ಬಿಜೆಪಿಯನ್ನು ಸ್ಥಾಪಿಸಲು ಮಾಡಿರುವ ತಂತ್ರವೂ ಇಂತಹುದೆ. ದೇಶದ ದಕ್ಷಿಣ ಭಾಗದ ರಾಜ್ಯಗಳಾದ ಆಂಧ್ರ, ರಾಯಲಸೀಮಾ, ಕೇರಳ, ಕರ್ನಾಟಕ, ತಮಿಳುನಾಡುಗಳನ್ನು ಸಂಪೂರ್ಣವಾಗಿ ಬಿಜೆಪಿಮಯ ಮಾಡುವುದು ಹೇಗೆ ಎಂದು ಸಂಚು ನಡೆಸುತ್ತಿದ್ದಾರೆ. ತಮಿಳುನಾಡು ಇವರ ತಂತ್ರಕ್ಕೆ ಸೊಪ್ಪು ಹಾಕಿಲ್ಲ. ಎಲ್ಲ ರಾಜಕೀಯ ಪಕ್ಷಗಳನ್ನು ಹೇಳಹೆಸರಿಲ್ಲದಂತೆ ಮಾಡಿ, ಭಾರತದಲ್ಲಿ ಬಿಜೆಪಿ ಸಾಮ್ರಾಜ್ಯವನ್ನು ಕಟ್ಟಬೇಕೆಂಬ ಕನಸನ್ನು ಕಾಣುತ್ತಿದ್ದಾರೆಯೇ ಮೋದಿ?

ಈ ಪ್ರಯತ್ನವನ್ನು ತಡೆಗಟ್ಟಿ ಪ್ರಜಾಪ್ರಭುತ್ವವನ್ನು ರೂಢಿಸಿಕೊಳ್ಳುವುದು ಇಂದಿನ ಆದ್ಯ ಅಗತ್ಯತೆ.

ಆದರೆ ದೇಶದ ಪರಿಸ್ಥಿತಿಯನ್ನು ಅವಲೋಕಿಸಿದರೆ ಇತರ ರಾಜಕೀಯ ಪಕ್ಷಗಳು ಸೊರಗಿರುವಂತೆ ಕಾಣುತ್ತದೆ. ನಾಯಕತ್ವದ ಅಭಾವ ಎದ್ದು ಕಾಣುತ್ತದೆ. ಜನ ಜಡರಾಗಿದ್ದಾರೆ. ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದೆಯೆಂಬ ಅರಿವು ಜನತೆಗೆ ಬಂದಿಲ್ಲ. ಚುನಾವಣೆಯನ್ನು ಒಂದು ಪ್ರಹಸನ ಎಂದುಕೊಂಡು ಬಿಟ್ಟಿದ್ದಾರೆ ಜನ. ಹಣ ಹೆಂಡಕ್ಕೆ ಮತ ಮಾರಾಟವಾಗುತ್ತದೆ. ಪ್ರಜೆಗಳಿಗೆ ದೇಶದ ಭವಿಷ್ಯವನ್ನು ರೂಪಿಸಬೇಕಾದವರು ನಾವು ಎಂಬ ಅರಿವಿಲ್ಲವಾಗಿದೆ. ಇದರ ಪೂರ್ಣ ಲಾಭವನ್ನು ಮೋದಿ ಪಡೆದುಕೊಳ್ಳುತ್ತಿದ್ದಾರೆ.

ಪ್ರಜಾಪ್ರಭುತ್ವವನ್ನು ಸುರಕ್ಷಿತಗೊಳಿಸಲು ವಿಚಾರವಂತರು, ಪ್ರಜ್ಞಾವಂತರು, ಹೊಸ ಮನ್ವಂತರವನ್ನು ಕಾಣಬೇಕು ಎಂದು ಆಶಿಸುವ ಜನ ಒಂದಾಗಿ ಸಂಘಟಿತರಾಗಬೇಕು. ದೇಶದ ತುಂಬಾ ರಾಜಕೀಯ ಸಮ್ಮೇಳನಗಳನ್ನು ನಡೆಸಿ ಇಂದಿನ ರಾಜಕೀಯವನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ನಮಗೆ ಎಂತಹ ರಾಷ್ಟ್ರ ಬೇಕು, ಎಂತಹ ವ್ಯವಸ್ಥೆ ಬೇಕು ಎಂಬುದನ್ನು ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಜನ ಜಾಗೃತಿ ಮೂಡಿಸುವ ಮೂಲಕ ಮನವರಿಕೆ ಮಾಡಿಸಬೇಕು. ಈ ಕೆಲಸವನ್ನು ರಾಜಕೀಯ ಪಕ್ಷಗಳಿಗೆ ಬಿಟ್ಟುಕೊಟ್ಟು ಪ್ರಜೆ ನಿಷ್ಕ್ರಿಯನಾದರೆ ಭಾರತ ಹಿಟ್ಲರ್‍ನ ಜರ್ಮನಿಯಾಗುವ ಸಂಭವವಿದೆ.

Eternal Vigilance is The Price of Liberty

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...