Homeಮುಖಪುಟಆಹಾರಕ್ಕೆ ಯಾವುದೇ ಧರ್ಮವಿಲ್ಲ: ಆಹಾರವೇ ಧರ್ಮ: ಜೋಮ್ಯಾಟೊ ಕೊಟ್ಟ ಖಡಕ್ ಪ್ರತಿಕ್ರಿಯೆಗೆ ನೆಟ್ಟಿಗರು ಫುಲ್ ಖುಷ್

ಆಹಾರಕ್ಕೆ ಯಾವುದೇ ಧರ್ಮವಿಲ್ಲ: ಆಹಾರವೇ ಧರ್ಮ: ಜೋಮ್ಯಾಟೊ ಕೊಟ್ಟ ಖಡಕ್ ಪ್ರತಿಕ್ರಿಯೆಗೆ ನೆಟ್ಟಿಗರು ಫುಲ್ ಖುಷ್

- Advertisement -
- Advertisement -

ಮಂಗಳವಾರ ರಾತ್ರಿ ಅಮಿತ್ ಶುಕ್ಲಾ ಎಂಬ ವ್ಯಕ್ತಿಯೊಬ್ಬರು ಆಹಾರ ವಿತರಣಾ ವೇದಿಕೆಯಾದ ಜೊಮಾಟೊದಲ್ಲಿ ಆರ್ಡರ್ ಮಾಡಿದ್ದ ಊಟವನ್ನು ಆ ಆರ್ಡರ್ ತರುವ ರೈಡರ್ ಹಿಂದೂ ಅಲ್ಲ ಎಂಬ ಕಾರಣದಿಂದ ಕ್ಯಾನ್ಸಲ್ ಮಾಡಿರುವುದಾಗಿ ಟ್ವೀಟ್ ಮಾಡಿದ್ದಾರೆ. ಅವರ ದೂರಿಗೆ ಜೊಮಾಟೊ ನೀಡಿದ ಪ್ರತಿಕ್ರಿಯೆಗೆ ನೆಟ್ಟಿಗರಿಂದ ಭಾರೀ ಪ್ರಶಂಸೆ ಕೇಳಿಬಂದಿದೆ.

“ಅವರು ನನ್ನ ಆಹಾರ ಪೂರೈಸಲು ಮುಸ್ಲಿಂ ಸವಾರನನ್ನು ನಿಯೋಜಿಸಿದ್ದಾರೆ, ಅವರು ರೈಡರ್ ಅನ್ನು ಬದಲಾಯಿಸಲು ಸಾಧ್ಯವಿಲ್ಲ ಮತ್ತು ರದ್ದು ಮಾಡಿದರೆ ಹಣ ಮರುಪಾವತಿ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ ಎಂದು ದೂರಿರುವ ಮಧ್ಯಪ್ರದೇಶದ ಜಬಲ್‌ಪುರ ನಿವಾಸಿ ಅಮಿತ್ ಶುಕ್ಲಾ ಅವರು ತಮ್ಮ ಸಂಭಾಷಣೆಯ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.

ಮುಸ್ಲಿಂ ರೈಡರ್ ಕಾರಣಕ್ಕೆ ಆರ್ಡರ್ ರದ್ದುಗೊಳಿಸಿದ ಯುವಕನಿಗೆ ಜ್ಯೋಮ್ಯಾಟೊ ಕೊಟ್ಟ ಉತ್ತರ ಹೀಗಿದೆ. “ಆಹಾರಕ್ಕೆ ಯಾವುದೇ ಧರ್ಮವಿಲ್ಲ: ಆಹಾರವೇ ಧರ್ಮ” ಎಂದು ಜ್ಯೋಮ್ಯಾಟೊ ಟ್ವೀಟ್ ಮಾಡಿದೆ.

ಜೊತೆಗೆ ಜ್ಯೋಮ್ಯಾಟೊ ಸ್ಥಾಪಕ ದೀಪಿಂದರ್ ಗೋಯಲ್ ರವರು “ಭಾರತದ ವೈವಿಧ್ಯತೆ, ನಮ್ಮ ಗ್ರಾಹಕರು ಮತ್ತು ಪಾಲುದಾರರ ಅಮೂಲ್ಯ ಘನತೆಯ ಬಗ್ಗೆ ನಮಗೆ ಹೆಮ್ಮೆಯಿದೆ. ಈ ನಮ್ಮ ಮೌಲ್ಯಗಳಿಗೆ ಅಡ್ಡಿಬರುವ/ತೊಡಕಾಗುವ ಯಾವುದೇ ವ್ಯವಹಾರವನ್ನು ಕಳೆದುಕೊಳ್ಳಲು ನಮಗೆ ಬೇಸರವಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.

ಇಂತಹ ದಿಟ್ಟತನದ ಪ್ರತಿಕ್ರಿಯೆಯ ಮೂಲಕ “ಧರ್ಮಾಂಧತೆ ಮತ್ತು ದ್ವೇಷವನ್ನು ತಿರಸ್ಕರಿಸಿದ್ದಕ್ಕಾಗಿ” ಜೊಮಾಟೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಪ್ರಶಂಸೆಗೆ ಒಳಗಾಗಿದೆ. ಬಹುದೊಡ್ಡ ಸ್ಟಾರ್ಟಪ್ ಸ್ಥಾಪಕರಿಂದ ಇಂತಹ ಹೇಳಿಕೆ ಅಗತ್ಯವಿತ್ತು. ಈಗಿನಿಂದ ನಾನು ಜ್ಯೋಮ್ಯಾಟೊ ಮಾತ್ರ ಬಳಸುತ್ತೇನೆ ಎಂದು ಅಬ್ದುಲ್ ರಶೀದ್ ಟ್ವೀಟ್ ಮಾಡಿದರೆ, ಈ ಪ್ರಕರಣವನ್ನು ಜ್ಯೋಮ್ಯಾಟೊ ಸಮರ್ಪಕವಾಗಿ ನಿರ್ವಹಿಸಿದೆ” ಎಂದು ರುಶಾಂಕ್ ಹೇಳಿದ್ದಾರೆ.

ನನ್ನ ಮುಂದಿನ 5 ಆರ್ಡರ್ ಗಳು ನಿಮ್ಮಂದಲೇ ಎಂದು ಖಾನ್ ಸಾಬ್ ಟ್ವೀಟ್ ಮಾಡಿದರೆ, “ಬೆಳೆಯುತ್ತಿರುವ ದ್ವೇಷ ಮತ್ತು ಧರ್ಮಾಂದತೆಯನ್ನು ಬಹಿರಂಗವಾಗಿ ತಿರಸ್ಕರಿಸುವ ಕಾರ್ಪೋರೇಟ್ ದನಿಗಳನ್ನು ಹುಡುಕುವುದು ಅಪರೂಪವಾಗಿತ್ತು. ಸರಿಯಾಗಿ ಹೇಳಿದ್ದೀರಿ” ಎಂದು ಸ್ಯಾಮ್ಸೆ ಯವರು ಹೇಳಿದ್ದಾರೆ.

ಕೃಪೆ: ಎನ್.ಡಿ.ಟಿ.ವಿ

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...