Homeಮುಖಪುಟಕ್ಲಬ್‌ಹೌಸ್; ಹರಟೆ ಕಟ್ಟೆಯೊ, ಎಕೊಚೇಂಬರೊ?

ಕ್ಲಬ್‌ಹೌಸ್; ಹರಟೆ ಕಟ್ಟೆಯೊ, ಎಕೊಚೇಂಬರೊ?

- Advertisement -
- Advertisement -

2021ರ ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ಸಮಯ. ಚುನಾವಣಾ ತಂತ್ರಗಾರಿಕೆಯಲ್ಲಿ ಹೆಸರು ಮಾಡಿದ ಪ್ರಶಾಂತ್ ಕಿಶೋರ್ ಆಯ್ದ ಕೆಲವು ಪತ್ರಕರ್ತರೊಂದಿಗೆ ಚರ್ಚೆ ನಡೆಸಿದ್ದರು. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿಯ ಬಲಾಬಲ ಕುರಿತ ವಿಚಾರಗಳ ವಿನಿಮಯವಾಗಿತ್ತು. ಈ ಸಂವಾದ ಆಡಿಯೋ ತುಣುಕು ಏಕಾಏಕಿ ಸೋರಿಕೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಈ ಚರ್ಚೆ ನಡೆದಿದ್ದು ಕ್ಲಬ್‌ಹೌಸ್ ಎಂಬ ಆಪ್‌ನಲ್ಲಿ.

2020ರಲ್ಲಿ ಬಿಡುಗಡೆಯಾದ ಈ ಆಪ್ ಕೇವಲ ಐಫೋನ್‌ಗಳಿಗೆ ಲಭ್ಯವಿತ್ತು. ಈಗ ಆಂಡ್ರಾಯ್ಡ್ ಬಳಕೆದಾರರಿಗೂ ಪರಿಚಯಿಸಲಾಗಿದೆ. ಆದರೆ ಆಹ್ವಾನದ ಮೇರೆಗೆ ಈ ಆಪ್‌ನಲ್ಲಿ ಖಾತೆ ತೆರೆಯಬಹುದಾಗಿತ್ತು. ಇದಾಗಿ ಕೆಲವೇ ವಾರಗಳಲ್ಲಿ ಕ್ಲಬ್‌ಹೌಸ್ ಮುಕ್ತವಾಗಿದ್ದು ಪ್ರಸಕ್ತ ಭಾರತದಲ್ಲಿ 1 ಮಿಲಿಯನ್ ಬಳಕೆದಾರರನ್ನು ಹೊಂದಿದೆ!

ಏನಿದು ಕ್ಲಬ್‌ಹೌಸ್?

ಇದೊಂದು ಆಡಿಯೋ ಆಧರಿತ ಸೋಷಿಯಲ್ ಮೀಡಿಯಾ ಆಪ್. ಇಲ್ಲಿ ವಿಡಿಯೋಗಳಿಲ್ಲ. ಸಾಲು ಸಾಲು ಬರಹಗಳಿಲ್ಲ. ಇಲ್ಲಿರುವುದು ಬರೀ ಮಾತು. ಇದೊಂದು ರೀತಿಯ ಪಾಡ್‌ಕಾಸ್ಟ್‌ನ ಲೈವ್ ಆವೃತ್ತಿ ಎನ್ನಬಹುದು. ಸಮಾನ ಆಸಕ್ತಿಯ ವಿಷಯಗಳ ಬಗ್ಗೆ ಒಂದೆಡೆ ಸೇರಿ ಹೇಗೆ ಹರಟೆ ಹೊಡೆಯುತ್ತೇವೊ, ಅದೇ ಅನೌಪಚಾರಿಕತೆಯೊಂದಿಗೆ ಹರಟೆ ಹೊಡೆಯುವುದಕ್ಕೆ ಕ್ಲಬ್‌ಹೌಸ್ ವೇದಿಕೆ ಕಲ್ಪಿಸಿದೆ.

ಭಾರತೀಯ ಹಿನ್ನೆಲೆಯ ಅಮೆರಿಕನ್ ರೋಹನ್ ಸೇತ್ ಮತ್ತು ಪಾಲ್ ಡೇವಿಸನ್ ಅಭಿವೃದ್ಧಿಪಡಿಸಿದ ಕ್ಲಬ್‌ಹೌಸ್ ಕೋವಿಡ್ ಮತ್ತು ಲಾಕ್‌ಡೌನ್ ಹಿನ್ನೆಲೆಯಲ್ಲಿ ದಿಢೀರನೆ ಪ್ರಚಾರ ಪಡೆದುಕೊಂಡು ವಿಶ್ವದಾದ್ಯಂತ 1 ಕೋಟಿ ಬಳಕೆದಾರರನ್ನು ಗಳಿಸಿಕೊಂಡಿದೆ.

PC : Business Insider, (ರೋಹನ್ ಸೇತ್ ಮತ್ತು ಪಾಲ್ ಡೇವಿಸನ್)

ಬಳಕೆದಾರರು ತಮ್ಮದೇ ಆದ ಗುಂಪನ್ನು ಕಟ್ಟಿಕೊಂಡು ಆಸಕ್ತಿಯ ವಿಷಯ ಕುರಿತು ಚರ್ಚಿಸಬಹುದು, ಸಂವಾದ ನಡೆಸಬಹುದು. ಅನಿರ್ಬಂಧಿತವಾದ ಖಾಸಗಿ ಹರಟೆಗೂ ಅವಕಾಶವಿದೆ. ಮುಕ್ತವಾಗಿ ಆಸಕ್ತರೆಲ್ಲರನ್ನೂ ಒಳಗೊಳ್ಳುವುದಕ್ಕೂ ಅವಕಾಶವನ್ನು ಕ್ಲಬ್‌ಹೌಸ್ ನೀಡಿದೆ.

ಜನಪ್ರಿಯವಾಗಿದ್ದೇಕೆ?

ಸೋಷಿಯಲ್ ಮೀಡಿಯಾ ಅಂದರೆ ಅಲ್ಲಿ ಸೆಲ್ಫಿಗಳು, ಫೋಟೊಗಳು, ವಿಡಿಯೋಗಳು, ಉದ್ದುದ್ದ ಬರಹಗಳು.. ಅವುಗಳಿಗೆ ಬರುವ ಲೈಕ್, ಕಮೆಂಟ್‌ಗಳು, ಶೇರ್‌ಗಳು…

ಮನಸ್ಸಿನ ಮೇಲೆ ತೀವ್ರ ಪರಿಣಾಮ ಉಂಟುಮಾಡುವ ಈ ಹಲವು ಸೋಷಿಯಲ್ ಮೀಡಿಯಾ ಚಟುವಟಿಕೆಗಳಿಂದ ರೋಸಿದ ಕಾರಣಕ್ಕೊ ಏನೋ, ಕೇವಲ ಧ್ವನಿಯನ್ನಷ್ಟೇ ಆಧರಿಸಿದ ಕ್ಲಬ್‌ಹೌಸ್ ಜನಪ್ರಿಯವಾಗುತ್ತಿದೆ.

ಎಷ್ಟರಮಟ್ಟಿಗೆ ಎಂದರೆ ಇಲ್ಲಿ ತರುಣ-ತರುಣಿಯರಿದ್ದಾರೆ, ಮಹಿಳೆಯರಿದ್ದಾರೆ, ಉದ್ಯಮಿಗಳು, ಪತ್ರಕರ್ತರು, ಹೊಸ ತಲೆಮಾರಿನ ರಾಜಕಾರಣಿಗಳೂ ತೊಡಗಿಸಿಕೊಂಡಿದ್ದಾರೆ. ತರಹೇವಾರಿ ವಿಷಯಗಳ ಕುರಿತು ಸೀಮಿತ ಅವಧಿಯ ಚರ್ಚೆಗಳು ನಡೆಯುತ್ತವೆ. ಅಲ್ಲಿಗೆ ಒಂದು ಸಭೆ ಮುಗಿದುಹೋಗುತ್ತದೆ.

ಯಾರು ಬೇಕಾದರೂ ಇಂತಹ ಚರ್ಚೆಗಳನ್ನು ನಡೆಸಬಹುದು, ಯಾರೂ ಬೇಕಾದರೂ ಪಾಲ್ಗೊಳ್ಳಬಹುದು. ವಿವಿಧ ಹಿನ್ನೆಲೆಯ ಅನುಭವವುಳ್ಳವರೊಂದಿಗೆ ನೇರ ಸಂವಾದ ಚರ್ಚೆಗಳು ಸಾಧ್ಯವಾಗುವುದರಿಂದ
ವಸ್ತು-ವಿಷಯಗಳ ವಿವಿಧ ಆಯಾಮಗಳ ದೃಷ್ಟಿಕೋನವನ್ನು ಪಡೆಯುವುದಕ್ಕೂ ಕ್ಲಬ್‌ಹೌಸ್ ಅವಕಾಶ ಕೊಡುತ್ತದೆ ಎಂಬುದು ಬಳಕೆದಾರರ ಅಭಿಪ್ರಾಯ.

ಭಾರತದಲ್ಲಿ ಕ್ಲಬ್‌ಹೌಸ್ ಕುತೂಹಲ

ಆರಂಭದಲ್ಲಿಯೇ ಹೇಳಿದಂತೆ ರಾಜಕೀಯ ಚರ್ಚೆಗಳ ವೇದಿಕೆಯಾಗಿದೆ ಈ ಕ್ಲಬ್‌ಹೌಸ್. ಪ್ರಶಾಂತ್ ಕಿಶೋರ್, ಇತ್ತೀಚೆಗೆ ದಿಗ್ವಿಜಯ್ ಸಿಂಗ್ ಈ ವೇದಿಕೆಯಲ್ಲಿ ಚರ್ಚೆ ಮಾಡಿದ ವಿಚಾರಗಳ ಕಾರಣಕ್ಕೆ ಸುದ್ದಿಯಾಗಿದ್ದನ್ನು, ವಿವಾದ ಎಬ್ಬಿಸಿದ್ದನ್ನು ನೋಡಿದ್ದೇವೆ. ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರ ದೃಷ್ಟಿಯಿಂದ ಹಲವು ಚರ್ಚೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ರಾಹುಲ್ ಗಾಂಧಿ ವಿರುದ್ಧ ಅಭಿಪ್ರಾಯ ರೂಪಿಸುವ ಚರ್ಚೆಗಳು ನಡೆಯುತ್ತಿವೆ.

ಇವುಗಳಲ್ಲದೆ, ಅತ್ಯಂತ ಲಘು ವಿಷಯಗಳ ಮೇಲೂ ಹರಟೆಗಳು ನಡೆಯುತ್ತಿವೆ. ಲಾಕ್‌ಡೌನ್ ಮುಗಿದಮೇಲೆ ಸುತ್ತಲು ಎಲ್ಲಿಗೆ ಹೋಗುವುದು? ನೀವು ಇಷ್ಟಪಡುವ ತಿಂಡಿ ಯಾವುದು? ಹೀಗೆ.. ಅಷ್ಟೇ ಅಲ್ಲ ’ಮಕ್ಕಳನ್ನು ಮಾಡಿಕೊಳ್ಳುವುದು ನೈತಿಕವಾಗಿ ಸರಿಯೇ?’ ಎಂಬಂತಹ ಅತ್ಯಂತ ಸೂಕ್ಷ್ಮವಾದ ವಿಷಯಗಳ ಬಗ್ಗೆಯೂ ಚರ್ಚೆ ನಡೆದಿದೆ.

ಇಷ್ಟಾಗಿಯೂ ಕ್ಲಬ್‌ಹೌಸ್ ತನ್ನದೇ ಆದ ರೀತಿಯಲ್ಲಿ ಮಹತ್ವ ಗಳಿಸಿಕೊಳ್ಳುತ್ತಿದೆ. ಇತರೆ ಸೋಷಿಯಲ್ ಮೀಡಿಯಾ ತಾಣಗಳಲ್ಲಿ ಸಾಮಾನ್ಯವಾಗಿ ಕಾಣುವ ಗಮನಸೆಳೆಯುವ ಕಸರತ್ತುಗಳು ಇಲ್ಲಿಲ್ಲ. ಇಲ್ಲಿ ಆಳವಾದ ಹಾಗೂ ಗಂಭೀರವಾದ ಚರ್ಚೆ, ವಿಚಾರ ವಿನಿಮಯ, ಸಂವಾದಗಳಿಗೆ ಅವಕಾಶವಿದೆ. ಪ್ರಶ್ನೆ ಕೇಳುವಂತೆ ಮಾಡುವ ಹಾಗೂ ಪ್ರಶ್ನೆ ಕೇಳುವ ಮೂಲಕ ಹೆಚ್ಚು ಹೆಚ್ಚು ವಿಶಾಲವಾದ ಹರಹಿನ ಚರ್ಚೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಕ್ಲಬ್‌ಹೌಸ್‌ನ ವೈಶಿಷ್ಟ್ಯ.

ನಿರ್ದಿಷ್ಟವಾಗಿ ಒಂದು ಗುಂಪನ್ನು ಉದ್ದೇಶಿಸಿ ಮಾತನಾಡುವ ಅವಕಾಶ, ಅಭಿಪ್ರಾಯ ರೂಪಿಸುವ, ಅಭಿಮತ ರೂಪಿಸುವ ಮುಖ್ಯವಾದ ಅವಕಾಶವನ್ನು ನೀಡುತ್ತದೆ.

ಬಹಳ ಮುಖ್ಯವಾಗಿ ರಾಜಕಾರಣಿಗಳು ಈ ಆಪ್‌ಅನ್ನು ಅತ್ಯಂತ ಕುತೂಹಲದಿಂದು ನೋಡುತ್ತಿದ್ದಾರೆ. ತೆಲಂಗಾಣದ ಕಾಂಗ್ರೆಸ್ ನಾಯಕ ಡಾ. ಶ್ರವನ್ ಕುಮಾರ್ ದಾಸೋಜು ಅವರು, ’ಇದು ಅತ್ಯಂತ ವಿಸ್ಮಯಕಾರಿ ಆಪ್. ರಾಜಕಾರಣಿಗಳು ತಮ್ಮ ಜನರ ಮಾತುಗಳನ್ನು ನೇರವಾಗಿ ಕೇಳುವುದಕ್ಕೆ ಅವಕಾಶ ನೀಡುತ್ತದೆ. ವಿವಿಧ ಹಿನ್ನೆಲೆ, ವೃತ್ತಿ, ವಯಸ್ಸು ಮತ್ತು ಭಿನ್ನ ರಾಜಕೀಯ ನಿಲುವುಗಳಿರುವವರ ಮಾತು ಕೇಳಬಹುದು. ಇದೊಂದು ರೀತಿಯಲ್ಲಿ ಅಭಿಪ್ರಾಯ ಪಡೆದುಕೊಳ್ಳುವ ಸಾಧನ’ ಎಂದಿದ್ದಾರೆ.

ಅವರ ಪ್ರಕಾರ 2023ರ ಚುನಾವಣೆಯಲ್ಲಿ ಕ್ಲಬ್‌ಹೌಸ್ ನಿರ್ಣಾಯಕ ಪಾತ್ರವಹಿಸಲಿದೆ! ಈಗಾಗಲೇ ಬಿಜೆಪಿ, ಪ್ರಧಾನಿ ಮೋದಿ ಕುರಿತು ಪ್ರಚಾರ ರೂಪದ ಚರ್ಚೆಗಳು, ಹಿಂದುತ್ವ ಕುರಿತ ಸಂವಾದಗಳು, ರಾಹುಲ್‌ಗಾಂಧಿಯನ್ನು ಯಥಾ ಪ್ರಕಾರ ಗೇಲಿ ಮಾಡುವ ಚರ್ಚೆಗಳನ್ನು ನಡೆಸುತ್ತಿದೆ.

ಇವೆಲ್ಲವೂ ಅಭಿಪ್ರಾಯ ರೂಪಿಸುವ, ಅಭಿಪ್ರಾಯ ಹೇರುವ ಪ್ರಯತ್ನಗಳಾಗಿ ಈಗಾಗಲೇ ಚುರುಕಾಗಿ ಸಾಗುತ್ತಿವೆ ಎಂಬ ಅಭಿಪ್ರಾಯವೂ ತೀವ್ರವಾಗಿದೆ.

ತಕರಾರುಗಳಿವೆ, ಆದರೂ ಆಸಕ್ತಿಯೂ ಇದೆ

ಮಾತನ್ನೇ (ಸಂವಾದವನ್ನು) ಬಂಡವಾಳವಾಗಿಸಿಕೊಂಡಿರುವ ಈ ಆಪ್ ಅಕ್ಷರಶಃ ವಾಚಾಳಿ. ಹರಟೆಯೇ ಇದರ ಮೂಲ ಸ್ವರೂಪ. ಹಾಗಾಗಿ ಅನೇಕರಿಗೆ ಇದು ’ವಟವಟ’ ಸದ್ದಿನ ಕೋಣೆ. ತಮ್ಮ ಆಸಕ್ತಿಯ ವಿಷಯಗಳನ್ನು ಹಂಚಿಕೊಳ್ಳುವುದಕ್ಕೆ ಸಮಾನ ನಿಲುವಿನ ಅಥವಾ ಆಸಕ್ತಿಯ ಜನರೊಂದಿಗೆ ಹರಟುವ ಈ ಕ್ಲಬ್‌ಹೌಸ್ ಗುಂಪುಗಳು ಮೇಲ್ನೋಟಕ್ಕೆ ಎಕೊಚೇಂಬರ್ಸ್‌ನಂತೆ ಕಾಣಿಸುತ್ತವೆ. ಆದರೆ ಯಾರು ಬೇಕಾದರೂ ಪಾಲ್ಗೊಳ್ಳುವ ಅವಕಾಶವಿರುವುದರಿಂದ ಹಾಗೊಂದು ಚೌಕಟ್ಟನ್ನು ಹೇರಲಾಗದು.

ಆದರೆ ಎಲ್ಲ ಹೊಸ ಅವಕಾಶಗಳನ್ನು, ಹೊಸ ದೃಷ್ಟಿಕೋನದಿಂದ ನೋಡಬೇಕು, ಸದಭಿರುಚಿ ಮತ್ತು ಸದಾಶಯಗಳುಳ್ಳ ಚರ್ಚೆಗೆ ಬಳಸಿಕೊಳ್ಳಬೇಕು ಎಂಬ ಅಭಿಪ್ರಾಯವೂ ಇದೆ.

ಮೈಸೂರಿನ ಕಲಾವಿದೆ ಚರಿತಾ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆಯುತ್ತಾ..

“ನಾನು ಗಮನಿಸಿದಂತೆ, ಕ್ಲಬ್‌ಹೌಸ್‌ಅನ್ನು ತುಂಬಾ ಬುದ್ಧಿವಂತಿಕೆಯಿಂದ, ಅದರ ಸಾಧ್ಯತೆಗಳನ್ನೆಲ್ಲ ಬಳಸಿಕೊಳ್ಳುತ್ತಿರೋರು ಮಲಯಾಳಿಗಳು. ಅಲ್ಲಿ ಅವರು ಕ್ರಿಯೇಟ್ ಮಾಡುವ ’ರೂಮ್‌’ಗಳ ವಿಷಯ-ವೈವಿಧ್ಯ ’ವಾವ್’ ಅನಿಸುವಷ್ಟು ವಿಸ್ತೃತವಾಗಿದೆ. ಇತ್ತೀಚೆಗೆ ಮಲಯಾಳಿ ಸ್ಕಾಲರ್ ಒಬ್ಬರು ತಮ್ಮ ಕಾದಂಬರಿಯ ಬಗ್ಗೆ ಚರ್ಚೆ ಏರ್ಪಡಿಸಿದ್ದರು. ಆ ಕಾದಂಬರಿಯಲ್ಲಿ ಕನ್ನಡದ ವಚನಕಾರ್ತಿ ’ದುಗ್ಗವ್ವೆ’ ಬಗ್ಗೆ ಪ್ರಸ್ತಾಪವಿದೆ. ಅವರ ಪ್ರಕಾರ ಆಕೆ ಕೇರಳ ಮೂಲದವಳು! ವಚನಕಾರರ ಬಗ್ಗೆ ಕನ್ನಡದವರೇ ಇಷ್ಟು ಗಂಭೀರವಾಗಿ ಚರ್ಚಿಸಿದ್ದನ್ನು ನಾನು ಕೇಳಿಲ್ಲ! ಆ ಚರ್ಚೆಯಲ್ಲಿ ಪಿ.ಲಂಕೇಶ್, ಗೌರಿ ಲಂಕೇಶ್ ಬಗ್ಗೆ ಕೂಡ ಪ್ರಸ್ತಾಪವಾಯಿತು.”

ಸಿನಿ ನಿರ್ದೇಶಕ, ಲೇಖಕ ಪರಮೇಶ್ವರ ಗುರುಸ್ವಾಮಿಯವರೂ ಕ್ಲಬ್‌ಹೌಸ್‌ಅನ್ನು ಹೊಸಸಾಧ್ಯತೆಯಾಗಿ ಕಾಣುತ್ತಾರೆ. ಅವರೇ ಹೇಳುವಂತೆ, “ಥೋರೋತನ ರೂಸೋತನ ಮತ್ತು ಪ್ರಕೃತಿ ಹಾಗು ಪ್ರಕೃತಿಗೆ ಸಂಬಂಧಿಸಿದ್ದೆಲ್ಲವೂ ಬುಲ್ಡೋಜೀಕರಣವಾಗುತ್ತಿರುವ ಈ ನಮ್ಮ ಕಾಲದಲ್ಲಿ ಮಮತಾ ಮತ್ತು ಸ್ಟಾಲಿನ್‌ರನ್ನು ಗೆಲುವಿಗೆ ತಲುಪಿಸಿದ ಪಿಕೆ (ಪ್ರಶಾಂತ್ ಕಿಶೋರ್), ನನ್ನಂಥವರು ಒಪ್ಪಿಕೊಳ್ಳಲಾಗದ ತಾಂತ್ರಿಕ ಸ್ಟ್ರಾಟಜಿಗಳನ್ನ ಬಳಸಿದ್ದು ವಾಸ್ತವ. ಈತ ಬಳಸಿದ ಅದೇ ತಾಂತ್ರಿಕ ಕುಟಿಲತೆಗಳಲ್ಲಿ ಒಂದು ’ಚಾಯ್ ಪೆ ಚರ್ಚಾ’. ಹಲವು ಗುಂಡುಗಳನ್ನು ಸತತವಾಗಿ ಹಾರಿಸುವ ರಿವಾಲ್ವರ್‌ಅನ್ನು ಸ್ಯಾಮ್ಯುಯಲ್ ಕೋಲ್ಟ್ ಕಂಡು ಹಿಡಿದ ನಂತರವೇ ಬಿಲ್ಲು ಬಾಣಗಳು, ಈಟಿ ಭರ್ಜಿಗಳನ್ನು ಬಳಸುತ್ತಿದ್ದ ಅಮೆರಿಕನ್ ಮೂಲನಿವಾಸಿಗಳನ್ನು ದಮನಿಸಿ ಬಿಟ್ಟರು. ಪಿಕೆಯ ಆಧುನಿಕ ತಾಂತ್ರಿಕ ಸ್ಟ್ರಾಟಜಿಗಳನ್ನು ತಿರಸ್ಕರಿಸಿದ ಕಾಂಗ್ರೆಸ್ ಎಲ್ಲಿದೆ. ದೇಶವನ್ನು ಎಲ್ಲಿಗೆ ತಂದು ನಿಲ್ಲಿಸಿತು. ಹೀಗಾಗಿ ಯಾವುದೇ ಹೊಸ ಅವಕಾಶಗಳನ್ನು ಉಪೇಕ್ಷೆ ಮಾಡುವ ಪರಿಸ್ಥಿತಿ ಮತ್ತು ಸಂದರ್ಭ ಇದಲ್ಲ.”

ಕವಿ ಶಂಕರ ಕೆಂಚನೂರು, ಲೇಖಕ ನಾಗೇಗೌಡ ಕೀಲಾರ ಅವರು ನಡೆಸುತ್ತಿರುವ ರಾಜಕೀಯ ಚರ್ಚೆಗಳು, ಅವಧಿ ತಾಣ ನಡೆಸುತ್ತಿರುವ ಸಾಹಿತ್ಯಕ ಚರ್ಚೆಗಳು ಕುತೂಹಲಕಾರಿಯೂ, ಗಂಭೀರವೂ ಹಾಗೂ ಮಹತ್ವದ ಚರ್ಚೆಗಳಾಗಿವೆ.

ಆದರೆ ವಿಚಾರ ಭಿನ್ನಾಭಿಪ್ರಾಯಗಳಿದ್ದಲ್ಲಿ ತಮ್ಮದೇ ಚರ್ಚೆ ಆರಂಭಿಸುವುದಕ್ಕೆ ಮುಕ್ತ ಅವಕಾಶವಿರುವುದರಿಂದ ಹಲವು ಆಯಾಮಗಳ ಮಾತುಕತೆ ಸಾಧ್ಯ. ಆದರೆ ಹೀಗೆ ಎಕೊಚೇಂಬರ್‌ನಂತೆ ರೂಪಿಸಿಕೊಳ್ಳುವ ಅವಕಾಶವಿರುವುದರಿಂದ ಹಾಗೂ ರಾಜಕಾರಣಿಗಳು ಈ ತಾಣದ ಬಗ್ಗೆ ಅತೀವ ಆಸಕ್ತಿ ತೋರುವುದರಿಂದ ಇದೊಂದು ರಾಜಕೀಯ ಅಸ್ತ್ರವಾಗಿ ಬಳಕೆಯಾಗುವ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ.

ಫೇಸ್‌ಬುಕ್ ಮಾಡಲಾಗದ್ದು ಈ ಕ್ಲಬ್‌ಹೌಸ್ ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬಲ್ಲದು ಎಂಬುದನ್ನು ಉಪೇಕ್ಷೆ ಮಾಡುವಂತೆಯೇ ಇಲ್ಲ.

PC : Cashify

ಅಲ್ಲದೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿರುವಂತೆ ಇಲ್ಲಿಯೂ ಮಹಿಳೆಯರ ಬಗ್ಗೆ ಅಸಭ್ಯವಾಗಿ ಮಾತನಾಡುವುದು, ಆನ್‌ಲೈನ್ ಶೋಷಣೆಯಂತಹ ವಿಚಾರಗಳಲ್ಲಿ ಕ್ಲಬ್‌ಹೌಸ್ ಯಾವುದೇ ಕ್ರಮಕೈಗೊಂಡಿಲ್ಲ. ಈ ವಿಷಯವಾಗಿ ಈಗಾಗಲೇ ನೂರಾರು ದೂರುಗಳು ಕ್ಲಬ್‌ಹೌಸ್ ತಲುಪಿವೆ.

ಇನ್ನೊಂದೆಡೆ ನಕಲಿ ವ್ಯಕ್ತಿಗಳು ತಲೆನೋವಾಗಿದ್ದಾರೆ. ಕಳೆದ ವಾರ ಮಲಯಾಳಂ ಪ್ರಸಿದ್ಧ ನಟ ಪೃಥ್ವಿರಾಜ್ ಸುಕುಮಾರನ್ ಹೆಸರಿನಲ್ಲಿ ಖಾತೆ ತೆರೆದು ಚರ್ಚೆ ನಡೆಸಿದ ಘಟನೆಯೊಂದು ಬೆಳಕಿಗೆ ಬಂತು. ಖಾತೆ ತೆರೆಯುವ ವ್ಯಕ್ತಿಯ ಗುರುತನ್ನು ಪರಾಮರ್ಶಿಸುವ ಯಾವುದೇ ಮಾನದಂಡಗಳಿಲ್ಲದ್ದು ಆತಂಕಕಾರಿ.

ಡೀಪ್ ಫೇಕ್‌ಗಳು ಸೃಷ್ಟಿಯಾಗುತ್ತಿರುವ ಕಾಲದಲ್ಲಿ ಸುರಕ್ಷತೆಯ ಬಗ್ಗೆ ಸ್ಪಷ್ಟ ಹಾಗೂ ಸೂಕ್ಷ್ಮ ನಿಯಮಗಳನ್ನು ಹೊಂದಿಲ್ಲದಿರುವುದು ಅಪಾಯಕಾರಿಯಾಗಬಲ್ಲದು.

ಇದರ ಜೊತೆಗೆ ಬಳಕೆದಾರರನ ಖಾಸಗಿತನಕ್ಕೆ ಇಲ್ಲಿ ಸೂಕ್ತ ರಕ್ಷಣೆಯಿಲ್ಲ ಎಂಬ ಆರೋಪವೂ ಇದೆ. ಎಲ್ಲ ಆಪ್‌ಗಳಂತೆ ಇಲ್ಲಿಯೂ ಖಾತೆ ತೆರೆಯುವ ವ್ಯಕ್ತಿಯ ಕಾಂಟ್ಯಾಕ್ಟ್ ಲಿಸ್ಟ್‌ಅನ್ನು ನೋಡಲು ಕ್ಲಬ್‌ಹೌಸ್ ಅನುಮತಿ ಪಡೆದುಕೊಳ್ಳುತ್ತದೆ. ಹೀಗೆ ಸಂಗ್ರಹಿಸಿದ ಮಾಹಿತಿಯನ್ನು ಮೂರನೆಯ ವ್ಯಕ್ತಿಯೊಂದಿಗೆ ಮಾರಿಕೊಳ್ಳುತ್ತದೆ ಎಂಬುದು ಕೂಡ ಬಹಿರಂಗಗೊಂಡಿದೆ. ಬಿಡುಗಡೆಯಾಗಿ ಕೇವಲ ಆರೇಳು ತಿಂಗಳ ಇತಿಹಾಸವಿರುವ ಈ ಆಪ್ ಏಪ್ರಿಲ್ ತಿಂಗಳಲ್ಲಿ ತನ್ನ 13 ಲಕ್ಷ ಬಳಕೆದಾರರ ಮಾಹಿತಿಯ ಸೋರಿಕೆಗೆ ಅವಕಾಶ ಮಾಡಿಕೊಟ್ಟಿದೆ ಎಂದರೆ ಖಾಸಗಿತನ, ಮಾಹಿತಿ ಸುರಕ್ಷತೆಯ ವಿಷಯದಲ್ಲಿ ಈ ಆಪ್ ವಿಶ್ವಾಸಾರ್ಹವಲ್ಲ ಎಂದೆನಿಸುತ್ತದೆ.

ಖಾಸಗಿತನವೂ ಸರ್ಕಾರದ ಬೇಹುಗಾರಿಕೆಯೂ

ಒಂದೆಡೆ ಭಾರತ ಸರ್ಕಾರ ಕೋವಿಡ್ ಮತ್ತು ಇತ್ತೀಚಿನ ವಿಧಾನಸಭಾ ಚುನಾವಣೆಗಳ ವಿಷಯದಲ್ಲಿ ಹಿನ್ನೆಡೆ ಅನುಭವಿಸಿರುವ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಚರ್ಚೆಗಳನ್ನು ಕಣ್ಣು-ಕಿವಿಯಾಗಿ ಗಮನಿಸುತ್ತಿದೆ. ಕ್ಲಬ್‌ಹೌಸ್ ಕೂಡ ಹೊಸ ರೀತಿಯ ಚರ್ಚೆಯ ವೇದಿಕೆಯಾದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ಲಬ್‌ಹೌಸ್ ಚರ್ಚೆಗಳ ಮೇಲೆ ಕಣ್ಣಿಡುವಂತೆ ಗುಪ್ತಚರ ದಳ, ಆರ್‌ಎಡಬ್ಲ್ಯು, ರಾಷ್ಟ್ರೀಯ ತನಿಖಾ ದಳ, ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ 11 ಸಂಸ್ಥೆಗಳಿಗೆ ಸೂಚನೆ ನೀಡಿದೆ ಎಂದು ದಿ ಹಿಂದು ಪತ್ರಿಕೆ ವರದಿ ಹೇಳುತ್ತದೆ.

ಇದಲ್ಲದೆ ಇತ್ತೀಚಿನ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ತಂದಿರುವ ಹೊಸ ಕಾನೂನುಗಳಿಗೆ ಕ್ಲಬ್‌ಹೌಸ್ ಒಪ್ಪಿಗೆ ಸೂಚಿಸಿಲ್ಲ. ಈ ಕುರಿತು ಇನ್ನು ಪರಾಮರ್ಶೆ ಮಾಡುತ್ತಿರುವುದಾಗಿ ಹೇಳಿದೆ.


ಇದನ್ನೂ ಓದಿ: ‘ಪ್ರಜ್ಞಾ ಠಾಕೂರ್‌ ವಿಚಾರದಲ್ಲಿ ಮೋದಿ ಮನಸು ಬದಲಾಯಿಸಿದ ಹಾಗಿದೆ’: ಕಾಂಗ್ರೆಸ್‌‌ ಆಕ್ರೋಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಕ್ಲಬ್ ಹೌಸ್ ಬಗ್ಗೆ ಉತ್ತಮ ಮಾಹಿತಿ ನೀಡಿದ್ದಾರೆ ಧನ್ಯವಾದಗಳು

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...