Homeಮುಖಪುಟಕೇಂದ್ರ ಸಂಪುಟ: 78 ಸಚಿವರಲ್ಲಿ 33 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ- ವರದಿ

ಕೇಂದ್ರ ಸಂಪುಟ: 78 ಸಚಿವರಲ್ಲಿ 33 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣ- ವರದಿ

ಸಂಪುಟದ 70 (90%) ಸಚಿವರು ಕೋಟ್ಯಾಧಿಪತಿಗಳಾಗಿದ್ದು, ಪ್ರತಿ ಸಚಿವರ ಸರಾಸರಿ ಆಸ್ತಿ 16.24 ಕೋಟಿ ರೂಪಾಯಿಗಳಾಗಿವೆ.

- Advertisement -

ನೂತನ ಕೇಂದ್ರ ಸಂಪುಟದ ಶೇಕಡಾ 40 ರಷ್ಟು ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಶೇಕಡಾ 90 ರಷ್ಟು ಸಚಿವರು ಕೋಟ್ಯಾಧಿಪತಿಗಳಿದ್ದಾರೆ ಎಂದು ಇಂಡಿಪೆಂಡೆಂಟ್ ವಾಚ್‌ಡಾಗ್ ಗ್ರೂಪ್ ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ತನ್ನ ವರದಿಯಲ್ಲಿ ತಿಳಿಸಿದೆ.

ಇತ್ತೀಚೆಗೆ ಕೇಂದ್ರ ಸಚಿವ ಸಂಪುಟವನ್ನು ಪುನರ್ರಚಿಸಲಾಯಿತು. ಈ ವೇಳೆ 44 ಹೊಸ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಂಪುಟದಲ್ಲಿನ 78 ಮಂತ್ರಿಗಳಲ್ಲಿ 33 (42%) ಮಂದಿ ತಮ್ಮ ಚುನಾವಣಾ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುವುದನ್ನು ಘೋಷಿಸಿದ್ದಾರೆ ಎಂದು ಎಡಿಆರ್ ತಿಳಿಸಿದೆ.

ಅದರಲ್ಲಿ, 24 ಮಂತ್ರಿಗಳ (31%) ವಿರುದ್ಧ ಕೊಲೆ, ಕೊಲೆ ಯತ್ನ ಮತ್ತು ದರೋಡೆ ಸೇರಿದಂತೆ ಗಂಭೀರ ಪ್ರಕರಣಗಳು ಇರುವುದನ್ನು ಸ್ವತಃ ತಾವೇ ತಮ್ಮ ಚುನಾವಣಾ ಅಫಿಡವಿಟ್‌ಗಳಲ್ಲಿ ಘೋಷಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಂಪುಟ ಪುನರ್‌ರಚನೆ: ಯಾರಿಗೆ ಯಾವ ಖಾತೆ? – ಇಲ್ಲಿದೆ ಡೀಟೈಲ್ಸ್

ಸಚಿವ ಸಂಪುಟವನ್ನು ಪುನರ್ರಚಿಸಿದ ಬಳಿಕ ಸಂಪುಟದಲ್ಲಿ ಕ್ರಿಮಿನಲ್ ಪ್ರಕರಣಗಳಿರುವ ಸಚಿವರ ಪ್ರಮಾಣ  ಶೇಕಡಾ 3 ರಷ್ಟು ಏರಿಕೆಯಾಗಿದೆ. 2019 ರಲ್ಲಿ ಎಡಿಆರ್ ನಡೆಸಿದ ವಿಶ್ಲೇಷಣೆಯಲ್ಲಿ, ಮೊದಲ ಸಚಿವ ಸಂಪುಟದಲ್ಲಿ ಪ್ರಮಾಣವಚನ ಸ್ವೀಕರಿಸಿದ, 56 ಮಂತ್ರಿಗಳಲ್ಲಿ ಶೇಕಡಾ 39 ರಷ್ಟು ಮಂದಿಯ ವಿರುದ್ದ ಕ್ರಿಮಿನಲ್ ಪ್ರಕರಣಗಳಿದ್ದವು. ಆ ಸಂಪುಟದಲ್ಲಿಯೂ ಶೇಕಡಾ 91 ರಷ್ಟು ಮಂದಿ ಕೋಟ್ಯಾಧಿಪತಿಗಳಿದ್ದರು ಎಂದು ಎಡಿಆರ್ ತಿಳಿಸಿದೆ.

ಗೃಹ ವ್ಯವಹಾರಗಳ ರಾಜ್ಯ ಸಚಿವರಾಗಿ ನೇಮಕಗೊಂಡಿರುವ ಕೂಚ್ ಬೆಹರ್ ಕ್ಷೇತ್ರದ ನಿಸಿತ್ ಪ್ರಮಾಣಿಕ್, ತಮ್ಮ ವಿರುದ್ಧ ಕೊಲೆ (ಐಪಿಸಿ ಸೆಕ್ಷನ್ -302) ಪ್ರಕರಣ ಇರುವುದನ್ನು ಘೋಷಿಸಿಕೊಂಡಿದ್ದಾರೆ. ಹೊಸ ಸಚಿವ ಸಂಪುಟದಲ್ಲಿ 35 ನೇ ವಯಸ್ಸಿನಲ್ಲಿ ಸಚಿವರಾಗಿ ಅತ್ಯಂತ ಕಿರಿಯ ಸಚಿವ ಎನಿಸಿಕೊಂಡಿದ್ದಾರೆ.

ಹೊಸ ಸಂಪುಟಕ್ಕೆ ಸೇರ್ಪಡೆಗೊಂಡಿರುವ ಜಾನ್ ಬಾರ್ಲಾ, ಪ್ರಮಾಣಿಕ್, ಪಂಕಜ್ ಚೌಧರಿ ಮತ್ತು ವಿ.ಮುರಳೀಧರನ್ ಈ ನಾಲ್ಕು ಸಚಿವರು ಕೊಲೆ ಯತ್ನಕ್ಕೆ ಸಂಬಂಧಿಸಿದ ಪ್ರಕರಣಗಳು ಇರುವುದನ್ನು ಘೋಷಿಸಿಕೊಂಡಿದ್ದಾರೆ (ಐಪಿಸಿ ಸೆಕ್ಷನ್ -307).

ನರೇಂದ್ರ ಮೋದಿ ಸಂಪುಟದ 70 (90%) ಸಚಿವರು ಕೋಟ್ಯಾಧಿಪತಿಗಳಾಗಿದ್ದು, ಪ್ರತಿ ಸಚಿವರ ಸರಾಸರಿ ಆಸ್ತಿ 16.24 ಕೋಟಿ ರೂ. ನಾಲ್ವರು ಸಚಿವರು 50 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿಯನ್ನು ಘೋಷಿಸಿದ್ದಾರೆ. ಅವರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ – 395 ಕೋಟಿ ರೂಪಾಯಿ, ಪಿಯೂಷ್ ಗೋಯಲ್ – 95 ಕೋಟಿ ರೂಪಾಯಿ, ನಾರಾಯಣ್  ರಾಣೆ – 87 ಕೋಟಿ ರೂಪಾಯಿ ಮತ್ತು ರಾಜೀವ್ ಚಂದ್ರಶೇಖರ್ – 64 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.

ಹೊಸ ಕ್ಯಾಬಿನೆಟ್‌ ಮಂತ್ರಿಗಳಲ್ಲಿ 21 ಜನ ಸ್ನಾತಕೋತ್ತರ ಪದವೀಧರರಾಗಿದ್ದಾರೆ. 9 ಮಂತ್ರಿಗಳು ಡಾಕ್ಟರೇಟ್ ಪಡೆದಿದ್ದರೇ, ತಲಾ 17 ಮಂದಿ ಪದವೀಧರರು ಮತ್ತು ವೃತ್ತಿಪರ ಪದವೀಧರರಾಗಿದ್ದಾರೆ. ಇನ್ನು 7 ಮಂದಿ ತಮ್ಮ ಹನ್ನೆರಡನೇ ತರಗತಿ, 3 ಸಚಿವರು ತಮ್ಮ ಹತ್ತನೇ ತರಗತಿ ಮತ್ತು  ಇಬ್ಬರು ಸಚಿವರು ತಮ್ಮ ಎಂಟನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.


ಇದನ್ನೂ ಓದಿ: ಭ್ರಷ್ಟಾಚಾರ ಆರೋಪ ಹೊತ್ತವರು ಬಿಜೆಪಿ ಸೇರಿ ಕಳಂಕರಹಿತ ಎನಿಸಿಕೊಂಡವರ ಪಟ್ಟಿ ಇಲ್ಲಿದೆ ಇ

ನಾನು ಗೌರಿ ಡೆಸ್ಕ್
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗೂಡಾಚರ್ಯೆಯ ಪೆಗಾಸಸ್‌‌ ಸ್ಪೈವೇರ್‌‌ಅನ್ನು ಭಾರತ ಖರೀದಿಸಿದೆ: ನ್ಯೂಯಾರ್ಕ್ ಟೈಮ್ಸ್‌ ವರದಿ

0
ಕ್ಷಿಪಣಿ ವ್ಯವಸ್ಥೆ ಸೇರಿದಂತೆ ಶಸ್ತ್ರಾಸ್ತ್ರಗಳಿಗಾಗಿ ಮಾಡಿಕೊಂಡ 2-ಬಿಲಿಯನ್ ಡಾಲರ್‌‌ ಪ್ಯಾಕೇಜ್‌ನ ಭಾಗವಾಗಿ 2017ರಲ್ಲಿ ಭಾರತ ಸರ್ಕಾರ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಅನ್ನೂ ಖರೀದಿಸಿತು ಎಂದು ನ್ಯೂಯಾರ್ಕ್ ಟೈಮ್ಸ್ ಶುಕ್ರವಾರ ವರದಿ ಮಾಡಿದೆ. ಫೆಡರಲ್ ಬ್ಯೂರೋ...
Wordpress Social Share Plugin powered by Ultimatelysocial